ಕನ್ನಡ ಸುದ್ದಿ  /  Entertainment  /  Bollywood News Fighter Ott Release Date Announced Watch Hrithik Roshan, Deepika Padukone Movie Netflix On March 21 Pcp

Fighter OTT Release: ಫೈಟರ್‌ ಒಟಿಟಿ ಬಿಡುಗಡೆ ದಿನಾಂಕ ಪ್ರಕಟ; ಮಾ 21ರಿಂದ ಮನೆಯಲ್ಲೇ ನೋಡಿ ದೀಪಿಕಾ ಪಡುಕೋಣೆ- ಹೃತಿಕ್‌ ರೋಷನ್‌ ಸಿನಿಮಾ

Fighter OTT Release Date: ದೀಪಿಕಾ ಪಡುಕೋಣೆ, ಹೃತಿಕ್‌ ರೋಷನ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವ ಫೈಟರ್‌ ಸಿನಿಮಾವು ಒಟಿಟಿಯಲ್ಲಿ ಮಾರ್ಚ್‌ 21ರಿಂದ ಸ್ಟ್ರೀಮಿಂಗ್‌ ಆಗಲಿದೆ. ಬಾಕ್ಸ್‌ ಆಫೀಸ್‌ನಲ್ಲಿ 337 ಕೋಟಿ ರೂಪಾಯಿ ಗಳಿಕೆ ಮಾಡಿರುವ ಫೈಟರ್‌ ಸಿನಿಮಾವನ್ನು ಒಟಿಟಿಯಲ್ಲಿ ನೆಟ್‌ಫ್ಲಿಕ್ಸ್‌ ಚಂದಾದಾರರು ವೀಕ್ಷಿಸಬಹುದು.

ಫೈಟರ್‌ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ
ಫೈಟರ್‌ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ

ಬೆಂಗಳೂರು: ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡ ಬಳಿಕ ಇದೀಗ ಹೃತಿಕ್‌ ರೋಷಣ್‌- ದೀಪಿಕಾ ಪಡುಕೋಣೆ ನಟನೆಯ ಫೈಟರ್‌ ಸಿನಿಮಾವು ಒಟಿಟಿಯತ್ತ ಮುಖ ಮಾಡಿದೆ. ಹೌದು, ಈ ವೈಮಾನಿಕ ಸಾಹಸಮಯ ಸಿನಿಮಾ ನಾಳೆಯಿಂದ (ಮಾರ್ಚ್‌ 21)ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್‌ ಆಗಲಿದೆ. ಸಿದ್ಧಾರ್ಥ ಆನಂದ್‌ ನಿರ್ದೇಶನದ ಫೈಟರ್‌ ಸಿನಿಮಾದಲ್ಲಿ ಅನಿಲ್‌ ಕಪೂರ್‌, ಕರಣ್‌ ಸಿಂಗ್‌ ಗ್ರೋವರ್‌ ಮತ್ತು ಅಕ್ಷಯ್‌ ಓಬೇರಾಯ್‌ ಕೂಡ ನಟಿಸಿದ್ದಾರೆ.

