Karnataka Reservoirs: ಕರ್ನಾಟಕದ ಯಾವ ಜಲಾಯಶದಲ್ಲಿ 6 ತಿಂಗಳಲ್ಲಿ ಅತಿ ಹೆಚ್ಚು ಟಿಎಂಸಿ ನೀರು ಹೊರ ಹರಿದಿದೆ, ಈ ವರ್ಷ ಸಂಗ್ರಹವಾದ ನೀರೆಷ್ಟು
ಕನ್ನಡ ಸುದ್ದಿ  /  ಕರ್ನಾಟಕ  /  Karnataka Reservoirs: ಕರ್ನಾಟಕದ ಯಾವ ಜಲಾಯಶದಲ್ಲಿ 6 ತಿಂಗಳಲ್ಲಿ ಅತಿ ಹೆಚ್ಚು ಟಿಎಂಸಿ ನೀರು ಹೊರ ಹರಿದಿದೆ, ಈ ವರ್ಷ ಸಂಗ್ರಹವಾದ ನೀರೆಷ್ಟು

Karnataka Reservoirs: ಕರ್ನಾಟಕದ ಯಾವ ಜಲಾಯಶದಲ್ಲಿ 6 ತಿಂಗಳಲ್ಲಿ ಅತಿ ಹೆಚ್ಚು ಟಿಎಂಸಿ ನೀರು ಹೊರ ಹರಿದಿದೆ, ಈ ವರ್ಷ ಸಂಗ್ರಹವಾದ ನೀರೆಷ್ಟು

Karnataka Reservoirs Level: ಕರ್ನಾಟಕದ ಜಲಾಶಯಗಳಲ್ಲಿ ಡಿಸೆಂಬರ್‌ ಮೂರನೇ ವಾರದಲ್ಲೂ ಬಹುತೇಕ ಜಲಾಶಯಗಳಲ್ಲಿ ನೀರಿನ ಸಂಗ್ರಹ ಚೆನ್ನಾಗಿದೆ. ಯಾವ ಜಲಾಶಯದಲ್ಲಿ ಎಷ್ಟು ನೀರಿದೆ ಎನ್ನುವ ವಿವರ ಇಲ್ಲಿದೆ.

ಮಂಡ್ಯ ಜಿಲ್ಲೆ ಕೆಆರ್‌ಎಸ್‌ ಜಲಾಶಯ ಈಗಲೂ ತುಂಬಿದ ಸ್ಥಿತಿಯಲ್ಲಿದೆ.
ಮಂಡ್ಯ ಜಿಲ್ಲೆ ಕೆಆರ್‌ಎಸ್‌ ಜಲಾಶಯ ಈಗಲೂ ತುಂಬಿದ ಸ್ಥಿತಿಯಲ್ಲಿದೆ.

Karnataka Reservoirs Level: ಕರ್ನಾಟಕದಲ್ಲಿ ಒಟ್ಟು 14 ಜಲಾಶಯಗಳಲ್ಲಿ ಆರು ತಿಂಗಳ ಅವಧಿಯಲ್ಲಿಯೇ ಭಾರೀ ಪ್ರಮಾಣದಲ್ಲಿ ನೀರು ಹೊರಗೆ ಹರಿದು ಹೋಗಿದೆ. ಈ ಬಾರಿ ನಿರೀಕ್ಷೆಗೂ ಮೀರಿ ಎಲ್ಲಾ ಜಲಾಶಯಗಳ ಪಾತ್ರದಲ್ಲಿ ನೀರು ಹರಿದಿದ್ದರಿಂದ ಬಹುತೇಕ ತುಂಬಿದ್ದವು. ಈಗಲೂ ಕೃಷ್ಣರಾಜಸಾಗರ ಜಲಾಶಯ ತುಂಬಿದ ಸ್ಥಿತಿಯಲ್ಲಿದ್ದರೆ. ಹಾರಂಗಿ ಜಲಾಶಯ ಹೊರತುಪಡಿಸಿದರೆ ಎಲ್ಲಾ ಜಲಾಶಯಗಳಲ್ಲಿ ಹೆಚ್ಚಿನ ನೀರು ಸಂಗ್ರಹವಿದೆ. ಅದರಲ್ಲೂ ಮಹಾರಾಷ್ಟ್ರ ಹಾಗೂ ಕರ್ನಾಟಕದ ಮಲೆನಾಡಿಯಲ್ಲಿ ಹೆಚ್ಚು ಮಳೆಯಾಗಿದ್ದರಿಂದ ಯಾದಗಿರಿಯ ಬಸವಸಾಗರ, ವಿಜಯಪುರ ಜಿಲ್ಲೆಯ ಆಲಮಟ್ಟಿ ಹಾಗೂ ವಿಜಯನಗರ ಜಿಲ್ಲೆಯ ತುಂಗಭದ್ರಾ ಜಲಾಶಯಗಳಲ್ಲಿಯೇ ಈ ವರ್ಷದ ಆರು ತಿಂಗಳಲ್ಲಿ ಹೆಚ್ಚಿನ ಟಿಎಂಸಿ ನೀರು ಸಂಗ್ರಹವಾಗಿ ಬಹುತೇಕ ಹೆಚ್ಚು ಪ್ರಮಾಣದಲ್ಲಿಯೇ ನೀರು ಹರಿದು ಹೋಗಿದೆ.

ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ಆರು ತಿಂಗಳಲ್ಲಿ 2416 ಟಿಎಂಸಿ ನೀರು ಸಂಗ್ರಹವಾಗಿ 1804 ಟಿಎಂಸಿ ನೀರು ಆರು ದಿನಗಳಲ್ಲಿ ಹರಿದು ಹೋಗಿದೆ. ಕರ್ನಾಟಕದ ಈ ಜಲಾಶಯಗಳಲ್ಲಿ ಒಟ್ಟು 895. 62 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು, ಸದ್ಯ 767.88 ಟಿಎಂಸಿ ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಒಟ್ಟು 402.69 ಟಿಎಂಸಿ ನೀರು ಎಲ್ಲಾ ಜಲಾಶಯಗಳಲ್ಲಿ ಸಂಗ್ರಹವಾಗಿತ್ತು.

  • ಕರ್ನಾಟಕದಲ್ಲಿ ಅತಿ ಹೆಚ್ಚು ಈ ಬಾರಿ ನೀರು ಸಂಗ್ರಹವಾಗಿರುವುದು ಯಾದಗಿರಿ ಜಿಲ್ಲೆಯ ಬಸವಸಾಗರ ನಾರಾಯಣಪುರ ಜಲಾಶಯದಲ್ಲಿ. ಆರು ತಿಂಗಳಲ್ಲಿ ಇಲ್ಲಿ ಸಂಗ್ರಹವಾಗಿದ್ದು 816 ಟಿಎಂಸಿ ನೀರು. ಇಲ್ಲಿಂದ 802 ಟಿಎಂಸಿ ನೀರು ಆರು ತಿಂಗಳಲ್ಲಿ ಹರಿದು ಹೋಗಿದೆ. ಸದ್ಯ ಇಲ್ಲಿ 29.57 ಟಿಎಂಸಿ ನೀರು ಸಂಗ್ರಹವಿದೆ. ಹಿಂದಿನ ವರ್ಷ ಇಲ್ಲಿ 25,27 ಟಿಎಂಸಿ ನೀರು ಇದೇ ಅವಧಿಯಲ್ಲಿ ಸಂಗ್ರಹವಾಗಿತ್ತು. ಜಲಾಶಯದ ಗರಿಷ್ಠ ಮಟ್ಟ 33.31 ಟಿಎಂಸಿ
