ಕನ್ನಡ ಸುದ್ದಿ  /  ಮನರಂಜನೆ  /  ‘ಕಾಮಿಡಿ ಕಿಲಾಡಿಗಳು’ ಶೋಗೆ ಐವರು ಹೊಸ ತೀರ್ಪುಗಾರರು!; ಜಗ್ಗೇಶ್‌ ಕಡೆಯಿಂದ ನಡೀತು ಆಡಿಷನ್, ಹಾಗಾದ್ರೆ ನಿರೂಪಣೆ ಯಾರದ್ದು?

‘ಕಾಮಿಡಿ ಕಿಲಾಡಿಗಳು’ ಶೋಗೆ ಐವರು ಹೊಸ ತೀರ್ಪುಗಾರರು!; ಜಗ್ಗೇಶ್‌ ಕಡೆಯಿಂದ ನಡೀತು ಆಡಿಷನ್, ಹಾಗಾದ್ರೆ ನಿರೂಪಣೆ ಯಾರದ್ದು?

ಏ. 27ರಿಂದ ಜೀ ಕನ್ನಡದಲ್ಲಿ ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ ಶುರುವಾಗಲಿದೆ. ಆ ನಿಮಿತ್ತ ಈಗ ಹೊಸ ಪ್ರೋಮೋ ಬಿಡುಗಡೆಯಾಗಿದ್ದು, ಈ ಶೋನ ತೀರ್ಪುಗಾರರು ಯಾರಿರಲಿದ್ದಾರೆ ಎಂಬ ಕುತೂಹಲ ತಣಿದಿದೆ. ಆಡಿಷನ್‌ ಮೂಲಕ ಐವರನ್ನು ಆಯ್ದುಕೊಂಡಿದ್ದಾರೆ ಜಗ್ಗೇಶ್!

‘ಕಾಮಿಡಿ ಕಿಲಾಡಿಗಳು’ ಶೋಗೆ ಐವರು ಹೊಸ ತೀರ್ಪುಗಾರರು!; ಜಗ್ಗೇಶ್‌ ಕಡೆಯಿಂದ ನಡೀತು ಆಡಿಷನ್, ಹಾಗಾದ್ರೆ ನಿರೂಪಣೆ ಯಾರದ್ದು?
‘ಕಾಮಿಡಿ ಕಿಲಾಡಿಗಳು’ ಶೋಗೆ ಐವರು ಹೊಸ ತೀರ್ಪುಗಾರರು!; ಜಗ್ಗೇಶ್‌ ಕಡೆಯಿಂದ ನಡೀತು ಆಡಿಷನ್, ಹಾಗಾದ್ರೆ ನಿರೂಪಣೆ ಯಾರದ್ದು?

Comedy Khiladigalu Premier League: ಜೀ ಕನ್ನಡ ನೋಡುಗರಿಗೆ ಮನರಂಜನೆಯ ರಸದೂಟವನ್ನೇ ನೀಡುತ್ತ ಬರುತ್ತಿದೆ. ಒಂದಾದ ಮೇಲೊಂದರಂತೆ ಹೊಸ ಹೊಸ ಶೋಗಳನ್ನು ಫ್ರೆಶ್‌ ಆಗಿಯೇ ನೋಡುಗನ ತಟ್ಟೆಗೆ ಬಡಿಸುತ್ತಿದೆ. ಇತ್ತೀಚೆಗಷ್ಟೇ ಸರಿಗಮಪ ಶೋ ಮುಗಿದ ಬಳಿಕ, ಆ ಸ್ಥಾನಕ್ಕೆ ಮಹಾನಟಿ ಎಂಟ್ರಿಯಾಗಿದೆ. ಅದಕ್ಕೂ ವೀಕ್ಷಕ ಬಹುಪರಾಕ್‌ ಹೇಳುತ್ತಿದ್ದಾನೆ. ಈಗ ಇದೇ ಗ್ಯಾಪ್‌ನಲ್ಲಿಯೇ ಕಾಮಿಡಿ ರಸಗವಳ ನೀಡಲು ಕಾಮಿಡಿ ಕಿಲಾಡಿಗಳು ಶೋ ಆಗಮಿಸುತ್ತಿದೆ. ಈ ಬಾರಿ ಒಂದಷ್ಟು ವಿಶೇಷತೆಗಳ ಜತೆಗೆ ಎಂಟ್ರಿಕೊಡಲಿದೆ.

