ತಂಗಿಯ ಗುರುತು ಹಿಡಿಯಲು ಡುಮ್ಮಸರ್‌ಗೆ ನೆರವಾಗಲಿದೆ ಸುಧಾಳ ಎಡಗಾಲಿನ ಅದೃಷ್ಟ ಮಚ್ಚೆ, ಧನ್ಯಾಳ ಕಥೆ ಮುಗಿಸಿದ ಶಕುಂತಲಾ- ಅಮೃತಧಾರೆ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ತಂಗಿಯ ಗುರುತು ಹಿಡಿಯಲು ಡುಮ್ಮಸರ್‌ಗೆ ನೆರವಾಗಲಿದೆ ಸುಧಾಳ ಎಡಗಾಲಿನ ಅದೃಷ್ಟ ಮಚ್ಚೆ, ಧನ್ಯಾಳ ಕಥೆ ಮುಗಿಸಿದ ಶಕುಂತಲಾ- ಅಮೃತಧಾರೆ ಧಾರಾವಾಹಿ

ತಂಗಿಯ ಗುರುತು ಹಿಡಿಯಲು ಡುಮ್ಮಸರ್‌ಗೆ ನೆರವಾಗಲಿದೆ ಸುಧಾಳ ಎಡಗಾಲಿನ ಅದೃಷ್ಟ ಮಚ್ಚೆ, ಧನ್ಯಾಳ ಕಥೆ ಮುಗಿಸಿದ ಶಕುಂತಲಾ- ಅಮೃತಧಾರೆ ಧಾರಾವಾಹಿ

ಅಮೃತಧಾರೆ ಧಾರಾವಾಹಿಯಲ್ಲಿ ಶಕುಂತಲಾದೇವಿ ಗ್ಯಾಂಗ್‌ ಧನ್ಯಾಳ ಕಥೆ ಮುಗಿಸಿದೆ. ಸಾಯುವ ಮುನ್ನ ಆಕೆ ಡುಮ್ಮಸರ್‌ಗೆ "ನಿಮ್ಮ ಅಮ್ಮ ಮತ್ತು ತಂಗಿ ಬದುಕಿದ್ದಾರೆ" ಎಂಬ ಸತ್ಯ ತಿಳಿಸಿದ್ದಾಳೆ. ತಂಗಿಯ ಗುರುತು ಹಿಡಿಯಲು ಡುಮ್ಮಸರ್‌ಗೆ ಸುಧಾಳ ಎಡಗಾಲಿನ ಅದೃಷ್ಟ ಮಚ್ಚೆ ನೆರವಾಗುವ ಸೂಚನೆಯಿದೆ.

ತಂಗಿಯ ಗುರುತು ಹಿಡಿಯಲು ಡುಮ್ಮಸರ್‌ಗೆ ನೆರವಾಗಲಿದೆ ಸುಧಾಳ ಎಡಗಾಲಿನ ಅದೃಷ್ಟ ಮಚ್ಚೆ, ಧನ್ಯಾಳ ಕಥೆ ಮುಗಿಸಿದ ಶಕುಂತಲಾ- ಅಮೃತಧಾರೆ ಧಾರಾವಾಹಿ
ತಂಗಿಯ ಗುರುತು ಹಿಡಿಯಲು ಡುಮ್ಮಸರ್‌ಗೆ ನೆರವಾಗಲಿದೆ ಸುಧಾಳ ಎಡಗಾಲಿನ ಅದೃಷ್ಟ ಮಚ್ಚೆ, ಧನ್ಯಾಳ ಕಥೆ ಮುಗಿಸಿದ ಶಕುಂತಲಾ- ಅಮೃತಧಾರೆ ಧಾರಾವಾಹಿ

