Bhagyalakshmi Serial: ನಿನ್ನನ್ನು ಕಂಡರೆ ಯಾರಿಗೂ ಇಷ್ಟವಿಲ್ಲ ಎಂದು ಅವಮಾನಿಸುವ ಮಗಳಿಗೆ, ನಾನು ಗೆಲ್ಲುತ್ತೇನೆಂದು ಚಾಲೆಂಜ್‌ ಮಾಡುವ ಭಾಗ್ಯಾ
ಕನ್ನಡ ಸುದ್ದಿ  /  ಮನರಂಜನೆ  /  Bhagyalakshmi Serial: ನಿನ್ನನ್ನು ಕಂಡರೆ ಯಾರಿಗೂ ಇಷ್ಟವಿಲ್ಲ ಎಂದು ಅವಮಾನಿಸುವ ಮಗಳಿಗೆ, ನಾನು ಗೆಲ್ಲುತ್ತೇನೆಂದು ಚಾಲೆಂಜ್‌ ಮಾಡುವ ಭಾಗ್ಯಾ

Bhagyalakshmi Serial: ನಿನ್ನನ್ನು ಕಂಡರೆ ಯಾರಿಗೂ ಇಷ್ಟವಿಲ್ಲ ಎಂದು ಅವಮಾನಿಸುವ ಮಗಳಿಗೆ, ನಾನು ಗೆಲ್ಲುತ್ತೇನೆಂದು ಚಾಲೆಂಜ್‌ ಮಾಡುವ ಭಾಗ್ಯಾ

Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ 'ಭಾಗ್ಯಲಕ್ಷ್ಮೀ' ಕುತೂಹಲಕಾರಿ ತಿರುವುಗಳನ್ನು ಪಡೆಯುತ್ತಿದೆ. ನವೆಂಬರ್‌ 15 ರ ಸಂಚಿಕೆಯಲ್ಲಿ ಏನೆಲ್ಲಾ ಆಯಿತು ಎಂಬ ವಿವರ ಇಲ್ಲಿದೆ.

ಭಾಗ್ಯಲಕ್ಷ್ಮೀ ಕನ್ನಡ ಧಾರಾವಾಹಿ ನವೆಂಬರ್‌ 15ರ ಎಪಿಸೋಡ್‌
ಭಾಗ್ಯಲಕ್ಷ್ಮೀ ಕನ್ನಡ ಧಾರಾವಾಹಿ ನವೆಂಬರ್‌ 15ರ ಎಪಿಸೋಡ್‌ (PC: Colors Kannada)

Bhagyalakshmi Kannada Serial: ಶ್ರೇಷ್ಠಾ, ತಾನು ಹುಡುಕಿರುವ ಹೊಸ ಮನೆಗೆ ತಾಂಡವ್‌ನನ್ನು ಕರೆತರುತ್ತಾಳೆ. ಅಲ್ಲಿ ಮನೆ ಓನರ್‌, ಇಬ್ಬರನ್ನೂ ಗಂಡ ಹೆಂಡತಿ ಎಂದು ತಿಳಿದು ಶ್ರೇಷ್ಠಾಗೆ ಕುಂಕುಮ ಹಚ್ಚುವಂತೆ ತಾಂಡವ್‌ಗೆಹೇಳುತ್ತಾರೆ. ಭಯದಿಂದಲೇ ತಾಂಡವ್‌ ಕುಂಕುಮ ಹಚ್ಚಲು ಮುಂದಾದಾಗ ತಾಂಡವ್‌ಗೆ ಅಮ್ಮನ ಮೊಬೈಲ್‌ನಿಂದ ಕರೆ ಬರುತ್ತದೆ. ಕೂಡಲೇ ತಾಂಡವ್‌ ಕುಂಕುಮ ಹಚ್ಚುವುದನ್ನು ಬಿಟ್ಟು ಕಾಲ್‌ ರಿಸೀವ್‌ ಮಾಡಲು ಹೊರ ಬರುತ್ತಾನೆ.