ಟ್ರೆಂಡಿಂಗ್​ ಸುದ್ದಿ

ಕಾಮಿಡಿ ಕಿಲಾಡಿಗಳು ಕೀಟಲೆ ಮಾಡಲು ಸಜ್ಜಾಗಿದ್ದಾರೆ. ಅದರಂತೆ, ಈಗಾಗಲೇ ಬಗೆಬಗೆ ಪ್ರೋಮೋಗಳ ಮೂಲಕ ವೀಕ್ಷಕರನ್ನು ಸೆಳೆಯಲು ಪ್ಲಾನ್‌ ರೂಪಿಸಿದ್ದಾರೆ. ನಗುವಿನ ಹಬ್ಬ ಯಾವಾಗಿನಿಂದ ಶುರು ಎಂಬುದಕ್ಕೂ ಉತ್ತರ ರಿವೀಲ್‌ ಆಗಿದೆ. ಈ ನಡುವೆ ಒಂದು ವಿಶೇಷ ಸರ್ಪ್ರೈಸ್‌ ನೀಡಲು ಜೀ ಕನ್ನಡ ವಾಹಿನಿ ಮುಂದಾಗಿದೆ. ಅದೇನೆಂದರೆ, ಈ ಸಲದ ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಶೋನಲ್ಲಿ ಈ ಹಿಂದಿನ ತೀರ್ಪುಗಾರರು ಕಾಣಸಿಗುವುದಿಲ್ಲ. ಬದಲಿಗೆ, ನಿರೂಪಕರನ್ನೇ ತೀರ್ಪುಗಾರರನ್ನಾಗಿಸಿದ್ದಾರೆ ಜಗ್ಗೇಶ್.‌‌

ವಾರಾಂತ್ಯದಲ್ಲಿ ಮನರಂಜಿಸುತ್ತಿರುವ ಡ್ರಾಮಾ ಜೂನಿಯರ್ಸ್‌ ಸೀಸನ್‌ 5 ಇದೀಗ ಕೊನೇ ಹಂತಕ್ಕೆ ಬಂದಿದೆ. ಅಂದರೆ, ಇಂದು (ಏ. 21) ಈ ಶೋನ ಫಿನಾಲೆ ಸಂಚಿಕೆ ಪ್ರಸಾರವಾಗಲಿದೆ. ಜಿದ್ದಾಜಿದ್ದಿನ ಮಕ್ಕಳ ಸಮರದಲ್ಲಿ ಯಾರು ವಿಜೇತಯರಾಗುತ್ತಾರೆ ಎಂಬ ಕೌತುಕ ಮನೆ ಮಾಡಿದೆ. ಹೀಗೆ ವಿಜೇತರನ್ನು ಘೋಷಿಸಿಕೊಂಡ ಬಳಿಕ ಈ ಸೀಸನ್‌ ಸಮಾಪ್ತಿಯಾಗಲಿದೆ. ಅದಾದ ಬಳಿಕ, ಇದೇ ಸ್ಲಾಟ್‌ಗೆ ಕಾಮಿಡಿ ಕಿಲಾಡಿಗಳು ಎಂಟ್ರಿಕೊಡಲಿದ್ದಾರೆ. ಏ. 27ರಿಂದ ರಾತ್ರಿ 9ಕ್ಕೆ ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ ಶೋ ಆರಂಭವಾಗಲಿದೆ.

ಕುತೂಹಲ ಮೂಡಿಸಿದ ತೀರ್ಪುಗಾರರು!

