NZ vs BAN Cricket World Cup Highlights: ಕೇನ್‌, ಮಿಚೆಲ್‌ ಅರ್ಧಶತಕ; 8 ವಿಕೆಟ್‌ಗಳಿಂದ ಗೆದ್ದ ನ್ಯೂಜಿಲ್ಯಾಂಡ್
ಕನ್ನಡ ಸುದ್ದಿ  /  ಕ್ರಿಕೆಟ್  /  Nz Vs Ban Cricket World Cup Highlights: ಕೇನ್‌, ಮಿಚೆಲ್‌ ಅರ್ಧಶತಕ; 8 ವಿಕೆಟ್‌ಗಳಿಂದ ಗೆದ್ದ ನ್ಯೂಜಿಲ್ಯಾಂಡ್

NZ vs BAN Cricket World Cup Highlights: ಕೇನ್‌, ಮಿಚೆಲ್‌ ಅರ್ಧಶತಕ; 8 ವಿಕೆಟ್‌ಗಳಿಂದ ಗೆದ್ದ ನ್ಯೂಜಿಲ್ಯಾಂಡ್

New Zealand vs Bangladesh IDI Cricket World Cup 2023 Highlights: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲ್ಯಾಂಡ್ ಮತ್ತು ಬಾಂಗ್ಲಾದೇಶ ತಂಡಗಳು ಮುಖಾಮುಖಿಯಲ್ಲಿ ಕಿವೀಸ್‌ ಬಳಗ ಭರ್ಜರಿ ಜಯ ಸಾಧಿಸಿದೆ.

ನ್ಯೂಜಿಲ್ಯಾಂಡ್-ಬಾಂಗ್ಲಾದೇಶ ವಿಶ್ವಕಪ್ ಪಂದ್ಯದ ಲೈವ್​ ಅಪ್ಡೇಟ್ಸ್​
ನ್ಯೂಜಿಲ್ಯಾಂಡ್-ಬಾಂಗ್ಲಾದೇಶ ವಿಶ್ವಕಪ್ ಪಂದ್ಯದ ಲೈವ್​ ಅಪ್ಡೇಟ್ಸ್​ (AP)

New Zealand vs Bangladesh ICC World Cup 2023 Highlights: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಶುಕ್ರವಾರ ನ್ಯೂಜಿಲ್ಯಾಂಡ್ ಮತ್ತು ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಿವೆ. ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ತಂಡವು 8 ವಿಕೆಟ್‌ಗಳಿಂದ ಭರ್ಜರಿ ಜಯ ಸಾಧಿಸಿದೆ.

10:00 PM NZ vs BAN ICC World Cup Highlights: ವಿಶ್ವಕಪ್‌ನ 11ನೇ ಪಂದ್ಯದಲ್ಲಿ ಕೇನ್‌ ವಿಲಿಯಮ್ಸನ್‌ ಬಳಗ ಮತ್ತೊಂದು ಭರ್ಜರಿ ಜಯ ಸಾಧಿಸಿದೆ. ಅತ್ತ ಬಾಂಗ್ಲಾದೇಶ ಟೂರ್ನಿಯಲ್ಲಿ ಎರಡನೇ ಜಯ ಸಾಧಿಸಿದೆ. ಇಲ್ಲಿಗೆ ಇಂದಿನ ಲೈವ್‌ ಅಪ್ಡೇಟ್ಸ್‌ ಮುಗಿಸುತ್ತಿದ್ದೇವೆ. ನಾಳೆ ವಿಶ್ವಕಪ್‌ನಲ್ಲಿ ಸಾಂಪ್ರದಾಯಿಕ ಎದುರಾಳಿಗಳ ಕದನ. ಭಾರತ ಪಾಕಿಸ್ತಾನ ತಂಡಗಳ ನಡುವಿನ ವಿಶ್ವಕಪ್‌ ಪಂದ್ಯದ ಲೈವ್‌ ಅಪ್ಡೇಟ್‌ನೊಂದಿಗೆ ಮತ್ತೆ ಬರುತ್ತೇವೆ. ಶುಭರಾತ್ರಿ.