  • ವಿಜಯನಗರ ಜಿಲ್ಲೆಯ ತುಂಗಭದ್ರಾ ಜಲಾಶಯದಲ್ಲಿ ಆರು ತಿಂಗಳಲ್ಲಿ ಸಂಗ್ರಹವಾಗಿದ್ದು 479 ಟಿಎಂಸಿ ನೀರು. ಇಲ್ಲಿಂದ ಟಿಎಂಸಿ 392 ನೀರು ಆರು ತಿಂಗಳಲ್ಲಿ ಹರಿದು ಹೋಗಿದೆ. ಸದ್ಯ ಇಲ್ಲಿ90.35 ಟಿಎಂಸಿ ನೀರು ಸಂಗ್ರಹವಿದೆ. ಹಿಂದಿನ ವರ್ಷ ಇಲ್ಲಿ 11.43 ಟಿಎಂಸಿ ನೀರು ಇದೇ ಅವಧಿಯಲ್ಲಿ ಸಂಗ್ರಹವಾಗಿತ್ತು. ಜಲಾಶಯದ ಗರಿಷ್ಠ ಮಟ್ಟ 105.79 ಟಿಎಂಸಿ
  • ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯದಲ್ಲಿ. ಆರು ತಿಂಗಳಲ್ಲಿ ಸಂಗ್ರಹವಾಗಿದ್ದು878 ಟಿಎಂಸಿ ನೀರು. ಇಲ್ಲಿಂದ 795 ಟಿಎಂಸಿ ನೀರು ಆರು ತಿಂಗಳಲ್ಲಿ ಹರಿದು ಹೋಗಿದೆ. ಸದ್ಯ ಇಲ್ಲಿ ಟಿಎಂಸಿ 103.92 ನೀರು ಸಂಗ್ರಹವಿದೆ. ಹಿಂದಿನ ವರ್ಷ ಇಲ್ಲಿ 58. 47 ಟಿಎಂಸಿ ನೀರು ಇದೇ ಅವಧಿಯಲ್ಲಿ ಸಂಗ್ರಹವಾಗಿತ್ತು. ಜಲಾಶಯದ ಗರಿಷ್ಠ ಮಟ್ಟ 123.08 ಟಿಎಂಸಿ

    ಇದನ್ನೂ ಓದಿರಿ: ಕರ್ನಾಟಕ ಹವಾಮಾನ: ಬೆಂಗಳೂರು ಸುತ್ತಮುತ್ತ ತಣ್ಣನೆ ರಾತ್ರಿ, ಬೀದರ್‌, ಕಲಬುರಗಿ, ವಿಜಯಪುರ ಜಿಲ್ಲೆಗಳಲ್ಲಿ ವಿಪರೀತ ಶೀತ ಗಾಳಿ, ರೆಡ್‌ ಅಲರ್ಟ್‌
  • ಶಿವಮೊಗ್ಗ ಜಿಲ್ಲೆಯ ಲಿಂಗನಮಕ್ಕಿ ಜಲಾಶಯದಲ್ಲಿ ಆರು ತಿಂಗಳಲ್ಲಿ ಸಂಗ್ರಹವಾಗಿದ್ದು 227 ಟಿಎಂಸಿ ನೀರು. ಇಲ್ಲಿಂದ 107 ಟಿಎಂಸಿ ನೀರು ಆರು ತಿಂಗಳಲ್ಲಿ ಹರಿದು ಹೋಗಿದೆ. ಸದ್ಯ ಇಲ್ಲಿ124.60 ಟಿಎಂಸಿ ನೀರು ಸಂಗ್ರಹವಿದೆ. ಹಿಂದಿನ ವರ್ಷ ಇಲ್ಲಿ 58.63 ಟಿಎಂಸಿ ನೀರು ಇದೇ ಅವಧಿಯಲ್ಲಿ ಸಂಗ್ರಹವಾಗಿತ್ತು.ಜಲಾಶಯದ ಗರಿಷ್ಠ ಮಟ್ಟ 151.75 ಟಿಎಂಸಿ
