Director Guruprasad: ಹೇಗಿತ್ತು ನೋಡಿ ಡೈರೆಕ್ಟರ್ ಗುರುಪ್ರಸಾದ್ ಜೀವನ; ಇಷ್ಟೆಲ್ಲ ಇದ್ದೂ ಆತ್ಮಹತ್ಯೆ ಮಾಡಿಕೊಂಡಿದ್ಯಾಕೆ?
ಕನ್ನಡ ಸುದ್ದಿ  /  ಮನರಂಜನೆ  /  Director Guruprasad: ಹೇಗಿತ್ತು ನೋಡಿ ಡೈರೆಕ್ಟರ್ ಗುರುಪ್ರಸಾದ್ ಜೀವನ; ಇಷ್ಟೆಲ್ಲ ಇದ್ದೂ ಆತ್ಮಹತ್ಯೆ ಮಾಡಿಕೊಂಡಿದ್ಯಾಕೆ?

Director Guruprasad: ಹೇಗಿತ್ತು ನೋಡಿ ಡೈರೆಕ್ಟರ್ ಗುರುಪ್ರಸಾದ್ ಜೀವನ; ಇಷ್ಟೆಲ್ಲ ಇದ್ದೂ ಆತ್ಮಹತ್ಯೆ ಮಾಡಿಕೊಂಡಿದ್ಯಾಕೆ?

ಸ್ಯಾಂಡಲ್​ವುಡ್ ಖ್ಯಾತ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ಮೂಡಿದೆ. ನೇಣು ಬಿಗಿದ ಸ್ಥಿತಿಯಲ್ಲಿ ಕೊಳೆತ ಶರೀರ ಸಿಕ್ಕಿದೆ. ಅವರು ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ನಿಖರ ಕಾರಣಗಳು ತಿಳಿದುಬಂದಿಲ್ಲ.

ಹೇಗಿತ್ತು ನೋಡಿ ಡೈರೆಕ್ಟರ್ ಗುರುಪ್ರಸಾದ್ ಜೀವನ
ಹೇಗಿತ್ತು ನೋಡಿ ಡೈರೆಕ್ಟರ್ ಗುರುಪ್ರಸಾದ್ ಜೀವನ

ಗುರುಪ್ರಸಾದ್ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಖ್ಯಾತ ನಿರ್ದೇಶಕರು. ಮಠ ಸಿನಿಮಾ ಇವರಿಗೆ ತುಂಬಾ ಹೆಸರು ತಂದುಕೊಟ್ಟಿತ್ತು. ನಿರ್ಮಾಪಕ,ನಟ ಮತ್ತು ಸಾಹಿತಿಯೂ ಆಗಿ ಇವರು ತಮ್ಮನ್ನು ತಾವು ಗುರುತಿಸಿಕೊಂಡಿದ್ದರು. 1972 ನವೆಂಬರ್ 2ರಂದು ಕನಕಪುರದಲ್ಲಿ ಇವರು ಜನಿಸಿದ್ದರು. ಗುರುಪ್ರಸಾದ್ ರಾಮಚಂದ್ರ ಶರ್ಮಾ ಇವರ ಪೂರ್ಣ ಹೆಸರು. ಕನ್ನಡ ಚಿತ್ರರಂಗದಲ್ಲಿ ಸಿನಿಪಯಣ ಆರಂಭಿಸಿ ನವಿರಾದ ಹಾಸ್ಯದ ಮೂಲಕ ಸಮಾಜದ ಕಠು ಸತ್ಯಗಳನ್ನು ತಿಳಿಸುವಲ್ಲಿ ಇವರು ಯಶಸ್ವಿಯಾಗಿದ್ದರು. ನವರಸ ನಟ ಜಗ್ಗೇಜ್ ಅಭಿನಯದ ಮಠ ಚಿತ್ರವನ್ನು ಇವರು ನಿರ್ದೇಶಿಸಿದ್ದರು.

