ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಹೆಸರಿಗೆ ತಕ್ಕಂತೆ ಐಶ್ವರ್ಯವಂತೆ; ಇಲ್ಲಿದೆ ಅಭಿಷೇಕ್ ಬಚ್ಚನ್ ಪತ್ನಿಯ ಅಗಾಧ ಸಂಪತ್ತಿನ ವಿವರ
Aishwarya Rai Net Worth: ಸದ್ಯ ಅಭಿಷೇಕ್ ಬಚ್ಚನ್ ಐಶ್ವರ್ಯಾ ರೈ ಅವರ ವಿವಾಹ ವಿಚ್ಛೇದನ ವಿಷಯ ಸುದ್ದಿಯಲ್ಲಿದೆ. ಈ ಸಮಯದಲ್ಲಿ ಐಶ್ವರ್ಯಾ ರೈ ಅವರ ನಿವ್ವಳ ಸಂಪತ್ತಿನ ವಿಷಯವೂ ಚರ್ಚೆಯಲ್ಲಿದೆ. ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಹೆಸರಿಗೆ ತಕ್ಕಂತೆ ಐಶ್ವರ್ಯವಂತೆ. ಇಲ್ಲಿದೆ ಅವರ ನೆಟ್ ವರ್ತ್ ವಿವರ.
ಕರ್ನಾಟಕ ಕರಾವಳಿ ಮೂಲದ ಮಾಜಿ ವಿಶ್ವಸುಂದರಿ, ಬಾಲಿವುಡ್ ನಟಿ, ಅಭಿಷೇಕ್ ಬಚ್ಚನ್ ಪತ್ನಿ, ಅಮಿತಾಬ್ ಬಚ್ಚನ್ ಸೊಸೆ ಐಶ್ವರ್ಯಾ ರೈ ಅವರ ವೈಯಕ್ತಿಕ ಜೀವನದ ಕುರಿತು ಕಳೆದ ಕೆಲವು ದಿನಗಳಿಂದ ವದಂತಿಗಳು ಹೆಚ್ಚಾಗುತ್ತಿವೆ. ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅವರ ನಡುವೆ ವಿವಾಹ ವಿಚ್ಚೇಧನವಾಗಿದೆ ಎಂಬ ವಿಷಯ ಸುದ್ದಿಯಲ್ಲಿದೆ. ಈ ವದಂತಿಗಳಿಗೆ ಪೂರಕವಾಗಿ ಬಚ್ಚನ್ ಕುಟುಂಬದಲ್ಲಿ ಕೆಲವೊಂದು ಘಟನೆಗಳು, ವರ್ತನೆಗಳು ಕಾಣಿಸುತ್ತಿವೆ. ಅಮಿತಾಬ್ ಬಚ್ಚನ್ ಇತ್ತೀಚೆಗೆ ಒಗಟಾಗಿ ಮಾಡಿರುವ ಟ್ವೀಟ್ ಕೂಡ ಇಂತಹ ವದಂತಿಗಳಿಗೆ ಪುಷ್ಠಿ ನೀಡಿದೆ. ಇದೀಗ ಐಶ್ವರ್ಯಾ ರೈ ಅವರು ಅಭಿಷೇಕ್ ಮನೆಯಿಂದ ಹೊರಬಂದಿದ್ದಾರೆ ಎಂಬ ಸುದ್ದಿಯೂ ಬಂದಿದೆ. ಇದೇ ಸಮಯದಲ್ಲಿ ಐಶ್ವರ್ಯಾ ರೈ ಅವರ ಅಗಾಧ ಸಂಪತ್ತಿನ ಕುರಿತೂ ನೆಟ್ಟಿಗರಲ್ಲಿ ಕುತೂಹಲ ಹೆಚ್ಚಿದೆ.
