Ramachari Serial: ಅಳಿದು ಹೋದ ನೆನಪು ಮತ್ತೆ ಮರಳಿದೆ; ರುಕ್ಕು ಅಪ್ಪ, ಅಮ್ಮನ ಸಾವಿಗೆ ಚಾರು ಕಾರಣಾನಾ?
ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಬದುಕಿನ ಹಳೆ ಅಧ್ಯಾಯ ಈಗ ಮತ್ತೆ ಹೊರ ಬಂದಿದೆ. ಈಗ ಒಳ್ಳೆಯ ಬಾಳನ್ನು ಚಾರು ಬಾಳುತ್ತಿದ್ದರೂ ಅವಳು ಈ ಹಿಂದೆ ಮಾಡಿದ ಒಂದು ಘಟನೆ ಅವಳನ್ನು ಮತ್ತೆ ಮತ್ತೆ ಕಾಡುತ್ತಿದೆ.
ರಾಮಾಚಾರಿ ಧಾರಾವಾಹಿಯಲ್ಲಿ ರುಕ್ಕು ಮನೆ ಕೆಲಸದವಳು ಯಾರದೋ ಫೋಟೋ ಮೇಲಿದ್ದ ಧೂಳನ್ನು ವರೆಸಿ ಸ್ವಚ್ಛ ಮಾಡುತ್ತಾ ಇರುತ್ತಾಳೆ. ಅದನ್ನು ಕಂಡು ಚಾರುಗೆ ಆಶ್ಚರ್ಯ ಆಗುತ್ತದೆ. ಈ ಮುಖವನ್ನು ನಾನು ಈ ಮೊದಲೇ ಎಲ್ಲೋ ನೋಡಿದ ಹಾಗಿದ್ಯಲ್ಲ ಎಂದು ಅಂದುಕೊಳ್ಳುತ್ತಾಳೆ. ಮನಸಿನಲ್ಲಿ ಏನೋ ಒಂದು ರೀತಿಯ ಆತಂಕ ಕೂಡ ಆಗುತ್ತದೆ. ಏನೋ ಇದೆ ಇದರ ಹಿಂದೆ ಎಂದು ಅವಳಿಗೆ ಅನಿಸಲು ಆರಂಭವಾಗುತ್ತದೆ. ಆಗ ಆ ಕೆಲಸದವಳನ್ನು ಪ್ರಶ್ನೆ ಮಾಡುತ್ತಾಳೆ. ಇವರಿಬ್ಬರು ಯಾರು ಎಂದು ಕೇಳುತ್ತಾಳೆ.
ಆಗ ಅವಳು ಹೇಳುತ್ತಾಳೆ “ಇವರೇ ನಮ್ಮ ರುಕ್ಕವ್ವನ ಅಪ್ಪ, ಅಮ್ಮ ಇವರು ಈಗ ಬದುಕಿಲ್ಲ. ಇಬ್ಬರೂ ನೀರಿನ ಸಂಪಿನಲ್ಲಿ ಮುಳುಗಿ ಸತ್ತು ಹೋಗಿದ್ದಾರೆ. ಅವರಿಬ್ಬರು ಸತ್ತು ಹೋದಾಗಿನಿಂದ ನಮ್ಮ ರುಕ್ಕವ್ವ ಇನ್ನೂ ನಕ್ಕಿಲ್ಲ” ಎಂದು ಹೇಳುತ್ತಾಳೆ. ಆಗ ಚಾರುಗೆ ತಾನು ಹಿಂದೆ ಮಾಡಿದ ಒಂದು ತಪ್ಪು ನೆನಪಾದಂತಾಗುತ್ತದೆ. “ಇವರಿಬ್ಬರು ಮೊದಲು ಎಲ್ಲಿದ್ರು?” ಎಂದು ಚಾರು ಪ್ರಶ್ನೆ ಮಾಡುತ್ತಾಳೆ. ಆಗ ಚಾರುಗೆ ಅವಳು ಹೇಳಿದ್ದೇನೆಂದರೆ, ಇವರಿದ್ದ ಮನೆಗೆ ಯಾರೋ ನಾಲ್ಕು ಜನ ಪೇಟೆಯಿಂದ ಹುಡುಗಿರು ಬಂದಿದ್ರು ಅವರು ಬಂದಾಗ ಅಲ್ಲಿ ಏನಾಯ್ತು ಅಂತ ಗೊತ್ತಿಲ್ಲ. ಅಥವಾ ಅವರು ಅಲ್ಲಿಗೆ ಯಾಕೆ ಬಂದಿದ್ರು ಅನ್ನೋದೂ ಗೊತ್ತಿಲ್ಲ. ಅಪ್ಪ, ಅಮ್ಮ ಮಾತ್ರ ನೀರಿನಲ್ಲಿ ಮುಳುಗಿ ಸತ್ತಿದ್ದರು ಎಂದು ಹೇಳುತ್ತಾಳೆ.
