ರಾಷ್ಟ್ರಪ್ರಶಸ್ತಿ ಪಡೆದ ಕನ್ನಡದ ಮೊದಲ ಸಿನಿಮಾ ಯಾವುದು? 70 ವರ್ಷಗಳಲ್ಲಿ ಕರುನಾಡಿನ ಯಾವ ಚಿತ್ರಗಳಿಗೆ ಈ ಅವಾರ್ಡ್ ಸಿಕ್ಕಿದೆ? ಇಲ್ಲಿದೆ ವಿವರ
ಕನ್ನಡ ರಾಜ್ಯೋತ್ಸವ 2024 (Karnataka Rajyotsava 2024) ಪ್ರಯುಕ್ತ, ಅತ್ಯುತ್ತಮ ಕನ್ನಡ ಸಿನಿಮಾ ವಿಭಾಗದಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ಚಿತ್ರಗಳು ಯಾವುವು ಎಂಬ ಮಾಹಿತಿ ಇಲ್ಲಿದೆ. ಬೇಡರ ಕಣ್ಣಪ್ಪ ಚಿತ್ರದಿಂದ 777 ಚಾರ್ಲಿ ವರೆಗಿನ ಚಿತ್ರಗಳ ನಿರ್ದೇಶಕರು, ಬಿಡುಗಡೆಯಾದ ವರ್ಷ ಸಹಿತ ವಿವರ ಇಲ್ಲಿದೆ.
National Film Award for Best Kannada Feature Films List: ಭಾರತದಲ್ಲಿ ಸಿನಿಮಾರಂಗಕ್ಕೆ ಸಿಗುವ ದೊಡ್ಡ ಗೌರವ ಮತ್ತು ಪುರಸ್ಕಾರ ಎಂದರೆ ಅದು ರಾಷ್ಟ್ರ ಪ್ರಶಸ್ತಿ. ಇದೇ ಪ್ರಶಸ್ತಿಯನ್ನು ಇಲ್ಲಿ ಆಸ್ಕರ್‌ಗೆ ಹೋಲಿಕೆ ಮಾಡಲಾಗುತ್ತದೆ. ಇಂಥ ಪ್ರತಿಷ್ಠಿತ ಪುರಸ್ಕಾರವನ್ನು ಕನ್ನಡದ ನೂರಾರು ಸಿನಿಮಾಗಳು ಪಡೆದುಕೊಂಡಿವೆ. ಇದೀಗ ಕನ್ನಡ ರಾಜ್ಯೋತ್ಸವದ ಈ ಹೊತ್ತಲ್ಲಿ, ಅತ್ಯುತ್ತಮ ಪ್ರಾದೇಶಿಕ ವಿಭಾಗದಲ್ಲಿ ಕನ್ನಡದ ಯಾವೆಲ್ಲ ಸಿನಿಮಾಗಳಿಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ? ಆ ಚಿತ್ರ ಯಾವಾಗ ತೆರೆಕಂಡಿತ್ತು, ಅದರ ನಿರ್ದೇಶಕರು ಯಾರು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಇಲ್ಲಿದೆ ಸಂಪೂರ್ಣ ವಿವರ
1954 - ಬೇಡರ ಕಣ್ಣಪ್ಪ, ನಿರ್ದೇಶಕ- ಎಚ್.ಎಲ್.ಎನ್.ಸಿಂಹ
1955 - ಮಹಾಕವಿ ಕಾಳಿದಾಸ, ನಿರ್ದೇಶಕ- ಕೆ.ಆರ್. ಸೀತಾರಾಮ ಶಾಸ್ತ್ರಿ
