ಬಾಲಿವುಡ್‌ ನಟ ಪರ್ವಿನ್‌ ದಾಬಸ್‌ ಪ್ರಯಾಣಿಸುತ್ತಿದ್ದ ಕಾರು ಅಪಘಾತ; ಚಿಂತಾಜನಕ ಸ್ಥಿತಿಯಲ್ಲಿ ಮೈ ನೇಮ್‌ ಇಸ್‌ ಖಾನ್‌ ಸಿನಿಮಾ ನಟ-bollywood actor parvin dabas met an car accident treatment underway in mumbai holy family hospital rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಬಾಲಿವುಡ್‌ ನಟ ಪರ್ವಿನ್‌ ದಾಬಸ್‌ ಪ್ರಯಾಣಿಸುತ್ತಿದ್ದ ಕಾರು ಅಪಘಾತ; ಚಿಂತಾಜನಕ ಸ್ಥಿತಿಯಲ್ಲಿ ಮೈ ನೇಮ್‌ ಇಸ್‌ ಖಾನ್‌ ಸಿನಿಮಾ ನಟ

ಬಾಲಿವುಡ್‌ ನಟ ಪರ್ವಿನ್‌ ದಾಬಸ್‌ ಪ್ರಯಾಣಿಸುತ್ತಿದ್ದ ಕಾರು ಅಪಘಾತ; ಚಿಂತಾಜನಕ ಸ್ಥಿತಿಯಲ್ಲಿ ಮೈ ನೇಮ್‌ ಇಸ್‌ ಖಾನ್‌ ಸಿನಿಮಾ ನಟ

ಬಾಲಿವುಡ್‌ ನಟ , ಪ್ರೊ ಪಂಜಾ ಲೀಗ್‌ ಸಹ ಸಂಸ್ಥಾಪಕ ಪರ್ವಿನ್‌ ದಾಬಸ್‌ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿದ್ದು ನಟ ತೀವ್ರವಾಗಿ ಗಾಯಗೊಂಡಿದ್ದಾರೆ. ಮುಂಬೈನ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ಪರ್ವಿನ್‌ ಚಿಕಿತ್ಸೆ ಪಡೆಯುತ್ತಿರುವುದಾಗಿ ಪ್ರೊ ಪಂಜಾ ಲೀಗ್‌, ಅಧಿಕೃತ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಮಾಹಿತಿ ನೀಡಿದೆ.

ಬಾಲಿವುಡ್‌ ನಟ ಪರ್ವಿನ್‌ ದಾಬಸ್‌ ಪ್ರಯಾಣಿಸುತ್ತಿದ್ದ ಕಾರು ಅಪಘಾತ; ಚಿಂತಾಜನಕ ಸ್ಥಿತಿಯಲ್ಲಿ ಮೈ ನೇಮ್‌ ಇಸ್‌ ಖಾನ್‌ ಸಿನಿಮಾ ನಟ
ಬಾಲಿವುಡ್‌ ನಟ ಪರ್ವಿನ್‌ ದಾಬಸ್‌ ಪ್ರಯಾಣಿಸುತ್ತಿದ್ದ ಕಾರು ಅಪಘಾತ; ಚಿಂತಾಜನಕ ಸ್ಥಿತಿಯಲ್ಲಿ ಮೈ ನೇಮ್‌ ಇಸ್‌ ಖಾನ್‌ ಸಿನಿಮಾ ನಟ

ಮೈ ನೇಮ್‌ ಇಸ್‌ ಖಾನ್‌, ರಾಗಿಣಿ ಎಂಎಂಎಸ್‌ 2 ಸಿನಿಮಾ ಖ್ಯಾತಿಯ ಪರ್ವಿನ್‌ ದಾಬಸ್‌ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿದ್ದು ನಟ ಪರ್ವಿನ್‌ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪರ್ವಿನ್‌ಗೆ ತೀವ್ರ ಪೆಟ್ಟು ಬಿದಿದ್ದು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.

ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟ

ಬಾಲಿವುಡ್‌ನ ಅನೇಕ ಸ್ಟಾರ್‌ ನಟರ ಸಿನಿಮಾಗಳಲ್ಲಿ ಪರ್ವಿನ್‌ ದಾಬಸ್‌ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಪರ್ವಿನ್‌ ದಾಬಸ್‌ ಪ್ರೊ ಪಂಜಾ ಲೀಗ್‌ನ ಸಹ ಸಂಸ್ಥಾಪಕ. ಇಂದು ಬೆಳಗ್ಗೆ ಪರ್ವಿನ್‌ ಚಲಾಯಿಸುತ್ತಿದ್ದ ಕಾರು ಅಪಘಾತವಾಗಿದ್ದು ಕೂಡಲೇ ಅವರನ್ನು ಮುಂಬೈ ಬಾಂದ್ರಾದಲ್ಲಿರುವ ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪ್ರೊ ಲೀಗ್‌ ತನ್ನ ಅಧಿಕೃತ ವೈಬ್‌ಸೈಟ್‌ನಲ್ಲಿ ಮಾಹಿತಿ ನೀಡಿದೆ. ವೈದ್ಯರ ತಂಡ ಪರ್ವಿನ್‌ಗೆ ಚಿಕಿತ್ಸೆ ನೀಡುತ್ತಿದೆ. ಕುಟುಂಬಸ್ಥರು ಹಾಗೂ ಪರ್ವಿನ್‌ ಆರೋಗ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ನಟ ಬೇಗ ಗುಣಮುಖರಾಗಿ ವಾಪಸ್‌ ಬರಲಿ ಎಂದು ಬಾಲಿವುಡ್‌ ಸಿನಿಮಾಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