09:40 PM NZ vs BAN ICC World Cup Live Updates, NZ 248/2 (42.5): ಬಾಂಗ್ಲಾದೇಶ ವಿರುದ್ಧ ನ್ಯೂಜಿಲ್ಯಾಂಡ್‌ 8 ವಿಕೆಟ್‌ಗಳಿಂದ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್‌ ಜಯ ತನ್ನದಾಗಿಸಿಕೊಂಡಿದೆ. ಗ್ಲೆನ್ ಫಿಲಿಪ್ಸ್15(8) ರನ್‌ ಗಳಿಸಿದರೆ ಡ್ಯಾರಿಲ್ ಮಿಚೆಲ್ 82(65) ರನ್‌ ಗಳಿಸಿ ಪಂದ್ಯ ಫಿನಿಶ್‌ ಮಾಡಿದೆ. ಗೆಲುವಿನೊಂದಿಗೆ ಕಿವೀಸ್‌ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಲಗ್ಗೆ ಇಟ್ಟಿದೆ.

09:25 PM NZ vs BAN ICC World Cup Live Updates, NZ 221/2 (40): ನಾಯಕ ಕೇನ್‌ ವಿಲಿಯಮ್ಸನ್‌ 78 ರನ್‌ ಗಳಿಸಿದ್ದ ವೇಳೆ ಸುಸ್ತಾಗಿ ಪೆವಿಲಿಯನ್‌ಗೆ ನಡೆದಿದ್ದಾರೆ. 7 ತಿಂಗಳ ವಿಶ್ರಾಂತಿ ಬಳಿಕ ಮೈದಾನಕ್ಕಿಳಿದ ಅವರು ಇಂದು ಸುದೀರ್ಘ ಅವಧಿಯ ಬ್ಯಾಟಿಂಗ್‌ನಿಂದ ಸುಸ್ತಾದಂತೆ ಕಂಡಿದ್ದಾರೆ.

09:00 PM NZ vs BAN ICC World Cup Live Updates, NZ 182/2 (36): ವಿಲಿಯಮ್ಸನ್‌ ಮತ್ತು ಡೇರಿಲ್‌ ಮಿಚೆಲ್‌ ಉತ್ತಮ ಜೊತೆಯಾಟ ಮುಂದುವರೆಸಿದ್ದಾರೆ. ತಂಡವನ್ನು ಗೆಲುವಿನತ್ತ ಮುನ್ನಡೆಸುತ್ತಿದ್ದಾರೆ.

08:30 PM NZ vs BAN ICC World Cup Live Updates, NZ 134/2 (28.3) : ಕಾನ್ವೆ ಔಟಾದ ಬಳಿಕ ವಿಲಿಯಮ್ಸನ್‌ ಮತ್ತು ಡೇರಿಲ್‌ ಮಿಚೆಲ್‌ ಜೊತೆಗೂಡಿದ್ದಾರೆ. ನಾಯಕ ಕೇನ್‌ ಆಕರ್ಷಕ ಅರ್ಧಶತಕ ಸಿಡಿಸಿ ಆಡುತ್ತಿದ್ದಾರೆ.

07:55 PM NZ vs BAN ICC World Cup Live Updates, NZ 100/2 (21): 45 ರನ್‌ ಗಳಿಸಿ ಡಿವೋನ್‌ ಕಾನ್ವೆ ಶಕೀಬ್‌ ಅಲ್‌ ಹಸನ್‌ಗೆ ವಿಕೆಟ್‌ ಒಪ್ಪಿಸಿದ್ದಾರೆ.

07:25 PM NZ vs BAN ICC World Cup Live Updates, NZ 65/1 (14): ಕಾನ್ವೆ ಮತ್ತು ವಿಲಿಯಮ್ಸನ್‌ ಅರ್ಧಶತಕದ ಜೊತೆಯಾಟವಾಡಿದ್ದಾರೆ.

07:05 PM NZ vs BAN ICC World Cup Live Updates, NZ 37/1 (10) : ಪವರ್‌ಪ್ಲೇ ಬಳಿಕ ನ್ಯೂಜಿಲ್ಯಾಂಡ್‌ ತಂಡವು 37 ರನ್‌ ಕಲೆ ಹಾಕಿದೆ. ಮೊದಲ ವಿಕೆಟ್‌ ಪತನದ ಬಳಿಕ ಕಾನ್ವೆ ಮತ್ತು ನಾಯಕ ವಿಲಿಯಮ್ಸನ್‌ ಜವಾಬ್ದಾರಿಯುತ ಆಟವಾಡುತ್ತಿದ್ದಾರೆ.

