Bagheera Movie: ‘ಬಘೀರ’ನಿಗೆ ಇದೆಂಥ ದುರ್ಗತಿ! ಇನ್ನಾದರೂ ಕನ್ನಡಿಗರು, ಚಿತ್ರೋದ್ಯಮ ಎಚ್ಚೆತ್ತುಕೊಳ್ಳುತ್ತಾ?
ಕನ್ನಡ ಸುದ್ದಿ  /  ಮನರಂಜನೆ  /  Bagheera Movie: ‘ಬಘೀರ’ನಿಗೆ ಇದೆಂಥ ದುರ್ಗತಿ! ಇನ್ನಾದರೂ ಕನ್ನಡಿಗರು, ಚಿತ್ರೋದ್ಯಮ ಎಚ್ಚೆತ್ತುಕೊಳ್ಳುತ್ತಾ?

Bagheera Movie: ‘ಬಘೀರ’ನಿಗೆ ಇದೆಂಥ ದುರ್ಗತಿ! ಇನ್ನಾದರೂ ಕನ್ನಡಿಗರು, ಚಿತ್ರೋದ್ಯಮ ಎಚ್ಚೆತ್ತುಕೊಳ್ಳುತ್ತಾ?

Bagheera Movie: ಕರ್ನಾಟಕದಲ್ಲಿ ಬಘೀರ ಸಿನಿಮಾಕ್ಕೆ ಒಳ್ಳೆಯ ರೆಸ್ಪಾನ್ಸ್‌ ಸಿಕ್ಕಿದೆ. ಇದೇ ಸಿನಿಮಾದ ತೆಲುಗು ಅವತರಣಿಕೆಗೂ ಪಾಸಿಟಿವ್‌ ಪ್ರತಿಕ್ರಿಯೆ ಸಿಕ್ಕಿತ್ತು. ಆದರೆ, ಈಗ ಸ್ಥಿತಿ ಬದಲಾಗಿದೆ. ಆಂಧ್ರ ಮತ್ತು ತೆಲಂಗಾಣದಲ್ಲಿ ಇದೇ ಬಘೀರ ಚಿತ್ರಕ್ಕೆ ನೆಗೆಟಿವ್‌ ಪ್ರಚಾರ ನೀಡಲಾಗುತ್ತಿದೆ.

ಶ್ರೀಮುರಳಿ ಚಿತ್ರಕ್ಕೆ ನೆಗೆಟಿವ್‌ ಪ್ರಚಾರ, ಬಘೀರನಿಗೆ ತೆಲುಗು ನಾಡಿನಲ್ಲಿ ಹಿನ್ನಡೆ?
ಶ್ರೀಮುರಳಿ ಚಿತ್ರಕ್ಕೆ ನೆಗೆಟಿವ್‌ ಪ್ರಚಾರ, ಬಘೀರನಿಗೆ ತೆಲುಗು ನಾಡಿನಲ್ಲಿ ಹಿನ್ನಡೆ?

Bagheera Movie: ಅಕ್ಟೋಬರ್‌ 31ರಂದು ಕನ್ನಡದ ಜತೆಗೆ ತೆಲುಗು ಭಾಷೆಯಲ್ಲೂ ಬಘೀರ ಸಿನಿಮಾ ಬಿಡುಗಡೆ ಆಗಿತ್ತು. ಕರ್ನಾಟಕದಲ್ಲಿ ಈಗಾಗಲೇ ಸಾಕಷ್ಟು ಹೈಪ್‌ ಸೃಷ್ಟಿಯಾಗಿದ್ದರಿಂದ ಪ್ರೇಕ್ಷಕ ಚಿತ್ರಮಂದಿರದತ್ತ ದಾಗುಂಡಿ ಇಟ್ಟಿದ್ದ. ಮೊದಲ ದಿನ ರಾಜ್ಯಾದ್ಯಂತ ಒಳ್ಳೆಯ ರೆಸ್ಪಾನ್ಸ್‌ ಪಡೆದುಕೊಂಡಿತ್ತು ಈ ಸಿನಿಮಾ. ಶ್ರೀಮುರಳಿಯ ಬಘೀರ ಅವತಾರಕ್ಕೂ ಸಿನಿಮಾ ನೋಡಿದವರು ಶಿಳ್ಳೆ ಚಪ್ಪಾಳೆ ನೀಡಿದ್ದರು. ಚಿತ್ರ ಬಿಡುಗಡೆಯಾಗಿ ಮೂರು ದಿನಗಳಾದರೂ, ಇಂದಿಗೂ ಕೆಲವೆಡೆ ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿದೆ. ಈ ಮೂಲಕ ಶ್ರೀಮುರಳಿಗೂ ದೊಡ್ಡ ಹಿಟ್‌ ಸಿಕ್ಕಂತಾಗಿದೆ. ಆದರೆ, ಇದೇ ಬಘೀರನನ್ನು ಕೆಲವೆಡೆ ತುಳಿಯುವ ಪ್ರಯತ್ನಗಳೂ ನಡೆಯುತ್ತಿವೆ!

