Abhishek Ambareesh: 'ಅಭಿಯಲ್ಲಿ ನಾನು ಅಂಬರೀಶಣ್ಣನ ಕಾಣ್ತಿದ್ದೇನೆ'; 'ಧಮಾಕ'ಗೆ ಸಾಥ್‌ ಕೊಟ್ಟಿದ್ದಕ್ಕೆ ಅಭಿಷೇಕ್‌ ಬಗ್ಗೆ 'ಕಿಲಾಡಿ' ಮಾತು..
ಕನ್ನಡ ಸುದ್ದಿ  /  ಮನರಂಜನೆ  /  Abhishek Ambareesh: 'ಅಭಿಯಲ್ಲಿ ನಾನು ಅಂಬರೀಶಣ್ಣನ ಕಾಣ್ತಿದ್ದೇನೆ'; 'ಧಮಾಕ'ಗೆ ಸಾಥ್‌ ಕೊಟ್ಟಿದ್ದಕ್ಕೆ ಅಭಿಷೇಕ್‌ ಬಗ್ಗೆ 'ಕಿಲಾಡಿ' ಮಾತು..

Abhishek Ambareesh: 'ಅಭಿಯಲ್ಲಿ ನಾನು ಅಂಬರೀಶಣ್ಣನ ಕಾಣ್ತಿದ್ದೇನೆ'; 'ಧಮಾಕ'ಗೆ ಸಾಥ್‌ ಕೊಟ್ಟಿದ್ದಕ್ಕೆ ಅಭಿಷೇಕ್‌ ಬಗ್ಗೆ 'ಕಿಲಾಡಿ' ಮಾತು..

ಸೆಪ್ಟೆಂಬರ್ 2ರಂದು ಪ್ರೇಕ್ಷಕರಿಗೆ ಮನರಂಜನೆಯ ಕಚಗುಳಿ ಇಡಲು ಬರ್ತಿರುವ ಧಮಾಕ ಚಿತ್ರಕ್ಕೆ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಷ್ ಸಾಥ್ ನೀಡಿದ್ದಾರೆ.

<p>'ಅಭಿಯಲ್ಲಿ ನಾನು ಅಂಬರೀಶಣ್ಣನ ಕಾಣ್ತಿದ್ದೇನೆ'; 'ಧಮಾಕ'ಗೆ ಸಾಥ್‌ ಕೊಟ್ಟಿದ್ದಕ್ಕೆ ಅಭಿಷೇಕ್‌ ಬಗ್ಗೆ 'ಕಿಲಾಡಿ' ಮಾತು..</p>
'ಅಭಿಯಲ್ಲಿ ನಾನು ಅಂಬರೀಶಣ್ಣನ ಕಾಣ್ತಿದ್ದೇನೆ'; 'ಧಮಾಕ'ಗೆ ಸಾಥ್‌ ಕೊಟ್ಟಿದ್ದಕ್ಕೆ ಅಭಿಷೇಕ್‌ ಬಗ್ಗೆ 'ಕಿಲಾಡಿ' ಮಾತು..

ಬೆಂಗಳೂರು: ಟ್ರೇಲರ್ ಹಾಗೂ ಹಾಡಿನ ಮೂಲಕ ಚಿತ್ರಪ್ರೇಮಿಗಳಲ್ಲಿ ನಿರೀಕ್ಷೆ ಹೆಚ್ಚಿಸಿರುವ 'ಧಮಾಕ' ಸಿನಿಮಾ ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದೆ. ಸೆಪ್ಟೆಂಬರ್ 2ರಂದು ಪ್ರೇಕ್ಷಕರಿಗೆ ಮನರಂಜನೆಯ ಕಚಗುಳಿ ಇಡಲು ಬರ್ತಿರುವ ಈ ಚಿತ್ರಕ್ಕೆ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಷ್ ಸಾಥ್ ಕೊಟ್ಟಿದ್ದಾರೆ. ಚಿತ್ರದ ನಾಯಕ ಶಿವರಾಜ್ ಕೆ ಆರ್ ಪೇಟೆ ಆಪ್ತ ಗೆಳೆಯರಾಗಿರುವ ಅಭಿಷೇಕ್ ಗೆಳೆಯನ ಹಾಗೂ ಸಿನಿಮಾ ಬಗ್ಗೆ ಪ್ರಶಂಸೆ ಮಾತುಗಳನ್ನಾಡಿದ್ದಾರೆ.