ಈ ಹಿಂದಿನ ಕಾಮಿಡಿ ಕಿಲಾಡಿಗಳು ಶೋನಲ್ಲಿ ಅಂದರೆ, ಸೀಸನ್‌ 4ರಲ್ಲಿ ನವರಸ ನಾಯಕ ಜಗ್ಗೇಶ್‌, ರಕ್ಷಿತಾ ಪ್ರೇಮ್‌, ನೆನಪಿರಲಿ ಪ್ರೇಮ್‌ ತೀರ್ಪುಗಾರರ ಸ್ಥಾನದಲ್ಲಿದ್ದರು. ಮಾಸ್ಟರ್‌ ಆನಂದ್‌ ನಿರೂಪಣೆಯ ಜವಾಬ್ದಾರಿ ಹೊತ್ತಿದ್ದರು. ಆದರೆ, ಈ ಸಲ ಭಾರೀ ಬದಲಾವಣೆಯ ಜತೆಗೆ ಈ ಶೋ ಆಗಮಿಸುತ್ತಿದೆ. ಅಂದರೆ, ಒಬ್ಬರಲ್ಲ ಇಬ್ಬರಲ್ಲ ಬರೋಬ್ಬರಿ ಆರು ಮಂದಿ ತೀರ್ಪುಗಾರರು ಈ ಸಲದ ವೇದಿಕೆ ಹಂಚಿಕೊಳ್ಳಲಿದ್ದಾರೆ. ಅವರು ಯಾರು ಎಂಬುದನ್ನು ಆಡಿಷನ್‌ ಮೂಲಕ ಸೆಲೆಕ್ಟ್‌ ಮಾಡಿದ್ದಾರೆ ನವರಸ ನಾಯಕ ಜಗ್ಗೇಶ್!

ಐವರು ತೀರ್ಪುಗಾರರು, ಶಿವರಾಜ್‌ ಕೆಆರ್‌ ಪೇಟೆ ನಿರೂಪಣೆ

ಈ ಸಲದ ಶೋನಲ್ಲಿ ಮುಖ್ಯ ಜಡ್ಜ್‌ ಆಗಿ ಜಗ್ಗೇಶ್‌ ಕಾಣಿಸಿಕೊಂಡರೆ, ಅವರ ಜತೆಗೆ ಇನ್ನೂ ಐವರು ತೀರ್ಪುಗಾರರಾಗಿ ಇರಲಿದ್ದಾರೆ. ಆ ಪೈಕಿ ಜೀ ಕನ್ನಡದಲ್ಲಿ ಎಲ್ಲ ರಿಯಾಲಿಟಿ ಶೋಗಳ ನಿರೂಪಕರಾಗಿರುವ ಅನುಶ್ರೀ, ಮಾಸ್ಟರ್‌ ಆನಂದ್‌, ಅಕುಲ್‌ ಬಾಲಾಜಿ, ಕುರಿ ಪ್ರತಾಪ್‌, ಶ್ವೇತಾ ಚಂಗಪ್ಪ ಈ ಸಲದ ಕಾಮಿಡಿ ಕಿಲಾಡಿಗಳು ಶೋನಲ್ಲಿ ನಿರೂಪಣೆ ಮಾಡುವ ಬದಲು ತೀರ್ಪುಗಾರರಾಗಿ ಕಣಕ್ಕಿಳಿಯಲಿದ್ದಾರೆ.

ಏ. 27ರಿಂದ ಶುರು

ಹಾಗಾದರೆ, ಈ ಶೋನ ನಿರೂಪಣೆ ಯಾರದ್ದು? ಆ ಕುತೂಹಲಕ್ಕೂ ಉತ್ತರವಿದೆ. ಈ ಶೋನ ನಿರೂಪಣೆಯನ್ನು ಕಾಮಿಡಿ ಕಿಲಾಡಿಗಳು ಶೋನ ವಿಜೇತ ಶಿವರಾಜ್‌ ಕೆಆರ್‌ ಪೇಟೆ ನಡೆಸಿಕೊಡಲಿದ್ದಾರೆ. ಇದೇ ಏ. 27ರಿಂದ ಜೀ ಕನ್ನಡದಲ್ಲಿ ರಾತ್ರಿ 9 ಗಂಟೆಯಿಂದ ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ ಶುರುವಾಗಲಿದೆ. ಯಾವೆಲ್ಲ ಕಿಲಾಡಿಗಳು ಹಾಸ್ಯ ಉಕ್ಕಿಸಲು ಬರಲಿದ್ದಾರೆ ಎಂಬುದು ಆವತ್ತೇ ರಿವೀಲ್‌ ಆಗಲಿದೆ. ಸದ್ಯ ತೀರ್ಪುಗಾರರು ಯಾರು ಎಂಬ ಪ್ರಶ್ನೆಗೆ ಉತ್ತರ ಎಂಬಂತೆ ಹೊಸ ಪ್ರೋಮೋ ಬಿಡುಗಡೆಯಾಗಿದೆ.

IPL_Entry_Point