Karnataka Rains: ಕರ್ನಾಟಕದಲ್ಲಿ ಮುಂದಿನ 6 ದಿನ ಉಂಟು ಮಳೆ, ಇಂದು, ನಾಳೆ ಮಳೆಯಬ್ಬರ ಜೋರು, ಕೊಡಗಿನಲ್ಲಿ ರೆಡ್‌ ಅಲರ್ಟ್‌
ಕನ್ನಡ ಸುದ್ದಿ  /  ಕರ್ನಾಟಕ  /  Karnataka Rains: ಕರ್ನಾಟಕದಲ್ಲಿ ಮುಂದಿನ 6 ದಿನ ಉಂಟು ಮಳೆ, ಇಂದು, ನಾಳೆ ಮಳೆಯಬ್ಬರ ಜೋರು, ಕೊಡಗಿನಲ್ಲಿ ರೆಡ್‌ ಅಲರ್ಟ್‌

Karnataka Rains: ಕರ್ನಾಟಕದಲ್ಲಿ ಮುಂದಿನ 6 ದಿನ ಉಂಟು ಮಳೆ, ಇಂದು, ನಾಳೆ ಮಳೆಯಬ್ಬರ ಜೋರು, ಕೊಡಗಿನಲ್ಲಿ ರೆಡ್‌ ಅಲರ್ಟ್‌

Karntaka Rain Updates: ಕರ್ನಾಟಕದ ನಾನಾ ಭಾಗಗಳಲ್ಲಿ ಮುಂದಿನ ಆರು ದಿನಗಳ ಕಾಲ ಮಳೆ ಇರಲಿದೆ. ಮಂಗಳವಾರವೂ ಹಳೆ ಮೈಸೂರು ಭಾಗ, ಕರಾವಳಿಯಲ್ಲಿ ಭಾರೀ ಮಳೆ ಮುನ್ಸೂಚನೆಯಿದೆ.

ಮೈಸೂರು ಮಳೆ ಜೋರಾಗಿದೆ. ಸೋಮವಾರ ಕುಕ್ಕರಹಳ್ಳಿ ಕೆರೆ ಮಳೆಯ ವಾತಾವರಣದಿಂದ ಕಂಡಿದ್ದು ಹೀಗೆ. ಚಿತ್ರ:ರವಿಕೀರ್ತಿಗೌಡ, ಮೈಸೂರು
ಮೈಸೂರು ಮಳೆ ಜೋರಾಗಿದೆ. ಸೋಮವಾರ ಕುಕ್ಕರಹಳ್ಳಿ ಕೆರೆ ಮಳೆಯ ವಾತಾವರಣದಿಂದ ಕಂಡಿದ್ದು ಹೀಗೆ. ಚಿತ್ರ:ರವಿಕೀರ್ತಿಗೌಡ, ಮೈಸೂರು

Karntaka Rain Updates: ಕರ್ನಾಟಕದಲ್ಲಿ ಫೆಂಗಲ್‌ ಚಂಡಮಾರುತದಿಂದ ಆಗಿರುವ ವಾಯುಭಾರ ಕುಸಿತದ ಪರಿಣಾಮ ಜೋರಾಗಿದ್ದು. ಸೋಮವಾರ ಹಾಗೂ ಮಂಗಳವಾರದಂದು ಹಲವು ಭಾಗಗಳಲ್ಲಿ ಮಳೆಯಾಗುತ್ತಿದೆ. ಹಳೆ ಮೈಸೂರು ಭಾಗದ ಮೈಸೂರು, ಮಂಡ್ಯ, ಚಾಮರಾಜನಗರ ಭಾಗದಲ್ಲಿ ಹೆಚ್ಚಿನ ಮಳೆಯಿದೆ. ಕೊಡಗಿನಲ್ಲಿ ಸೋಮವಾರ ಮಳೆಯಾಗುತ್ತಿದ್ದು ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಕೊಡಗು ಜಿಲ್ಲೆಯ ರೆಡ್‌ ಅಲರ್ಟ್‌ ಕೂಡ ಇದೆ. ಉಳಿದಂತೆ ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಹಳೆ ಮೈಸೂರು ಭಾಗದ ಮೈಸೂರು ಚಾಮರಾಜನಗರ ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌ ಇದೆ. ಹಾಸನ, ಮಂಡ್ಯ, ರಾಮನಗರ ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ. ಡಿಸೆಂಬರ್‌ 8 ರವರೆಗೂ ಕರ್ನಾಟಕದ ಹಲವು ಭಾಗಗಳಲ್ಲಿ ಸಾಧಾರಣ ಮಳೆಯಾಗುವ ಸೂಚನೆಗಳಿವೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಹಲವು ಭಾಗಗಳಲ್ಲಿ ಮಳೆ

ಭಾನುವಾರದಿಂದಲೇ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆಯಾಗುತ್ತಿದೆ. ಫೆಂಗಲ್‌ ಚಂಡಮಾರುತದಿಂದಾಗಿ ವಾಯುಭಾರ ಕುಸಿತ ಉಂಟಾಗಿ ಬೆಂಗಳೂರು, ಮೈಸೂರು, ಚಾಮರಾಜನಗರ ಸಹಿತ ಹಲವು ಭಾಗಗಳಲ್ಲಿ ಬಿಟ್ಟೂ ಬಿಡದೇ ಮಳೆಯಾಗುತ್ತಿದೆ.

