ಕನ್ನಡ ಸುದ್ದಿ  /  Entertainment  /  Jamal Abdul Mustafa Hussain Look Revealed From Daredevil Mustafa Movie

Dare Devil Musthafa Look: ಅಯ್ಯೋ ‘ಡೇರ್‌ ಡೆವಿಲ್‌ ಮುಸ್ತಫಾ’ ಇವ್ನಾ!?; ಕೊನೆಗೂ ರಿವೀಲ್‌ ಆಯ್ತು ಪೂಚಂತೇ ಕಥೆ ಆಧರಿತ ಚಿತ್ರದ ನಾಯಕನ ಲುಕ್

ಬಗೆಬಗೆಯ ಪ್ರೋಮೋ ಮೂಲಕ ಕುತೂಹಲಕ್ಕೆ ಮತ್ತಷ್ಟು ಮಗದಷ್ಟು ಒಗ್ಗರಣೆ ಹಾಕಿತ್ತು ‘ಡೇರ್‌ ಡೆವಿಲ್‌ ಮುಸ್ತಫಾ’ ತಂಡ. ಇದೀಗ ಕೊನೆಗೂ ಆ ಕಾಯುವಿಕೆಗೆ ಫುಲ್‌ಸ್ಟಾಪ್‌ ಬಿದ್ದಿದೆ. ಮುಸ್ತಫಾ ಲುಕ್‌ ರಿವೀಲ್‌ ಆಗಿದೆ.

ಅಯ್ಯೋ ‘ಡೇರ್‌ ಡೆವಿಲ್‌ ಮುಸ್ತಫಾ’ ಇವ್ನಾ!?; ಕೊನೆಗೂ ರಿವೀಲ್‌ ಆಯ್ತು ಪೂಚಂತೇ ಕಥೆ ಆಧರಿತ ಚಿತ್ರದ ನಾಯಕನ ಲುಕ್..
ಅಯ್ಯೋ ‘ಡೇರ್‌ ಡೆವಿಲ್‌ ಮುಸ್ತಫಾ’ ಇವ್ನಾ!?; ಕೊನೆಗೂ ರಿವೀಲ್‌ ಆಯ್ತು ಪೂಚಂತೇ ಕಥೆ ಆಧರಿತ ಚಿತ್ರದ ನಾಯಕನ ಲುಕ್..

Dare Devil Musthafa Look: ಮುಸ್ತಫಾ ಯಾರು? ಮುಸ್ತಫಾ ಯಾರು.. ಅಯ್ಯೋ ಮುಸ್ತಫಾ ಯಾರು? ಹೀಗೊಂದು ಹುಳವನ್ನು ಕಳೆದ ಕೆಲವು ದಿನಗಳಿಂದ ತಲೆಗೆ ಬಿಟ್ಟಿತ್ತು ‘ಡೇರ್‌ ಡೆವಿಲ್‌ ಮುಸ್ತಫಾ’ ಚಿತ್ರತಂಡ. ಬಗೆಬಗೆಯ ಪ್ರೋಮೋ ಮೂಲಕ ಕುತೂಹಲಕ್ಕೂ ಮತ್ತಷ್ಟು ಮಗದಷ್ಟು ಒಗ್ಗರಣೆ ಹಾಕಿತ್ತು. ಇನ್ನೇನು ಮುಸ್ತಫಾ ಇವನೇ ಎನ್ನುವಷ್ಟರ ಮಟ್ಟಿಗೆ ಕಾಯಿಸಿ, ಇನ್ನೂ ಸ್ವಲ್ಪ ದಿನ ಆ ಕಾಯುವಿಕೆ ಇರಲಿ ಎಂದಿತ್ತು. ಇದೀಗ ಕೊನೆಗೂ ಆ ಕಾಯುವಿಕೆಗೆ ಫುಲ್‌ಸ್ಟಾಪ್‌ ಬಿದ್ದಿದೆ. ಮುಸ್ತಪಾ ಲುಕ್‌ ರಿವೀಲ್‌ ಆಗಿದೆ.

