ಬಿಡುಗಡೆಗೂ ಮುನ್ನ ಹೊರಬಿತ್ತು ರಕ್ಷಿತ್ ಶೆಟ್ಟಿ ಸಿನಿಮಾ ವಿಮರ್ಶೆ; ಬ್ಲಾಕ್ಬಸ್ಟರ್ ಸಪ್ತಸಾಗರದಾಚೆ ಎಲ್ಲೋ!
ರಕ್ಷಿತ್ ಶೆಟ್ಟಿ ಮತ್ತು ರುಕ್ಮಿಣಿ ವಸಂತ್ ಜೋಡಿಯ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಶುಕ್ರವಾರ (ಸೆ.1) ರಿಲೀಸ್ ಆಗಲಿದೆ. ಇದೀಗ ಈ ಸಿನಿಮಾದ ವಿಮರ್ಶೆ ಹೊರಬಿದ್ದಿದೆ. ಸಿನಿಮಾ ನೋಡಿದವರು ಬ್ಲಾಕ್ ಬಸ್ಟರ್ ಹಿಟ್ ಎಂಬ ಪಟ್ಟ ನೀಡುತ್ತಿದ್ದಾರೆ.
Sapta Sagaradache Ello: ರಕ್ಷಿತ್ ಶೆಟ್ಟಿ ಮತ್ತು ನಿರ್ದೇಶಕ ಹೇಮಂತ್ ಎಂನ ರಾವ್ ಕಾಂಬಿನೇಷನ್ನ ಎರಡನೇ ಸಿನಿಮಾ ಸಪ್ತ ಸಾಗರದಾಚೆ ಎಲ್ಲೋ ನಾಳೆ (ಸೆ.1) ಬಿಡುಗಡೆ ಆಗಲಿದೆ. ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪೇಡ್ ಪ್ರೀಮಿಯರ್ ಪ್ರದರ್ಶನಕ್ಕೆ ಸಮಯ ನಿಗದಿಯಾಗಿದೆ. ವಿಶೇಷ ಏನೆಂದರೆ, ಇದೀಗ ಈ ಸಿನಿಮಾದ ವಿಮರ್ಶೆಯೂ ಹೊರಬಿದ್ದಿದೆ. ಸಿನಿಮಾ ನೋಡಿದ ಮಂದಿ ಬ್ಲಾಕ್ ಬಸ್ಟರ್ ಎಂಬ ಪಟ್ಟ ನೀಡುತ್ತಿದ್ದಾರೆ.
ಬುಧವಾರ ರಾತ್ರಿಯೇ ಸಿನಿಮಾ ವಲಯದ ಆಪ್ತರು ಮತ್ತು ಪತ್ರಕರ್ತರಿಗಾಗಿಯೇ ವಿಶೇಷ ಪ್ರದರ್ಶನವನ್ನು ಸಪ್ತ ಸಾಗರದಾಚೆ ಎಲ್ಲೋ ಚಿತ್ರತಂಡ ಆಯೋಜಿಸಲಾಗಿತ್ತು. ಸಿನಿಮಾ ನೋಡಿದ ಬಹುತೇಕರು ಒಂದೊಳ್ಳೆ ಸಿನಿಮಾ ವೀಕ್ಷಿಸಿದ ಭಾವದಿಂದಲೇ ಆಚೆ ಬಂದಿದ್ದಾರೆ. ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಸೋಷಿಯಲ್ ಮೀಡಿಯಾ ಪುಟಕ್ಕಿಳಿಸಿದ್ದಾರೆ.
"ಅಪ್ಪಟ ಪ್ರೇಮಕಥೆಯೊಂದನ್ನು ಚೆಂದವಾಗಿಯೇ ನಿರ್ದೇಶಕರು ಪೋಣಿಸಿದ್ದಾರೆ. ಪ್ರತಿ ಫ್ರೇಮ್ನಲ್ಲಿ ರಕ್ಷಿತ್ ಶೆಟ್ಟಿ ಅಚ್ಚರಿಗಳನ್ನು ಸೃಷ್ಟಿಸುತ್ತಾರೆ. ಹೇಮಂತ್ ರಾವ್ ಅವರ ಬರವಣಿಗೆ ತುಂಬ ಗಟ್ಟಿಯಾಗಿದೆ. ಎಲ್ಲವೂ ಅಚ್ಚುಕಟ್ಟಾಗಿ ಮೂಡಿ ಬಂದಿದೆ. ರುಕ್ಮಿಣಿ ವಸಂತ್ ಹುಡುಗರ ಪಾಲಿನ ಮತ್ತೊಬ್ಬ ಕ್ರಷ್ ಆಗಲಿದ್ದಾರೆ. ಚಿತ್ರದಲ್ಲಿನ ಕತ್ತೆ ಅನ್ನೋ ಡೈಲಾಗ್ ಎಲ್ಲರ ಗಮನ ಸೆಳೆಯಲಿದೆ. ಈ ಜೋಡಿ ನಿಮ್ಮನ್ನು ಅಳುವಂತೆ ಮಾಡುತ್ತದೆ. ಎರಡನೇ ಭಾಗದ ಒಂದಷ್ಟು ಸಣ್ಣ ತುಣುಕುಗಳು ನಿಮ್ಮನ್ನು ಕೌತುಕ ಘಟ್ಟಕ್ಕೆ ಕರೆದೊಯ್ಯಲಿವೆ"