Zwigato Ott: ಜ್ವಿಗಾಟೊ ಸಿನಿಮಾದ ಪಬ್ಲಿಕ್‌ ರಿವ್ಯೂ; ಕಪಿಲ್‌ ಶರ್ಮಾ ಅಭಿನಯ ಮೆಚ್ಚಿಕೊಂಡ ವೀಕ್ಷಕರು
ಕನ್ನಡ ಸುದ್ದಿ  /  ಮನರಂಜನೆ  /  Zwigato Ott: ಜ್ವಿಗಾಟೊ ಸಿನಿಮಾದ ಪಬ್ಲಿಕ್‌ ರಿವ್ಯೂ; ಕಪಿಲ್‌ ಶರ್ಮಾ ಅಭಿನಯ ಮೆಚ್ಚಿಕೊಂಡ ವೀಕ್ಷಕರು

Zwigato Ott: ಜ್ವಿಗಾಟೊ ಸಿನಿಮಾದ ಪಬ್ಲಿಕ್‌ ರಿವ್ಯೂ; ಕಪಿಲ್‌ ಶರ್ಮಾ ಅಭಿನಯ ಮೆಚ್ಚಿಕೊಂಡ ವೀಕ್ಷಕರು

ಕಪಿಲ್ ಶರ್ಮಾ ಅಭಿನಯದ ಸಿನಿಮಾ ಜ್ವಿಗಾಟೊ ಸಿನಿಮಾ ಒಬ್ಬ ಡೆಲವರಿ ಬಾಯ್‌ ಜೀವನದ ಎಲ್ಲ ಕಷ್ಟಗಳನ್ನು ತಿಳಿಸುವ ಸಿನಿಮಾ. ಈ ಸಿನಿಮಾ ಈಗ ಓಟಿಟಿಯಲ್ಲಿ ಲಭ್ಯವಿದೆ. ಅಮೆಜಾನ್‌ ಫ್ರೈಮ್‌ನಲ್ಲಿ ನೀವು ಈ ಸಿನಿಮಾ ನೋಡಬಹುದು.

 ಜ್ವಿಗಾಟೊ ಸಿನಿಮಾದ ಪಬ್ಲಿಕ್‌ ರಿವ್ಯೂ
ಜ್ವಿಗಾಟೊ ಸಿನಿಮಾದ ಪಬ್ಲಿಕ್‌ ರಿವ್ಯೂ

ಕಪಿಲ್ ಶರ್ಮಾ ಅಭಿನಯದ ಸಿನಿಮಾ ಜ್ವಿಗಾಟೊ ಸಿನಿಮಾ ಬಗ್ಗೆ ಸೋಶಿಯಲ್ ಮಿಡಿಯಾಗಳಲ್ಲಿ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ. ಕಪಿಲ್ ಶರ್ಮಾ ಅವರ ಅಭಿನಯವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಈ ಸಿನಿಮಾ ಕುರಿತು ಪಬ್ಲಿಕ್ ರಿವ್ಯೂ ಹೀಗಿದೆ. ಒಬ್ಬ ಡೆಲವರಿ ಬಾಯ್‌ ಜೀವನದ ಎಲ್ಲ ಕಷ್ಟಗಳನ್ನು ತಿಳಿಸುವ ಸಿನಿಮಾ. ಈ ಸಿನಿಮಾ ಈಗ ಓಟಿಟಿಯಲ್ಲಿ ಲಭ್ಯವಿದೆ. ಅಮೆಜಾನ್‌ ಫ್ರೈಮ್‌ನಲ್ಲಿ ನೀವು ಈ ಸಿನಿಮಾ ನೋಡಬಹುದು. ಮೊದಲು ಫ್ಲೋರ್ ಮ್ಯಾನೇಜರ್ ಆಗಿದ್ದ ಮನಸ್‌ ನಂತರ ಯಾವ ರೀತಿಯಲ್ಲಿ ಡೆಲವರಿ ಬಾಯ್ ಆಗಿ ತನ್ನ ಜೀವನವನ್ನು ನಿರ್ವಹಿಸುತ್ತಾನೆ ಎಂಬುದನ್ನು ನಾವು ಈ ಸಿನಿಮಾದಲ್ಲಿ ನೋಡಬಹುದು. ಯಾರಿಗೇ ಆಗಲಿ ಬಡತನದಿಂದ ಸಿರಿತನ ಬಂದರೆ ಹೊಂದಿಕೊಂಡು ಬದುಕಲು ಸಾಧ್ಯವಾಗುತ್ತದೆ. ಆದರೆ ಸಿರಿತನದಿಂದ ಬಡತನ ಬಂದರೆ ಬದುಕು ಕಷ್ಟ ಎನಿಸಲು ಆರಂಭವಾಗುತ್ತದೆ. ಕಪಿಲ್ ಶರ್ಮಾ ಈ ಸಿನಿಮಾದಲ್ಲಿ ಒಬ್ಬ ಡೆಲವರಿ ಬಾಯ್‌ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಮನಸ್‌ ಎಂಬ ಪಾತ್ರದಲ್ಲಿ ಅವರು ಪ್ರೇಕ್ಷಕರನ್ನು ಭಾವುಕರನ್ನಾಗಿಸಿದ್ದಾರೆ.