ಅಭಿಷೇಕ್ ಅಂಬರೀಷ್, "ಶಿವರಾಜ್ ಕೆ. ಆರ್. ಪೇಟೆ ಇಂಡಸ್ಟ್ರೀಯಲ್ಲಿ ಒಳ್ಳೆಯ ಮನುಷ್ಯ. ಶಿವಣ್ಣ ಶಿವಣ್ಣ ಅಂತಾ ನಾವು ಅವರನ್ನು ಪ್ರೀತಿಯಿಂದ ಬರ ಮಾಡಿಕೊಳ್ಳುತ್ತೇವೆ. ಅದೇ ಖುಷಿ ನೀವು ಸ್ಕ್ರೀನ್ ಮೇಲೆ ಬಂದಾಗಲೂ ಇರುತ್ತದೆ. ಶಿವಣ್ಣ ಒಂದೇ ಟ್ರ್ಯಾಕ್ ನಲ್ಲಿ ನಡೆಯೋಲ್ಲ. ವಿಭಿನ್ನ ಪಾತ್ರಗಳನ್ನು ಮಾಡ್ತಾ ಬೇರೆ ಬೇರೆ ಟ್ರ್ಯಾಕ್ ನಲ್ಲಿ ನಡೆಯುತ್ತಾರೆ. ಆರ್ಟಿಸ್ಟ್ ಆಗಿ ಸಕ್ಸಸ್ ಕಂಡವರು ಈಗ ಹೀರೋ ಆಗಿಯೂ ಸಕ್ಸಸ್ ಕಾಣ್ತಿದ್ದಾರೆ. ನಮ್ಮ ಮಂಡ್ಯ ಜಿಲ್ಲೆಯ ಮಗ. 'ಧಮಾಕ' ಟ್ರೇಲರ್ ನೋಡಿದೆ. ಫೂಟೇಜ್ ನೋಡಿದ್ದೇನೆ. ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಇಡೀ ತಂಡಕ್ಕೆ ಒಳ್ಳೆದಾಗಲಿ" ಎಂದರು.

ನಾಯಕ ಶಿವರಾಜ್ ಕೆ.ಆರ್.ಪೇಟೆ, "ಮಂಡ್ಯ ಅಂದ ತಕ್ಷಣ ನೆನಪಾಗುವುದು ಕಲಿಯುಗ ಕರ್ಣ ಅಂಬರೀಶಣ್ಣ. ಅಭಿಷೇಕ್‌ ಅವರಿಗೆ ಚಿಕ್ಕ ವಯಸ್ಸಾದ್ರೂ ಅಣ್ಣ ಅಂತಾ ಕರೆಯುತ್ತೇನೆ ಎಂದರೆ ಅವರಲ್ಲಿ‌ ನಾನು ಅಂಬರೀಶಣ್ಣನ ನೋಡ್ತಾ ಇದ್ದೇನೆ. ತಂದೆಯಷ್ಟೇ ಎಲ್ಲರಿಗೂ ಪ್ರೀತಿ ಕೊಡುತ್ತಾರೆ. ನಮ್ಮ ಸಿನಿಮಾಗೆ ಬಂದು ಶುಭ ಹಾರೈಸಿದಕ್ಕೆ ಧನ್ಯವಾದಗಳು ಎಂದು ಅಭಿಷೇಕ್‌ ಬಗ್ಗೆ ಮಾತನಾಡಿದ್ರು ಶಿವರಾಜ್‌ ಕೆ.ಆರ್‌ ಪೇಟೆ.

ಶಿವರಾಜ್ ಕೆ ಆರ್ ಪೇಟೆ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ಇವರಿಗೆ ಜೊತೆಯಾಗಿ ನಯನಾ ನಟಿಸಿದ್ದಾರೆ. ಮೋಹನ್‌ ಜುನೇಜಾ, ಕೋಟೆ ಪ್ರಭಾಕರ್‌, ಮಿಮಿಕ್ರಿ ಗೋಪಾಲ್‌, ಅರುಣಾ ಬಾಲರಾಜ್‌ ಮುಂತಾದ ಕಲಾಬಳಗ ಚಿತ್ರದಲ್ಲಿದೆ. ಸಂಪೂರ್ಣ ಹಾಸ್ಯಮಯ ಕಥಾಹಂದರ ಹೊಂದಿರುವ 'ಧಮಾಕ' ಚಿತ್ರವನ್ನು ಎಸ್‌ ಆರ್‌. ಮೀಡಿಯಾ ಪ್ರೊಡಕ್ಷನ್‌ ಬ್ಯಾನರ್‌ನಡಿ ಸುನೀಲ್‌.ಎಸ್‌.ರಾಜ್‌ ಮತ್ತು ಅನ್ನಪೂರ್ಣ ಪಾಟೀಲ್‌ ನಿರ್ಮಾಣ ಮಾಡಿದ್ದು, ಲಕ್ಷ್ಮೀ ರಮೇಶ್‌ ಈ ಚಿತ್ರದ ನಿರ್ದೇಶಕರು. ಚಿತ್ರಕ್ಕೆ ಹಾಲೇಶ್‌ ಎಸ್‌. ಛಾಯಾಗ್ರಹಣ, ವಿಕಾಸ್‌ ವಸಿಷ್ಠ ಸಂಗೀತ, ರಘು ಆರ್‌.ಕಜೆ ನೃತ್ಯ ನಿರ್ದೇಶನ ಮತ್ತು ವಿನಯ್‌ ಕೂರ್ಗ್‌ ಸಂಕಲನ ಸಿನಿಮಾಕ್ಕಿದೆ.