ದುಡ್ಡಿಗಿಂತ ಅಕ್ಕನ ಜೀವನವೇ ಮುಖ್ಯ ಎನ್ನುವ ಪೂಜಾ

ಆದರೆ ಆ ಕಡೆಯಿಂದ ಕುಸುಮಾ ಮೊಬೈಲ್‌ನಿಂದ ಪೂಜಾ ಕರೆ ಮಾಡಿರುತ್ತಾಳೆ. ನನ್ನ ಮೊಬೈಲ್‌ನಲ್ಲಿ ಬ್ಯಾಲೆನ್ಸ್‌ ಇಲ್ಲ ಆದ್ದರಿಂದ ಕುಸುಮಾ ಅತ್ತೆ ಮೊಬೈಲ್‌ನಿಂದ ಕರೆ ಮಾಡುತ್ತಿದ್ದೇನೆ. ನನ್ನ ಮೊಬೈಲ್‌ಗೆ ಒಂದು ವರ್ಷಕ್ಕೆ ಆಗುವಷ್ಟು ಕರೆನ್ಸಿ ಹಾಕಿಸಿ ಎಂದು ಹೇಳುತ್ತಾಳೆ. ಪೂಜಾ ಪದೇ ಪದೆ ಬ್ಲಾಕ್‌ ಮಾಡುವುದು ತಾಂಡವ್‌ಗೆ ಹಿಂಸೆ ಆಗುತ್ತಿದೆ. ಆದರೆ ಪೂಜಾ ಮಾತ್ರ ತಾಂಡವ್‌ನನ್ನು ಬಿಡುವವಳಲ್ಲ. ಇಷ್ಟೊತ್ತಿಗೆ ನೀವು ಮನೆಯಲ್ಲಿ ಇರಬೇಕಿತ್ತು. ಆದಷ್ಟು ಬೇಗ ಮನೆಗೆ ಬನ್ನಿ ಅಕ್ಕ ಹಾಗೂ ಮಕ್ಕಳನ್ನು ಡಿನ್ನರ್‌ಗೆ ಕರೆದುಕೊಂಡು ಹೋಗಿ, ನನಗೆ ಹಣ ಹಾಗೂ ಅಕ್ಕನ ಜೀವನ ಎರಡೂ ಮುಖ್ಯ. ಆದರೆ ಎರಡರಲ್ಲಿ ಆಯ್ಕೆ ಬಂದಾಗ ನಾನು ಆರಿಸಿಕೊಳ್ಳುವುದು ನನ್ನ ಅಕ್ಕನ ಜೀವನವನ್ನು ಎಂದು ಪೂಜಾ ಹೇಳುತ್ತಾಳೆ.

ತಾಂಡವ್‌ ಮನೆಗೆ ಹೋಗುವುದನ್ನು ತಡೆಯುವ ಶ್ರೇಷ್ಠಾ

ಪೂಜಾ ಜೊತೆ ತಾಂಡವ್‌ ಮಾತನಾಡುವುದನ್ನು ಶ್ರೇಷ್ಠಾ ಕೇಳಿಸಿಕೊಳ್ಳುತ್ತಾಳೆ. ನನ್ನನ್ನು ಮನೆಯಿಂದ ಹೊರ ಕಳಿಸಿದವಳ ಜೊತೆ ನೀನು ಡಿನ್ನರ್‌ಗೆ ಹೋಗುವುದನ್ನು ನಾನು ಸಹಿಸುವುದಿಲ್ಲ ಎಂದು ಮನಸ್ಸಿನಲ್ಲೇ ನಿರ್ಧರಿಸುತ್ತಾಳೆ. ನಾನು ಹೊಸ ಮನೆಗೆ ಶಾಪಿಂಗ್‌ ಮಾಡಬೇಕು ನನ್ನೊಂದಿಗೆ ಬಾ ಎಂದು ಕರೆಯುತ್ತಾಳೆ ಆದರೆ ತಾಂಡವ್‌ಗೆ ಪೂಜಾ ಮಾತುಗಳು ನೆನಪಾಗುತ್ತದೆ. ಇತ್ತ ಶ್ರೇಷ್ಠಾ ಕೂಡಾ ಪದೇ ಪದೇ ಬ್ಲಾಕ್‌ ಮೇಲ್‌ ಮಾಡುತ್ತಲೇ ಇದ್ದಾಳೆ. ನೀನು ಮೊದಲಿನಂತೆ ಇಲ್ಲ. ಕಾವ್ಯಾ ತಾಯಿ ಅವಳನ್ನು ನನ್ನೊಂದಿಗೆ ಕಳಿಸುವುದಿಲ್ಲ. ನನಗೆ ಬೇರೆ ಯಾರೂ ಫ್ರೆಂಡ್ಸ್‌ ಇಲ್ಲ. ನೀನು ಮನೆ ಕಟ್ಟುವಾಗಿ ನಾನು ನಿನಗೆ ಬಹಳ ಹೆಲ್ಪ್‌ ಮಾಡಿದ್ದೆ, ಆದರೆ ನೀನು ನನಗೆ ಹೆಲ್ಪ್‌ ಮಾಡಲು ಹಿಂಜರಿಯುತ್ತಿದ್ದೀಯ. ನಿನಗೆ ನನ್ನ ಜೊತೆ ಬರಲು ಇಷ್ಟವಿಲ್ಲವೆಂದರೆ ಮನೆಗೆ ಹೋಗು, ಆದರೆ ನಿನ್ನ ಕೆಲಸ ಹಾಗೂ ಜೀವನ ನನ್ನ ಕೈಯ್ಯಲ್ಲಿದೆ ಎಂಬುದನ್ನು ಮರೆಯಬೇಡ ಎನ್ನುತ್ತಾಳೆ. ಭಾಗ್ಯಾ ಜೊತೆ ಹೋಗುವ ಬದಲಿಗೆ ನಿನ್ನೊಂದಿಗೆ ಬರುತ್ತೇನೆ ಎಂದು ತಾಂಡವ್‌ ಕಾರು ಹತ್ತಿ ಕುಳಿತುಕೊಳ್ಳುತ್ತಾನೆ.