ಚಾಮರಾಜನಗರದಲ್ಲಿ ಐದು ಸೆ.ಮೀ, ಬಂಡೀಪುರ, ಕೋಲಾರದ ರಾಯಲ್ವಡುವಿನಲ್ಲಿ ನಾಲ್ಕು ಸೆ.ಮೀ ಮಳೆ ಸುರಿದಿದೆ.

ಕೊಡಗಿನ ಭಾಗಮಂಡಲ ಭಾಗದಲ್ಲಿ ಮೂರು ಸೆ.ಮೀ ಮಳೆಯಾಗಿದೆ. ಚಾಮರಾಜನಗರ ಜಿಲ್ಲೆಯ ಮಲೈ ಮಹದೇಶ್ವರ ಬೆಟ್ಟ ಭಾಗ, ಮಂಡ್ಯ, ಮಳವಳ್ಳಿ, ಕೆಆರ್‌ಎಸ್, ಬೆಂಗಳೂರು ನಗರ ಭಾಗ, ಮೈಸೂರು ಜಿಲ್ಲೆಯ ನಂಜನಗೂಡು, ಕೃಷ್ಣರಾಜನಗರ, ಎಚ್‌.ಡಿ.ಕೋಟೆ, ಬೆಂಗಳೂರು ಗ್ರಾಮಾಂತರ ಭಾಗದ ದೊಡ್ಡಬಳ್ಳಾಪುರ, ಹೊಸಕೋಟೆ, ರಾಮನಗರ ಜಿಲ್ಲೆ ಕನಕಪುರದಲ್ಲೂ ಮಳೆಯಾಗಿದೆ.

ಎಲ್ಲೆಲ್ಲಿ ಮಳೆ ಮುನ್ಸೂಚನೆ

ಸೋಮವಾರ ಸಂಜೆ, ರಾತ್ರಿಯೂ ಕೆಲವು ಭಾಗಗಳಲ್ಲಿ ಮಳೆಯಾಗಲಿದೆ. ಕೊಡಗು ಜಿಲ್ಲೆಯಾದ್ಯಂತ ಅತಿ ಹೆಚ್ಚು ಮಳೆಯಾಗುವ ಸೂಚನೆಯಿದೆ. ಉಡುಪಿ, ದಕ್ಷಿಣ ಕನ್ನಡ, ಚಾಮರಾಜನಗರ, ಮೈಸೂರು, ಶಿವಮೊಗ್ಗ ಹಾಗೂ ಚಿಕ್ಕಮಗಳೂಋಉ ಜಿಲ್ಲೆಗಳಲ್ಲಿ ಅತೀ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಹಾಸನ,. ಮಂಡ್ಯ, ರಾಮನಗರ ಜಿಲ್ಲೆಗಳಲ್ಲಿ ಅಲ್ಲಲ್ಲಿ ಭಾರೀ ಮಳೆಯಾಗಬಹುದು. ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರ ಜಿಲ್ಲೆಗಳ ಬಹುತೇಕ ಕಡೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಉತ್ತರ ಕನ್ನಡ ಜಿಲ್ಲೆ, ದಕ್ಷಿಣ ಒಳನಾಡಿನ ಬಹುತೇಕ ಕಡೆ ಸಾಧಾರಣ ಮಳೆ ಇರಲಿದೆ. ಧಾರವಾಡ, ಗದಗ, ಹಾವೇರಿ, ಬೆಳಗಾವಿ ಜಿಲ್ಲೆಗಳ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಇತರೆಡೆಯೂ ಚದುರಿದ ಮಳೆ ಬರಬಹುದು.

ಮಂಗಳವಾರದಂದು ಉಡುಪಿ, ದಕ್ಷಿಣ ಕನ್ನಡ, ಮೈಸೂರು, ಕೊಡಗು, ರಾಮನಗರ, ಚಾಮರಾಜನಗರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ. ತುಮಕೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಬಹುದು. ಉತ್ತರ ಕನ್ನಡ ಜಿಲ್ಲೆ, ರಾಯಚೂರು ಜಿಲ್ಲೆಯ ಒಂದೆರಡು ಕಡೆ ಸಾಧಾರಣ ಮಳೆಯಾಗಬಹುದು. ಉತ್ತರ ಒಳನಾಡಿನ ಉಳಿದ ಜಿಲ್ಲೆಗಳ ಒಂದೆರಡು ಕಡೆ ಹಗುರ ಮಳೆಯೂ ಆಗಲಿದೆ.

ಕೊಡಗಿನಲ್ಲಿ ರೆಡ್ ಅಲರ್ಟ್

ಮಂಗಳವಾರ ಬೆಳಿಗ್ಗೆ 8.30 ರವರೆಗೆ ಕೊಡಗು ಜಿಲ್ಲಾದ್ಯಂ ರೆಡ್ ಅಲರ್ಟ್ ಅನ್ನು ಭಾರತೀಯ ಹವಾಮಾನ ಇಲಾಖೆ ಘೋಷಣೆ ಮಾಡಿದೆ.

ಜಿಲ್ಲೆಯ ಜನತೆ ಎಚ್ಚರಿಕೆ ವಹಿಸಬೇಕಾಗಿದೆ. ಜಿಲ್ಲಾಧ್ಯಂತ ಭಾರಿ ಮಳೆ ಆಗುವ ಸಂಭವವಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಈಗಾಗಲೇ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.

Whats_app_banner