Kannadati Ending: ಕೊನೆಯಾಗ್ತಿದೆ ವೀಕ್ಷಕರ ಮೆಚ್ಚಿನ 'ಕನ್ನಡತಿ' ಧಾರಾವಾಹಿ..ಸುಳಿವು ನೀಡಿದ ಕಿರಣ್‌ ರಾಜ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Kannadati Ending: ಕೊನೆಯಾಗ್ತಿದೆ ವೀಕ್ಷಕರ ಮೆಚ್ಚಿನ 'ಕನ್ನಡತಿ' ಧಾರಾವಾಹಿ..ಸುಳಿವು ನೀಡಿದ ಕಿರಣ್‌ ರಾಜ್‌

Kannadati Ending: ಕೊನೆಯಾಗ್ತಿದೆ ವೀಕ್ಷಕರ ಮೆಚ್ಚಿನ 'ಕನ್ನಡತಿ' ಧಾರಾವಾಹಿ..ಸುಳಿವು ನೀಡಿದ ಕಿರಣ್‌ ರಾಜ್‌

  • ಕಿರುತೆರೆಪ್ರಿಯರಿಗೆ ಧಾರಾವಾಹಿ ಎಂದರೆ ಬಹಳ ಅಚ್ಚುಮೆಚ್ಚು. ಅದರಲ್ಲೂ ಮಹಿಳೆಯರ ಜೀವನದಲ್ಲಂತೂ ಧಾರಾವಾಹಿಗಳು ಪ್ರಮುಖ ಸ್ಥಾನ ಪಡೆದಿವೆ. ಚೆಂದದ ಧಾರಾವಾಹಿಗಳು ಪ್ರಸಾರವಾದರೆ ತಪ್ಪದೆ ನೋಡುತ್ತಾರೆ.

ಸದ್ಯಕ್ಕೆ ಕನ್ನಡ ಕಿರುತೆರೆಯಲ್ಲಿ ಜನಮನ ಗಳಿಸಿರುವ ಧಾರಾವಾಹಿಗಳಲ್ಲಿ 'ಕನ್ನಡತಿ' ಕೂಡಾ ಒಂದು. ಪ್ರತಿ ಸೋಮವಾರದಿಂದ ಶುಕ್ರವಾರದವರೆಗೂ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಧಾರಾವಾಹಿಗೆ ಹೆಚ್ಚಿನ ವೀಕ್ಷಕರಿದ್ದಾರೆ.
icon

(1 / 9)

ಹರ್ಷ, ಭುವಿ, ಅಮ್ಮಮ್ಮ ಸಾನಿಯಾ, ವರುಧಿನಿ ಸೇರಿದಂತೆ ಬಹುತೇಕ ಎಲ್ಲಾ ಪಾತ್ರಗಳು ಜನರಿಗೆ ಇಷ್ಟವಾಗಿದೆ. ಕೆಲವು ದಿನಗಳ ಹಿಂದಷ್ಟೇ ಚಿತ್ಕಳಾ ಬಿರಾದಾರ್‌ ಮಾಡುತ್ತಿದ್ದ ಅಮ್ಮಮ್ಮ ರತ್ನಮಾಲಾ ಪಾತ್ರ ಕೊನೆಯಾಗಿದೆ. ಸದ್ಯಕ್ಕೆ ಭುವನೇಶ್ವರಿ ಅಮ್ಮಮ್ಮನ ಸ್ಥಾನದಲ್ಲಿದ್ದು ಎಲ್ಲಾ ಜವಾಬ್ದಾರಿ ವಹಿಸಿಕೊಂಡಿದ್ದಾರೆ. 
icon

(2 / 9)

ರತ್ನಮಾಲಾ ಪಾತ್ರ ಅಂತ್ಯವಾಗುತ್ತಿದೆ ಎಂದು ತಿಳಿದಾಗ ಧಾರಾವಾಹಿ ಸೆಟ್‌ನಲ್ಲಿರುವ ಎಲ್ಲರೂ ಭಾವುಕರಾಗಿದ್ದರು. ಕೊನೆಯ ದಿನ ಚಿತ್ಕಳಾ ಅವರ ಬಳಿ ಬಂದು ಬೇಸರ ವ್ಯಕ್ತಪಡಿಸಿದ್ದರು. ಇದೀಗ 'ಕನ್ನಡತಿ' ಧಾರಾವಾಹಿ ಕೂಡಾ ಕೊನೆಯಾಗುತ್ತಿದೆ ಎಂಬ ಮಾತು ಕೇಳಿ ಬಂದಿದೆ. 
icon