ವೈಮಾನಿಕ ಸಾಹಸ ಕಥೆ ಹೊಂದಿರುವ ಫೈಟರ್‌ ಸಿನಿಮಾವು ಜನವರಿ 25ರಂದು ಬಿಡುಗಡೆಯಾಗಿತ್ತು. ರಿಪಬ್ಲಿಕ್‌ ದಿನದ ಸಮಯದಲ್ಲಿ ಬಿಡುಗಡೆಯಾದ ಈ ಚಿತ್ರವು 199.45 ಕೋಟಿ ರೂ ಲೈಫ್‌ಟೈಮ್‌ ಕಲೆಕ್ಷನ್‌ ಮಾಡಿತ್ತು. ಜಾಗತಿಕವಾಗಿ ಈ ಸಿನಿಮಾದ ಗ್ರಾಸ್‌ ಕಲೆಕ್ಷನ್‌ 337. 2 ಕೋಟಿ ರೂಪಾಯಿ ಆಗಿತ್ತು. ಮಾರ್ಚ್‌ 21ರಿಂದ ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್‌ ಆಗಲಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಈಗಾಗಲೇ ಮೇರಿ ಕ್ರಿಸ್‌ಮಸ್‌, ಹಾಯ್‌ ನಾನಾ, ಮರ್ಡರ್‌ ಮುಬಾರಕ್‌, ಮಾಮಲ್‌ ಲೀಗಲ್‌ ಹೈ, ದಮ್ಸೆಲ್‌, ಅನ್ವಿಶಿಪನ್‌, ಗುಂಟೂರು ಕಾರಂ ಸೇರಿದಂತೆ ಹಲವು ಹೊಸ ಸಿನಿಮಾಗಳು ಒಟಿಟಯಲ್ಲಿ ಸ್ಟ್ರೀಮಿಂಗ್‌ ಆಗುತ್ತಿವೆ.

ಇತ್ತೀಚೆಗೆ ಬಾಲಿವುಡ್‌ನಲ್ಲಿ ವೈಮಾನಿಕ ಸಾಹಸ, ಯುದ್ಧ, ಸೇನೆಗೆ ಸಂಬಂಧಪಟ್ಟ ಹಲವು ಸಿನಿಮಾಗಳು ಆಗಮಿಸಿವೆ. ಇದೇ ಸರಣಿಯಲ್ಲಿ ಆಗಮಿಸಿದ ಫೈಟರ್‌ ಕೂಡ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಸ್ಕ್ವಾಡ್ರನ್ ಲೀಡರ್ ಶಂಶೇರ್ ಪಠಾನಿಯಾ ಅಲಿಯಾಸ್ ಪ್ಯಾಟಿಯಾಗಿ ಈ ಚಿತ್ರದಲ್ಲಿ ನಟಿಸಿದ್ದಾರೆ. ಸ್ಕ್ವಾಡ್ರನ್ ಲೀಡರ್ ಮಿನಾಲ್ ರಾಥೋಡ್ ಅಕಾ ಮಿನ್ನಿಯಾಗಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಗ್ರೂಪ್ ಕ್ಯಾಪ್ಟನ್ ರಾಕೇಶ್ ಜೈ ಸಿಂಗ್ ಅಲಿಯಾಸ್ ರಾಕಿ ಪಾತ್ರದಲ್ಲಿ ಅನಿಲ್‌ ಕಪೂರ್‌ ಮಿಂಚಿದ್ದಾರೆ.

ವಿಶೇಷ ಅಂದ್ರೆ, ದೀಪಿಕಾ ಪಡುಕೋಣೆ ಮತ್ತು ಹೃತಿಕ್‌ ರೋಷನ್‌ ಇದೇ ಮೊದಲ ಬಾರಿಗೆ ಒಂದೇ ಸಿನಿಮಾದಲ್ಲಿ ನಟಿಸಿದ್ದಾರೆ. ಫೈಟರ್‌ ಸಿನಿಮಾವನ್ನು ಸಾಕಷ್ಟು ಜನರು ಈಗಾಗಲೇ ಥಿಯೇಟರ್‌ನಲ್ಲಿ ನೋಡಿರಬಹುದು. ಒಮ್ಮೆ ನೋಡಿದರೂ ಕುಟುಂಬ ಸಮೇತ ಮತ್ತೊಮ್ಮೆ ಒಟಿಟಿಯಲ್ಲಿ ನೋಡುವ ಅವಕಾಶ ಇದೀಗ ದೊರಕಿದೆ. ಈಗಾಗಲೇ ಫೈಟರ್‌ ಸಿನಿಮಾ ನೋಡಿಲ್ಲದೆ ಇರುವವರಂತೂ ಮಾರ್ಚ್‌ 21ರಿಂದ ಹೃತಿಕ್‌-ದೀಪಿಕಾ ಸಿನಿಮಾವನ್ನು ಕಣ್ತುಂಬಿಕೊಳ್ಳಬಹುದು.