  • ಮಂಡ್ಯ ಜಿಲ್ಲೆಯ ಕೆಆರ್‌ಎಸ್‌ ಜಲಾಶಯದಲ್ಲಿ ಆರು ತಿಂಗಳಲ್ಲಿ ಸಂಗ್ರಹವಾಗಿದ್ದು 225 ಟಿಎಂಸಿ ನೀರು. ಇಲ್ಲಿಂದ185 ಟಿಎಂಸಿ ನೀರು ಆರು ತಿಂಗಳಲ್ಲಿ ಹರಿದು ಹೋಗಿದೆ. ಸದ್ಯ ಇಲ್ಲಿ 49.45 ಟಿಎಂಸಿ ನೀರು ಸಂಗ್ರಹವಿದೆ. ಹಿಂದಿನ ವರ್ಷ ಇಲ್ಲಿ 20.29 ಟಿಎಂಸಿ ನೀರು ಇದೇ ಅವಧಿಯಲ್ಲಿ ಸಂಗ್ರಹವಾಗಿತ್ತು. ಜಲಾಶಯದ ಗರಿಷ್ಠ ಮಟ್ಟ49.45 ಟಿಎಂಸಿ
  • ಬೆಳಗಾವಿ ಜಿಲ್ಲೆಯ ಘಟಪ್ರಭಾ ಹಿಡಕಲ್‌ ಜಲಾಶಯದಲ್ಲಿ ಆರು ತಿಂಗಳಲ್ಲಿ ಸಂಗ್ರಹವಾಗಿದ್ದು 122 ಟಿಎಂಸಿ ನೀರು. ಇಲ್ಲಿಂದ 91 ಟಿಎಂಸಿ ನೀರು ಆರು ತಿಂಗಳಲ್ಲಿ ಹರಿದು ಹೋಗಿದೆ. ಸದ್ಯ ಇಲ್ಲಿ43.25 ಟಿಎಂಸಿ ನೀರು ಸಂಗ್ರಹವಿದೆ. ಹಿಂದಿನ ವರ್ಷ ಇಲ್ಲಿ 40.18 ಟಿಎಂಸಿ ನೀರು ಇದೇ ಅವಧಿಯಲ್ಲಿ ಸಂಗ್ರಹವಾಗಿತ್ತು.ಜಲಾಶಯದ ಗರಿಷ್ಠ ಮಟ್ಟ 51 ಟಿಎಂಸಿ
  • ಮೈಸೂರು ಜಿಲ್ಲೆಯ ಕಬಿನಿ ಜಲಾಶಯದಲ್ಲಿ ಆರು ತಿಂಗಳಲ್ಲಿ ಸಂಗ್ರಹವಾಗಿದ್ದು 103 ಟಿಎಂಸಿ ನೀರು. ಇಲ್ಲಿಂದ 91 ಟಿಎಂಸಿ ನೀರು ಆರು ತಿಂಗಳಲ್ಲಿ ಹರಿದು ಹೋಗಿದೆ. ಸದ್ಯ ಇಲ್ಲಿ16.98 ಟಿಎಂಸಿ ನೀರು ಸಂಗ್ರಹವಿದೆ. ಹಿಂದಿನ ವರ್ಷ ಇಲ್ಲಿ 13.59 ಟಿಎಂಸಿ ನೀರು ಇದೇ ಅವಧಿಯಲ್ಲಿ ಸಂಗ್ರಹವಾಗಿತ್ತು. ಜಲಾಶಯದ ಗರಿಷ್ಠ ಮಟ್ಟ 19.52 ಟಿಎಂಸಿ
  • ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಜಲಾಶಯದಲ್ಲಿ ಆರು ತಿಂಗಳಲ್ಲಿ ಸಂಗ್ರಹವಾಗಿದ್ದು127 ಟಿಎಂಸಿ ನೀರು. ಇಲ್ಲಿಂದ 74 ಟಿಎಂಸಿ ನೀರು ಆರು ತಿಂಗಳಲ್ಲಿ ಹರಿದು ಹೋಗಿದೆ. ಸದ್ಯ ಇಲ್ಲಿ 66.91 ಟಿಎಂಸಿ ನೀರು ಸಂಗ್ರಹವಿದೆ. ಹಿಂದಿನ ವರ್ಷ ಇಲ್ಲಿ 35.37 ಟಿಎಂಸಿ ನೀರು ಇದೇ ಅವಧಿಯಲ್ಲಿ ಸಂಗ್ರಹವಾಗಿತ್ತು.