ಭಾರತದ ಮನರಂಜನಾ ಕ್ಷೇತ್ರದಲ್ಲಿ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಸಾಕಷ್ಟು ಜನಪ್ರಿಯರು. ಇವರಿಗೆ ಪದ್ಮಶ್ರೀ ಪ್ರಶಸ್ತಿಯೂ ದೊರಕಿದೆ. 1997ರ ಮಣಿರತ್ನಂ ಅವರ ತಮಿಳು ಸಿನಿಮಾ ಇರುವಾರ್ ಮೂಲಕ ಚಿತ್ರರಂಗ ಪ್ರವೇಶಿಸಿದ ಐಶ್ವರ್ಯಾ ರೈ ಹೆಸರು ಈಗ ಬಾಲಿವುಡ್ ಮಾತ್ರವಲ್ಲದೆ ಹಾಲಿವುಡ್‌ನಲ್ಲೂ ಜನಪ್ರಿಯತೆ ಪಡೆದಿದೆ. ಇವರು ಭಾರತದಲ್ಲಿ ಅತ್ಯಧಿಕ ಹಣ ಗಳಿಸುವ ನಟಿ ಎಂದೇ ಖ್ಯಾತಿ ಪಡೆದಿದ್ದಾರೆ. ಇತ್ತೀಚೆಗೆ 50ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಐಶ್ವರ್ಯಾ ರೈ ಅವರ ನಿವ್ವಳ ಸಂಪತ್ತು ಸುಮಾರು 776 ಕೋಟಿ ರೂಪಾಯಿ ಎನ್ನಲಾಗಿದೆ. ನಟನೆ ಮಾತ್ರವಲ್ಲದೆ ಜಾಹೀರಾತು ಸೇರಿದಂತೆ ವಿವಿಧ ಮೂಲಗಳಿಂದ ಇವರು ತನ್ನ ಸಂಪತ್ತನ್ನು ಹೆಚ್ಚಿಸಿಕೊಂಡಿದ್ದಾರೆ. ಇದನ್ನು ಓದಿದ್ದೀರಾ: ಅಭಿಷೇಕ್ ಬಚ್ಚನ್ ಐಶ್ವರ್ಯಾ ರೈ ಸಂಬಂಧ ಕೆಟ್ಟಿದೆ ಎನ್ನುವುದಕ್ಕೆ 8 ನಿದರ್ಶನಗಳು
ಐಶ್ವರ್ಯಾ ರೈ ಹೆಸರಿನಂತೆ ಐಶ್ವರ್ಯವಂತೆ
2010ರಲ್ಲಿ ಗುಝಾರಿಶ್ ಸಿನಿಮಾದ ಬಳಿಕ 2015ರಲ್ಲಿ ಜಾಝ್ಬಾ ಸಿನಿಮಾದಲ್ಲಿ ನಟಿಸಿದ್ದರು. ಹತ್ತು ಹಲವು ಹಿಂದಿ ಸಿನಿಮಾಗಳು ಮಾತ್ರವಲ್ಲದೆ ಇವರು ಸಿನಿಮಾ ನಿರ್ಮಾಪಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಐಶ್ವರ್ಯಾ ರೈ ಅವರು ಹತ್ತು ಹಲವು ಅಂತಾರಾಷ್ಟ್ರೀಯ ಬ್ರಾಂಡ್‌ಗಳ ಜತೆ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಕೇವಲ ಬ್ರಾಂಡ್ ಪ್ರಮೋಷನ್‌ನಿಂದಲೇ ಇವರಿಗೆ ಪ್ರತಿದಿನ ಅಂದಾಜು 6-7 ಕೋಟಿ ರೂಪಾಯಿ ಆದಾಯ ದೊರಕುತ್ತಿದೆ ಎಂದು ವರದಿಗಳು ತಿಳಿಸಿವೆ. ಇವರು ಲಾಗ್ನೀಸ್, ಕ್ಯಾಡ್‌ಬರಿ, ಲಕ್ಮೆ, ಟೈಟಾನ್ ವಾಚಸ್, ಲೊರಲ್ ಪ್ಯಾರೀಸ್, ಕೋಕೋಕೋಲಾ, ಲಕ್ಸ್, ಕಲ್ಯಾಣ್ ಜ್ಯುವೆಲರ್ಸ್, ಪಿಲಿಪ್ಸ್ ಸೇರಿದಂತೆ ಪ್ರಮುಖ ಬ್ರಾಂಡ್‌ಗಳ ಜತೆ ಕಾರ್ಯನಿರ್ವಹಿಸುತ್ತಿದ್ದಾರೆ.