ಮಾರ್ಫ್ಲಿಕ್ಸ್‌ ಫಿಕ್ಚರ್ಸ್‌ ಜೆ ವಿಯಾಕಾಮ್‌18 ಸ್ಟುಡಿಯೋಸ್‌ ನಿರ್ಮಾಣದ ಫೈಟರ್‌ ಸಿನಿಮಾದಲ್ಲಿ ಕರಣ್ ಸಿಂಗ್ ಗ್ರೋವರ್, ಅಕ್ಷಯ್ ಒಬೆರಾಯ್, ಸಂಜೀವ್ ಜೈಸ್ವಾಲ್, ರಿಷಭ್ ಸಾಹ್ನಿ, ಸಂಜೀದಾ ಶೇಖ್, ತಲತ್ ಅಜೀಜ್, ಮತ್ತು ಅಶುತೋಷ್ ರಾಣಾ ಕೂಡ ನಟಿಸಿದ್ದಾರೆ. ಭಾರತೀಯ ವಾಯುಪಡೆಯ ಸಾಹಸವನ್ನು ಸಿನಿಮಾ ರೂಪದಲ್ಲಿ ಕಣ್ತುಂಬಿಕೊಳ್ಳಲು ಬಯಸುವವರಿಗೆ ಈ ಚಿತ್ರ ಸಾಕಷ್ಟು ಖುಷಿ ನೀಡಬಹುದು.

ಮಹಾರಾಣಿ ಸೀಸನ್‌ 3, ಅನ್ವೇಶಿಪಿನ್‌ ಕಂಡೆಂತು ಕೂಡ ಇತ್ತೀಚೆಗೆ ಒಟಿಟಿಗೆ ಲಗ್ಗೆ ಇಟ್ಟಿದೆ. ತೇಜಾ ಸಜ್ಜಾ ನಟನೆಯ ಹನುಮಾನ್‌ ಸಿನಿಮಾವು ಒಟಿಟಿಗೆ ಬಂದಿದೆ. ಈ ಸಿನಿಮಾ ಆಗಮನಕ್ಕೆ ಒಟಿಟಿ ಪ್ರಿಯರು ಕಾತರದಿಂದ ಕಾಯುತ್ತಿದ್ದರು. ಒಂದಿಷ್ಟು ವಿಳಂಬದ ಬಳಿಕ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ. ಲಾಲ್‌ ಸಲಾಮ್‌ ಕೂಟ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ.

ಕನ್ನಡದ ಹಲವು ಸಿನಿಮಾಗಳೂ ಸದ್ದಿಲ್ಲದೆ ಒಟಿಟಿಗೆ ಪ್ರವೇಶಿಸಿವೆ. ಒಂದು ಸರಳ ಪ್ರೇಮಕಥೆಯು ಅಮೆಜಾನ್‌ ಪ್ರೈಮ್‌ನಲ್ಲಿ ರಿಲೀಸ್‌ ಆಗಿದೆ. ಇದೇ ಸಮಯದಲ್ಲಿ ಭ್ರಮಯುಗಂ ಕೂಡ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ. ಅಮೆಜಾನ್‌ ಪ್ರೈಮ್‌, ನೆಟ್‌ಫ್ಲಿಕ್ಸ್‌, ಒಟಿಟಿ ಪ್ಲೇ, ಜೀ5 ಮುಂತಾದ ಒಟಿಟಿಗೆ ಚಂದಾದಾರರಾಗುವರಿಗೆ ಹಲವು ಹೊಸ ಕನ್ನಡ, ಮಲಯಾಳಂ, ತಮಿಳು, ತೆಲುಗು, ಹಿಂದಿ, ಇಂಗ್ಲಿಷ್‌ ಸಿನಿಮಾಗಳು, ಸರಣಿಗಳು ಕಾಯುತ್ತಿವೆ.

IPL_Entry_Point