ಹೊಂಬಾಳೆ ಫಿಲಂಸ್‌ ಕನ್ನಡದಲ್ಲಿ ಎಷ್ಟು ಫೇಮಸ್ಸೋ, ತೆಲುಗು, ತಮಿಳಿನಲ್ಲಿಯೂ ಅಷ್ಟೇ ಖ್ಯಾತಿ ಪಡೆದುಕೊಂಡಿದೆ. ಕನ್ನಡದಲ್ಲಿ ಮಾತ್ರವಲ್ಲದೆ, ತೆಲುಗ ತಮಿಳಿನಲ್ಲಿಯೂ ಸಿನಿಮಾಗಳನ್ನು ನಿರ್ಮಿಸುತ್ತಿದೆ ಈ ಸಂಸ್ಥೆ. ಅದರಂತೆ ಸಲಾರ್‌ ಸಿನಿಮಾ ಈಗಾಗಲೇ ದೊಡ್ಡ ಮಟ್ಟದಲ್ಲಿ ಯಶಸ್ಸು ಗಳಿಸಿದೆ. ಸೋಲು ಕಂಡಿದ್ದ ಪ್ರಭಾಸ್‌ಗೆ ಗೆಲುವು ನೀಡಿದ್ದೇ ಈ ಸಿನಿಮಾ. ಸಲಾರ್‌ ಪಾರ್ಟ್‌ 2 ಸಹ ನಿರ್ಮಾಣವಾಗಲಿದೆ. ಹೀಗಿರುವಾಗ ಇದೇ ಸಂಸ್ಥೆಯ ಬತ್ತಳಿಕೆಯಿಂದ ಬಂದ ಸಿನಿಮಾ ಬಘೀರ. ಕನ್ನಡದ ಜತೆಗೆ ತೆಲುಗಿಗೆ ಡಬ್‌ ಆಗಿ ಈ ಸಿನಿಮಾ ತೆಲುಗು ರಾಜ್ಯಗಳಲ್ಲಿ ಬಿಡುಗಡೆ ಆಗಿದೆ. ಆದರೆ, ಅಲ್ಲಿನ ಜನ ಮಾತ್ರ ಈ ಚಿತ್ರದ ಬಗ್ಗೆ ನೆಗೆಟಿವ್‌ ಟಾಕ್‌ ಕ್ರಿಯೇಟ್‌ ಮಾಡುತ್ತಿದ್ದಾರೆ.

ಬಘೀರ ಸಿನಿಮಾ ಏಕಕಾಲದಲ್ಲಿ ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆ ಆಗಿದೆ. ಕರ್ನಾಟಕದಲ್ಲಿ ಈ ಚಿತ್ರವನ್ನು ಇಲ್ಲಿನ ಪ್ರೇಕ್ಷಕ ಹೊತ್ತು ಮೆರೆಸುತ್ತಿದ್ದರೆ, ಅದೇ ಬಘೀರ ಸಿನಿಮಾ ನೋಡಿದ ತೆಲುಗು ವಿಮರ್ಶಕರು ಭೇಷ್‌ ಎನ್ನುತ್ತಿದ್ದಾರೆ. ಇನ್ನು ಕೆಲವರು ಚಿತ್ರ ಮೂಡಿಬಂದ ರೀತಿ ಕಂಡು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದೆಲ್ಲದರ ನಡುವೆಯೇ, ಕೆಲವು ಕೆಟ್ಟ ಮನಸ್ಥಿತಿಗಳು ಬಘೀರ ಸಿನಿಮಾ ಬಗ್ಗೆ ನೆಗೆಟಿವ್‌ ಟಾಕ್‌ ಹಬ್ಬಿಸುತ್ತಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಬೇಕು ಅಂತಲೇ ಸಿನಿಮಾ ಸರಿಯಿಲ್ಲ ಎಂದು ಕೆಲವು ಇನ್‌ಫ್ಲುಯೆನ್ಸರ್‌ಗಳು ಟೀಕೆ ಮಾಡುತ್ತಿದ್ದಾರೆ. ಅಲ್ಲಿಗೆ ಒಳ್ಳೆಯ ರೆಸ್ಪಾನ್ಸ್‌ ಗಿಟ್ಟಿಸಿಕೊಂಡ ಚಿತ್ರವನ್ನು ತುಳಿಯುವ ಯತ್ನ ನಡೆಯುತ್ತಿದೆ.