ಪ್ರೊ ಪಂಜಾ ಲೀಗ್‌ನ ಸಹ ಸಂಸ್ಥಾಪಕ

ಶನಿವಾರ ಬೆಳಗ್ಗೆ ಸಂಭವಿಸಿದ ಕಾರು ಅಪಘಾತದಲ್ಲಿ ಗಾಯಗೊಂಡಿರುವ ಪ್ರೊ ಪಂಜಾ ಲೀಗ್‌ನ ಸಹ ಸಂಸ್ಥಾಪಕ ಪರ್ವಿನ್‌ ಅವರು ಬಾಂದ್ರಾದ ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿಸಲು ವಿಷಾದಿಸುತ್ತೇವೆ. ವೈದ್ಯರಿಂದ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ. ಚಿಕಿತ್ಸೆಗೆ ಅವರು ಸ್ಪಂದಿಸುತ್ತಿದ್ದಾರೆ. ಆದಷ್ಟು ಬೇಗ ಅವರು ಗುಣಮುಖರಾಗುವಂತೆ ಪ್ರಾರ್ಥಿಸುವುದಾಗಿ ಪ್ರೊ ಪಂಜಾ ಲೀಗ್‌ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಳ್ಳಲಾಗಿದೆ. ಈ ಕಷ್ಟದ ಪರಿಸ್ಥಿತಿಯಲ್ಲಿ ಪರ್ವಿನ್‌ ದಾಬಸ್‌ ಅವರ ಕುಟುಂಬದೊಂದಿಗೆ ನಾವು ನಿರಂತರ ಸಂಪರ್ಕದಲ್ಲಿರುತ್ತೇವೆ. ಅವರ ಕುಟುಂಬದವರಿಗೆ ಪ್ರೈವೆಸಿ ನೀಡುವಂತೆ ಎಲ್ಲರಿಗೂ ಮನವಿ ಮಾಡುತ್ತೇವೆ. ಅವರ ಆರೋಗ್ಯದ ಬಗ್ಗೆ ಶೀಘ್ರದಲ್ಲೇ ಹೆಚ್ಚಿನ ಮಾಹಿತಿ ನೀಡುವಂತೆಯೂ ಪೋಸ್ಟ್‌ನಲ್ಲಿ ತಿಳಿಸಲಾಗಿದೆ.

ಫ್ಯಾನ್‌ ಫಾಲೋಯಿಂಗ್‌ ಹೊಂದಿರುವ ನಟ

2020 ಫೆಬ್ರವರಿಯಲ್ಲಿ ಕಿರಣ್‌ ರಿಜು ಹಾಗೂ ಒಲಿಂಪಿಕ್‌ ಸ್ಟಾರ್‌ ವಿಜಯೇಂದರ್‌ ಸಿಂಗ್‌ ಜೊತೆಗೂಡಿ ಪರ್ವಿನ್‌ ದಾಬಸ್‌ ಪ್ರೊ ಪಂಜಾ ಲೀಗ್‌ ಸ್ಥಾಪಿಸಿದ್ದರು. ಸಂಸ್ಥೆಯ 6 ತಂಡಗಳೊಂದಿಗೆ ಮೊದಲ ಸೀಸನ್‌ನನ್ನು ಜುಲೈ 28 ರಿಂದ ಆಗಸ್ಟ್ 13ವರೆಗೆ ನಡೆಸಲಾಯ್ತು. ನಟ ಸುನಿಲ್ ಶೆಟ್ಟಿ ಕೂಡಾ ಈ ಸಂಸ್ಥೆಯ ಭಾಗವಾಗಿದ್ದಾರೆ. ರಾಷ್ಟ್ರಪ್ರಶಸ್ತಿ ಪಡೆದ ಖೋಸ್ಲಾ ಕಾ ಘೋಸ್ಲಾ ಚಿತ್ರದಲ್ಲಿ ಕೂಡಾ ಪರ್ವಿನ್‌ ದಾಬಸ್‌ ನಟಿಸಿದ್ದಾರೆ. ಅಮೆಜಾನ್‌ ಪ್ರೈಂ ವಿಡಿಯೋದಲ್ಲಿ ಇತ್ತೀಚೆಗೆ ಸ್ಟ್ರೀಮ್‌ ಆದ ಮೇಡ್‌ ಇನ್‌ ಹೆವೆನ್‌ ವೆಬ್‌ ಸೀರೀಸ್‌ನಲ್ಲಿ ಕೂಡಾ ಪರ್ವಿನ್‌ ನಟಿಸಿದ್ದಾರೆ. ಪರ್ವಿನ್‌ ಬಹಳ ಫ್ಯಾನ್‌ ಫಾಲೋಯಿಂಗ್‌ ಹೊಂದಿದ್ದಾರೆ. 

mysore-dasara_Entry_Point