1956- ಭಕ್ತ ವಿಜಯ, ನಿರ್ದೇಶಕ- ಎ.ಕೆ.ಪಟ್ಟಾಭಿ
1957 - ಪ್ರೇಮದ ಪುತ್ರಿ, ನಿರ್ದೇಶಕ- ಆರ್.ನಾಗೇಂದ್ರ ರಾವ್
1958 - ಸ್ಕೂಲ್ ಮಾಸ್ಟರ್, ನಿರ್ದೇಶಕ- ಬಿ.ಆರ್.ಪಂತುಲು
1959 - ಜಗಜ್ಯೋತಿ ಬಸವೇಶ್ವರ, ನಿರ್ದೇಶಕ- ಟಿ.ವಿ.ಸಿಂಗ್ ಠಾಕೂರ್
1960 - ಭಕ್ತ ಕನಕದಾಸ, ನಿರ್ದೇಶಕ- ವೈ.ಆರ್.ಸ್ವಾಮಿ
1961 - ಕಿತ್ತೂರು ಚೆನ್ನಮ್ಮ , ನಿರ್ದೇಶಕ- ಬಿ.ಆರ್.ಪಂತುಲು
1962 - ನಂದಾ ದೀಪ, ನಿರ್ದೇಶಕ- ಎಂ.ಆರ್.ವಿಟ್ಟಲ್
1963 - ಸಂತ ತುಕಾರಾಂ , ನಿರ್ದೇಶಕ- ಎಂ. ಆರ್. ವಿಟ್ಟಲ್ –
1964 - ಚಂದವಳ್ಳಿಯ ತೋಟ , ನಿರ್ದೇಶಕ- P. S. ಮೂರ್ತಿ
1964 - ಮನೆ ಅಳಿಯ A. ಸುಬ್ಬಾ ರಾವ್ S. K. A. ಚಾರಿ
1965 - ಸತ್ಯಹರಿಶ್ಚಂದ್ರ, ನಿರ್ದೇಶಕ- ಹುಣಸೂರು ಕೃಷ್ಣಮೂರ್ತಿ
1965- ಮಿಸ್ ಲೀಲಾವತಿ, ನಿರ್ದೇಶಕ- ಕೆ. S. ಜಗನ್ ನಾಥ್ M. R. ವಿಟ್ಟಲ್
1965 - ಮದುವೆ ಮಾಡಿ ನೋಡು, ನಿರ್ದೇಶಕ- ಹುಣಸೂರು ಕೃಷ್ಣಮೂರ್ತಿ
1966 - ಸಂಧ್ಯಾ ರಾಗ, ನಿರ್ದೇಶಕ- S. K. ಭಗವಾನ್
1967 - ಬಂಗಾರದ ಹೂವು, ನಿರ್ದೇಶಕ- B. A. ಅರಸು ಕುಮಾರ್
1968 - ಮಣ್ಣಿನ ಮಗ, ನಿರ್ದೇಶಕ- ಗೀತಪ್ರಿಯ
1969 - ಗೆಜ್ಜೆ ಪೂಜೆ, ನಿರ್ದೇಶಕ- ಪುಟ್ಟಣ್ಣ ಕಣಗಾಲ್
1970 - ನಗುವ ಹೂವು , ನಿರ್ದೇಶಕ- R. N. K. ಪ್ರಸಾದ್
1971 - ವಂಶ ವೃಕ್ಷ , ನಿರ್ದೇಶಕ- ಗಿರೀಶ್ ಕಾರ್ನಾಡ್
1972 - ಶರಪಂಜರ ಸಿ.ಎಸ್. ರಾಜಾ ಪುಟ್ಟಣ್ಣ ಕಣಗಾಲ್
1973 - ಅಬಚೂರಿನ ಫೋಸ್ಟ್ ಆಫೀಸ್ , ನಿರ್ದೇಶಕ- ಎನ್. ಲಕ್ಷ್ಮೀನಾರಾಯಣ
1974 - ಕಂಕಣ, ನಿರ್ದೇಶಕ- M. B. S. ಪ್ರಸಾದ್
