ಐಸಿಸಿ ನನ್ನ ಕಾಲು ತೊಳೆದು ಆ ನೀರನ್ನು ಕುಡಿಯಬೇಕು; ವಿವಾದಾತ್ಮಕ ಹೇಳಿಕೆ ನೀಡಿದ ಶೋಯೆಬ್ ಅಖ್ತರ್
ಕನ್ನಡ ಸುದ್ದಿ  /  ಕ್ರಿಕೆಟ್  /  ಐಸಿಸಿ ನನ್ನ ಕಾಲು ತೊಳೆದು ಆ ನೀರನ್ನು ಕುಡಿಯಬೇಕು; ವಿವಾದಾತ್ಮಕ ಹೇಳಿಕೆ ನೀಡಿದ ಶೋಯೆಬ್ ಅಖ್ತರ್

ಐಸಿಸಿ ನನ್ನ ಕಾಲು ತೊಳೆದು ಆ ನೀರನ್ನು ಕುಡಿಯಬೇಕು; ವಿವಾದಾತ್ಮಕ ಹೇಳಿಕೆ ನೀಡಿದ ಶೋಯೆಬ್ ಅಖ್ತರ್

Shoaib Akhtar: ಪ್ರಪಂಚದ ವಿವಿಧ ಭಾಗಗಳಿಂದ ಸುಮಾರು 3,000 ಯುವಕರನ್ನು ಒಟ್ಟುಗೂಡಿಸಿ ಅವರಿಗೆ 6 ತಿಂಗಳು ತರಬೇತಿ ನೀಡಿದರೆ, ಅವರಲ್ಲಿ ಒಬ್ಬರು ತಮ್ಮ ದಾಖಲೆ ಮುರಿಯಲಿದ್ದಾರೆ ಎಂದು ಶೋಯೆಬ್ ಅಖ್ತರ್ ಹೇಳಿಕೆ ನೀಡಿದ್ದಾರೆ.

ಐಸಿಸಿ ನನ್ನ ಕಾಲು ತೊಳೆದು ಆ ನೀರನ್ನು ಕುಡಿಯಬೇಕು; ವಿವಾದಾತ್ಮಕ ಹೇಳಿಕೆ ನೀಡಿದ ಶೋಯೆಬ್ ಅಖ್ತರ್
ಐಸಿಸಿ ನನ್ನ ಕಾಲು ತೊಳೆದು ಆ ನೀರನ್ನು ಕುಡಿಯಬೇಕು; ವಿವಾದಾತ್ಮಕ ಹೇಳಿಕೆ ನೀಡಿದ ಶೋಯೆಬ್ ಅಖ್ತರ್

ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ವೇಗಿ ಶೋಯೆಬ್ ಅಖ್ತರ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಅತಿ ವೇಗ ಚೆಂಡು ಎಸೆದ ಬೌಲರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 20 ವರ್ಷಗಳ ಹಿಂದೆ ಗಂಟೆಗೆ 161.3 ಕಿಮೀ ವೇಗದಲ್ಲಿ ಚೆಂಡು ಹಾಕಿದ್ದ ಅಖ್ತರ್​, ಈವರೆಗೂ ಈ ದಾಖಲೆಯನ್ನು ತನ್ನ ಹೆಸರಿನಲ್ಲೇ ಉಳಿಸಿಕೊಂಡಿದ್ದಾರೆ. ಆದರೆ ನನ್ನ ಕೈಗೆ ಮತ್ತೆ ಚೆಂಡು ಕೊಟ್ಟರೆ ಮುಂದಿನ 6 ತಿಂಗಳಲ್ಲಿ ಈ ದಾಖಲೆ ಮುರಿಯುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಇದೇ ವೇಳೆ ಐಸಿಸಿ ತನ್ನ ಕಾಲು ತೊಳೆದು ಆ ನೀರನ್ನು ಕುಡಿಯಬೇಕು ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ. ಹೀಗೆ ಹೇಳಿದ್ಯಾಕೆ ಎನ್ನುವುದನ್ನು ಮುಂದೆ ನೋಡೋಣ.

ಟಿಎನ್​ಕೆಎಸ್​ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದ ಶೋಯೆಬ್ ಅಖ್ತರ್, ಪ್ರಪಂಚದ ವಿವಿಧ ಭಾಗಗಳಿಂದ ಸುಮಾರು 3,000 ಯುವಕರನ್ನು ಒಟ್ಟುಗೂಡಿಸಿ ಅವರಿಗೆ 6 ತಿಂಗಳು ತರಬೇತಿ ನೀಡಿದರೆ, ಅವರಲ್ಲಿ ಒಬ್ಬರು ತಮ್ಮ ದಾಖಲೆ ಮುರಿಯಲಿದ್ದಾರೆ. ಇದಕ್ಕೆ ನಾನು ಗ್ಯಾರಂಟಿ ನೀಡುತ್ತೇನೆ ಎಂದು ಹೇಳಿದ್ದಾರೆ. 160ರ ವ್ಯಾಪ್ತಿಯಲ್ಲಿ ಬೌಲಿಂಗ್ ಮಾಡಲು ಸಾಧ್ಯವಾಗದವರು ಕನಿಷ್ಠ 140-150ರ ವೇಗದಲ್ಲಾದರೂ ಬೌಲಿಂಗ್ ಮಾಡುತ್ತಾರೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ವೇಗದ ಚೆಂಡಿನ ದಾಖಲೆಯನ್ನು ಯಾರಾದರೂ ಮುರಿಯಬಹುದೇ ಎಂದು ಕೇಳಿದಾಗ, ಅಖ್ತರ್ ಹೀಗೆ ಉತ್ತರಿಸಿದ್ದಾರೆ.

