WPL auction: ವಿಮೆಮ್ಸ್ ಪ್ರೀಮಿಯರ್ ಲೀಗ್ ಹರಾಜು ಎಷ್ಟೊತ್ತಿಗೆ; ಸಮಯ-ನೇರಪ್ರಸಾರ, ಪರ್ಸ್ ಹಾಗೂ ಆಸಕ್ತಿದಾಯಕ ಅಂಶಗಳು
ಕನ್ನಡ ಸುದ್ದಿ  /  ಕ್ರಿಕೆಟ್  /  Wpl Auction: ವಿಮೆಮ್ಸ್ ಪ್ರೀಮಿಯರ್ ಲೀಗ್ ಹರಾಜು ಎಷ್ಟೊತ್ತಿಗೆ; ಸಮಯ-ನೇರಪ್ರಸಾರ, ಪರ್ಸ್ ಹಾಗೂ ಆಸಕ್ತಿದಾಯಕ ಅಂಶಗಳು

WPL auction: ವಿಮೆಮ್ಸ್ ಪ್ರೀಮಿಯರ್ ಲೀಗ್ ಹರಾಜು ಎಷ್ಟೊತ್ತಿಗೆ; ಸಮಯ-ನೇರಪ್ರಸಾರ, ಪರ್ಸ್ ಹಾಗೂ ಆಸಕ್ತಿದಾಯಕ ಅಂಶಗಳು

WPL auction: ಎಡಗೈ ವೇಗಿ ಅಂಶು ನಗರ್ ಹರಾಜಿಗೆ ನಿಂತಿರುವ ಅತ್ಯಂತ ಕಿರಿಯ ಆಟಗಾರ್ತಿಯಾಗಿದ್ದು, ಇವರ ವಯಸ್ಸು 13 ವರ್ಷ. ಇದೇ ವೇಳೆ ಆಸ್ಟ್ರೇಲಿಯಾದ 34 ವರ್ಷದ ಬ್ಯಾಟರ್ ಲಾರಾ ಹ್ಯಾರಿಸ್, ಡಬ್ಲ್ಯುಪಿಎಲ್‌ ಹರಾಜಿನಲ್ಲಿರುವ ಅತ್ಯಂತ ಹಿರಿಯ ಆಟಗಾರ್ತಿಯಾಗಿದ್ದಾರೆ.

WPL auction: ವಿಮೆಮ್ಸ್ ಪ್ರೀಮಿಯರ್ ಲೀಗ್ ಹರಾಜು ಎಷ್ಟೊತ್ತಿಗೆ; ಸಮಯ-ನೇರಪ್ರಸಾರ ವಿವರ
WPL auction: ವಿಮೆಮ್ಸ್ ಪ್ರೀಮಿಯರ್ ಲೀಗ್ ಹರಾಜು ಎಷ್ಟೊತ್ತಿಗೆ; ಸಮಯ-ನೇರಪ್ರಸಾರ ವಿವರ

ವಿಮೆನ್ಸ್‌ ಪ್ರೀಮಿಯರ್‌ ಲೀಗ್ (WPL 2025) ಮೂರನೇ ಆವೃತ್ತಿಯ ಹರಾಜು ಪ್ರಕ್ರಿಯೆಯು ಉದ್ಯಾನ ನಗರಿ ಬೆಂಗಳೂರಿನಲ್ಲಿ ಇಂದು (ಡಿಸೆಂಬರ್‌ 15, ಭಾನುವಾರ) ನಡೆಯಲಿದೆ. ಒಟ್ಟು ಐದು ಫ್ರಾಂಚೈಸಿಗಳು ತನ್ನ ತಂಡವನ್ನು ಬಲಪಡಿಸಲು ಆಟಗಾರ್ತಿಯರ ಖರೀದಿಗೆ ಇಳಿಯಲಿದೆ. ದೇಶ-ವಿದೇಶಗಳ ಒಟ್ಟು 120 ಆಟಗಾರ್ತಿಯರು ಹರಾಜಿಗೆ ನಿಂತಿದ್ದು, ಡಬ್ಲ್ಯುಪಿಎಲ್‌ನಲ್ಲಿ ಆಡುವ ಕನಸು ಹೊತ್ತಿದ್ದಾರೆ. ಇವರಲ್ಲಿ 91 ಭಾರತೀಯರು ಆಗಿದ್ದರೆ, ಉಳಿದ 29 ಆಟಗಾರ್ತಿಯರು ಅಂತಾರಾಷ್ಟ್ರೀಯ ಸ್ಟಾರ್‌ಗಳು. ಅಸೋಸಿಯೇಟ್ ನೇಷನ್ಸ್‌ನ ಮೂವರು ಉದಯೋನ್ಮುಖ ಪ್ರತಿಭೆಗಳು ಕೂಡಾ ಹರಾಜಾಗುವ ನಿರೀಕ್ಷೆಯಲ್ಲಿದ್ದಾರೆ.