1975 - ಹಂಸಗೀತೆ , ನಿರ್ದೇಶಕ- G. V. ಅಯ್ಯರ್
1976 - ಪಲ್ಲವಿ , ನಿರ್ದೇಶಕ- ಪಿ. ಲಂಕೇಶ್
1977 - ತಬ್ಬಲಿಯು ನೀನಾದೆ ಮಗನೆ , ನಿರ್ದೇಶಕ- ಬಿ.ವಿ.ಕಾರಂತ್
1978 - ಒಂದಾನೊಂದು ಕಾಲದಲ್ಲಿ , ನಿರ್ದೇಶಕ- ಗಿರೀಶ್ ಕಾರ್ನಾಡ್
1979 - ಅರಿವು, ನಿರ್ದೇಶಕ- ಕಟ್ಟೆ ರಾಮಚಂದ್ರ
1981 - ಬರ, ನಿರ್ದೇಶಕ- M. S. ಸತ್ಯು
1982 - ಫಣಿಯಮ್ಮ , ನಿರ್ದೇಶಕ- ಪ್ರೇಮ ಕಾರಂತ್
1983 - ಬ್ಯಾಂಕರ್ ಮಾರ್ಗಯ್ಯ, ನಿರ್ದೇಶಕ- ಟಿ.ಎಸ್.ನಾಗಾಭರಣ
1984 - ಬಂಧನ, ನಿರ್ದೇಶಕ- ರಾಜೇಂದ್ರ ಸಿಂಗ್ ಬಾಬು – [28]
1985 - ಬೆಟ್ಟದ ಹೂವು, ನಿರ್ದೇಶಕ ಎನ್.ಲಕ್ಷ್ಮೀನಾರಾಯಣ
1986 - ಶಂಖ ನಾದ, ನಿರ್ದೇಶಕ- ಉಮೇಶ ಕುಲಕರ್ಣಿ
1987 - ಕಾಡಿನ ಬೆಂಕಿ , ನಿರ್ದೇಶಕ- ಸುರೇಶ್ ಹೆಬ್ಳೀಕರ್
1988 - ಬಣ್ಣದ ವೇಷ , ನಿರ್ದೇಶಕ- ಗಿರೀಶ್ ಕಾಸರವಳ್ಳಿ
1989 - ಮನೆ, ನಿರ್ದೇಶಕ- ಗಿರೀಶ್ ಕಾಸರವಳ್ಳಿ
1990 - ಮುತ್ತಿನ ಹಾರ, ನಿರ್ದೇಶಕ- ರಾಜೇಂದ್ರ ಸಿಂಗ್ ಬಾಬು
1991 - ಮೈಸೂರು ಮಲ್ಲಿಗೆ , ನಿರ್ದೇಶಕ- ಟಿ.ಎಸ್.ನಾಗಾಭರಣ
1992 - ಹರಕೆಯ ಕುರಿ, ನಿರ್ದೇಶಕ- ಲಲಿತಾ ರವಿ
1993 - ಚಿನ್ನಾರಿ ಮುತ್ತ, ನಿರ್ದೇಶಕ- ಟಿ. ಎಸ್. ನಾಗಾಭರಣ
1994 - ಕೊಟ್ರೇಶಿ ಕನಸು, ನಿರ್ದೇಶಕ- ನಾಗತಿಹಳ್ಳಿ ಚಂದ್ರಶೇಖರ್
1995 - ಕ್ರೌರ್ಯ, ನಿರ್ದೇಶಕ- ಗಿರೀಶ್ ಕಾಸರವಳ್ಳಿ
1996 - ಅಮೇರಿಕಾ ಅಮೇರಿಕಾ , ನಿರ್ದೇಶಕ- ನಾಗತಿಹಳ್ಳಿ ಚಂದ್ರಶೇಖರ್
1997 - ಮುಂಗಾರಿನ ಮಿಂಚು, ನಿರ್ದೇಶಕ- ರಾಜೇಂದ್ರ ಸಿಂಗ್ ಬಾಬು