ಬಿಸ್ನೆಸ್ ಹೂಡಿಕೆ
2021ರಲ್ಲಿ ನ್ಯೂಟ್ರಿಷಿಯನ್ ಹೆಲ್ತ್‌ಕೇರ್ ಕಂಪನಿ ಪಾಸಿಬಲ್‌ನಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಎಕಾನಮಿಕ್ ಟೈಮ್ಸ್ ವರದಿ ತಿಳಿಸಿದೆ. ಈ ಕಂಪನಿಯಲ್ಲಿ ಸುಮಾರು 5 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ. ಇದಕ್ಕೂ ಮೊದಲು ಇವರ ತಾಯಿ ವೃಂದಾ ಕೆಆರ್ ಅವರು ಅಂಬಿ ಎಂಬ ಕಂಪನಿಯಲ್ಲಿ ಒಂದು ಕೋಟಿ ರೂಪಾಯಿ ಹೂಟಿಕೆ ಮಾಡಿದ್ದರು. ಇನ್ನೂ ಹಲವು ಕಂಪನಿಗಳಲ್ಲಿ, ವ್ಯವಹಾರದಲ್ಲಿ ಐಶ್ವರ್ಯಾ ರೈ ಅವರು ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ.
ಸಿನಿಮಾ ನಿರ್ಮಾಣ
ಸಿನಿಮಾ ನಿರ್ಮಾಣ ಮತ್ತು ಇವೆಂಟ್ ಮ್ಯಾನೇಜ್‌ಮೆಂಟ್ ವಿಭಾಗದಲ್ಲೂ ಐಶ್ವರ್ಯಾ ರೈ ಹೂಡಿಕೆ ಮಾಡಿದ್ದಾರೆ. ಅಮಿತಾಬ್ ಬಚ್ಚನ್ ಕಾರ್ಪೋರೇಷನ್ ಲಿಮಿಟೆಡ್‌ನಡಿ ಇವರು ಮೇಜರ್ ಆಬ್, ಮೃತ್ಯುದಾತದಂತಹ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಅಮಿತಾಬ್ ಬಚ್ಚನ್ ಕಾರ್ಪೊರೇಷನ್ ಬಳಿಕ ವಿಝ್‌ಕ್ರಾಫ್ಟ್ ಇಂಟರ್‌ನ್ಯಾಷನಲ್ ಎಂಟರ್‌ಟೇನ್‌ಮೆಂಟ್ ಜತೆ ಸಹಭಾಗಿತ್ವ ಮಾಡಿಕೊಂಡಿತ್ತು. ಇದಾದ ಬಳಿಕ ಅನ್‌ಫರ್ಗೆಟೇಬಲ್ ಪ್ರೊಡಕ್ಷನ್ ಹೌಸ್ ಆರಂಭವಾಗಿತ್ತು.
ಇದಲ್ಲದೆ ಐಶ್ವರ್ಯಾ ಅವರು ಕಳೆದ ಎರಡು ದಶಕಗಳಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ಪ್ರತಿ ಸಿನಿಮಾದ ನಟನೆಗೂ 10-12 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಇತ್ತೀಚಿನ ಪೊನ್ನಿಯನ್ ಸೆಲ್ವನ್ ಸಿನಿಮಾಕ್ಕೆ ಸುಮಾರು ಹತ್ತು ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಪ್ರೀಮಿಯಂ ರೆಸೆಡೆನ್ಸಿಯಲ್ ಟವರ್‌ನಲ್ಲಿ ಅಪಾರ್ಟ್‌ಮೆಂಟ್ ಕೂಡ ಖರೀದಿಸಿದ್ದಾರೆ. ಇದಲ್ಲದೆ ಹಲವು ರಿಯಲ್ ಎಸ್ಟೇಟ್ ಪ್ರಾಜೆಕ್ಟ್‌ಗಳಲ್ಲಿಯೂ ಇವರು ಹೂಡಿಕೆ ಮಾಡಿದ್ದಾರೆ. ಐಶ್ವರ್ಯಾ ರೈ ಅವರ ಒಟ್ಟು ನಿವ್ವಳ ಸಂಪತ್ತು 776 ಕೋಟಿ ರೂಪಾಯಿಗೂ ಅಧಿಕವಿದೆ.