ಕನ್ನಡ ಸುದ್ದಿ  /  ಮನರಂಜನೆ  /  Indian 2: ಮುಂಗಡ ಬುಕ್ಕಿಂಗ್‌ನಲ್ಲೂ ಮುನ್ನುಗ್ಗುತ್ತಿದೆ ಇಂಡಿಯನ್‌ 2; ನಾಳೆಯಿಂದ ಚಿತ್ರಮಂದಿರಗಳಲ್ಲಿ ಕಮಲ್‌ ಹಾಸನ್‌ ಸಿನಿಮಾದ ಅಬ್ಬರ

Indian 2: ಮುಂಗಡ ಬುಕ್ಕಿಂಗ್‌ನಲ್ಲೂ ಮುನ್ನುಗ್ಗುತ್ತಿದೆ ಇಂಡಿಯನ್‌ 2; ನಾಳೆಯಿಂದ ಚಿತ್ರಮಂದಿರಗಳಲ್ಲಿ ಕಮಲ್‌ ಹಾಸನ್‌ ಸಿನಿಮಾದ ಅಬ್ಬರ

Indian 2 Movie Updates: ಲೆಜೆಂಡರಿ ಸೇನಾಪತಿಯು ಮತ್ತೆ ರಣಾಂಗಣಕ್ಕೆ ಆಗಮಿಸಲಿದ್ದಾರೆ. ಕಮಲ್‌ ಹಾಸನ್‌ ಅಭಿಮಾನಿಗಳು ಕಾತರಗೊಂಡಿದ್ದಾರೆ. ನಾಳೆ ಬಹುನಿರೀಕ್ಷಿತ ಇಂಡಿಯನ್‌ 2 ಸಿನಿಮಾವು ಚಿತ್ರಮಂದಿರಗಳಲ್ಲಿ ರಿಲೀಸ್‌ ಆಗಲಿದೆ. ಈಗಾಗಲೇ ಈ ಸಿನಿಮಾವು ಮುಂಗಡ ಬುಕ್ಕಿಂಗ್‌ನಲ್ಲೂ ದಾಖಲೆ ಬರೆಯುತ್ತಿದೆ.

Indian 2: ಮುಂಗಡ ಬುಕ್ಕಿಂಗ್‌ನಲ್ಲೂ ದಾಖಲೆ ಬರೆಯುತ್ತಿದೆ ಇಂಡಿಯನ್‌ 2
Indian 2: ಮುಂಗಡ ಬುಕ್ಕಿಂಗ್‌ನಲ್ಲೂ ದಾಖಲೆ ಬರೆಯುತ್ತಿದೆ ಇಂಡಿಯನ್‌ 2 (PTI)

ಬೆಂಗಳೂರು: ಲೆಜೆಂಡರಿ ಸೇನಾಪತಿಯು ಮತ್ತೆ ರಣಾಂಗಣಕ್ಕೆ ಆಗಮಿಸಲಿದ್ದಾರೆ. ಕಮಲ್‌ ಹಾಸನ್‌ ಅಭಿಮಾನಿಗಳು ಕಾತರಗೊಂಡಿದ್ದಾರೆ. ನಾಳೆ ಬಹುನಿರೀಕ್ಷಿತ ಇಂಡಿಯನ್‌ 2 ಸಿನಿಮಾವು ಚಿತ್ರಮಂದಿರಗಳಲ್ಲಿ ರಿಲೀಸ್‌ ಆಗಲಿದೆ. ಈಗಾಗಲೇ ಈ ಸಿನಿಮಾವು ಮುಂಗಡ ಬುಕ್ಕಿಂಗ್‌ನಲ್ಲೂ ದಾಖಲೆ ಬರೆಯುತ್ತಿದೆ. ಅಡ್ವಾನ್ಸ್‌ ಬುಕ್ಕಿಂಗ್‌ನಲ್ಲಿ ತಮಿಳುನಾಡಿನಲ್ಲಿ ಶಂಕರ್‌ ನಿರ್ದೇಶನದ 2.0ಗಿಂತಲೂ ಈ ಚಿತ್ರ ಮುಂದಿದೆ.

ಸೇನಾಪತಿಯ ಪಾತ್ರದಲ್ಲಿ ಕಮಲ್‌ ಹಾಸನ್‌ ಮಾತ್ರ ನಟಿಸಲು ಸಾಧ್ಯ. ಈ ಸೇನಾಪತಿಯ ಆಗಮನಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಸಿನಿಮಾ ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ರಿಲೀಸ್‌ ಆಗುತ್ತಿದೆ. ಬೆಂಗಳೂರಿನಲ್ಲಿ ಸಾಕಷ್ಟು ಚಿತ್ರಮಂದಿರಗಳಲ್ಲಿ ರಿಲೀಸ್‌ ಆಗುತ್ತಿದ್ದರೂ ಕನ್ನಡದಲ್ಲಿ ಬಿಡುಗಡೆಯಾಗುತ್ತಿಲ್ಲ. ಈ ಸಿನಿಮಾದ ಹೆಸರು ತೆಲುಗಿನಲ್ಲಿ ಭಾರತೀಯಡು 2 ಎಂದಿರಲಿದೆ. ಹಿಂದಿಯಲ್ಲಿ ಹಿಂದೂಸ್ತಾನಿ 2 ಎಂದಿರಲಿದೆ. ಕನ್ನಡದಲ್ಲಿ ಭಾರತದವನು 2 ಎಂದು ಬಿಡುಗಡೆ ಮಾಡಬಹುದಿತ್ತು. ಯಾಕೋ ಚಿತ್ರತಂಡ ಮನಸ್ಸು ಮಾಡಿಲ್ಲ.

