ಆನ್‌ಲೈನ್‌ನಲ್ಲಿ 75 ಸಾವಿರ ಟಿಕೆಟ್‌ ಮಾರಾಟವಾಗುವ ಮೂಲಕ ದಾಖಲೆ ಬರೆದ ಉಪೇಂದ್ರ ಯುಐ ಸಿನಿಮಾ: ಕನ್ನಡಿಗರಿಗೆ ಧನ್ಯವಾದ ಅರ್ಪಿಸಿದ ಚಿತ್ರತಂಡ
ಕನ್ನಡ ಸುದ್ದಿ  /  ಮನರಂಜನೆ  /  ಆನ್‌ಲೈನ್‌ನಲ್ಲಿ 75 ಸಾವಿರ ಟಿಕೆಟ್‌ ಮಾರಾಟವಾಗುವ ಮೂಲಕ ದಾಖಲೆ ಬರೆದ ಉಪೇಂದ್ರ ಯುಐ ಸಿನಿಮಾ: ಕನ್ನಡಿಗರಿಗೆ ಧನ್ಯವಾದ ಅರ್ಪಿಸಿದ ಚಿತ್ರತಂಡ

ಆನ್‌ಲೈನ್‌ನಲ್ಲಿ 75 ಸಾವಿರ ಟಿಕೆಟ್‌ ಮಾರಾಟವಾಗುವ ಮೂಲಕ ದಾಖಲೆ ಬರೆದ ಉಪೇಂದ್ರ ಯುಐ ಸಿನಿಮಾ: ಕನ್ನಡಿಗರಿಗೆ ಧನ್ಯವಾದ ಅರ್ಪಿಸಿದ ಚಿತ್ರತಂಡ

UI Movie Update: ಸುಮಾರು 9 ವರ್ಷಗಳ ನಂತರ ಉಪೇಂದ್ರ ನಿರ್ದೇಶನಕ್ಕೆ ವಾಪಸ್‌ ಬಂದಿದ್ದು, ಯುಐ ಸಿನಿಮಾ ಇಂದು ವಿಶ್ವಾದ್ಯಂತ 2 ಸಾವಿರ ಸ್ಕ್ರೀನ್‌ಗಳಲ್ಲಿ ರಿಲೀಸ್‌ ಆಗಿದೆ. ಜೊತೆಗೆ ಆನ್‌ಲೈನ್‌ನಲ್ಲಿ 75 ಸಾವಿರ ಟಿಕೆಟ್‌ ಮಾರಾಟವಾಗುವ ಮೂಲಕ ದಾಖಲೆ ಕೂಡಾ ಬರೆದಿದೆ.

 75 ಸಾವಿರ ಟಿಕೆಟ್‌ ಮಾರಾಟವಾಗುವ ಮೂಲಕ ದಾಖಲೆ ಬರೆದ ಉಪೇಂದ್ರ ಯುಐ ಸಿನಿಮಾ
75 ಸಾವಿರ ಟಿಕೆಟ್‌ ಮಾರಾಟವಾಗುವ ಮೂಲಕ ದಾಖಲೆ ಬರೆದ ಉಪೇಂದ್ರ ಯುಐ ಸಿನಿಮಾ (PC: Lahari Films)

ಯುಐ ಸಿನಿಮಾ: ರಿಯಲ್‌ ಸ್ಟಾರ್‌ ಉಪೇಂದ್ರ ನಿರ್ದೇಶಿಸಿ ನಟಿಸಿರುವ ಯುಐ ಸಿನಿಮಾ ಇಂದು 5 ಭಾಷೆಗಳಲ್ಲಿ ರಿಲೀಸ್‌ ಆಗಿದೆ. ಬಹಳ ವರ್ಷಗಳ ನಂತರ ಉಪೇಂದ್ರ ಮತ್ತೆ ನಿರ್ದೇಶನಕ್ಕೆ ಇಳಿದಿದ್ಧಾರೆ. ಯುಐ ಸಿನಿಮಾ ಅನೌನ್ಸ್‌ ಆದಾಗಿನಿಂದ ಅಭಿಮಾನಿಗಳು ಉಪ್ಪಿ ಸಿನಿಮಾ ನೋಡಲು ಕುತೂಹಲದಿಂದ ಕಾಯುತ್ತಿದ್ದರು. ಕೊನೆಗೂ ಆ ಕುತೂಹಲಕ್ಕೆ ತೆರೆ ಬಿದ್ದಿದೆ. ಜೊತೆಗೆ ಸಿನಿಮಾ ದಾಖಲೆಯನ್ನೂ ಮಾಡಿದೆ.