ಶಶಾಂಕ್‌ ಸೊಗಲ ನಿರ್ದೇಶನದಲ್ಲಿ ಮೂಡಿಬಂದ ‘ಡೇರ್‌ ಡೆವಿಲ್‌ ಮುಸ್ತಫಾ’ ವಿಶೇಷ ಪ್ರೋಮೋಗಳ ಮೂಲಕವೇ ಗಮನ ಸೆಳೆದ ಚಿತ್ರ. ಆರಂಭದ ನಿಮ್ಮಂಥೋರ್‌ ಯಾರೂ ಇಲ್ವಲ್ಲೋ.. ಹಾಡಿನ ಮೂಲಕ ಸಿನಿಮಾ ಮೇಲಿನ ಆಸಕ್ತಿಯನ್ನು ಕೆರಳಿಸಿದ್ದ ಈ ಚಿತ್ರ ಇದೀಗ ಬಿಡುಗಡೆಯ ಹೊಸ್ತಿಲಿಗೆ ಬಂದು ನಿಂತಿದೆ. ಅದರಂತೆ, ಭರ್ತಿ ಪ್ರಚಾರ ಕಣಕ್ಕೆ ಇಳಿದಿರುವ ಈ ‘ಡೇರ್‌ ಡೆವಿಲ್‌ ಮುಸ್ತಫಾ’ ತಂಡ ಇದೀಗ ಚಿತ್ರದ ಕಥಾನಾಯಕನ ಲುಕ್‌ ಬಹಿರಂಗಪಡಿಸಿದೆ.

ಶಿಶಿರ್‌ ಬೈಕಾಡಿ ಜಮಾಲ್‌ ಅಬ್ದುಲ್‌ ಮುಸ್ತಫಾ ಹುಸೇನ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈವರೆಗೂ ಚಿತ್ರದಲ್ಲಿ ಮುಸ್ತಫಾ ಯಾರು ಎಂಬ ಪ್ರಶ್ನೆಗೆ ಇದೀಗ ಶಿಶಿರ್‌ ಉತ್ತರವಾಗಿ ಸಿಕ್ಕಿದ್ದಾರೆ. ಸದ್ಯ ಕಥಾನಾಯಕನ ಲುಕ್‌ ರಿವೀಲ್‌ ಮಾಡಲೆಂದೇ ವಿಶೇಷ ಪ್ರೋಮೋವೊಂದನ್ನು ಚಿತ್ರತಂಡ ಮಾಡಿದೆ. ಮುಸ್ತಫಾ ಅದೆಷ್ಟು ಇಂಟಲಿಜೆಂಟ್‌ ಇರಬಹುದು ಎಂಬುದನ್ನು ಈ ಪ್ರೋಮೋದಲ್ಲಿ ತೋರಿಸಿದ್ದಾರೆ ನಿರ್ದೇಶಕ ಶಶಾಂಕ್‌ ಸೊಗಲ.