<p>ಧಮಾಕ ಚಿತ್ರದಲ್ಲಿ ನಟಿಸಿರುವ ಶಿವರಾಜ್‌ ಕೆ.ಆರ್ ಪೇಟೆ ಮತ್ತು ಸಿದ್ದು ಮೂಲಿಮನಿ</p>
ಧಮಾಕ ಚಿತ್ರದಲ್ಲಿ ನಟಿಸಿರುವ ಶಿವರಾಜ್‌ ಕೆ.ಆರ್ ಪೇಟೆ ಮತ್ತು ಸಿದ್ದು ಮೂಲಿಮನಿ

ವಾರಿಯರ್‌ ಅವತಾರದಲ್ಲಿ ಎದುರಾದ ಅಭಿ

ಅಭಿಷೇಕ್‌ ಅಂಬರೀಶ್ ನಟನೆಯ ಇನ್ನೂ ಶೀರ್ಷಿಕೆ ಅಂತಿಮವಾಗದ ಈ ಸಿನಿಮಾದ ಫಸ್ಟ್‌ ಲುಕ್‌ ಪೋಸ್ಟರ್‌ ಕಂಠೀರವ ಸ್ಟುಡಿಯೋದಲ್ಲಿನ ಅಂಬರೀಶ್ ಅವರ ಸಮಾಧಿ ಬಳಿ ರಿಲೀಸ್‌ ಮಾಡಲಾಗಿದೆ. ಈ ಚಿತ್ರದಲ್ಲಿ ಅಭಿಷೇಕ್‌ ಹೊಸ ಗೆಟಪ್‌ನಲ್ಲಿ ಎದುರಾಗುತ್ತಿದ್ದು, ವಾರಿಯರ್‌ ಅವತಾರ ಎತ್ತಿದ್ದಾರೆ. ಈವರೆಗೂ ಲವರ್‌ ಬಾಯ್‌ ಲುಕ್‌ನಲ್ಲಿ ಮಿಂಚಿದ್ದ ಅಭಿ, ಈ ಸಿನಿಮಾ ಮೂಲಕ ಹೊಸ ಪ್ರಯೋಗ ಮತ್ತು ಪ್ರಯತ್ನಕ್ಕೆ ಇಳಿದಿದ್ದು, ಅವರ ಅಭಿಮಾನಿವಲಯದಲ್ಲಿಯೂ ಮೆಚ್ಚುಗೆ ವ್ಯಕ್ತವಾಗಿದೆ.

ಹಾಗಾದರೆ ಏನಿದು ಸಿನಿಮಾ?

ಸದ್ಯದ ಪೋಸ್ಟರ್‌ ನೋಡುತ್ತಿದ್ದರೆ ಇದೊಂದು ಫಿಕ್ಷನ್ ಸಿನಿಮಾ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಈ ಬಗ್ಗೆ Hindustan Times Kannadaದ ಜತೆಗೆ ಮಾತನಾಡಿರುವ ಮಹೇಶ್‌, "ಸಾವಿರ ವರ್ಷಗಳ ಹಿಂದಿನ ಕಥೆಯೊಂದನ್ನು ಆಯ್ಕೆ ಮಾಡಿಕೊಂಡು ಈ ಸಿನಿಮಾ ಮಾಡುತ್ತಿದ್ದೇನೆ. ಐತಿಹಾಸಿಕದ ಜತೆಗೆ ಕಾಲ್ಪನಿಕ ಸ್ಪರ್ಷವೂ ಇರಲಿದೆ" ಎನ್ನುವ ಮಹೇಶ್‌, ಅಭಿಷೇಕ್‌ ಅಂಬರೀಷ್‌ ಅವರ ಬಗ್ಗೆಯೂ ಮಾತನಾಡಿದ್ದಾರೆ. "ಅಭಿ ಅವರ ಕಣ್ಣು, ನೀಳ ಕಾಯ, ಆ ರಗಡ್‌ನೆಸ್‌ ನೋಡಿಯೋ ಈ ಸಿನಿಮಾಕ್ಕೆ ಅವರೇ ಸೂಟ್‌ ಆಗುತ್ತಾರೆ ಎಂದುಕೊಂಡೇ ಈ ಕಥೆ ಸಿದ್ಧಪಡಿಸಿದ್ದೇವೆ. ಅದರಂತೆ ಒಟ್ಟು 12ಕ್ಕೂ ಅಧಿಕ ಗೆಟಪ್‌ಗಳಲ್ಲಿ ಅಭಿ ಅವರು ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ವರ್ಷಾಂತ್ಯಕ್ಕೆ ಸಿನಿಮಾ ಸೆಟ್ಟೇರಲಿದ್ದು, 2023 ಕೊನೆಗೆ ರಿಲೀಸ್‌ ಆಗಲಿದೆ" ಎನ್ನುತ್ತಾರೆ.

Whats_app_banner