ಬಘೀರನಿಗೆ ಸಿಗದ ಚಿತ್ರಮಂದಿರಗಳು

ಟಾಲಿವುಡ್‌ ಅಂಗಳದಲ್ಲಿ ಈ ದೀಪಾವಳಿ ಹಬ್ಬದ ಪ್ರಯುಕ್ತ ಬೇರೆ ಬೇರೆ ಭಾಷೆಯ ಹಲವು ದೊಡ್ಡ ದೊಡ್ಡ ಸಿನಿಮಾಗಳು ಬಿಡುಗಡೆ ಆಗಿವೆ. ಆ ಪೈಕಿ, ಕನ್ನಡದಿಂದ ಬಘೀರ ಸಿನಿಮಾ ತೆಲುಗು ಅಖಾಡದಲ್ಲಿದ್ದಾನೆ. ಆದರೆ, ಹೈದರಾಬಾದ್‌ನ ಸಿಂಗಲ್‌ ಸ್ಕ್ರೀನ್‌ಗಳಲ್ಲಿ ಬಘೀರ ಕಾಣಿಸುತ್ತಿಲ್ಲ. ಸಪ್ತಗಿರಿ ಚಿತ್ರಮಂದಿರವೊಂದನ್ನು ಬಿಟ್ಟು, ಬೇರೆ ಎಲ್ಲೂ ಬಘೀರ ಸಿನಿಮಾ ಪ್ರದರ್ಶನ ಕಾಣುತ್ತಿಲ್ಲ. ಇನ್ನುಳಿದಂತೆ, ಕೇವಲ ಮಾಲ್‌, ಮಲ್ಟಿಫ್ಲೆಕ್ಸ್‌ಗಳಲ್ಲಿ ಮಾತ್ರ ಒಂದೊಂದು ಶೋ ಪ್ರದರ್ಶನ ಕಾಣುತ್ತಿದೆ. ಇಂದು (ನ. 3) ಕೇವಲ 28 ಶೋಗಳು ಮಾತ್ರ ಸಿಕ್ಕಿವೆ. ಈ ಬಗ್ಗೆ AndhraBoxoffice.com ಹಂಚಿಕೊಂಡ ಪೋಸ್ಟ್‌ ವೈರಲ್‌ ಆಗಿದೆ.

ಬಘೀರ ಶೋ ಕೇವಲ 1ಕ್ಕೆ ಇಳಿಕೆ

"ಹೈದರಾಬಾದ್‌ನಲ್ಲಿ ಪ್ರದರ್ಶನ ಸಮಸ್ಯೆಗಳನ್ನು ಈ ರೀತಿ ವಿಂಗಡಿಸಲಾಗಿದೆ. #bagheera (ತೆಲುಗು) ಸಿನಿಮಾವನ್ನು 1 ಪ್ರದರ್ಶನಕ್ಕೆ ಸೀಮಿತಗೊಳಿಸಲಾಗಿದೆ. ಸಪ್ತಗಿರಿ ಹೊರತುಪಡಿಸಿ ಸಿಂಗಲ್ ಸ್ಕ್ರೀನ್‌ಗಳಿಂದ ಈ ಚಿತ್ರವನ್ನು ತೆಗೆದುಹಾಕಲಾಗಿದೆ. #KA (ತೆಲುಗು ಸಿನಿಮಾ)ಗೆ ಇನ್ನೂ ಕೆಲವು ಪ್ರದರ್ಶನಗಳ ಅಗತ್ಯವಿದೆ. ಆದರೆ #LuckyBaskhar ಚಿತ್ರದ ಜತೆಗೆ ಶೋ ಹೊಂದಿಸಲು ಹೆಚ್ಚಿನ ಅವಕಾಶವಿಲ್ಲ. #Amaran ಚೆನ್ನಾಗಿ ಓಡುತ್ತಿದೆ" ಎಂದು ಟ್ವಿಟ್‌ ಮಾಡಿದೆ ಆಂಧ್ರ ಬಾಕ್ಸ್‌ ಆಫೀಸ್‌ ಡಾಟ್‌ ಕಾಮ್.‌ ಈ ಪೋಸ್ಟ್‌ಗೆ ಅನೇಕ ಕನ್ನಡಿಗರು ಕಣ್ಣು ಕೆಂಪುಮಾಡಿಕೊಂಡೇ ಪ್ರತಿಕ್ರಿಯೆ ನೀಡುತ್ತಿದ್ದಾರೆ.