ಜಲಾಶಯದ ಗರಿಷ್ಠ ಮಟ್ಟ 71.54 ಟಿಎಂಸಿ

    ಇದನ್ನೂ ಓದಿರಿ: ಕರ್ನಾಟಕ ಹವಾಮಾನ: ರಾಜ್ಯದಲ್ಲಿ ಮಂಜಿನೊಂದಿಗೆ ಮುಂದುವರಿದ ಚಳಿ; ಡಿಸೆಂಬರ್ 17 ರಿಂದ 2 ದಿನ ಬೆಂಗಳೂರು ಸೇರಿ 9 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ
  • ಚಿತ್ರದುರ್ಗ ಜಿಲ್ಲೆಯ ವಾಣಿವಿಲಾಸ ಜಲಾಶಯದಲ್ಲಿ ಆರು ತಿಂಗಳಲ್ಲಿ ಸಂಗ್ರಹವಾಗಿದ್ದು12 ಟಿಎಂಸಿ ನೀರು. ಇಲ್ಲಿಂದ 2 ಟಿಎಂಸಿ ನೀರು ಆರು ತಿಂಗಳಲ್ಲಿ ಹರಿದು ಹೋಗಿದೆ. ಸದ್ಯ ಇಲ್ಲಿ 29.54 ಟಿಎಂಸಿ ನೀರು ಸಂಗ್ರಹವಿದೆ. ಹಿಂದಿನ ವರ್ಷ 21.10 ಇಲ್ಲಿ ಟಿಎಂಸಿ ನೀರು ಇದೇ ಅವಧಿಯಲ್ಲಿ ಸಂಗ್ರಹವಾಗಿತ್ತು. ಜಲಾಶಯದ ಗರಿಷ್ಠ ಮಟ್ಟ30.42 ಟಿಎಂಸಿ
  • ಕೊಡಗು ಜಿಲ್ಲೆಯ ಹಾರಂಗಿ ಜಲಾಶಯದಲ್ಲಿ ಆರು ತಿಂಗಳಲ್ಲಿ ಸಂಗ್ರಹವಾಗಿದ್ದು36 ಟಿಎಂಸಿ ನೀರು. ಇಲ್ಲಿಂದ 35 ಟಿಎಂಸಿ ನೀರು ಆರು ತಿಂಗಳಲ್ಲಿ ಹರಿದು ಹೋಗಿದೆ. ಸದ್ಯ ಇಲ್ಲಿ 3.54 ಟಿಎಂಸಿ ನೀರು ಸಂಗ್ರಹವಿದೆ. ಹಿಂದಿನ ವರ್ಷ ಇಲ್ಲಿ 3.49 ಟಿಎಂಸಿ ನೀರು ಇದೇ ಅವಧಿಯಲ್ಲಿ ಸಂಗ್ರಹವಾಗಿತ್ತು.ಜಲಾಶಯದ ಗರಿಷ್ಠ ಮಟ್ಟ 8.50 ಟಿಎಂಸಿ
