Ramachari Serial: ಎಷ್ಟು ಮುದ್ದಾಗಿ ಕಾಣ್ತಿದ್ದಾಳೆ ನೋಡಿ ರುಕ್ಕು; ರಾಮಾಚಾರಿ ಮನೆಯವರಿಗೆ ಮಾತ್ರ ಹೆಚ್ಚಾಗಿದೆ ಆತಂಕ
ರಾಮಾಚಾರಿ ಹಾಗೂ ಚಾರು ರುಕ್ಕುವನ್ನು ಹೇಗಾದರೂ ಮಾಡಿಕೊಂಡು ಅಣ್ಣಾಜಿ ಮನೆಯಿಂದ ಕರೆದುಕೊಂಡು ಹೋಗಬೇಕು ಎಂದು ಹೊಸ ಉಪಾಯ ಮಾಡಿದ್ದಾರೆ. ಆದರೆ ಈಗ ಭಯಪಟ್ಟುಕೊಂಡಿದ್ದಾಳೆ.
ರಾಮಾಚಾರಿ ಹಾಗೂ ಚಾರು ಎಲ್ಲರೂ ಸೇರಿಕೊಂಡು ರುಕ್ಕುವನ್ನು ಮನೆಗೆ ಕರೆದುಕೊಂಡು ಹೀಗಲು ರೆಡಿಯಾಗಿದ್ದಾರೆ. ಆದರೆ ಅಣ್ಣಾಜಿಗೆ ಅನುಮಾನ ಆರಂಭವಾಗಿದೆ. “ಇವತ್ತೇ ಕೊನೆ ದಿನ ಎಲ್ಲೂ ಯಾಮಾರೋದಕ್ಕೆ ಆಸ್ಪದನೇ ಇಲ್ಲ” ಎಂದು ರಾಮಾಚಾರಿ ಹೇಳಿದ್ದಾನೆ. ಆದರೆ ಎಲ್ಲರ ಮನಸಿನಲ್ಲೂ ಭಯ ಇದೆ. ಚಾರುಗೆ ಅಣ್ಣಾಜಿ ಮನೆಯವರಿಗೆ ಅನುಮಾನ ಬಂದ ವಿಷಯ ಗೊತ್ತಾಗಿದೆ. ಇನ್ನು ರುಕ್ಕು ತುಂಬಾ ಚೆನ್ನಾಗಿ ರೆಡಿಯಾಗಿದ್ದಾಳೆ. ಅವಳು ರೆಡಿಯಾಗಿರುವುದನ್ನು ನೋಡಿಯೇ ಎಲ್ಲರಿಗೂ ಅನುಮಾನ ಬಂದರೂ ಬಂದಿರಬಹುದು.
ರಾಮಾಚಾರಿಯ ಇಡೀ ಕುಟುಂಬವೇ ಈಗ ರುಕ್ಕು ಪರ ನಿಂತಿದೆ ಆದರೂ ಕಟುಕನಾದ ಅಣ್ಣಾಜಿ ಮಾತನ್ನು ಯಾರೂ ಮೀರುವಂತಿಲ್ಲ. ಹೇಗಾದರೂ ಮಾಡಿ ಮನೆಯವರನ್ನು ನಂಬಿಸಿಕೊಂಡು ರುಕ್ಕುವನ್ನು ಕರೆದುಕೊಂಡು ಹೋಗಬೇಕಾಗಿದೆ. ಹೀಗಿರುವಾಗ ಮುಂದೇನಾಗುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ಇನ್ನು ಮುರಾರಿ ಕೂಡ ತುಂಬ ಭಯ ಪಟ್ಟುಕೊಂಡರೂ ಇಲ್ಲಿಂದ ಈಗಲಾದರೂ ಹೊರಗಡೆ ಹೋಗಬಹುದಲ್ಲ ಎಂಬ ಸಮಾಧಾನದಲ್ಲಿದ್ದಾನೆ.
ರಾಮಾಚಾರಿಯ ಅಜ್ಜಿ ಬೇರೆ ಅಣ್ಣಾಜಿ ಮನೆಗೆ ಬಂದಿದ್ದಾರೆ. ಅವರದ್ದೊಂದು ಆತಂಕ ಶುರುವಾಗಿದೆ. ರುಕ್ಕು ಮುಖದಲ್ಲಿ ನಗು ಮೂಡಿದೆ. ಆ ನಗುವೇ ಎಲ್ಲರ ಅನುಮಾನಕ್ಕೆ ಕಾರಣ ಆಗಿರಬಹುದು ಎಂದು ತೋರುತ್ತದೆ.
