Seetha Rama Serial: ಲಂಚ್ ಬಾಕ್ಸ್ ನೀಡದಿದ್ದಕ್ಕೆ ಗರಂ ಆದ ಸೀತಾ, ಮಲೇಷ್ಯಾಗೆ ಹೊರಟು ನಿಂತ್ನಾ ರಾಮ?
ಲಂಚ್ ಬಾಕ್ಸ್ ವಿಚಾರಕ್ಕೆ ಸೀತಾಳ ಒತ್ತಡಕ್ಕೆ ರಾಮ್ ಬೇಸತ್ತಿದ್ದಾನೆ. ಹೊಸ ಬಾಕ್ಸ್ ತಂದು ಕೊಟ್ಟರೂ ತಿರಸ್ಕರಿಸಿದ್ದಾಳೆ. ನನಗೆ ನನ್ನದೇ ಲಂಚ್ ಬಾಕ್ಸ್ ಬೇಕು ಎಂದಿದ್ದಾಳೆ. ಇದರಿಂದ ಗೊಂದಲಕ್ಕೊಳಗಾದ ರಾಮ್, ಮಲೇಷ್ಯಾಕ್ಕೆ ಹೊರಡುವ ನಿರ್ಧಾರಕ್ಕೆ ಬಂದಿದ್ದಾನೆ.
Seetha Rama Serial: ಮನೆ ಬಳಿ ಶ್ರೇಯಸ್ ಜತೆಗೆ ಸಿಹಿಯ ಕಿತ್ತಾಟ ಕಂಡು ಗರಂ ಆಗಿದ್ದ ಸೀತಾ, ಸಿಹಿಗೂ ಕ್ಲಾಸ್ ತೆಗೆದುಕೊಂಡಿರುತ್ತಾಳೆ. ಇನ್ಮೇಲೆ ಆಟ ಆಡುವುದಕ್ಕೆ ಹೋಗುವುದು ಬೇಡ, ಮನೆಯಲ್ಲಿಯೇ ಹೋಮ್ ವರ್ಕ್ ಮಾಡು ಎಂದು ಗದರಿದ್ದಾಳೆ. ಸೀತಮ್ಮನ ಮಾತಿನಿಂದ ಬೆಳಗೆದ್ದು ತನ್ನ ಕೆಲಸವನ್ನು ತಾನೇ ಮಾಡಿಕೊಳ್ಳುತ್ತಾಳೆ ಸಿಹಿ. ಮಗಳ ಈ ಜವಾಬ್ದಾರಿಯನ್ನು ಕಂಡ ಸೀತಾ, ಮನದಲ್ಲಿಯೇ ರಾಮನಿಗೆ ಬೈಯುತ್ತಾಳೆ. ಸಿಹಿಯಷ್ಟೂ ಜವಾಬ್ದಾರಿಯೂ ಇಲ್ಲ ಎನ್ನುತ್ತಾಳೆ. ಇದರ ನಡುವೆಯೇ ಲಂಚ್ ಬಾಕ್ಸ್ ಸಲುವಾಗಿ ರಾಮನಿಗೆ ಸಿಹಿ ಫೋನ್ ಮಾಡುತ್ತಾಳೆ. ಸೀತಮ್ಮ ನೀವಂದುಕೊಂಡಂತೆ ಅಲ್ಲ, ಅವಳು ತುಂಬ ಡೇಂಜರ್. ಮೊದಲು ಟಿಫಿನ್ ಬಾಕ್ಸ್ ತಂದುಕೊಡಿ ಎನ್ನುತ್ತಾಳೆ.
ಸಣ್ಣ ಸಣ್ಣ ವಸ್ತುಗಳ ಹಿಂದೆಯೋ ಒಂದೊಂದು ಭಾವನೆ ಇರುತ್ತದೆ ಎಂಬುದಕ್ಕೆ ಸೀತಾಳ ಲಂಚ್ ಬಾಕ್ಸ್ ಉದಾಹರಣೆ. ರಾಮನ ಕೈಗೆ ಕೊಟ್ಟ ಲಂಚ್ ಬಾಕ್ಸ್ ಇನ್ನೂ ತನ್ನ ಕೈ ಸೇರದಿದ್ದಕ್ಕೆ ಆಕೆ ಕೊಂಚ ಗರಂ ಆಗಿದ್ದಾಳೆ. ಅಷ್ಟೊಂದು ಬೇಜವಾಬ್ದಾರಿ ಏಕೆ ಎಂದು ನೇರವಾಗಿ ರಾಮನಿಗೆ ಹೇಳಿದ್ದಾಳೆ. ಇದರಿಂದ ಅಶೋಕನ ಜತೆ ಸೇರಿ ಮಾರುಕಟ್ಟೆಯನ್ನೇ ಸುತ್ತಾಡಿ ಅದೇ ಲಂಚ್ ಬಾಕ್ಸ್ ಹೋಲುವ ಹೊಸದೊಂದು ಬಾಕ್ಸ್ ಕೊಂಡ್ಯೊಯ್ದು ಸೀತಾ ಕೈಗಿಟ್ಟಿದ್ದಾನೆ. ಹಾಗೆಂದ ಮಾತ್ರಕ್ಕೆ ಸೀತಾ ಅದನ್ನು ಸ್ವೀಕರಿಸಿದ್ಲಾ? ಇಲ್ಲ. ನನಗೆ ನನ್ನ ಬಾಕ್ಸೇ ಬೇಕು ಎಂದು ಪಟ್ಟುಹಿಡಿದಿದ್ದಾಳೆ. ಸೀತಾಳ ಈ ನಡೆ ರಾಮನಿಗೆ ಬೇಸರ ತರಿಸಿದೆ.