(3 / 9)

27 ಜನವರಿ 2020 ರಂದು ಈ ಧಾರಾವಾಹಿಯ ಮೊದಲ ಸಂಚಿಕೆ ಪ್ರಸಾರವಾಗಿತ್ತು. ಅಂದಿನಿಂದ ಇದುವರೆಗೂ ಈ ಧಾರಾವಾಹಿ ಎಲ್ಲರಿಗೂ ಮೆಚ್ಚಿನ ಧಾರಾವಾಹಿ ಆಗಿತ್ತು. 
icon

(4 / 9)

ಒಂದೊಂದು ಪಾತ್ರವೂ ಜನರಿಗೆ ಬಹಳ ಇಷ್ಟವಾಗಿತ್ತು. ಭುವನೇಶ್ವರಿ ಪಾತ್ರದಲ್ಲಿ ನಟಿಸಿದ್ದ ರಂಜನಿ ರಾಘವನ್‌ ಈ ಧಾರಾವಾಹಿ ಮೂಲಕ ಮತ್ತಷ್ಟು ಜನರ ಮನ ಗೆದ್ದಿದ್ದಾರೆ. ಕನ್ನಡ ಶಿಕ್ಷಕಿಯಾಗಿ ಕನ್ನಡಿಗರ ಹೃದಯ ಗೆದ್ದಿದ್ದಾರೆ. 
icon

(5 / 9)

ರತ್ನಮಾಲಾ ಅಲಿಯಾಸ್‌ ಅಮ್ಮಮ್ಮ ಪಾತ್ರ ಮಾಡಿದ್ದ ಚಿತ್ಕಳಾ ಬಿರಾದಾರ್‌ ಕೂಡಾ ಈ ಧಾರಾವಾಹಿಯಿಂದ ಹೆಚ್ಚಿನ ಫ್ಯಾನ್‌ ಫಾಲೋಯಿಂಗ್‌ ಗಳಿಸಿದ್ದಾರೆ. ಈ ಪಾತ್ರ ಕೊನೆಯಾದಾಗ ಸಹ ಕಲಾವಿದರು ಮಾತ್ರವಲ್ಲ, ಅಭಿಮಾನಿಗಳು ಕೂಡಾ ಬೇಸರ ವ್ಯಕ್ತಪಡಿಸಿದ್ದರು. 
icon

(6 / 9)

ಇದೀಗ ನಟ ಕಿರಣ್‌ ರಾಜ್‌, ಈ ಧಾರಾವಾಹಿ ಕೊನೆಯಾಗುತ್ತಿರುವ ಸುಳಿವು ನೀಡಿದ್ದಾರೆ. ''ಇದೇ ಔಟ್‌ಫಿಟ್‌ನಿಂದ ಆರಂಭ, ಇದರಿಂದಲೇ ಒಂದು ಸುಂದರ ಜರ್ನಿ ಕೊನೆಯಾಗುತ್ತಿದೆ'' ಎಂದು ಹರ್ಷ ಪಾತ್ರಧಾರಿ ಕಿರಣ್‌ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. 
icon

(7 / 9)

ಮೂಲಗಳ ಪ್ರಕಾರ ಜನವರಿ ಅಂತ್ಯಕ್ಕೆ ಈ ಧಾರಾವಾಹಿ ಕೊನೆಗೊಳ್ಳುತ್ತಿದೆ. 3 ವರ್ಷಗಳ 'ಕನ್ನಡರಿ' ಜರ್ನಿ ಕೊನೆಯಾಗುತ್ತಿರುವುದನ್ನು ಕೇಳಿದ ಕಿರುತೆರೆ ಪ್ರಿಯರು ಬೇಸರ ವ್ಯಕ್ತಪಡಿಸಿದ್ದಾರೆ. 
icon

(8 / 9)

'ಕನ್ನಡತಿ' ಧಾರಾವಾಹಿ ಕೊನೆಯಾಗುತ್ತಿರುವ ವಿಚಾರವನ್ನು ಧಾರಾವಾಹಿ ತಂಡ ಅಧಿಕೃತವಾಗಿ ಘೋಷಿಸಿಲ್ಲ. ಇನ್ನಷ್ಟು ವರ್ಷಗಳ ಕಾಲ ಈ ಧಾರಾವಾಹಿ ಮುಂದುವರೆಯಲಿ ಎಂದು ಅಭಿಮಾನಿಗಳು ಮನವಿ ಮಾಡುತ್ತಿದ್ದಾರೆ.  
icon

(9 / 9)

ಇತರ ಗ್ಯಾಲರಿಗಳು