ಕೇವಲ 30 ಆಟಗಾರ್ತಿಯರು ಮಾತ್ರ ಕ್ಯಾಪ್‌ಡ್ ಆಗಿದ್ದು, ಈಗಾಗಲೇ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. ಅವರಲ್ಲಿ 9 ಮಂದಿ ಭಾರತೀಯರು ಹಾಗೂ 21 ಸಾಗರೋತ್ತರ ಆಟಗಾರ್ತಿಯರು. ಉಳಿದಂತೆ 90 ಮಂದಿ ಅನ್‌ಕ್ಯಾಪ್ ಆಗಿದ್ದಾರೆ (82 ಭಾರತೀಯರು, 8 ಸಾಗರೋತ್ತರ).

ಬಹುತೇಕ ಫ್ರಾಂಚೈಸಿಗಳು ತಮ್ಮ ತಂಡಗಳನ್ನು ಹಾಗೆಯೇ ಉಳಿಸಿಕೊಂಡಿರುವುದರಿಂದ, ಹೆಚ್ಚಿನ ಆಟಗಾರ್ತಿಯರು ಹರಾಜಾಗುವ ಸಾಧ್ಯತೆ ಇಲ್ಲ. ತಂಡಗಳ ಬಹುತೇಕ ಸ್ಥಾನಗಳು ತುಂಬಿವೆ. ಹೀಗಾಗಿ 5 ವಿದೇಶಿ ಆಟಗಾರ್ತಿಯರು ಸೇರಿದಂತೆ 19 ಸ್ಲಾಟ್‌ಗಳು ಮಾತ್ರ ಖಾಲಿ ಇವೆ. ಹೀಗಾಗಿ ಹರಾಜಿಗೆ ನೋಂದಾಯಿಸಿರುವ ಹೆಚ್ಚಿನ ಆಟಗಾರ್ತಿಯರಿಗೆ ತುಸು ನಿರಾಶೆಯಾಗಬಹುದು.

ಫ್ರಾಂಚೈಸಿಗಳ ಬಳಿ ಲಭ್ಯವಿರುವ ಪರ್ಸ್

  • ರಾಯಲ್ ಚಾಲೆಂಜರ್ಸ್ ಬೆಂಗಳೂರು - ರೂ. 3.25 ಕೋಟಿ ರೂ.
  • ಗುಜರಾತ್ ಜೈಂಟ್ಸ್ - ರೂ. 4.4 ಕೋಟಿ
  • ಯುಪಿ ವಾರಿಯರ್ಜ್ - ರೂ. 3.9 ಕೋಟಿ
  • ಮುಂಬೈ ಇಂಡಿಯನ್ಸ್ - ರೂ. 2.65 ಕೋಟಿ
  • ಡೆಲ್ಲಿ ಕ್ಯಾಪಿಟಲ್ಸ್ - ರೂ. 2.5 ಕೋಟಿ

ಹರಾಜಿನಲ್ಲಿರುವ ಸ್ಟಾರ್‌ ಆಟಗಾರ್ತಿಯರು

ಸ್ನೇಹಾ ರಾಣಾ, ತೇಜಲ್ ಹಸಾಬ್ನಿಸ್, ಹೀದರ್ ನೈಟ್ (ಇಂಗ್ಲೆಂಡ್), ಡೇಂಡ್ರಾ ಡಾಟಿನ್ (ವೆಸ್ಟ್ ಇಂಡೀಸ್), ಕಿಮ್ ಗಾರ್ತ್ (ಆಸ್ಟ್ರೇಲಿಯಾ), ಲಾರೆನ್ ಬೆಲ್ (ಇಂಗ್ಲೆಂಡ್), ಡೇನಿಯಲ್ ಗಿಬ್ಸನ್ (ಇಂಗ್ಲೆಂಡ್), ಓರ್ಲಾ ಪ್ರೆಂಡರ್‌ಗಾಸ್ಟ್ (ಐರ್ಲೆಂಡ್) ಪ್ರಮುಖ ಹೆಸರುಗಳು.