ಯುಐ ಸಿನಿಮಾಗೆ ಆನ್‌ಲೈನ್‌ನಲ್ಲಿ 75 ಸಾವಿರ ಟಿಕೆಟ್‌ ಮಾರಾಟವಾಗಿದ್ದು ಇದುವರೆಗೂ ಯಾವುದೇ ಕನ್ನಡ ಸಿನಿಮಾ ಮಾಡಿರದಂಥ ದಾಖಲೆ ಮಾಡಿದೆ. ಈ ವಿಚಾರವನ್ನು ಕೆವಿಎನ್‌ ಸಂಸ್ಥೆ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹೇಳಿಕೊಂಡಿದೆ. ಯುಐ ಸಿನಿಮಾ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ರಿಲೀಸ್‌ ಆಗಿದೆ. ಈ ನಡುವೆ ಆನ್‌ಲೈನ್‌ನಲ್ಲಿ 75,000 ಟಿಕೆಟ್‌ಗಳು ಮಾರಾಟವಾಗುವ ಮೂಲಕ ದಾಖಲೆ ಬರೆದಿದೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಯುಐ ಸಿನಿಮಾ 75,000 ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ಮೂಲಕ ದಾಖಲೆ ನಿರ್ಮಿಸಿದೆ. ಕರ್ನಾಟಕದಲ್ಲಿ ಸಿನಿಮಾಗೆ ಇಷ್ಟು ಟಿಕೆಟ್‌ ಸೇಲ್‌ ಆಗುವಂತೆ ಸಹಕರಿಸಿದ ಕನ್ನಡ ಪ್ರೇಕ್ಷಕರಿಗೆ ನಾವು ಸದಾ ಋಣಿಯಾಗಿರುತ್ತೇವೆ ಎಂದು ಲಹರಿ ಫಿಲ್ಮ್ಸ್ ಮತ್ತು ಸಂಗೀತ ಖ್ಯಾತಿಯ ಲಹರಿ ವೇಲು, ಕನ್ನಡಿಗರಿಗೆ ಧನ್ಯವಾದ ಅರ್ಪಿಸಿದ್ದಾರೆ.

ವಿಶ್ವಾದ್ಯಂತ 2000 ಸ್ಕ್ರೀನ್‌ಗಳಲ್ಲಿ ಪ್ರದರ್ಶನವಾಗಲಿರುವ ಸಿನಿಮಾ

ಯುಐ ಸಿನಿಮಾ ವಿದೇಶ ಸೇರಿದಂತೆ ವಿಶ್ವಾದ್ಯಂತ ಇಂದು 2000 ಸ್ಕ್ರೀನ್‌ಗಳಲ್ಲಿ ರಿಲೀಸ್‌ ಆಗಿದೆ. ಕೆಲವೆಡೆ ಪ್ರೀಮಿಯರ್‌ ಶೋ ಕೂಡಾ ಏರ್ಪಡಿಸಲಾಗಿದ್ದು ಸಿನಿಮಾ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಯುಐ ಸಿನಿಮಾ ಮೂಲಕ ಉಪೇಂದ್ರ ಸುಮಾರು 9 ವರ್ಷಗಳ ನಂತರ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ. 2015 ರಲ್ಲಿ ತೆರೆ ಕಂಡ ಉಪ್ಪಿ2 ಸಿನಿಮಾ ನಂತರ ಉಪೇಂದ್ರ ಸಿನಿಮಾ ನಿರ್ದೇಶನ ಮಾಡದೆ ನಟನೆ, ರಾಜಕೀಯದಲ್ಲಿ ಬ್ಯುಸಿ ಇದ್ದರು. ಪೋಸ್ಟರ್‌, ಟೀಸರ್‌, ಟ್ರೇಲರ್‌ಗಳಿಂದ ಗಮನ ಸೆಳೆದಿದ್ದ ಸಿನಿಮಾವನ್ನು ನೋಡಲು ಉಪ್ಪಿ ಅಭಿಮಾನಿಗಳು ಕಾಯುತ್ತಿದ್ದರು. ಮಾರ್ನಿಂಗ್‌ ಶೋ ನೋಡಿದವರು ಸಿನಿಮಾ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಟಿಕೆಟ್‌ ಸಿಗದವರು ನಿರಾಶರಾಗಿದ್ದು ಮುಂದಿನ ದಿನಗಳಲ್ಲಿ ಚಿತ್ರ ನೋಡಲು ಕಾಯುತ್ತಿದ್ದಾರೆ.

ಲಹರಿ ಫಿಲ್ಮ್ಸ್‌ ಹಾಗೂ ವೀನಸ್‌ ಎಂಟರ್‌ಟೈನ್ಮೆಂಟ್‌ ಬ್ಯಾನರ್‌ ಅಡಿಯಲ್ಲಿ ಯುಐ ಚಿತ್ರವನ್ನು ಜಿ ಮನೋಹರನ್‌ ಹಾಗೂ ಕೆಪಿ ಶ್ರೀಕಾಂತ್‌ ನಿರ್ಮಿಸಿದ್ದಾರೆ. ಉಪೇಂದ್ರ ಚಿತ್ರಕ್ಕೆ ನಿರ್ದೇಶನ ಮಾಡಿ, ನಾಯಕನಾಗಿಯೂ ನಟಿಸಿದ್ದಾರೆ. ಉಪ್ಪಿಗೆ ಜೊತೆಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ಚಿತ್ರಕ್ಕೆ ನವೀನ್‌ ಕುಮಾರ್‌, ಲಹರಿ ವೇಲು, ಜಿ ರಮೇಶ್‌, ಜಿ ಆನಂದ್‌, ಚಂದ್ರು ಮನೋಹರನ್‌ ಹಾಗೂ ನಾಗೇಂದ್ರ ಸಹ ನಿರ್ಮಾಣ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ಅಜನೀಶ್‌ ಲೋಕನಾಥ್‌ ಸಂಗೀತ ನೀಡಿದ್ದಾರೆ. ಈಗಾಗಲೇ ಟ್ರೋಲ್‌ ಹಾಡು ಬಹಳ ವೈರಲ್‌ ಆಗಿದೆ. ಕೆವಿನ್‌ ಪ್ರೊಡಕ್ಷನ್ಸ್‌ ಬ್ಯಾನರ್‌ ರಾಜ್ಯಾದ್ಯಂತ, ಚಿತ್ರವನ್ನು ಹಂಚಿಕೆ ಮಾಡಿದೆ.

Whats_app_banner