ಕಥಾನಾಯಕ ಯಾರೆಂದು ನೀವು ನೋಡಬೇಕಿದ್ದರೆ, ಡಾಲಿ ಪಿಕ್ಚರ್ಸ್‌ ಟ್ವಟಿರ್‌ನಲ್ಲಿನ ಮುಸ್ತಫಾ ಯಾರು ಎಂಬ ಪೋಸ್ಟ್‌ 1000 ಬಾರಿ ರೀಟ್ವಿಟ್‌ ಆದರೆ, ಬಹಿರಂಗಪಡಿಸುವುದಾಗಿ ಚಿತ್ರತಂಡ ಹೇಳಿಕೊಂಡಿತ್ತು. ಅದರಂತೆ, ಪೋಸ್ಟ್‌ ಹಾಕಿದ ಕೆಲವೇ ಗಂಟೆಗಳಲ್ಲಿ ಹೇಳಿದಷ್ಟು ರೀ ಟ್ವಿಟ್‌ ಸಿಕ್ಕಿವೆ. ಅದೇ ಖುಷಿಯಲ್ಲಿ ಮುಸ್ತಫಾ ಲುಕ್‌ ರಿವೀಲ್‌ ಆಗಿದೆ. ಕುತೂಹಲ ತಣಿದಿದ್ದು, ಚಿತ್ರತಂಡಕ್ಕೆ ಮೆಚ್ಚುಗೆಯ ಜತೆಗೆ ಬಿಡುಗಡೆ ದಿನಾಂಕವನ್ನೂ ಶೀಘ್ರದಲ್ಲಿ ಘೋಷಿಸಿ ಎಂಬ ಪ್ರತ್ಯುತ್ತರ ಸಿಗುತ್ತಿದೆ.

ಅಂದಹಾಗೆ. ಕೆ. ಪಿ ಪೂರ್ಣಚಂದ್ರ ತೇಜಸ್ವಿಯವರ ಕತೆ ಆಧಾರಿತ 'ಡೇರ್ಡೆವಿಲ್ ಮುಸ್ತಾಫಾ' ಇದೇ ಮೊದಲ ಬಾರಿಗೆ ಕತೆಗಾರನ ಓದುಗರೇ ನಿರ್ಮಿಸುತ್ತಿರುವ ಸಿನಿಮಾ. ಡಾಲಿ ಧನಂಜಯ ಒಬ್ಬ ತೇಜಸ್ವಿ ಅಭಿಮಾನಿಯಾಗಿ ಈ ಸಿನಿಮಾವನ್ನು ಪ್ರೆಸೆಂಟ್ ಮಾಡಲು ಮುಂದೆ ಬಂದಿದ್ದಾರೆ. ಡಾಲಿ ಪಿಕ್ಚರ್ಸ್‌ ಅಡಿಯಲ್ಲಿ ಈ ಸಿನಿಮಾ ರಿಲೀಸ್‌ ಆಗಲಿದ್ದು, 'ಬಡವರ ಮಕ್ಕಳ ಕಿಡ್ನಿ ಉಳಿವಿಗೆ' ಕೈ ಜೋಡಿಸಿದ್ದಾರೆ.

ಶಶಾಂಕ್‌ ಸೊಗಲ ನಿರ್ದೇಶನ, ರಾಹುಲ್‌ ರಾಯ್‌ ಛಾಯಾಗ್ರಹಣ, ನವನೀತ್‌ ಶ್ಯಾಮ್‌ ಸಂಗೀತ ಈ ಚಿತ್ರಕ್ಕಿದೆ. ಶಿಶಿರ್‌ ಬೈಕಾಡಿ, ಆದಿತ್ಯಾ ಅಶ್ರೀ, ಅಭಯ್‌, ಸುಪ್ರೀತ್‌ ಭಾರದ್ವಾಜ್‌, ಆಶೀತ್‌ ಶ್ರೀವತ್ಸ, ಪ್ರೇರಣಾ, ಎಂ.ಎಸ್‌. ಉಮೇಶ್‌, ಮಂಡ್ಯ ರಮೇಶ್‌, ಮೈಸೂರ್‌ ಆನಂದ್‌, ಸುಂದರ್‌ ವೀಣಾ, ನಾಗಭೂಷಣ್‌, ಪೂರ್ಣಚಂದ್ರ ಮೈಸೂರು ಸೇರಿ ಅನೆಕ ಕಲಾವಿದರು ಈ ಸಿನಿಮಾದ ಭಾಗವಾಗಿದ್ದಾರೆ. ಸಿನಿಮಾಮರ ಬ್ಯಾನರ್‌ನಲ್ಲಿ ಈ ಚಿತ್ರ ನಿರ್ಮಾಣವಾಗಿದೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