06:30 PM NZ vs BAN ICC World Cup Live Updates, NZ 12/1 (3): ಕಿವೀಸ್‌ ತಂಡ ಮೊದಲ ವಿಕೆಟ್‌ ಕಳೆದುಕೊಂಡಿದೆ. ರಚಿನ್‌ ರವೀಂದ್ರ 9(13) ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ದಾರೆ.

0 6:20 PM NZ vs BAN ICC World Cup Live Updates, NZ 3/0 (1.3): ನ್ಯೂಜಿಲ್ಯಾಂಡ್‌ ತಂಡ 246 ರನ್‌ ಗುರಿ ಬೆನ್ನಟ್ಟುತ್ತಿದೆ. ರಚಿನ್‌ ರವೀಂದ್ರ ಮತ್ತು ಡಿವೋನ್‌ ಕಾನ್ವೆ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ.

05:45 PM NZ vs BAN ICC World Cup Live Updates, BAN 245/9 (50): ಡೆತ್‌ ಓವರ್‌ಗಳಲ್ಲಿ ರನ್‌ ಕಲೆ ಹಾಕಿದ ಮಹಮದುಲ್ಲಾ, ಬಾಂಗ್ಲಾದೇಶ ತಂಡದ ಮೊತ್ತವನ್ನು ಹೆಚ್ಚಿಸಿದ್ದಾರೆ. ಅಂತಿಮವಾಗಿ ಬಾಂಗ್ಲಾದೇಶ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿದೆ. ಚೆನ್ನೈ ಪಿಚ್‌ನಲ್ಲಿ ಈ ಮೊತ್ತ ಕಡಿಮೆಯೇನಲ್ಲ. ಇದೇ ಮೈದಾನದಲ್ಲಿ ಇತ್ತೀಚೆಗೆ ಭಾರತದ ವಿರುದ್ಧ ಆಸ್ಟ್ರೇಲಿಯಾ ತಂಡವು 200 ರನ್‌ಗಳ ಸಾಧಾರಣ ಗುರಿ ನೀಡಿತ್ತು. ಹೀಗಾಗಿ ಕಿವೀಸ್‌ ತಂಡಕ್ಕೆ 246 ಸ್ಪರ್ಧಾತ್ಮಕ ಗುರಿ ಆಗಿದೆ. ಆದರೂ, ಇದು ಚೇಸಿಂಗ್‌ ಮಾಡಬಹುದಾದ ಮೊತ್ತ.

05:20 PM NZ vs BAN ICC World Cup Live Updates, BAN 214/8 (45): ಮಹಮದುಲ್ಲಾ ಜೊತೆಗೆ ಜೊತೆಯಾಟವಾಡುತ್ತಿದ್ದ ತಸ್ಕಿನ್‌ ಅಹ್ಮದ್‌ 17 ರನ್‌ ಗಳಿಸಿ ಸ್ಯಾಂಟ್ನರ್‌ಗೆ ವಿಕೆಟ್‌ ಒಪ್ಪಿಸಿದ್ದಾರೆ. ತಂಡ 8 ವಿಕೆಟ್‌ ಕಳೆದುಕೊಂಡಿದೆ.

04:55 PM NZ vs BAN ICC World Cup Live Updates, BAN 180/7 (37.5): ಬಾಂಗ್ಲಾದೇಶ 7ನೇ ವಿಕೆಟ್‌ ಕಳೆದುಕೊಂಡಿದೆ. 66 ರನ್‌ ಗಳಿಸಿ ಮುಶ್ಫಿಕರ್‌ ಔಟಾದ ಬೆನ್ನಲ್ಲೇ ತೌಹಿದ್‌ ಕೂಡಾ 13 ರನ್‌ ಗಳಿಸಿ ನಿರ್ಗಮಿಸಿದ್ದಾರೆ.

04:20 PM NZ vs BAN ICC World Cup Live Updates, BAN 152/5 (29.5): 40 ರನ್‌ ಗಳಿಸಿ ನಾಯಕ ಶಕೀಬ್‌ ಅಲ್‌ ಹಸನ್‌ ಔಟಾಗಿದ್ದಾರೆ. ಮುಶ್ಫಿಕರ್‌ ಮತ್ತು ಶಕೀಬ್‌ ನಡುವಿನ 96(108) ರನ್‌ ಜೊತೆಯಾಟವನ್ನು ಫರ್ಗ್ಯುಸನ್‌ ಮುರಿದಿದ್ದಾರೆ.