  • ಬೆಳಗಾವಿ ಜಿಲ್ಲೆಯ ಮಲಪ್ರಭಾ ನವಿಲುತೀರ್ಥ ಜಲಾಶಯದಲ್ಲಿ ಆರು ತಿಂಗಳಲ್ಲಿ ಸಂಗ್ರಹವಾಗಿದ್ದು 64 ಟಿಎಂಸಿ ನೀರು. ಇಲ್ಲಿಂದ 39 ಟಿಎಂಸಿ ನೀರು ಆರು ತಿಂಗಳಲ್ಲಿ ಹರಿದು ಹೋಗಿದೆ. ಸದ್ಯ ಇಲ್ಲಿ 21.80 ಟಿಎಂಸಿ ನೀರು ಸಂಗ್ರಹವಿದೆ. ಹಿಂದಿನ ರ್ಷ ಇಲ್ಲಿ 16.50ಟಿಎಂಸಿ ನೀರು ಇದೇ ಅವಧಿಯಲ್ಲಿ ಸಂಗ್ರಹವಾಗಿತ್ತು.ಜಲಾಶಯದ ಗರಿಷ್ಠ ಮಟ್ಟ 37.73 ಟಿಎಂಸಿ
  • ಹಾಸನ ಜಿಲ್ಲೆಯ ಹೇಮಾವತಿ ಜಲಾಶಯದಲ್ಲಿ ಆರು ತಿಂಗಳಲ್ಲಿ ಸಂಗ್ರಹವಾಗಿದ್ದು 131 ಟಿಎಂಸಿ ನೀರು. ಇಲ್ಲಿಂದ 114 ಟಿಎಂಸಿ ನೀರು ಆರು ತಿಂಗಳಲ್ಲಿ ಹರಿದು ಹೋಗಿದೆ. ಸದ್ಯ ಇಲ್ಲಿ 25.48 ಟಿಎಂಸಿ ನೀರು ಸಂಗ್ರಹವಿದೆ. ಹಿಂದಿನ ರ್ಷ ಇಲ್ಲಿ 15.23 ಟಿಎಂಸಿ ನೀರು ಇದೇ ಅವಧಿಯಲ್ಲಿ ಸಂಗ್ರಹವಾಗಿತ್ತು. ಜಲಾಶಯದ ಗರಿಷ್ಠ ಮಟ್ಟ 37.10 ಟಿಎಂಸಿ
  • ಉತ್ತರ ಕನ್ನಡ ಜಿಲ್ಲೆಯ ಸೂಪಾ ಜಲಾಶಯದಲ್ಲಿ ಆರು ತಿಂಗಳಲ್ಲಿ ಸಂಗ್ರಹವಾಗಿದ್ದು150 ಟಿಎಂಸಿ ನೀರು. ಇಲ್ಲಿಂದ ಟಿಎಂಸಿ 57ನೀರು ಆರು ತಿಂಗಳಲ್ಲಿ ಹರಿದು ಹೋಗಿದೆ. ಸದ್ಯ ಇಲ್ಲಿ 126.16 ಟಿಎಂಸಿ ನೀರು ಸಂಗ್ರಹವಿದೆ. ಹಿಂದಿನ ರ್ಷ ಇಲ್ಲಿ 72.56 ಟಿಎಂಸಿ ನೀರು ಇದೇ ಅವಧಿಯಲ್ಲಿ ಸಂಗ್ರಹವಾಗಿತ್ತು.ಜಲಾಶಯದ ಗರಿಷ್ಠ ಮಟ್ಟ 145. 33 ಟಿಎಂಸಿ
  • ಶಿವಮೊಗ್ಗ ಜಿಲ್ಲೆಯ ವಾರಾಹಿ ಜಲಾಶಯದಲ್ಲಿ ಆರು ತಿಂಗಳಲ್ಲಿ ಸಂಗ್ರಹವಾಗಿದ್ದು 28 ಟಿಎಂಸಿ ನೀರು. ಇಲ್ಲಿಂದ 3.9 ಟಿಎಂಸಿ ನೀರು ಆರು ತಿಂಗಳಲ್ಲಿ ಹರಿದು ಹೋಗಿದೆ. ಸದ್ಯ ಇಲ್ಲಿ26.26 ಟಿಎಂಸಿ ನೀರು ಸಂಗ್ರಹವಿದೆ. ಹಿಂದಿನ ರ್ಷ ಇಲ್ಲಿ 10.58 ಟಿಎಂಸಿ ನೀರು ಇದೇ ಅವಧಿಯಲ್ಲಿ ಸಂಗ್ರಹವಾಗಿತ್ತು.ಜಲಾಶಯದ ಗರಿಷ್ಠ ಮಟ್ಟ 31.10 ಟಿಎಂಸಿ

Whats_app_banner