ಆಟಗಾರ್ತಿಯರ ಮೂಲ ಬೆಲೆ

ಒಟ್ಟು ನಾಲ್ಕು ಸ್ಲ್ಯಾಬ್‌ಗಳಲ್ಲಿ ಆಟಗಾರ್ತಿಯರು ಹರಾಜಿಗೆ ನಿಲ್ಲಬಹುದು. 50 ಲಕ್ಷ ರೂ., 30 ಲಕ್ಷ, 20 ಲಕ್ಷ ಮತ್ತು 10 ಲಕ್ಷ ರೂಪಾಯಿ. ಇಂಗ್ಲೆಂಡ್‌ನ ಹೀದರ್ ನೈಟ್, ಡಿಯಾಂಡ್ರಾ ಡಾಟಿನ್ ಮತ್ತು ಲಿಜೆಲ್ಲೆ ಲೀ ಮಾತ್ರ 50 ಲಕ್ಷ ರೂ ಮೂಲ ಬೆಲೆಯೊಂದಿಗೆ ಹರಾಜಿಗೆ ನಿಂತಿದ್ದಾರೆ.

ಕಿರಿಯ ಹಾಗೂ ಹಿರಿಯ ಆಟಗಾರ್ತಿಯರು

13 ವರ್ಷದ ಎಡಗೈ ವೇಗಿ ಅಂಶು ನಗರ್ ಹರಾಜಿಗೆ ನಿಂತಿರುವ ಅತ್ಯಂತ ಕಿರಿಯ ಆಟಗಾರ್ತಿಯಾಗಿದ್ದು, ಅವರ ಮೂಲ ಬೆಲೆ 10 ಲಕ್ಷ ರೂಪಾಯಿ. ಇದೇ ವೇಳೆ ಆಸ್ಟ್ರೇಲಿಯಾದ 34 ವರ್ಷದ ಬ್ಯಾಟರ್ ಲಾರಾ ಹ್ಯಾರಿಸ್, ಅತ್ಯಂತ ಹಿರಿಯ ಆಟಗಾರ್ತಿ. ಇವರ ಮೂಲ ಬೆಲೆ 10 ಲಕ್ಷ ರೂ.

ಡಬ್ಲ್ಯುಪಿಎಲ್‌ ಹರಾಜು ಯಾವಾಗ?

ಮಹಿಳಾ ಪ್ರೀಮಿಯರ್‌ ಲೀಗ್‌ ಹರಾಜು ಪ್ರಕ್ರಿಯೆಯು ಡಿಸೆಂಬರ್ 15ರ ಭಾನುವಾರ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಪ್ರಕ್ರಿಯೆ ಆರಂಭವಾಗಲಿದೆ. ಈ ಬಾರಿ ಬೆಂಗಳೂರಿನಲ್ಲಿ ಆಕ್ಷನ್‌ ನಡೆಯುತ್ತಿದೆ.

ಲೈವ್ ಸ್ಟ್ರೀಮಿಂಗ್

ಟಿವಿ ಮೂಲಕ ಸ್ಪೋರ್ಟ್ಸ್‌ 18 1 (SD & HD) ಚಾನೆಲ್ ಮೂಲಕ ಹರಾಜು ಪ್ರಕ್ರಿಯೆಯ ನೇರಪ್ರಸಾರ ವೀಕ್ಷಿಸಬಹುದು. ಇದೇ ವೇಳೆ ಜಿಯೋ ಸಿನಿಮಾ ಅಪ್ಲಿಕೇಶನ್ ಮೂಲಕ ಮೊಬೈಲ್‌ನಲ್ಲೇ ಉಚಿತವಾಗಿ ಲೈವ್‌ ಸ್ಟ್ರೀಮಿಂಗ್‌ ವೀಕ್ಷಿಸಬಹುದು.

Whats_app_banner