04:00 PM NZ vs BAN ICC World Cup Live Updates, BAN 124/4 (26): ಮುಶ್ಫಿಕರ್‌ ಮತ್ತು ನಾಯಕ ಶಕೀಬ್‌ ಜವಾಬ್ದಾರಿಯುತ ಆಟ ಮುಂದುವರೆಸಿದ್ದಾರೆ. ಇಬ್ಬರ ಬ್ಯಾಟ್‌ನಿಂದ 69(87) ರನ್‌ ಜೊತೆಯಾಟ ಬಂದಿದೆ.

03:40 PM NZ vs BAN ICC World Cup Live Updates, BAN 106/4 (22): ಬಾಂಗ್ಲಾದೇಶವು 100 ರನ್‌ ಗಡಿ ದಾಟಿದೆ. ಅನುಭವಿಗಳಾದ ಮುಶ್ಫಿಕರ್‌ ಮತ್ತು ನಾಯಕ ಶಕೀಬ್‌ ಅರ್ಧಶತಕದ ಜೊತೆಯಾಟವಾಡಿದ್ದಾರೆ.

03:05 PM NZ vs BAN ICC World Cup Live Updates, BAN 57/4 (13): 30 ರನ್‌ ಗಳಿಸಿ ಮಹಿದಿ ಹಸನ್‌ ಮಿರಾಜ್‌ ಔಟಾದ ಬೆನ್ನಲ್ಲೇ ಶಾಂಟೊ ಕೂಡಾ ಕೇವಲ 7 ರನ್‌ ಗಳಿಸಿ ನಿರ್ಗಮಿಸಿದ್ದಾರೆ. ಬಾಂಗ್ಲಾ ತಂಡ ಮೇಲಿಂದ ಮೇಲೆ ಒಟ್ಟು ನಾಲ್ಕು ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದೆ.

02:50 AM NZ vs BAN ICC World Cup Live Updates, BAN 46/2 (10): ಬಂಗ್ಲಾದೇಶ ಎರಡನೇ ವಿಕೆಟ್‌ ಕಳೆದುಕೊಂಡಿದೆ. 16(17) ರನ್‌ ಗಳಿಸಿ ಲಾಕಿ ಫರ್ಗ್ಯುಸನ್‌ಗೆ ತನ್ಜಿದ್‌ ಹಸನ್‌ ವಿಕೆಟ್‌ ಒಪ್ಪಿಸಿದ್ದಾರೆ.

02:35 PM NZ vs BAN ICC World Cup Live Updates, BAN 38/1 (7.2): ಮೊದಲ ವಿಕೆಟ್‌ ಪತನದ ಬಳಿಕ ಬಾಂಗ್ಲಾದೇಶ ಜವಾಬ್ದಾರಿಯುತ ಆಟವಾಡುತ್ತಿದೆ. ತನ್ಜಿದ್‌ ಹಸನ್‌ ಮತ್ತು ಮೆಹಿದಿ ಹಸನ್‌ ನಿಧಾನಗತಿಯಲ್ಲಿ ಬ್ಯಾಟ್‌ ಬೀಸುತ್ತಿದ್ದಾರೆ.

02:00 PM NZ vs BAN ICC World Cup Live Updates, BAN 0/1 (0.1): ಬಾಂಗ್ಲಾದೇಶ ಇನ್ನಿಂಗ್ಸ್‌ ಆರಂಭಿಸಿದೆ. ಬೋಲ್ಟ್‌ ಎಸೆದ ಮೊದಲ ಎಸೆತದಲ್ಲೇ ತಂಡ ಮೊದಲ ವಿಕೆಟ್‌ ಕಳೆದುಕೊಂಡಿದೆ. ಲಿಟ್ಟನ್‌ ದಾಸ್‌ ಗೋಲ್ಡನ್‌ ಡಕ್‌ ಆಗಿದ್ದಾರೆ.

01:40 PM NZ vs BAN ICC World Cup Live Updates, ಬಾಂಗ್ಲಾದೇಶ ಆಡುವ ಬಳಗ: ಲಿಟ್ಟನ್ ದಾಸ್, ತಂಜಿದ್ ಹಸನ್, ನಜ್ಮುಲ್ ಹೊಸೈನ್ ಶಾಂಟೊ, ಮೆಹಿದಿ ಹಸನ್ ಮಿರಾಜ್, ಶಕೀಬ್ ಅಲ್ ಹಸನ್(ಸಿ), ಮುಶ್ಫಿಕರ್ ರಹೀಮ್(ಪ), ತೌಹಿದ್ ಹೃದಯೊಯ್, ಮಹಮ್ಮದುಲ್ಲಾ, ತಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ, ಮುಸ್ತಫಿಜುರ್ ರೆಹಮಾನ್.