ಸಿನಿಮಾ ಕಥೆಯಲ್ಲಿ ಅವರು ಡೆಲವರಿ ಬಾಯ್ ಆಗಿರುವ ಕಾರಣ ಮನಸ್‌ ರೇಟಿಂಗ್‌ ನೀಡಲು ಅವರು ಎಲ್ಲರಲ್ಲಿ ಕೇಳಿಕೊಳ್ಳುತ್ತಾರೆ. ಆದರೆ ಅವರಿಗೆ ತುಂಬಾ ಕಡಿಮೆ ರೇಟಿಂಗ್ ಬರುತ್ತದೆ. ಫ್ಲೋರ್ ಮ್ಯಾನೇಜರ್ ಆಗಿದ್ದ ಮನಸ್‌ ಡೆಲವರಿ ಬಾಯ್ ಆಗಲೂ ಒಂದು ಕಾರಣವಿದೆ. ಕೋವಿಡ್‌ ಸಂದರ್ಭದಲ್ಲಿ ಯಾವುದೇ ಕೆಲಸ ಇಲ್ಲದೆ, ತಮ್ಮ ಕೆಲಸವನ್ನು ಕಳೆದುಕೊಂಡು ಅವರು ಈ ಡೆಲವರಿ ಬಾಯ್ ಕೆಲಸ ಮಾಡುತ್ತಿರುತ್ತಾರೆ. ನಂತರದ ದಿನಗಳಲ್ಲಿ ತಮಗೆ ಬಂದ ಕಡಿಮೆ ರೇಟಿಂಗ್ ನೋಡಿ ತುಂಬಾ ಬೇಸರವಾಗುತ್ತದೆ. ಕಪಿಲ್ ಶರ್ಮಾ ಅವರ ಕಾಸ್ಟಿಂಗ್ ಜ್ವಿಗಾಟೊಗೆ ದೊಡ್ಡ ಗೆಲುವು ಎಂದು ಹೇಳಲಾಗುತ್ತಿದೆ.

ನೀವು ತುಂಬಾ ಸಿನಿಮಾಗಳನ್ನು ನೋಡುತ್ತಿದ್ದರೆ ಈ ಸಿನಿಮಾ ನಿಮಗೆ ಸ್ವಲ್ಪ ಭಿನ್ನವಾಗಿ ಕಾಣಬಹುದು. ಯಾಕೆಂದರೆ ಈ ಸಿನಿಮಾದಲ್ಲಿ ಯಾವುದೇ ಟ್ವಿಸ್ಟ್‌ ನಿಮಗೆ ಸಿಗುವುದಿಲ್ಲ. ಒಂದೇ ಬಾರಿ ಏನೋ ಮ್ಯಾಜಿಕ್ ಆಗುತ್ತದೆ ಎಂದು ಊಹಿಸಲು ಆಗುವುದಿಲ್ಲ. ಒಬ್ಬ ಡೆಲವರಿ ಬಾಯ್‌ ನೈಜ ಬದುಕು ಹೇಗಿರುತ್ತದೆ. ಒಂದು ದಿನದಲ್ಲಿ ಆತ ಏನೆಲ್ಲ ಕಷ್ಟಪಡುತ್ತಾನೆ ಎನ್ನುವುದನ್ನು ಇದರ ಕಥೆಯಲ್ಲಿ ಕಟ್ಟಿಕೊಟ್ಟಿದ್ಧಾರೆ. ಕುಟುಂಬದ ಎಲ್ಲ ಜವಾಬ್ಧಾರಿಗಳನ್ನು ನಿಭಾಯಿಸುತ್ತಾ ಬದುಕುವುದು ಎಷ್ಟು ಕಷ್ಟವಾಗಬಹುದು ಎಂಬುದು ನಿಮಗೆ ಅರ್ಥವಾಗುತ್ತದೆ.