Amruthadhaare serial November 05 Episode: ತಾಯಿ ಬದುಕಿದ್ದಾರೆಂಬ ಸುದ್ದಿ ಕೇಳಿ ಗೌತಮ್‌ ಭಾವುಕರಾಗಿದ್ದಾರೆ. ತಾಯಿ ಬದುಕಿದ್ದಾರೆ, ಆದರೆ ಎಲ್ಲಿದ್ದಾರೆ ಎಂದು ಗೊತ್ತಿಲ್ಲ ಎಂದು ಭೂಮಿಕಾರ ಬಳಿ ದುಃಖ ತೋಡಿಕೊಳ್ಳುತ್ತಿದ್ದಾರೆ. "ಅವರು ನಮಗೆ ಖಂಡಿತಾ ಸಿಕ್ಕೇ ಸಿಗುತ್ತಾರೆ" ಎಂದು ಭೂಮಿಕಾ ಸಮಾಧಾನ ಹೇಳುತ್ತಾರೆ. ಇದೇ ಸಮಯದಲ್ಲಿ ಶಕುಂತಲಾದೇವಿ ಟೆನ್ಷನ್‌ನಲ್ಲಿದ್ದಾರೆ. ಗೌತಮ್‌ಗೆ ಅವರು ಕಾಯುತ್ತಿದ್ದಾರೆ. ಗೋಡಾನ್‌ಗೆ ಬೆಂಕಿ ಬಿದ್ದಿದೆ ಎಂದು ಆತನನ್ನು ಬೇರೆ ಕಡೆಗೆ ಹೋಗದಂತೆ ಮಾಡಿದ್ದರು. ಆದರೆ ಗೌತಮ್‌ ಅಲ್ಲಿಗೆ ಹೋಗಿರಲಿಲ್ಲ. ಆನಂದ್‌ನನ್ನು ಕಳುಹಿಸಿದ್ದೇನೆ ಎಂದು ಹೇಳುತ್ತಾರೆ. "ಪರ್ಸನಲ್‌ ಕೆಲಸ ಇತ್ತು" ಎಂದು ಗೌತಮ್‌ ಹೇಳಿದಾಗ ಶಕುಂತಲಾದೇವಿಗೆ ಗಾಬರಿಯಾಗುತ್ತದೆ. "ಮಾನ್ಯಳ ತಂಗಿ ಧನ್ಯ ಫೋನ್‌ ಮಾಡಿದ್ದಳು" ಎಂದಾಗ ಶಕುಂತಲಾದೇವಿ ಹೇಳಿದಾಗ "ಅಪಾಯ ಆಗುವಂತಹದ್ದು ಇಲ್ಲ, ಪೊಲೀಸರನ್ನು ಕರೆದುಕೊಂಡು ಹೋಗಿದ್ದೆ. ಸಿಕ್ಕಿದ್ಲು" ಎನ್ನುತ್ತಾನೆ. "ನಾವು ಹೋಗಿದ್ದಾಗ ಅವಳು ಸತ್ತಿದ್ದಳು. ಯಾರೋ ಅವಳ ಮೇಲೆ ಅಟ್ಯಾಕ್‌ ಮಾಡಿ ಕೊಲೆ ಮಾಡಿಸಿದ್ದಾರೆ" ಎಂದು ಗೌತಮ್‌ ಹೇಳುತ್ತಾರೆ. "ಇದನ್ನೆಲ್ಲ ನೋಡ್ತಾ ಇದ್ದರೆ ಏನೋ ನಡೆಯುತ್ತ ಇದೆ ಅನಿಸ್ತಾ ಇದೆ" ಎನ್ನುತ್ತಾರೆ. "ಅಮ್ಮ ಮತ್ತು ತಂಗಿ ವಿಚಾರವನ್ನು ಗೌತಮ್‌ ಯಾಕೆ ಹೇಳಿಲ್ಲ" ಎಂದು ಭೂಮಿಕಾ ಯೋಚಿಸುತ್ತಾರೆ. "ಇವನಿಗೆ ಇನ್ನೂ ಏನೂ ಗೊತ್ತಾಗಲಿಲ್ಲ. ಅವಳನ್ನು ಸಾಯಿಸಿಬಿಟ್ಟೆ" ಎಂದು ಶಕುಂತಲಾದೇವಿ ಯೋಚಿಸುತ್ತಾರೆ.