01:40 PM NZ vs BAN ICC World Cup Live Updates, ನ್ಯೂಜಿಲ್ಯಾಂಡ್ ಆಡುವ ಬಳಗ: ಡೆವೊನ್ ಕಾನ್ವೇ, ರಚಿನ್ ರವೀಂದ್ರ, ಕೇನ್ ವಿಲಿಯಮ್ಸನ್ (ನಾಯಕ), ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್ (ವಿಕೆಟ್‌ ಕೀಪರ್), ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಲಾಕಿ ಫರ್ಗುಸನ್, ಟ್ರೆಂಟ್ ಬೋಲ್ಟ್‌.

ಟಾಸ್ ಗೆದ್ದ ಕಿವೀಸ್ ಬೌಲಿಂಗ್ ಆಯ್ಕೆ

01:35 PM NZ vs BAN ICC World Cup Live Updates: ಹ್ಯಾಟ್ರಿಕ್ ಗೆಲುವಿನ ಆತ್ಮ ವಿಶ್ವಾಸದಲ್ಲಿರುವ ನ್ಯೂಜಿಲೆಂಡ್ ತಂಡದ ನಾಯಕ ಕೇನ್​ ವಿಲಿಯಮ್ಸನ್​, ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಚೆನ್ನೈನ ಎಂಎ ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಬಾಂಗ್ಲಾದೇಶ ಮೊದಲು ಬ್ಯಾಟಿಂಗ್​/ಬೌಲಿಂಗ್ ನಡೆಸಲಿದೆ. ನಾಯಕ ಕೇನ್ ವಿಲಿಯಮ್ಸನ್ ಮರಳಿರುವುದು ನ್ಯೂಜಿಲೆಂಡ್ ತಂಡಕ್ಕೆ ಆನೆಬಲಬಂದಂತಾಗಿದೆ.

ಚೆನ್ನೈ ಮೈದಾನದಲ್ಲಿ ಏಕದಿನ ಕ್ರಿಕೆಟ್ ಅಂಕಿ-ಅಂಶ

09:35 AM NZ vs BAN ICC World Cup Live Updates: ಅಂಕಿ-ಅಂಶ

  • ಒಟ್ಟು ಪಂದ್ಯಗಳು - 35
  • ಮೊದಲು ಬ್ಯಾಟಿಂಗ್ ನಡೆಸಿದ ತಂಡಗಳ ಗೆಲುವು - 17
  • ಚೇಸಿಂಗ್​ ನಡೆಸಿದ ತಂಡಗಳ ಗೆಲುವು - 17
  • ಮೊದಲ ಇನ್ನಿಂಗ್ಸ್​ ಸರಾಸರಿ ಮೊತ್ತ - 224 ರನ್
  • ಎರಡನೇ ಇನ್ನಿಂಗ್ಸ್​ ಸರಾಸರಿ ಮೊತ್ತ - 205 ರನ್
  • ಈ ಮೈದಾನದಲ್ಲಿ ದಾಖಲಾದ ಗರಿಷ್ಠ ಮೊತ್ತ - 337/7
  • ಗರಿಷ್ಠ ಸ್ಕೋರ್ ಚೇಸ್​​ - 291/2 (47.5 ಓವರ್​) ಭಾರತ ವಿರುದ್ಧ ವೆಸ್ಟ್ ಇಂಡೀಸ್