ತಾಯಿಯನ್ನು ಅವಮಾನಿಸುವ ತನ್ವಿ

ಇತ್ತ ಭಾಗ್ಯಾ, ಮಗಳು ತನ್ವಿಯನ್ನು ಎಷ್ಟು ಕರೆಯುತ್ತಿದ್ದರೂ ಆಕೆ ಹಿಂತಿರುಗಿ ನೋಡದೆ ಹಾಗೇ ಹೋಗುತ್ತಾಳೆ. ಭಾಗ್ಯಾಳಿಗೆ ಮಗಳ ವರ್ತನೆಯಿಂದ ಬಹಳ ಬೇಸರವಾಗುತ್ತದೆ. ನಾನು ನಿನ್ನ ಅಮ್ಮ, ಆದರೂ ನನ್ನನ್ನೇಕೆ ನೀನು ಇಷ್ಟು ದ್ವೇಷಿಸುತ್ತೀಯ? ನಿನ್ನ ಸಮಸ್ಯೆ ಏನು ಎಂದು ತನ್ವಿಯನ್ನು ಕೇಳುತ್ತಾಳೆ. ನೀನೇ ನನ್ನ ದೊಡ್ಡ ಸಮಸ್ಯೆ. ನಿನಗೆ ಇಂಗ್ಲೀಷ್‌ ಬರುವುದಿಲ್ಲ, ನಿನಗೆ ಏನೂ ಬರುವುದಿಲ್ಲ, ನೀನು ನನಗೆ ಪರ್ಫೆಕ್ಟ್‌ ಅಮ್ಮ ಅಲ್ಲವೇ ಅಲ್ಲ, ನೀನು ಸ್ಕೂಲ್‌ಗೆ ಬರಬಾರದು ಎಂಬ ಕಾರಣಕ್ಕೆ ನಾನು ಡ್ಯಾನ್ಸ್‌ಗೆ ನಿನ್ನ ಹೆಸರು ಕೊಟ್ಟೆ. ಆಗಲಾದರೂ ನಾನು ಖುಷಿಯಿಂದ ಇರಬಹುದು ಎಂದುಕೊಂಡೆ. ನನಗೆ ಸ್ಕೂಲ್‌ ಬೇಡ, ನೀನೂ ಬೇಡ ಎನ್ನುತ್ತಾಳೆ.

ಮಗಳ ಮುಂದೆ ಭಾಗ್ಯಾ ಚಾಲೆಂಜ್‌

ಒಂದು ವೇಳೆ ನಾನು ಡ್ಯಾನ್ಸ್‌ ಕಾಂಪಿಟೇಶನ್‌ನಲ್ಲಿ ಗೆದ್ದರೆ ನನ್ನ ಮಾತು ಕೇಳುತ್ತೀಯ? ಎನ್ನುತ್ತಾಳೆ. ನೀನು ಗೆಲ್ಲಲ್ಲು ಸಾಧ್ಯವೇ ಇಲ್ಲ, ಗೆದ್ದು ತೋರಿಸಲು ಆಗ ಮಾತನಾಡೋಣ ಎಂದು ತನ್ವಿ, ಅಮ್ಮನತ್ತ ತಿರುಗಿ ನೋಡದೆ ಅಲ್ಲಿಂದ ಹೊರಡುತ್ತಾಳೆ. ಮಗಳು ತನಗೆ ಅವಮಾನ ಮಾಡಿದ್ದನ್ನು ಚಾಲೆಂಜ್‌ ಆಗಿ ತೆಗೆದುಕೊಳ್ಳುವ ಭಾಗ್ಯಾ ಕಣ್ಣೀರಿಡುತ್ತಾ, ನಾನು ಗೆದ್ದೇ ಗೆಲ್ಲುತ್ತೇನೆ ಎಂದು ಅರಚುತ್ತಾಳೆ.

Whats_app_banner