ಹೇಗಿದೆ ನೋಡಿ ಜನಾಭಿಪ್ರಾಯ

ನಂದಿತಾ ದಾಸ್ ನಿರ್ದೇಶನದ Zwigato ಚಲನಚಿತ್ರ, ದಿನನಿತ್ಯ ಆ್ಯಪ್ ಗಳ ಮೂಲಕ ಡೆಲಿವರಿ ಮಾಡುವವರ ಮೇಲಿನ ಶೋಷಣೆ ಬಗ್ಗೆ ಕಥಾಹಂದರ ಹೊಂದಿರುವ ಚಿತ್ರ. ಅದು ಕುಟುಂಬವೊಂದನ್ನು ಹೇಗೆ ಅಫೆಕ್ಟ್ ಮಾಡತ್ತೆ ಅಂತ ತೋರಿಸುವಾಗ, ಕೆಲಸದಲ್ಲಿ ಶೋಷಣೆಗೊಳಗಾಗುವ ವ್ಯಕ್ತಿ ಮನೆಯಲ್ಲಿ ಹೇಗೆ ಪುರುಷಪ್ರಧಾನ ಮನೋಧೋರಣೆಯಿಂದ ಹೊರಬರಲು ಸಾಧ್ಯವಾಗದೆ ಇರುತ್ತಾನೆ ಅನ್ನುವುದನ್ನು ತೋರಿಸುತ್ತದೆ. ಅದನ್ನು ಬಹಳ ಸೂಟೆಬಲ್ ಆಗಿ ಕೂಡ ನಂದಿತಾ ದಾಸ್ ತಂದಿದ್ದಾರೆ ಅನ್ನಿಸಿತು. ಆದರೆ ಕೊನೆಯ ಒಂದು ದೃಶ್ಯ ಬಹುಶಃ ಆತ ತನ್ನ ಸೀಮಿತತೆಯಿಂದ ಬಿಡುಗಡೆ ಪಡೆಯಬಹುದಾದ ಇಂಗಿತವನ್ನು ಸೂಚಿಸುತ್ತದೆ. ನೈಟ್ ಶಿಫ್ಟ್ ನಲ್ಲಿ ತನ್ನ ಇಚ್ಛೆಗೆ ವಿರುದ್ಧವಾಗಿ ಕೆಲಸ ಮಾಡುತ್ತಿರುವ ಹೆಂಡತಿಯನ್ನು ಪಿಕ್ ಮಾಡಿ ಜಾಲಿ ರೌಂಡ್ ಕರೆದುಕೊಂಡು ಹೋಗುವ ದೃಶ್ಯ ಬಹಳ ಆಪ್ತವಾಗಿ ಮೂಡಿದೆ.

ಆದರೆ ಸಾಮಾಜಿಕ ಶೋಷಣೆ ಕೊನೆಯಾಗುವುದರ ಬಗ್ಗೆ ಯಾರಿಗೆ ತಾನೇ ಹೋಪ್ಸ್ ಕೊಡಲು ಸಾಧ್ಯ?

(ಮಕ್ಕಳ ಜತೆಗೂ ಕೂತು ನೋಡಬಹುದಾದ ಫಿಲ್ಮ್ ಇದು.) ಎಂದು Guruve Hejjaji ತಮ್ಮ ಫೇಸ್ಬುಕ್‌ನಲ್ಲಿ ಈ ಚಿತ್ರದ ಬಗ್ಗೆ ಬರೆದುಕೊಂಡಿದ್ದಾರೆ.

ಭಾಷೆ: ಹಿಂದಿ

ನಿರ್ದೇಶನ: ನಂದಿತಾ ದಾಸ್

ತಾರಾಗಣ: ಕಪಿಲ್ ಶರ್ಮಾ, ಶಹನಾ ಗೋಸ್ವಾಮಿ, ಸಯಾನಿ ಗುಪ್ತಾ

ಓಟಿಟಿ: ಅಮೆಜಾನ್ ಫ್ರೈಮ್

Whats_app_banner