ಚೆನ್ನೈ ಪಿಚ್​ ರಿಪೋರ್ಟ್​

09:35 AM NZ vs BAN ICC World Cup Live Updates: ಚೆನ್ನೈನ್ ಚೆಪಾಕ್​​ ಮೈದಾನವು ಸಮತೋಲಿತ ಪಿಚ್‌ಗೆ ಹೆಸರುವಾಸಿ. ಇದು ಬ್ಯಾಟರ್‌ಗಳು ಹಾಗೂ ಬೌಲರ್‌​​ಗಳಿಗೆ ಸಮನಾಗಿ ನೆರವಾಗಲಿದೆ. ಇತ್ತೀಚೆಗೆ ಇದೇ ಮೈದಾನದಲ್ಲಿ ನಡೆದ ಲೋ ಸ್ಕೋರಿಂಗ್‌ ಪಂದ್ಯದಲ್ಲಿ, ಆಸೀಸ್‌ ವಿರುದ್ಧ ಭಾರತವು 200 ರನ್‌ ಚೇಸಿಂಗ್‌ ಮಾಡಿ ಗೆದ್ದಿತ್ತು. ಈ ಮೈದಾನದಲ್ಲಿ 250 ರನ್‌ ಕಲೆ ಹಾಕಿದರೆ ಅದು ಸ್ಪರ್ಧಾತ್ಮಕ ಮೊತ್ತವಾಗಲಿದೆ. ವಿಕೆಟ್ ಸಾಮಾನ್ಯವಾಗಿ ಶುಷ್ಕವಾಗಿದ್ದು, ವೇಗಿಗಳಿಗಿಂತ ಸ್ಪಿನ್ನರ್‌ಗಳಿ​ಗೆ ಹೆಚ್ಚು ಅನುಕೂಲ ಕಲ್ಪಿಸುತ್ತದೆ. ಪಂದ್ಯ ಸಾಗುತ್ತಿದ್ದಂತೆಯೇ ಪಿಚ್ ಕೊಂಚ ನಿಧಾನವಾಗುತ್ತದೆ. ಚೇಸಿಂಗ್‌ ಮಾಡುವ ತಂಡಕ್ಕೆ ಸವಾಲು ಹೆಚ್ಚು.

ಹವಾಮಾನ ವರದಿ

09:35 AM NZ vs BAN ICC World Cup Live Updates: ಕಡಲ ತಡಿಯ ಚೆನ್ನೈನಲ್ಲಿ ಬಿಸಿಲಿನ ವಾತಾವರಣವಿದ್ದು, ಪಂದ್ಯದ ಸಮಯದಲ್ಲಿ ಸ್ವಲ್ಪ ಮೋಡ ಕವಿದ ವಾತಾವರಣ ಇರುವ ಸಾಧ್ಯತೆ ಇದೆ. ತಾಪಮಾನವು 33 ಡಿಗ್ರಿ ಸೆಲ್ಸಿಯಸ್ ಆಸುಪಾಸು ಇರಲಿದೆ. ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇಲ್ಲ. ಆದರೆ ಸಂಜೆಯ ಬಳಿಕ ಇಬ್ಬನಿ ಪ್ರಮುಖ ಪಾತ್ರ ವಹಿಸುತ್ತದೆ.

ನ್ಯೂಜಿಲೆಂಡ್ ಸಂಭಾವ್ಯ ತಂಡ

09:35 AM NZ vs BAN ICC World Cup Live Updates: ಡಿವೊನ್ ಕಾನ್ವೆ, ವಿಲ್ ಯಂಗ್, ಕೇನ್ ವಿಲಿಯಮ್ಸನ್ (ನಾಯಕ), ರಚಿನ್ ರವೀಂದ್ರ, ಟಾಮ್ ಲಾಥಮ್ (ವಿಕೆಟ್‌ ಕೀಪರ್), ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಮಾರ್ಕ್ ಹೆನ್ರಿ, ಲಾಕಿ ಫರ್ಗುಸನ್/ಇಶ್ ಸೋಧಿ, ಟ್ರೆಂಟ್ ಬೋಲ್ಟ್.

ಬಾಂಗ್ಲಾದೇಶ ಸಂಭಾವ್ಯ ತಂಡ

09:35 AM NZ vs BAN ICC World Cup Live Updates: ತನ್ಜಿದ್ ಹಸನ್, ಲಿಟ್ಟನ್ ದಾಸ್, ನಜ್ಮುಲ್ ಹೊಸೈನ್ ಶಾಂಟೊ, ಶಕೀಬ್ ಅಲ್ ಹಸನ್ (ನಾಯಕ), ತೌಹಿದ್ ಹೃದಯೋಯ್, ಮುಶ್ಫಿಕರ್ ರಹೀಮ್ (ವಿಕೆಟ್‌ ಕೀಪರ್), ಮೆಹಿದಿ ಹಸನ್, ಮಹೆದಿ ಹಸನ್, ತಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ, ಮುಸ್ತಫಿಜುರ್ ರೆಹಮಾನ್/ನಸುಮ್ ಅಹ್ಮದ್.

Whats_app_banner