2009 ರಲ್ಲಿ ಇದೇ ಜೋಡಿ `ಎದ್ದೇಳು ಮಂಜುನಾಥ' ಚಿತ್ರದ ಮೂಲಕ ಮತ್ತೊಂದು ಹಿಟ್ ಸಿನಿಮಾ ನೀಡಿ ಹೆಸರಾಗಿತ್ತು. ಈ ಚಿತ್ರಕ್ಕೆ ಫಿಲ್ಮಫೇರ್ ಪ್ರಶಸ್ತಿ ಕೂಡ ದೊರಕಿತ್ತು. ಅವರು ಮಾಡಿದ ಸಿನಿಮಾಗಳನ್ನು ಮತ್ತೆ ಮತ್ತೆ ನೋಡಿದರೂ ಬೇಸರವಾಗದು ಅಂತಹ ಸಿನಿಮಾಗಳನ್ನು ಮಾಡಿ ಹೆಸರುವಾಸಿಯಾಗಿದ್ದರು. ಮಠ ಸಿನಿಮಾವನ್ನು ಹತ್ತಾರು ಬಾರಿ ನೋಡಿದವರು ಇದ್ದಾರೆ. ನಂತರದಲ್ಲಿ ರಂಗನಾಯಕ ಸಿನಿಮಾ ಮಾಡಿ ಮತ್ತೆ ಎಲ್ಲರಿಗೂ ಮನರಂಜನೆ ನೀಡಿದವರು ಗುರುಪ್ರಸಾದ್‌

ಬರವಣಿಗೆಯಲ್ಲಿ ಬಹಳ ಹಿಡಿತ ಹೊಂದಿರುವ ಇವರು ಹಿಟ್‌ ಸಿನಿಮಾಗಳ ಮೂಲಕವೇ ತಮ್ಮ ಹೆಸರುವಾಸಿಯಾಗಿದ್ದರು. ಮಠ ಸಿನಿಮಾದಲ್ಲಿ ಇವರು ನಟನಾಗಿಯೂ ಕಾಣಿಸಿಕೊಂಡಿದ್ದಾರೆ. ದರೋಡೆ ಕೋರ, ಪೊಲೀಸ್‌, ಪೂಜಾರಿ, ವಕೀಲ ಹೀಗೆ ಹಲವಾರು ಪಾತ್ರಗಳಲ್ಲಿ ಇವರು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು.

2006 ಮಾತಾ

2009 ಎದ್ದೇಳು ಮಂಜುನಾಥ ಪೊಲೀಸ್ ಅಧಿಕಾರಿ

2010 ಮೈಲಾರಿ

2011 ಕಳ್ ಮಂಜ

2011 ಹುಡುಗರು

2013 ಶಿಳ್ಳೆ ಹೊಡೆಯಿರಿ

2014 ಕರೋಡ್ಪತಿ

2016 ಜಿಗರ್ತಾಂಡ

2018 ಅನಂತು Vs ನುಸ್ರತ್

2020 ಕುಷ್ಕಾ

2021 ಬಡವ ರಾಸ್ಕಲ್

2022 ದೇಹ ದೇವರು

ಈ ಎಲ್ಲ ಸಿನಿಮಾಗಳಲ್ಲಿ ಇವರು ಅಭಿನಯಿಸಿದ್ದರು.

ಹುಡುಗರು, ಶಿಳ್ಳೆ ಹೊಡೆಯಿರಿ ಮತ್ತು ಸೂಪರ್ ರಂಗ ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದರು.

ಪುಟಾಣಿ ಪಂಟ್ರು ಸೀಸನ್ 2, ಥಕ ದಿಮಿ ಥಾ ಡಾನ್ಸ್‌ ಶೋ, ಬರ್ಜರಿ ಕಾಮಿಡಿ ಈ ಎಲ್ಲ ರಿಯಾಲಿಟಿ ಶೋಗಳಲ್ಲಿ ಜಡ್ಜ್‌ ಆಗಿದ್ದರು. ಬಿಗ್‌ ಬಾಸ್‌ 2ನಲ್ಲಿ ಇವರು ವೈಲ್ಡ್‌ಕಾರ್ಡ್‌ ಮೂಲಕ ಎಂಟ್ರಿಕೊಟ್ಟ ಸ್ಪರ್ಧಿಯೂ ಆಗಿದ್ದರು.