ಐಸಿಸಿ ನನ್ನ ಕಾಲ್ತೊಳೆದು ನೀರು ಕುಡಿಯಬೇಕು ಎಂದ ಅಖ್ತರ್

ಒಂದು ವೇಳೆ ಇದು ಸಾಧ್ಯವಾಗದಿದ್ದರೆ 140, 145, 150 ಕಿಮೀ ವೇಗದಲ್ಲಿ ಸ್ಥಿರವಾಗಿ ಬೌಲ್ ಮಾಡುವ ಪ್ರತಿಭೆಗಳನ್ನು ಹೊರ ತರುತ್ತೇನೆ. ನಾನು ಈ ರೀತಿ ಮಾಡಿದರೆ ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳಿಗೆ 150 ಕಿಮೀ ವೇಗದಲ್ಲಿ ಬೌಲ್ ಮಾಡುವ ಅನೇಕ ವೇಗದ ಬೌಲರ್‌ಗಳ ಕೊಡುಗೆ ನೀಡುತ್ತೇನೆ. ಇದರ ನಂತರ ಐಸಿಸಿ ನನ್ನ ಕಾಲು ತೊಳೆದು ಆ ನೀರನ್ನು ಕುಡಿಯಬೇಕು ಎಂದು ಅಖ್ತರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬೌಲರ್​ಗಳನ್ನು ನೀಡುವುದಕ್ಕೂ, ಐಸಿಸಿ ಕಾಲು ತೊಳೆಯುವುದಕ್ಕೂ ಸಂಬಂಧ ಏನು ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವಿನ 2003ರ ವಿಶ್ವಕಪ್ ಪಂದ್ಯದ ವೇಳೆ ಅಖ್ತರ್ ಗಂಟೆಗೆ 161.3 ವೇಗದಲ್ಲಿ ಈ ಚೆಂಡನ್ನು ನಿಕ್ ನೈಟ್​ಗೆ ಬೌಲ್ ಮಾಡಿದ್ದರು. ಆ ಓವರ್‌ನಲ್ಲಿ 6 ಎಸೆತಗಳ ಪೈಕಿ 5 ಎಸೆತಗಳು ಗಂಟೆಗೆ 155 ಕಿಮೀ ವೇಗದಲ್ಲಿ ಎಸೆದಿದ್ದರು.

ಯಾವುದು ಅಸಾಧ್ಯವಲ್ಲ ಎಂದ ಅಖ್ತರ್

ಮಾತು ಮುಂದುವರೆಸಿದ ಅಖ್ತರ್, ಉತ್ತಮ ತರಬೇತಿ ಪಡೆದಿದ್ದರೆ, ಇನ್ನಷ್ಟು ವೇಗವನ್ನು ಮುಟ್ಟಬಹುದಿತ್ತು ಎಂದು ಹೇಳಿದ್ದಾರೆ. ಯಾವುದೂ ಅಸಾಧ್ಯವಲ್ಲ. ನನ್ನನ್ನು ನಂಬಿರಿ. ನಾನು ಇನ್ನೂ ಹೆಚ್ಚು ಶ್ರಮವಹಿಸಿ ಮತ್ತು ಹೆಚ್ಚಿನ ತರಬೇತಿ ಪಡೆದಿದ್ದರೆ ನಾನು ಸ್ಪೀಡೋ ಮೀಟರ್‌ನಲ್ಲಿ 165 ಕಿಮೀ ವೇಗವನ್ನು ಮುಟ್ಟಬಹುದಿತ್ತು ಎಂದಿದ್ದಾರೆ. 2011ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತರಾದ ಶೋಯೆಬ್ ಅಖ್ತರ್ ಅವರು ಪ್ರಸ್ತುತ ಬ್ರಾಡ್‌ಕಾಸ್ಟರ್ ಮತ್ತು ಕಾಮೆಂಟೇಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 3 ಫಾರ್ಮೆಟ್​​ ಸೇರಿ 224 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು,  ಒಟ್ಟು 444 ವಿಕೆಟ್​ ಕಬಳಿಸಿದ್ದಾರೆ.

Whats_app_banner