ಚಾರು ಹಿಂದಿನ ಕಥೆ
ರಾಮಾಚಾರಿ ಧಾರಾವಾಹಿಯಲ್ಲಿ ರುಕ್ಕು ಮನೆ ಕೆಲಸದವಳು ಯಾರದೋ ಫೋಟೋ ಮೇಲಿದ್ದ ಧೂಳನ್ನು ವರೆಸಿ ಸ್ವಚ್ಛ ಮಾಡುತ್ತಾ ಇರುತ್ತಾಳೆ. ಅದನ್ನು ಕಂಡು ಚಾರುಗೆ ಆಶ್ಚರ್ಯ ಆಗುತ್ತದೆ. ಈ ಮುಖವನ್ನು ನಾನು ಈ ಮೊದಲೇ ಎಲ್ಲೋ ನೋಡಿದ ಹಾಗಿದ್ಯಲ್ಲ ಎಂದು ಅಂದುಕೊಳ್ಳುತ್ತಾಳೆ. ಮನಸಿನಲ್ಲಿ ಏನೋ ಒಂದು ರೀತಿಯ ಆತಂಕ ಕೂಡ ಆಗುತ್ತದೆ. ಏನೋ ಇದೆ ಇದರ ಹಿಂದೆ ಎಂದು ಅವಳಿಗೆ ಅನಿಸಲು ಆರಂಭವಾಗುತ್ತದೆ. ಆಗ ಆ ಕೆಲಸದವಳನ್ನು ಪ್ರಶ್ನೆ ಮಾಡುತ್ತಾಳೆ. ಇವರಿಬ್ಬರು ಯಾರು ಎಂದು ಕೇಳುತ್ತಾಳೆ. ಆಗ ಅಲ್ಲಿರುವವರು ರುಕ್ಕು ಅಪ್ಪ, ಅಮ್ಮ ಆಗಿರುತ್ತಾರೆ.
ರಾಮಾಚಾರಿ ಧಾರಾವಾಹಿ
ರಾಮಾಚಾರಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಪಾತ್ರಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಏಕೈಕ ಧಾರಾವಾಹಿ ಇದಾಗಿದ್ದು ಜನಮನ್ನಣೆ ಗಳಿಸಿದೆ. ಇದರಲ್ಲಿ ಗೌರವಯುತ ಕುಟುಂಬಕ್ಕೆ ಒಬ್ಬ ಶ್ರೀಮಂತರ ಮನೆ ಮಗಳು ಚಾರು ಮದುವೆ ಆಗಿ ಬರುತ್ತಾಳೆ. ನಂತರದ ದಿನಗಳಲ್ಲಿ ಅವಳು ಯಾವ ರೀತಿ ತನ್ನ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಯಾವ ರೀತಿ ಮನೆತನದ ಗೌರವ ಕಾಪಾಡುತ್ತಾಳೆ ಎನ್ನುವುದೇ ಈ ಧಾರಾವಾಹಿಯ ಮೂಲ ಕಥೆಯಾಗಿದೆ.
ರಾಮಾಚಾರಿ ಧಾರಾವಾಹಿ ಪಾತ್ರವರ್ಗ
ಮೌನ ಗುಡ್ಡೆ ಮನೆ - ಚಾರು
ರಿತ್ವಿಕ್ ಕ್ರಪಾಕರ್ - ರಾಮಾಚಾರಿ
ರಿತ್ವಿಕ್ ಕ್ರಪಾಕರ್ - ಕೃಷ್ಣ (ಕಿಟ್ಟಿ)
ಚಿ ಗುರುದತ್ - ಜಯಶಂಕರ್
ಶಂಕರ್ ಅಶ್ವಥ್ - ನಾರಾಯಣಾಚಾರಿ
ಐಶ್ವರ್ಯ ವಿನಯ್ - ವೈಶಾಖ
ಅಂಜಲಿ ಸುಧಾಕರ್ - ಜಾನಕಿ