ಮಾನ್ಯತಾ ಏನ್ಮಾಡ್ತಿದ್ದಾಳೆ?
ಆ ಮಾತನ್ನು ಹೇಳುವಾಗ ಚಾರುನೇ ಆ ಸಂಪನ್ನು ಮುಚ್ಚಿದ ನೆನಪಾಗುತ್ತದೆ. ತಾನೇ ಇವರನ್ನು ಕೊಂದಿರೋದು ಎನ್ನುವುದು ಚಾರುಗೆ ಅರ್ಥ ಆಗುತ್ತದೆ. ತುಂಬಾ ಬೇಸರ ಕೂಡ ಆಗುತ್ತದೆ. ಇನ್ನು ಜೈಲಿನಲ್ಲಿ ಮಾನ್ಯತಾ ಮತ್ತು ವೈಶಾಖ ತುಂಬಾ ಬೇಸರದಿಂದ ದಿನ ಕಳೆಯುತ್ತಾ ಇರುತ್ತಾರೆ. ಆದರೆ ಸದ್ಯದಲ್ಲೇ ಅವರು ಹೊಸ ಉಪಾಯ ಮಾಡುವಂತಿದೆ.
ಚಾರುಗೆ ಕಾಡುತ್ತಿದೆ ಪಾಪಪ್ರಜ್ಞೆ
ಚಾರು ತಪ್ಪು ಮಾಡಿದ್ದಾಳೋ ಅಥವಾ ಅವಳಿಗೆ ಗೊತ್ತಿಲ್ಲದೆ ತಪ್ಪಾಗಿದೆಯೋ ಗೊತ್ತಿಲ್ಲ. ಫೋಟೋದಲ್ಲಿರುವವರಸಾವಿಗೆ ನಾನೇ ಕಾರಣನಾದೆನೋ ಏನೋ ಎನ್ನುವ ಪಾಪಪ್ರಜ್ಞೆ ಅವಳಿಗೆ ಕಾಡುತ್ತಿದೆ.
ರಾಮಾಚಾರಿ ಧಾರಾವಾಹಿ
ರಾಮಾಚಾರಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಪಾತ್ರಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಏಕೈಕ ಧಾರಾವಾಹಿ ಇದಾಗಿದ್ದು ಜನಮನ್ನಣೆ ಗಳಿಸಿದೆ. ಇದರಲ್ಲಿ ಗೌರವಯುತ ಕುಟುಂಬಕ್ಕೆ ಒಬ್ಬ ಶ್ರೀಮಂತರ ಮನೆ ಮಗಳು ಚಾರು ಮದುವೆ ಆಗಿ ಬರುತ್ತಾಳೆ. ನಂತರದ ದಿನಗಳಲ್ಲಿ ಅವಳು ಯಾವ ರೀತಿ ತನ್ನ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಯಾವ ರೀತಿ ಮನೆತನದ ಗೌರವ ಕಾಪಾಡುತ್ತಾಳೆ ಎನ್ನುವುದೇ ಈ ಧಾರಾವಾಹಿಯ ಮೂಲ ಕಥೆಯಾಗಿದೆ.
ರಾಮಾಚಾರಿ ಧಾರಾವಾಹಿ ಪಾತ್ರವರ್ಗ
ಮೌನ ಗುಡ್ಡೆ ಮನೆ - ಚಾರು
ರಿತ್ವಿಕ್ ಕ್ರಪಾಕರ್ - ರಾಮಾಚಾರಿ
ರಿತ್ವಿಕ್ ಕ್ರಪಾಕರ್ - ಕೃಷ್ಣ (ಕಿಟ್ಟಿ)
ಚಿ ಗುರುದತ್ - ಜಯಶಂಕರ್
ಶಂಕರ್ ಅಶ್ವಥ್ - ನಾರಾಯಣಾಚಾರಿ
ಐಶ್ವರ್ಯ ವಿನಯ್ - ವೈಶಾಖ
ಅಂಜಲಿ ಸುಧಾಕರ್ - ಜಾನಕಿ