ಸೀತಾಳಿಂದ ಬೇಸರಗೊಂಡ ರಾಮ, ಬೇಸರದಲ್ಲಿಯೇ ತನ್ನ ಡೆಸ್ಕ್‌ನಲ್ಲಿ ಕೂತಿರುತ್ತಾನೆ. ಬಾಸ್ ಕರೆದ್ರು ಅಂತ ಎದ್ದು ನಡೆಯುವಾಗ, ಮ್ಯಾನೇಜರ್ ಚರಣ್ ಡಿ ಆಗಮನವಾಗುತ್ತದೆ. ಇನ್ಮೇಲಿಂದ ನಿನ್ನನ್ನ ಮಾನಿಟರ್ ಮಾಡೋಕೆ ನನಗೆ ಎಕ್ಸ್ಟ್ರಾ ಪೇಮೆಂಟ್ ಕೊಟ್ಟಿದ್ದಾರೆ. ಮೂರು ಹೊತ್ತು ಓಡಾಡಿಕೊಂಡಿರುತ್ತಿಯಲ್ಲ ಇದೇನು ಆಫೀಸಾ ಅಥವಾ ಕಬ್ಬನ್ ಪಾರ್ಕಾ ಎಂದು ಗದರುತ್ತಾನೆ. ಅಷ್ಟರಲ್ಲಿ ಅಶೋಕ್ ಆಗಮನವಾಗಿ, ರಾಮನನ್ನು ಹೊರ ಕರೆತರುತ್ತಾನೆ. ರಾಮನ ಸಪ್ಪೇ ಮುಖ ನೋಡಿ, ಏನಾಯ್ತು ಎಂದು ಕೇಳುತ್ತಾನೆ.
ನನಗಿಲ್ಲಿ ಆಗ್ತಿಲ್ಲ ಕಣೋ, ನಾನು ಇಲ್ಲಿಗೇಕೆ ಬಂದೆ? ಏನ್ಮಾಡ್ತಿದ್ದೀನಿ? ಅಷ್ಟೆಲ್ಲ ಕೆಲಸಗಳಿವೆ. ನಾನು ಮಲೇಷ್ಯಾಕೆ ಹೋಗಿಬಿಡ್ತಿನಿ ಕಣೋ ಎಂದು ಹೇಳುತ್ತಾನೆ ರಾಮ. ಸುಮ್ಮನೆ ಇಲ್ಲಿ ಟೈಮ್ ವೇಸ್ಟ್ ಮಾಡೋಕೆ ಆಗ್ತಿಲ್ಲ ಎನ್ನುತ್ತಾನೆ. ಆಗ, ಸರಿ ಕಣೋ ಇಲ್ಲಿ ನಿನ್ನ ಪರಿಸ್ಥಿತಿ ನೋಡೋಕೆ ಆಗ್ತಿಲ್ಲ. ನೀನು ಈಗಲೇ ಮಲೇಷ್ಯಾಕ್ಕೆ ಹೊರಡು. ಈಗಲೇ ಜೆಟ್ ಬುಕ್ ಮಾಡ್ತಿನಿ ಎನ್ನುತ್ತಾನೆ. ಆದರೆ ತಾತ ಸೂರ್ಯ ಪ್ರಕಾಶ್‌ಗೆ ಏನು ಹೇಳ್ತಿಯಾ ಎಂದು ಅಶೋಕ ಕೇಳುತ್ತಿದ್ದಂತೆ, ಅಲ್ಲಿಂದ ಕಾಲ್ಕಿಳ್ಳುತ್ತಾನೆ ರಾಮ.
ಇತ್ತ ರುದ್ರಪ್ರತಾಪ್ ಹಣ ಎಣಿಸುವುದನ್ನು ನೋಡಿದ ಸುಲೋಚನಾ, ಹಣಕ್ಕಾಗಿ ಕೈಯೊಡ್ಡುತ್ತಾಳೆ. ಆಕೆಗೆ ಮನಬಂದಂತೆ ಬೈಯುವ ರುದ್ರಪ್ರತಾಪ್, ನಿನಗೆ ದುಡ್ಡು ಬೇಕಾದರೆ ಸೀತಾಳ ಕಡೆಯಿಂದ ಚಿಕ್ಕ ನಗುವಾದರೂ ಬೇಕಲ್ವ ಎನ್ನುತ್ತಾನೆ. ಅದನ್ನು ನಾನು ನೋಡ್ಕೋತಿನಿ, ಅದಕ್ಕೊಂಚೂರು ಟೈಮ್ ಹಿಡಿಯುತ್ತೆ ಎನ್ನುತ್ತಾಳೆ ಸುಲೋಚನಾ. ಈ ಕಡೆ ಆಫೀಸ್‌ನಲ್ಲಿ ಸೀತಾಳ ಗಮನವೆಲ್ಲ ರಾಮನ ಮೇಲಿರುತ್ತದೆ. ನಾನು ಬೈಯ್ದಿದ್ದಕ್ಕೆ ರಾಮ್ ಬೇಜಾರು ಮಾಡ್ಕೊಂಡ್ರಾ? ಅಲ್ಲ ನಾನು ಬಾಕ್ಸ್ ಕೇಳಿದ್ದೇ ತಪ್ಪಾ? ಎಂದು ಬೇಸರಗೊಂಡಿದ್ದಾಳೆ ಸೀತಾ. ಹಾಗಾದರೆ ರಾಮನ ಮುಂದಿನ ನಡೆ ಏನು?
ಮನರಂಜನೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಭಾಗ