ಶಿವಾಜಿ ಮಹಾರಾಜ್ ಪಾತ್ರದಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ; ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್ ಸಿನಿಮಾ ಪೋಸ್ಟರ್ ರಿಲೀಸ್‌
ಕನ್ನಡ ಸುದ್ದಿ  /  ಮನರಂಜನೆ  /  ಶಿವಾಜಿ ಮಹಾರಾಜ್ ಪಾತ್ರದಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ; ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್ ಸಿನಿಮಾ ಪೋಸ್ಟರ್ ರಿಲೀಸ್‌

ಶಿವಾಜಿ ಮಹಾರಾಜ್ ಪಾತ್ರದಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ; ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್ ಸಿನಿಮಾ ಪೋಸ್ಟರ್ ರಿಲೀಸ್‌

ನಿರ್ದೇಶಕ ಸಂದೀಪ್ ಸಿಂಗ್ ಅವರ ಮುಂಬರುವ ಹಿಸ್ಟೋರಿಕಲ್ ಡ್ರಾಮಾ ಸಿನಿಮಾದಲ್ಲಿ ರಿಷಬ್‌ ಅಭಿನಯಿಸಲಿದ್ದಾರೆ. ಶಿವಾಜಿ ಮಹಾರಾಜ್ ಪಾತ್ರದಲ್ಲಿ ಈಗಾಗಲೇ ಪೋಸ್ಟರ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಶಿವಾಜಿ ಮಹಾರಾಜ್ ಪಾತ್ರದಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ
ಶಿವಾಜಿ ಮಹಾರಾಜ್ ಪಾತ್ರದಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ

ನಿರ್ದೇಶಕ ಸಂದೀಪ್ ಸಿಂಗ್ ಅವರ ಮುಂಬರುವ ಹಿಸ್ಟೋರಿಕಲ್ ಡ್ರಾಮಾ ಸಿನಿಮಾದಲ್ಲಿ ರಿಷಬ್‌ ಅಭಿನಯಿಸಲಿದ್ದಾರೆ. ಶಿವಾಜಿ ಮಹಾರಾಜ್ ಪಾತ್ರದಲ್ಲಿ ಈಗಾಗಲೇ ಪೋಸ್ಟರ್‌ನಲ್ಲಿ ಕಾಣಿಸಿಕೊಂಡಿದ್ದಾರೆ. "ಕಾಂತಾರ" ಸ್ಟಾರ್ ರಿಷಬ್ ಶೆಟ್ಟಿ ಈ ಸಿನಿಮಾಗೆ ಸಹಿ ಹಾಕಿದ್ದಾರೆ. ಈ ಹಿಂದೆ ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್ ಸಿನಿಮಾ ಬರಲಿದೆ ಎಂಬ ಸೂಚನೆ ಇತ್ತು. ಆದರೆ ಯಾವಾಗ ಬರುತ್ತದೆ? ಯಾರು ಹೀರೋ ಈ ಯಾವ ಮಾಹಿತಿಯೂ ಇರಲಿಲ್ಲ.

17 ನೇ ಶತಮಾನದ ಭಾರತೀಯ ದೊರೆ ಶಿವಾಜಿ ಭೋಂಸ್ಲೆ ಅವರ ಜೀವನಚರಿತ್ರೆಯನ್ನು ಈ ಸಿನಿಮಾದಲ್ಲಿ ಕಟ್ಟಿಕೊಡಲಾಗುತ್ತದೆ ಎಂಬ ಮಾಹಿತಿ ಇದೆ. 17 ನೇ ಶತಮಾನದ ಭಾರತೀಯ ದೊರೆ ಶಿವಾಜಿ ಭೋಂಸ್ಲೆ ಅವರ ಜೀವನಚರಿತ್ರೆ ರಿಷಬ್‌ ಶೆಟ್ಟಿ ಈ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. "ಕಾಂತಾರ 2" (2025) ಮತ್ತು "ಜೈ ಹನುಮಾನ್" (2026) ಜೊತೆಗೆ "ದಿ ಪ್ರೈಡ್ ಆಫ್ ಭಾರತ್" ಅನ್ನು ಜನವರಿ 2027 ರಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ರಿಷಬ್ ಶೆಟ್ಟಿ ಅಭಿಮಾನಿಗಳಿಗೆ ಪ್ರತಿ ವರ್ಷವೂ ಒಂದೊಂದು ಹೊಸ ಸಿನಿಮಾ ನೋಡುವ ಅವಕಾಶ ಇದೆ. ಕಾಂತಾರ ತಂದು ಕೊಟ್ಟ ಜನಪ್ರಿಯತೆಯಿಂದ ಸಾಕಷ್ಟು ಅವಕಾಶಗಳು ಈಗ ರಿಷಬ್ ಅವರನ್ನು ಹುಡುಕಿ ಬರುತ್ತಿದೆ.

ನಿರ್ದೇಶಕ ಸಂದೀಪ್ ಸಿಂಗ್ ಟೊರೊಂಟೊ, ಬಾಕ್ಸಿಂಗ್ ಬಯೋಪಿಕ್ "ಮೇರಿ ಕೋಮ್" (2014) ಸೇರಿದಂತೆ ಹಲವಾರು ಮೆಚ್ಚುಗೆ ಪಡೆದ ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ. ಸಹ ನಿರ್ಮಾಪಕರಾಗಿ ಕೆಲಸ ಮಾಡಿದ್ಧಾರೆ. ಹಿಂದೂ ಧರ್ಮದಿಂದ ಬಂದ ಶಿವಾಜಿ (1630-1680), ಭಾರತದ ಬಹುಪಾಲು ಮುಸ್ಲಿಂ ದೊರೆಗಳ ಆಳ್ವಿಕೆಯಲ್ಲಿದ್ದಾಗ ಮರಾಠಾ ಸಾಮ್ರಾಜ್ಯವನ್ನು ಸ್ಥಾಪಿಸಿ ಹೇಗೆ ತನ್ನ ಸಾಮ್ರಾಜ್ಯವನ್ನು ಕಾಪಾಡಿಕೊಳ್ಳಲು ಹೋರಾಡಿದನು? ಎಂಬ ಬಗ್ಗೆ ಈ ಸಿನಿಮಾ ನಿರ್ಮಾಣವಾಗಲಿದೆ.

ಛತ್ರಪತಿ ಶಿವಾಜಿ ಮಹಾರಾಜನ ಪಾತ್ರವನ್ನು ರಿಷಬ್ ಶೆಟ್ಟಿ ಮಾಡಲಿದ್ದಾರೆ ಎಂದು ತಿಳಿದಾಗಿನಿಂದ ಅಭಿಮಾನಿಗಳು ಶಾಕ್ ಆಗಿದ್ದಾರೆ. ಕೆಲವರು ಶುಭಾಶಯ ತಿಳಿಸುತ್ತಿದ್ದಾರೆ. ಇನ್ನು ಕೆಲವರು ಇದನ್ನು ನಂಬಲಾಗುತ್ತಿಲ್ಲ ಎಂದು ಕಾಮೆಂಟ್ ಮಾಡಿದ್ಧಾರೆ. ಸಾಕಷ್ಟು ಜನ ಈ ಸಿನಿಮಾ ನೋಡಲು ನಾವು ಕಾತರದಿಂದಿದ್ದೇವೆ ಎಂದು ಹೇಳುತ್ತಿದ್ದಾರೆ. 

Whats_app_banner