1998 - ಹೂಮಳೆ , ನಿರ್ದೇಶಕ- ನಾಗತಿಹಳ್ಳಿ ಚಂದ್ರಶೇಖರ್
1999 - ಕಾನೂರು ಹೆಗ್ಗಡಿತಿ, ನಿರ್ದೇಶಕ- ಗಿರೀಶ್ ಕಾರ್ನಾಡ್
2000 - ಮತದಾನ, ನಿರ್ದೇಶಕ- ಟಿ.ಎನ್.ಸೀತಾರಾಂ
2001 - ಅತಿಥಿ, ನಿರ್ದೇಶಕ- ಪಿ.ಶೇಷಾದ್ರಿ
2002 - ಸಿಂಗಾರವ್ವ, ನಿರ್ದೇಶಕ- ಟಿ.ಎಸ್.ನಾಗಾಭರಣ
2003 - ಪ್ರೀತಿ ಪ್ರೇಮ ಪ್ರಣಯ, ನಿರ್ದೇಶಕ- ಕವಿತಾ ಲಂಕೇಶ್
2004 - ಬೇರು, ನಿರ್ದೇಶಕ- ಪಿ.ಶೇಷಾದ್ರಿ
2005 - ತಾಯಿ , ನಿರ್ದೇಶಕ- ಬರಗೂರು ರಾಮಚಂದ್ರಪ್ಪ
2006 - ಕಾಡ ಬೆಳದಿಂಗಳು, ನಿರ್ದೇಶಕ- ಬಿ.ಎಸ್.ಲಿಂಗದೇವರು
2007 - ಗುಲಾಬಿ ಟಾಕೀಸ್ , ನಿರ್ದೇಶಕ- ಗಿರೀಶ್ ಕಾಸರವಳ್ಳಿ
2008 - ವಿಮುಕ್ತಿ, ನಿರ್ದೇಶಕ- ಪಿ. ಶೇಷಾದ್ರಿ
2009 - ಕನಸೆಂಬ ಕುದುರೆಯನೇರಿ , ನಿರ್ದೇಶಕ- ಗಿರೀಶ್ ಕಾಸರವಳ್ಳಿ
2010 - ಪುಟ್ಟಕ್ಕನ ಹೈವೇ , ನಿರ್ದೇಶಕ- ಬಿ. ಸುರೇಶ
2011 - ಕೂರ್ಮಾವತಾರ , ನಿರ್ದೇಶಕ- ಗಿರೀಶ್ ಕಾಸರವಳ್ಳಿ
2012 - ಭಾರತ್ ಸ್ಟೋರ್ಸ್ , ನಿರ್ದೇಶಕ- ಪಿ. ಶೇಷಾದ್ರಿ
2013 - ಡಿಸೆಂಬರ್-1 , ನಿರ್ದೇಶಕ- ಪಿ. ಶೇಷಾದ್ರಿ
2014 - ಹರಿವು, ನಿರ್ದೇಶಕ- ಮಂಸೋರೆ
2015 - ತಿಥಿ, ನಿರ್ದೇಶಕ- ರಾಮ್ ರೆಡ್ಡಿ
2016 - ರಿಸರ್ವೇಷನ್, ನಿರ್ದೇಶಕ- ನಿಖಿಲ್ ಮಂಜು
2017 - ಹೆಬ್ಬೆಟ್ ರಾಮಕ್ಕ, ನಿರ್ದೇಶಕ- ನಂಜುಂಡೇಗೌಡ
2018 - ನಾತಿಚರಾಮಿ, ನಿರ್ದೇಶಕ- ಮಂಸೋರೆ
2019 - ಅಕ್ಷಿ, ನಿರ್ದೇಶಕ- ಮನೋಜ್ ಕುಮಾರ್
2020 - ಡೊಳ್ಳು, ನಿರ್ದೇಶಕ- ಸಾಗರ್ ಪುರಾಣಿಕ್
2023- 777 ಚಾರ್ಲಿ - ನಿರ್ದೇಶಕ ಕಿರಣ್ ರಾಜ್
ವಿಭಾಗ