ಮಲತಾಯಿ ವಿಚಾರದಲ್ಲಿ ಗೌತಮ್‌ ಭಾವುಕ

ಯಾಕೆ ಗೌತಮ್‌ ನೀವು ತಾಯಿ ಮತ್ತು ತಂಗಿ ಸಿಕ್ಕ ವಿಚಾರ ಹೇಳಿಲ್ಲ ಎಂದು ಭೂಮಿಕಾ ಕೇಳುತ್ತಾರೆ. "ಅವರಿಗೆ ಬೇಜಾರಾಗಬಹುದು. ಸ್ವಂತ ತಾಯಿ ಸಿಕ್ಕಿದ್ದಳು ಎಂದು ನನ್ನನ್ನು ಮಲತಾಯಿ ಎಂದು ನೋಡುವೆ ಎಂದುಕೊಳ್ತಾರೆ. ಅಮ್ಮನ ಮನಸ್ಸಿಗೆ ಬೇಜಾರಾಗಬಹುದು" ಎಂದು ಗೌತಮ್‌ ಹೇಳುತ್ತಾರೆ. ಆದರೆ, ಈ ಎಲ್ಲಾ ತೊಂದರೆಗಳ ಮೂಲಕಾರಣವೇ ಶಕುಂತಲಾದೇವಿ ಎಂದು ಡುಮ್ಮ ಸರ್‌ಗೆ ಗೊತ್ತಿಲ್ಲ. ಇನ್ನೊಂದೆಡೆ ಖುಷಿಯಿಂದ ಲಕ್ಷ್ಮಿಕಾಂತ್‌ ಕುಡಿಯುತ್ತಿದ್ದಾರೆ. ಆಗ ಅಲ್ಲಿಗೆ ಜೈದೇವ್‌ ಬರುತ್ತಾನೆ. ಕುಡಿದ ಮತ್ತಿನಲ್ಲಿ ಮಾಮ್ಸ್‌ ತುಂಬಾ ಮಾತನಾಡುತ್ತಾರೆ. ಈ ಸಮಯದಲ್ಲಿ ಇಲ್ಲಿ ಏನೋ ನಡೆಯುತ್ತಿದೆ ಎಂಬ ಗುಮಾನಿಯನ್ನು ಜೈದೇವ್‌ ವ್ಯಕ್ತಪಡಿಸುತ್ತಾನೆ. ಇಲ್ಲಿ ನಡೆಯುವ ವಿಚಾರದ ಕುರಿತು ಬಾಯಿ ಬಿಡಿಸಲು ಯತ್ನಿಸುತ್ತಾನೆ. "ಇದು ನನ್ನ ಮತ್ತು ನಿನ್ನ ಅಮ್ಮನ ನಡುವಿನ ವಿಚಾರ" ಎಂದು ಹೇಳುತ್ತಾರೆ. ಏನೂ ಹೇಳದೆ ಹೋಗುತ್ತಾರೆ. "ಏನು ನಡೆಯುತ್ತ ಇದೆ, ಕಂಡುಹಿಡಿಯಬೇಕು" ಎಂದು ಜೈದೇವ್‌ ಯೋಚಿಸುತ್ತಾನೆ.

ಅಮ್ಮ ನಿನ್ನ ಕಾಲಿನ ಮಚ್ಚೆಯಿಂದ ಅದೃಷ್ಟವಂತೆ!