ಸ್ಯಾಂಡಲ್​ವುಡ್ ಖ್ಯಾತ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾದನಾಯಕನ ಹಳ್ಳಿ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮಠ ಸಿನಿಮಾ ನಿರ್ದೇಶಕ ಗುರುಪ್ರಸಾದ್ (52) ಮೃತದೇಹ ಪತ್ತೆಯಾಗಿದೆ. ಸಾಲಗಾರರ ಕಿರುಕುಳದಿಂದ ಅವರು ಬೇಸತ್ತಿದ್ದರು ಎಂದು ಹೇಳಲಾಗುತ್ತಿದೆ. ಮಠ, ಎದ್ದೇಳು ಮಂಜುನಾಥ ಸೇರಿ ಕೆಲವು ಸಿನಿಮಾಗಳನ್ನು ಅವರು ನಿರ್ದೇಶಿಸಿದ್ದರು. ಘಟನಾ ಸ್ಥಳಕ್ಕೆ ಮಾದನಾಯಕನ ಹಳ್ಳಿ ಪೊಲೀಸರು ಭೇಟಿ ನೀಡಿದ್ದು ಸ್ಥಳ ಪರಿಶೀಲನೆ ಮಾಡುತ್ತಿದ್ದಾರೆ. ಗುರುಪ್ರಸಾದ್‌ ಅವರು ಇತ್ತೀಚೆಗೆ ಎರಡನೇ ಮದುವೆ ಆಗಿದ್ದರು. ಅವರು ನಿನ್ನೆಯಷ್ಟೆ (ನವೆಂಬರ್ 2) ಜನ್ಮ ದಿನವಿತ್ತು. ಆತ್ಮಹತ್ಯೆಯ ಶಂಕೆಗೆ ಇನ್ನು ಮುಂದೆ ಉತ್ತರ ಸಿಗಬೇಕಿದೆ.

ಗಮನಿಸಿ: ಖಿನ್ನತೆ, ಆತ್ಮಹತ್ಯೆಯ ಆಲೋಚನೆಗಳು ಬಾಧಿಸುತ್ತಿದ್ದರೆ ನಿಮ್ಮ ಗೆಳತಿ / ಗೆಳೆಯರೊಂದಿಗೆ, ಹೆತ್ತವರೊಂದಿಗೆ, ಸಂಬಂಧಿಕರು, ಆಪ್ತರೊಂದಿಗೆ ಮುಕ್ತವಾಗಿ ಮಾತನಾಡಿ. ಪೊಲೀಸರ, ಆಪ್ತಸಮಾಲೋಚಕರ, ವೈದ್ಯರ ನೆರವು ಪಡೆಯಿರಿ. ಕರ್ನಾಟಕದಲ್ಲಿ ಆರೋಗ್ಯ ಸಹಾಯವಾಣಿ 104, ವೃದ್ಧರ ಸಹಾಯವಾಣಿ 1090, ಮಕ್ಕಳ ಸಹಾಯವಾಣಿ 1098 ಮತ್ತು ಸ-ಮುದ್ರ ಸಹಾಯವಾಣಿ 98803 96331 ಮೂಲಕ ಟೆಲಿ ಕೌನ್ಸೆಲಿಂಗ್ ನೆರವು ಪಡೆದುಕೊಳ್ಳಿ. ಕೊನೇ ನಿರ್ಧಾರಕ್ಕೆ ಮೊದಲು ನಿಮ್ಮವರ ಬಗ್ಗೆ ಒಂದು ಕ್ಷಣ ಯೋಚಿಸಿ.

Whats_app_banner