"ಕನ್ನಡಿಗರು ಇನ್ನಾದರೂ ಎಚ್ಚೆತ್ತುಕೊಳ್ಳಿ" ಎಂದು ಕೆಲವರು ಪ್ರತಿಕ್ರಿಯಿಸುತ್ತಿದ್ದರೆ, ಸೀ ಯೂ ಸೂನ್‌ ಎಂದು ಹಾಕಿ ಪುಷ್ಪ 2 ಚಿತ್ರಕ್ಕೂ ಇದೇ ಗತಿ ಬರುವಂತೆ ಮಾಡುತ್ತೇವೆ ಎಂದೂ ಹೇಳುತ್ತಿದ್ದಾರೆ. "ಬಾಯ್ಕಾಟ್‌ ಪುಷ್ಪ 2" ಎಂದೂ ಹೇಳುತ್ತಿದ್ದಾರೆ. "ಪರಿಗಣಿಸಬೇಕಾದ ಗಂಭೀರ ವಿಷಯ. ಪ್ರಮುಖ ನಗರದಲ್ಲಿ ಬಘೀರ ಚಿತ್ರಕ್ಕೆ ಕೇವಲ ಒಂದು ಚಿತ್ರಮಂದಿರ. ಎದ್ದೇಳು ಸ್ಯಾಂಡಲ್‌ವುಡ್‌!" "ಪ್ರೊಡ್ಯೂಸರ್‌ಗೆ ಇಲ್ಲದೇ ಇರೋ ಬೇನೆ ನಿಮಗ್ಯಾಕೆ. ದುಡ್ಡು ಹಾಕಿದೋರು, ಫ್ರ್ಯಾಕ್ಚರ್‌ ಮಾಡಿಕೊಂಡು ನಟಿಸಿದವರೇ ಸುಮ್ಮನಿರುವಾಗ, ನಮ್ಮಲ್ಲಿ ನಾವು ನೋಡಿ ಇಷ್ಟ ಪಟ್ಟು ಆಯ್ತು. ಇನ್ನು ಎಷ್ಟು ದಿನ ಅಂತ ನಾವೇ ಬಡ್ಕೊಳ್ಳೊದು. ಅಷ್ಟಕ್ಕೂ ಇದು ಅವರ ಬಿಜಿನೆಸ್‌, ಇದನ್ನು ಅವರೇ ಬಗೆಹರಿಸುತ್ತಾರೆ" ಎಂದೂ ಕಾಮೆಂಟ್‌ಗಳು ಬಂದಿವೆ.

ಇದೆಲ್ಲದಕ್ಕೂ ಕಾರಣ ಏನಿರಬಹುದು?

ಕಳೆದ ಸಲ ಇದೇ ಹೊಂಬಾಳೆ ಫಿಲಂಸ್‌ನ ಸಲಾರ್‌ ಸಿನಿಮಾ ಬಿಡುಗಡೆಯಾದಾಗ, ಕರ್ನಾಟಕದಲ್ಲಿ ಹೇಳಿಕೊಳ್ಳುವಂತ ರೆಸ್ಪಾನ್ಸ್‌ ಸಿಕ್ಕಿರಲಿಲ್ಲ. ಅದಕ್ಕೆ ಕಾರಣ; ಅದು ಉಗ್ರಂ ಚಿತ್ರದ ರಿಮೇಕ್‌ ಎಂಬ ಕಾರಣಕ್ಕೆ. ಸಹಜವಾಗಿ ತೆಲುಗಿನ ದೊಡ್ಡ ಸಿನಿಮಾಗಳಿಗೆ ಬೆಂಗಳೂರು ಮೇನ್‌ ಮಾರ್ಕೆಟ್.‌ ಇಂಥ ಊರಲ್ಲಿಯೇ ಸಲಾರ್‌ ಹೇಳಿಕೊಳ್ಳುವ ಕಮಾಯಿ ಮಾಡಲಿಲ್ಲ. ಈಗ ಅದೇ ಕಾರಣವನ್ನೇ ಗಂಭೀರವಾಗಿ ಪರಿಗಣಿಸಿದ ಅಲ್ಲಿನ ಪ್ರಭಾಸ್‌ ಫ್ಯಾನ್ಸ್‌, ಬಘೀರ ಚಿತ್ರದ ಬಗ್ಗೆ ಈ ರೀತಿ ನೆಗೆಟಿವ್‌ ಟಾಕ್ ಕ್ರಿಯೇಟ್‌ ಮಾಡುತ್ತಿದ್ದಾರೆ ಎಂದೂ ಹೇಳಲಾಗುತ್ತಿದೆ. ಅಚ್ಚರಿಯ ವಿಚಾರ ಏನೆಂದರೆ, ಈಗಷ್ಟೇ ಇದೇ ಬಘೀರ ಸಿನಿಮಾವನ್ನು ಪ್ರಭಾಸ್‌ ಸಹ ನೋಡಿ ಮೆಚ್ಚಿಕೊಂಡಿದ್ದು.

Whats_app_banner