ಸುಧಾ ತನ್ನ ಮಗಳ ಜತೆ ಮಾತನಾಡುತ್ತ ಇದ್ದಾಳೆ. "ಅಮ್ಮ ನಿನ್ನ ಕಾಲಲ್ಲಿ ಮಚ್ಚೆ ಇದೆಯಲ್ವ. ಮಚ್ಚೆ ಇದ್ರೆ ತುಂಬಾ ಅದೃಷ್ಟವಂತೆ, ತುಂಬಾ ಒಳ್ಳೆಯದಾಗುತ್ತದೆಯಂತೆ. ಒಬ್ರು ತಾತ ಬಂದಿದ್ರು ಅವರು ಹೇಳಿದ್ರು" ಎಂದು ಮಗಳು ಹೇಳುತ್ತಾಳೆ. "ಎಲ್ಲರ ಮನೆಗೆ ಎಲ್ಲರೂ ಬರುತ್ತಾರೆ, ನಮ್ಮನೆಗೆ ಮಾತ್ರ ಯಾರೂ ಬರೋದಿಲ್ಲ. ನಾನು ನೀನು ಅಜ್ಜಿ ಮಾತ್ರ, ಯಾಕೆ ಯಾರೂ ಬರೋದಿಲ್ಲ" ಎಂದು ಮಗಳು ಮುಗ್ಧವಾಗಿ ಪ್ರಶ್ನಿಸುತ್ತಾಳೆ. "ನಮಗೆ ಯಾರೂ ಇಲ್ಲ, ನಾವಿರೋದು ಇಷ್ಟೇ" ಎನ್ನುತ್ತಾರೆ ಸುಧಾ. "ನನ್ನ ಗೆಳತಿಯರಿಗೆಲ್ಲ ಅಜ್ಜ ಅಜ್ಜಿ ಎಲ್ಲರೂ ಇದ್ದಾರೆ. ನನಗೆ ಯಾರೂ ಇಲ್ಲ" ಎಂದು ಮಗು ಬೇಸರದಲ್ಲಿ ಹೇಳುತ್ತಾಳೆ. "ನಮಗೆ ಯಾರು ಇದ್ದಾರೆ, ಯಾವಾಗ ಬರುತ್ತಾರೆ, ಯಾವುದೂ ಗೊತ್ತಿಲ್ಲ" ಎಂದು ಸುಧಾ ಒಗಟಾಗಿ ಹೇಳುತ್ತಾರೆ. "ಸದ್ಯ ಈ ಕಷ್ಟಗಳೇ ನಮಗೆ ನೆಂಟ್ರು ಎಲ್ಲಾ" ಎನ್ನುತ್ತಾರೆ ಸುಧಾ.

ಗೌತಮ್‌ ಮತ್ತು ಭೂಮಿಕಾ ಮಾತನಾಡುತ್ತಿದ್ದಾರೆ. ಏನೂ ಯೋಚನೆ ಮಾಡ್ತಾ ಇದ್ದೀರಿ ಎಂದು ಭೂಮಿಕಾ ಕೇಳುತ್ತಾಳೆ. "ಆ ಹುಡುಗಿ ಬಗ್ಗೆ. ಆ ಹುಡುಗಿಯಲ್ಲಿ ದೊಡ್ಡ ರಹಸ್ಯವಿತ್ತು. ಆದರೆ, ನಾವು ಭೇಟಿಯಾಗದೆ ತಪ್ಪು ಮಾಡಿದ್ವಿ" ಎಂದು ಗೌತಮ್‌ ಹೇಳುತ್ತಾರೆ. "ಆ ಹುಡುಗಿ ಹೇಳಿದ್ಲು ಅಲ್ವ, ನನ್ನ ಜೀವಕ್ಕೆ ಅಪಾಯ ಇದೆ ಅಂತ.ಯಾರೂ ಅಂತ ಕಂಡುಹಿಡಿಯಬೇಕು. ಅವಳು ಪ್ರಾಣ ಕಳೆದುಕೊಂಡು ನಮಗೆ ಹೋಪ್ಸ್‌ ಕೊಟ್ಲು" ಎಂದು ಭೂಮಿಕಾ ಹೇಳುತ್ತಾರೆ. "ಇಷ್ಟು ದಿನ ಅವರು ಇದ್ದಾರೋ ಇಲ್ವ ಅಂದುಕೊಂಡಿದ್ದೆ. ಕಂಡುಹಿಡಿಯಬೇಕು" ಎಂದು ಹೇಳುತ್ತಾರೆ ಗೌತಮ್‌. "ಅಮ್ಮನ ಗುರುತು ಹಿಡಿಯಬಹುದು. ತಂಗಿಯ ಗುರುತು ಹೇಗೆ ಹಿಡಿಯುವಿರಿ. ಅವಳು ಈಗ ಸಾಕಷ್ಟು ಬದಲಾಗಿರಬಹುದು" ಎಂದು ಭೂಮಿಕಾ ಪ್ರಶ್ನಿಸುತ್ತಾರೆ. "ಗುರುತು ಹಿಡಿಯುವೆ. ಅವಳ ಎಡಗಾಲಿನಲ್ಲಿ ಒಂದು ಮಚ್ಚೆ ಇದೆ. ಅದನ್ನು ನೋಡಿ ಗುರುತು ಹಿಡಿಯುವೆ" ಎಂದು ಗೌತಮ್‌ ಹೇಳುತ್ತಾರೆ. ಮುಂದೆ ಇವರ ಭೇಟಿಯಲ್ಲಿ ಮಚ್ಚೆ ಪ್ರಮುಖ ಪಾತ್ರವಹಿಸುವ ಸೂಚನೆ ಇದೆ.

