Ramachari Serial: ರಾಮಾಚಾರಿ ಮನೆಯಲ್ಲಿ ತುಂಬಿದೆ ಮೌನ; ನಾರಾಯಣಾಚಾರ್ಯರ ಮಾತಲ್ಲಿದೆ ಒಗಟು
ಕನ್ನಡ ಸುದ್ದಿ  /  ಮನರಂಜನೆ  /  Ramachari Serial: ರಾಮಾಚಾರಿ ಮನೆಯಲ್ಲಿ ತುಂಬಿದೆ ಮೌನ; ನಾರಾಯಣಾಚಾರ್ಯರ ಮಾತಲ್ಲಿದೆ ಒಗಟು

Ramachari Serial: ರಾಮಾಚಾರಿ ಮನೆಯಲ್ಲಿ ತುಂಬಿದೆ ಮೌನ; ನಾರಾಯಣಾಚಾರ್ಯರ ಮಾತಲ್ಲಿದೆ ಒಗಟು

ನಾರಾಯಣಾಚಾರ್ಯರು ಕಿಟ್ಟಿ ಜನ್ಮ ರಹಸ್ಯ ಹೇಳಿದ್ದಾರೆ. ಕಿಟ್ಟಿ ಮದುವೆ ಆದರೆ ಸಮಸ್ಯೆ ಆಗುತ್ತದೆ ಎಂಬ ವಿಚಾರವನ್ನು ಮನೆಯವರ ಬಳಿ ಹಂಚಿಕೊಂಡಿದ್ದಾರೆ. ಆ ವಿಚಾರ ಕೇಳಿದ ತಕ್ಷಣ ಎಲ್ಲರಿಗೂ ಶಾಕ್ ಆಗಿದೆ.

ರಾಮಾಚಾರಿ ಮನೆಯಲ್ಲಿ ತುಂಬಿದೆ ಮೌನ
ರಾಮಾಚಾರಿ ಮನೆಯಲ್ಲಿ ತುಂಬಿದೆ ಮೌನ

ಮನೆಯವರ ಮುಂದೆ ಕೃಷ್ಣನ ಜಾತಕದ ಸತ್ಯ ತೆರೆದಿಟ್ಟ ನಾರಾಯಣಾಚಾರ್ಯರು ಏನು ಹೇಳಿದ್ದಾರೆ ಎಂಬುದು ಇಂದಿನ ಸಂಚಿಕೆಯಲ್ಲಿ ಸಂಚಲನ ಸೃಷ್ಟಿ ಮಾಡಿದೆ. ಕೃಷ್ಣನ ಮದುವೆ ಆಗಕೂಡದು ಎಂದು ಹೇಳಿದ್ದಾರೆ. ಈ ಮಾತನ್ನು ಕೇಳಿ ಎಲ್ಲರಿಗೂ ಶಾಕ್ ಆಗಿದೆ. ರಾಮಾಚಾರಿ ಹಾಗೂ ಉಳಿದವರೆಲ್ಲರೂ ಕಿಟ್ಟಿಗಾಗಿ ರುಕ್ಕುವನ್ನು ಕರೆತಂದಿದ್ದಾರೆ. ಆದರೆ ಇತ್ತ ನಾರಾಯಣಾಚಾರ್ಯರು ಮಾತ್ರ ತುಂಬಾ ಬೇಸರದಲ್ಲಿ ಇದ್ದಂತೆ ಕಾಣುತ್ತದೆ. ಎಲ್ಲರೂ ಅವರನ್ನು ಪ್ರಶ್ನೆ ಮಾಡುತ್ತಾರೆ. ಯಾಕೆ ಏನಾಯ್ತು ನಿಮಗೆ ತುಂಬಾ ಬೇಸರದಲ್ಲಿ ಇದ್ದೀರಾ? ಎಂದು ಕೇಳುತ್ತಾರೆ.

ಆಗ ಅವರು ಹೇಳುತ್ತಾರೆ. ಸುಖ ಹಾಗೂ ದುಃಖ ಎರಡೂ ಸಹ ಒಂದೇ ನಾಣ್ಯದ ಮುಖ ಎಂದು ಅವರು ಹೇಳಿದ್ದಾರೆ. ಆಗ ಅವರ ಮಾತು ಎಲ್ಲರಿಗೂ ಒಗಟಾಗಿ ಕಾಣುತ್ತದೆ. ಯಾಕೆ ಈ ರೀತಿ ಮಾತಾಡ್ತಾ ಇದ್ದಾರೆ ಇವರು ಎಂದು ಅನುಮಾನದಿಂದ ಪ್ರಶ್ನೆ ಮಾಡಿದಾಗ ಎಲ್ಲವೂ ಅರ್ಥವಾಗುತ್ತದೆ. ಕಿಟ್ಟಿ ಹುಟ್ಟಿದಾಗ ನಾನು ಅವನ ಜಾತಕ ಬರೆದಿಲ್ಲ. ಅವತ್ತು ಬರೆಯೋದು ಬೇಡ ಎಂದು ಗುರುಗಳು ಹೇಳಿದ್ದರು. ಇಪ್ಪತ್ತೆಂಟು ವರ್ಷದ ನಂತರ ಅವರು ಈಗ ನನಗೆ ಸಿಕ್ಕಿದ್ದಾರೆ.

ಕಿಟ್ಟಿ ಮದುವೆ ಆದರೆ ಮಾರಣ ಹೋಮವೇ ನಡೆಯುತ್ತದೆ ಎಂದು ಅವರು ಹೇಳಿದ್ದಾರರೆ. ಆ ಮಾತನ್ನು ಕೇಳಿ ಅಲ್ಲರಿಗೂ ಶಾಕ್ ಆಗಿದೆ. ಈಗ ಕಿಟ್ಟಿ ಎಲ್ಲಿದ್ದಾನೆ? ಏನು ಮಾಡುತ್ತಿದ್ದಾನೆ ಎಂದು ಪ್ರಶ್ನೆ ಮಾಡಿದ್ದಾರೆ. ಆಗ ಕಿಟ್ಟಿಯನ್ನು ದೇವಸ್ಥಾನಕ್ಕೆ ಕಳಿಸಿದ್ದೇನೆ ಎಂದು ನಾರಾಯಣಾಚಾರ್ಯರು ಹೇಳುತ್ತಾರೆ.

ರಾಮಾಚಾರಿ ಧಾರಾವಾಹಿ

ರಾಮಾಚಾರಿ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಪಾತ್ರಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಏಕೈಕ ಧಾರಾವಾಹಿ ಇದಾಗಿದ್ದು ಜನಮನ್ನಣೆ ಗಳಿಸಿದೆ. ಇದರಲ್ಲಿ ಗೌರವಯುತ ಕುಟುಂಬಕ್ಕೆ ಒಬ್ಬ ಶ್ರೀಮಂತರ ಮನೆ ಮಗಳು ಚಾರು ಮದುವೆ ಆಗಿ ಬರುತ್ತಾಳೆ. ನಂತರದ ದಿನಗಳಲ್ಲಿ ಅವಳು ಯಾವ ರೀತಿ ತನ್ನ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಯಾವ ರೀತಿ ಮನೆತನದ ಗೌರವ ಕಾಪಾಡುತ್ತಾಳೆ ಎನ್ನುವುದೇ ಈ ಧಾರಾವಾಹಿಯ ಮೂಲ ಕಥೆಯಾಗಿದೆ.

ರಾಮಾಚಾರಿ ಧಾರಾವಾಹಿ ಪಾತ್ರವರ್ಗ

ಮೌನ ಗುಡ್ಡೆ ಮನೆ - ಚಾರು

ರಿತ್ವಿಕ್ ಕ್ರಪಾಕರ್ - ರಾಮಾಚಾರಿ

ರಿತ್ವಿಕ್ ಕ್ರಪಾಕರ್ - ಕೃಷ್ಣ (ಕಿಟ್ಟಿ)

ಚಿ ಗುರುದತ್ - ಜಯಶಂಕರ್

ಶಂಕರ್ ಅಶ್ವಥ್‌ - ನಾರಾಯಣಾಚಾರಿ

ಐಶ್ವರ್ಯ ವಿನಯ್‌ - ವೈಶಾಖ

ಅಂಜಲಿ ಸುಧಾಕರ್ - ಜಾನಕಿ

Whats_app_banner