ಸ್ವಾತಂತ್ರ್ಯ ಹೋರಾಟಗಾರನಾಗಿದ್ದ ಸೇನಾಪತಿಯು ಹಾಂಕಾಂಗ್‌ನಲ್ಲಿರುತ್ತಾನೆ. ಈತ ಈ ಬಾರಿ ಚಿತ್ರ ವರದರಾಜನ್‌ ಪಡೆಗೆ ಸೇರುತ್ತಾನೆ. ಈ ಸಿನಿಮಾದಲ್ಲಿ ಸಿದ್ಧಾರ್ಥ್‌ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇವರಿಬ್ಬರ ಜೋಡಿಯು ನ್ಯಾಯಕ್ಕಾಗಿ ಸಾಹಸಮಯ ಹೋರಾಟ ನಡೆಸಲಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಮುಂಗಡ ಟಿಕೆಟ್‌ ಬುಕ್ಕಿಂಗ್‌ನಲ್ಲಿ ದಾಖಲೆ

ಅಡ್ವಾನ್ಸ್‌ ಬುಕ್ಕಿಂಗ್‌ನ ಮೊದಲ ದಿನದ ಲೆಕ್ಕ ದೊರಕಿದೆ. ಮುಂಗಡ ಟಿಕೆಟ್‌ ಬುಕ್ಕಿಂಗ್‌ನಲ್ಲಿ ಈಗಾಗಲೇ ಈ ಸಿನಿಮಾ 3 ಕೋಟಿ ರೂಪಾಯಿ ಗಳಿಕೆ ಮಾಡಿದಯಂತೆ. ವಿಶೇಷವಾಗಿ ತಮಿಳುನಾಡಿನಲ್ಲಿ ಮುಂಗಡ ಬುಕ್ಕಿಂಗ್‌ ಹೆಚ್ಚಾಗಿದೆ. ಈ ಸಿನಿಮಾವು ಎಸ್‌ ಶಂಕರ್‌ ನಿರ್ದೇಶನದ 2.0 ಸಿನಿಮಾದ ಈ ಹಿಂದಿನ ದಾಖಲೆಯನ್ನು ಅಳಿಸುವ ಎಲ್ಲಾ ಸೂಚನೆಗಳಿವೆ ಎಂದು ಸಿನಿಮಾ ಪಂಡಿತರು ಲೆಕ್ಕ ಹಾಕಿದ್ದಾರೆ.

ಮೊದಲ ದಿನ ತಮಿಳುನಾಡಿನಲ್ಲಿ 12 ಲಕ್ಷಕ್ಕೂ ಹೆಚ್ಚು ಟಿಕೆಟ್‌ ಬುಕ್‌ ಆಗಿವೆ. 2,146 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಟಿಕೆಟ್‌ ಬುಕ್‌ ಮಾಡಲಾಗಿದೆ. ಹಿಂದಿ ಮತ್ತು ತೆಲುಗು ಭಾಷೆಯ ಸಿನಿಮಾ ಟಿಕೆಟ್‌ ಬುಕ್ಕಿಂಗ್‌ ಕೂಡ ಕಡಿಮೆಯಾಗಿಲ್ಲ. ಕ್ರಮವಾಗಿ 2 ಲಕ್ಷ ಮತ್ತು 8 ಲಕ್ಷ ಟಿಕೆಟ್‌ ಮುಂಗಡ ಬುಕ್ಕಿಂಗ್‌ ಮಾಡಲಾಗಿದೆ. ತಮಿಳು ಭಾಷೆಯ ಟಿಕೆಟ್‌ಗಳಿಗೆ ಹೋಲಿಸಿದರೆ ಉಳಿದ ಭಾಷೆಯ ಟಿಕೆಟ್‌ಗಳ ಬುಕ್ಕಿಂಗ್‌ ಕಡಿಮೆಯಿದೆ.

ಕಮಲ್‌ ಹಾಸನ್‌ ನಟನೆಯ ಇಂಡಿಯನ್‌ 2ನಲ್ಲಿ ರಾಕುಲ್ ಪ್ರೀತ್ ಸಿಂಗ್, ಕಾಜಲ್ ಅಗರ್ವಾಲ್, ಎಸ್.ಜೆ.ಸೂರ್ಯ, ಪ್ರಿಯಾ ಭವಾನಿ ಶಂಕರ್, ನೆಡುಮುಡಿ ವೇಣು, ವಿವೇಕ್, ಕಾಳಿದಾಸ್ ಜಯರಾಮ್, ಗುಲ್ಶನ್ ಗ್ರೋವರ್, ಸಮುದ್ರಕಣಿ, ಬಾಬಿ ಸಿಂಹ, ಬ್ರಹ್ಮಾನಂದಂ, ವೆನ್ನೆಲಾ ಕಿಶೋರ್, ಜಾಕಿರ್ ಹುಸೇನ್, ಪಿಯೂಷ್ ಮಿಶ್ರಾ, ಗುರು ಸೋಮಸುಂದರಂ, ದೆಹಲಿ ಗಣೇಶ್, ಜಯಪ್ರಕಾಶ್, ಮನೋಬಾಲಾ ಮತ್ತು ಅಶ್ವಿನಿ ತಂಗರಾಜ್ ಸೇರಿದಂತೆ ಹಲವು ಪ್ರತಿಭಾನ್ವಿತ ನಟನಟಿಯರ ದಂಡೇ ಇದೆ.