ಸುಧಾ ನಿದ್ದೆ ಮಾಡಿದರೂ ನಿದ್ದೆ ಬರುತ್ತಿಲ್ಲ. ಹಿಂದಿನ ಘೋರ ಘಟನೆಗಳ ಕನಸು ಕಂಡು ಎಚ್ಚರಗೊಳ್ಳುತ್ತಾಳೆ. ಇನ್ನೊಂದು ಕಡೆ ನಿದ್ದೆಯಲ್ಲಿ ಆಕೆಯ ತಾಯಿ "ಗುಂಡೂ.. ಗುಂಡೂ.." ಎಂದು ಮಗನನ್ನು ಕನವರಿಸುತ್ತಿದ್ದಾರೆ. "ಇಷ್ಟು ವರ್ಷದಲ್ಲಿ ನಿನ್ನ ಬಾಯಲ್ಲಿ ಕೇಳಿದ್ದು ಇದು ಎರಡೇ ಪದ. ಯಾರಮ್ಮ ಈ ಗುಂಡೂ" ಎಂದು ಸುಧಾ ಪ್ರಶ್ನಿಸುತ್ತಾಳೆ. ಅಮ್ಮ ಉತ್ತರಿಸಲಾಗದ ಸ್ಥಿತಿಯಲ್ಲಿದ್ದಾಳೆ. ಇನ್ನೊಂದೆಡೆ ಗೌತಮ್‌ ನಿದ್ದೆ ಮಾಡದೆ ಯೋಚಿಸುತ್ತಾ ಇದ್ದಾರೆ. ಆತನ ಮನಸ್ಸಲ್ಲಿ "ನಿಮ್ಮ ತಾಯಿ ಮತ್ತು ತಂಗಿ ಸತ್ತಿಲ್ಲ. ಅವರಿನ್ನೂ ಬದುಕಿದ್ದಾರೆ" ಎಂದು ಧನ್ಯ ಹೇಳಿದ ಮಾತೇ ಕೇಳುತ್ತಿದೆ. ಎಚ್ಚರಗೊಂಡ ಭೂಮಿಕಾ ಗೌತಮ್‌ನನ್ನು ಸಮಧಾನ ಮಾಡಲು ಆತ ತನ್ನ ತಾಯಿಯ ಬಗ್ಗೆ ಹೇಳಿದ ಕವಿತೆಯನ್ನು ನೆನಪಿಸುತ್ತಾರೆ. "ಸೇವಂತಿಗೆ ಚೆಂಡಿನಂಥ ಮುದ್ದುಕೋಳಿ, ತಾಯಿ ಮಡಿಲಲ್ಲಿ ಬೀಡುಬಿಟ್ಟ ಮುದ್ದು ಕೋಳಿ" ಎಂದು ಹಾಡುತ್ತಾರೆ. ಇದು ಗೌತಮ್‌ಗೆ ಬಾಲ್ಯದಲ್ಲಿ ತಾಯಿ ಹಾಡುತ್ತಿದ್ದ ಲಾಲಿಹಾಡು. ಭೂಮಿಕಾ ಬಾಯಿಯಿಂದ ಈ ಹಾಡು ಕೇಳಿ ಗೌತಮ್‌ ಕಣ್ಣಾಲಿಗಳು ತುಂಬಿ ಬರುತ್ತವೆ. ಭೂಮಿಕಾ ಮಡಿಲಲ್ಲಿ ತಲೆಯಿಟ್ಟು ಗೌತಮ್‌ ಮಲಗುತ್ತಾರೆ. ಭೂಮಿಕಾ ತಾಯಿ ಪ್ರೀತಿ ತೋರುತ್ತಾರೆ.

Whats_app_banner