Tiger Prabhakar: ಟೈಗರ್ ಪ್ರಭಾಕರ್ ಮಹಾನ್ ರಸಿಕ, ಹೆಣ್ಣುಬಾಕ ಆಗಿದ್ರಾ? ಸತ್ಯ ಮಿಥ್ಯಗಳ ಸುತ್ತ ಇಣುಕಿದಾಗ ಕಂಡಿದ್ದಿಷ್ಟು
ಟೈಗರ್ ಪ್ರಭಾಕರ್ ಬದುಕಿದ್ದಾಗ ಸಾಕಷ್ಟು ವಿಚಾರಗಳಿಂದ ಸುದ್ದಿಯಾಗಿದ್ದರು. ವೃತ್ತಿ ಜೀವನದ ಜತೆಗೆ ವೈಯಕ್ತಿಕ ಜೀವನದಲ್ಲಿಯೂ ಸಾಕಷ್ಟು ಏರಿಳಿತ ಕಂಡಿದ್ದರು. ಇದೆಲ್ಲದರ ನಡುವೆ ಇದೇ ನಟನ ಬಗ್ಗೆ ತಳಬುಡ ಇಲ್ಲದ ಸಾಕಷ್ಟು ಸುದ್ದಿಗಳು ಆಗಿನ ಕಾಲದಲ್ಲಿ ಸದ್ದು ಮಾಡಿದ್ದವು. ಅಷ್ಟಕ್ಕೂ ಆ ಗಾಸಿಪ್ಗಳು ನಿಜವಾ? ಸುಳ್ಳಾ? ಇಲ್ಲಿದೆ ಉತ್ತರ.
Tiger Prabhakar: ಟೈಗರ್ ಪ್ರಭಾಕರ್ ಕನ್ನಡ ಚಿತ್ರರಂಗ ಕಂಡ ಮಹಾನ್ ಕಲಾವಿದ. ಚಿತ್ರೋದ್ಯಮದಲ್ಲಿ ಕೀರ್ತಿಯ ಶಿಖರ ತಲುಪಿ, ಅದಾದ ಬಳಿಕ ವದಂತಿಗಳಿಂದಲೂ ಅಷ್ಟೇ ದೊಡ್ಡ ಮಟ್ಟದ ಸದ್ದು ಮಾಡಿದ್ದರು ಈ ನಟ. ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏಳುಬೀಳು ಕಂಡಿದ್ದ ಪ್ರಭಾಕರ್, ಕುಡಿತದ ಚಟಕ್ಕೂ ದಾಸರಾಗಿ ಬದುಕನ್ನೂ ಹಾಳು ಮಾಡಿಕೊಂಡಿದ್ದರು. ಇದೆಲ್ಲದರ ನಡುವೆ ಇದೇ ಪ್ರಭಾಕರ್ ಬಗ್ಗೆ ಆವತ್ತಿನ ದಿನಗಳಲ್ಲಿ ಒಂದಷ್ಟು ಕಟು ಮಾತುಗಳು ಕೇಳಿ ಬಂದಿದ್ದವು. ಪ್ರಭಾಕರ್ ಓರ್ವ ಮಹಾನ್ ಹೆಣ್ಣುಬಾಕ ಎಂದೂ ಆಡಿಕೊಂಡಿದ್ದರು. ಆದರೆ, ಸತ್ಯ ಮಿಥ್ಯಗಳನ್ನು ಬಗೆದು ನೋಡಿದಾಗ ಅಲ್ಲಿ ಕಂಡಿದ್ದೇ ಬೇರೆ!
ಟೈಗರ್ ಪ್ರಭಾಕರ್ ಬದುಕಿದ್ದಾಗ ಸಾಕಷ್ಟು ವಿಚಾರಗಳಿಂದ ಸುದ್ದಿಯಾಗಿದ್ದರು. ವೃತ್ತಿ ಜೀವನದ ಜತೆಗೆ ವೈಯಕ್ತಿಕ ಜೀವನದಲ್ಲಿಯೂ ಸಾಕಷ್ಟು ಏರಿಳಿತ ಕಂಡಿದ್ದರು. ಇದೆಲ್ಲದರ ನಡುವೆ ಇದೇ ನಟನ ಬಗ್ಗೆ ತಳಬುಡ ಇಲ್ಲದ ಸಾಕಷ್ಟು ಸುದ್ದಿಗಳು ಆಗಿನ ಕಾಲದಲ್ಲಿ ಸದ್ದು ಮಾಡಿದ್ದವು. ಹಿರಿಯ ಸಿನಿಮಾ ಪತ್ರಕರ್ತ ಗಣೇಶ್ ಕಾಸರಗೋಡು ಅವರು ಬರೆದ ಲಾಸ್ಟ್ ಡೇಸ್ ಆಫ್ ಲೆಜೆಂಡ್ಸ್ ಪುಸ್ತಕದಲ್ಲಿ ಅಪ್ಪನ ಬಗ್ಗೆ ಮಗ ವಿನೋದ್ ಪ್ರಭಾಕರ್ ಸುದೀರ್ಘವಾಗಿ ಮಾತನಾಡಿದ್ದಾರೆ. ಯಾವುದು ಸತ್ಯ, ಯಾವುದು ಸುಳ್ಳು, ವದಂತಿಗಳ ಬಗ್ಗೆ ಹೇಳಿಕೊಂಡಿದ್ದಾರೆ. ಟೈಗರ್ ಪ್ರಭಾಕರ್ ಅವರ ಕೊನೆಯ ದಿನಗಳಲ್ಲಿ ಹರಿದಾಡಿದ ಕೆಲ ಗಾಸಿಪ್ಗಳಲ್ಲಿ ನಿಜಾಂಶ ಯಾವುದು ಎಂಬುದನ್ನು ಹೇಳಿದ್ದಾರೆ.
ವದಂತಿ: ಟೈಗರ್ ಪ್ರಭಾಕರ್ ತಮ್ಮ ಕೊನೇ ದಿನಗಳಲ್ಲಿ ಕೊಳೆತ ಕಾಲಿಗೆ ದನದ ಮಾಂಸವನ್ನು ಕಟ್ಟಿಕೊಳ್ಳುತ್ತಿದ್ದರು.
ನಿಜಾಂಶ- ಈ ಗಾಸಿಪ್ಗೆ ಪ್ರತಿಕ್ರಿಯೆ ನೀಡಿದ್ದ ವಿನೋದ ಪ್ರಭಾಕರ್, ಅಂಥ ಯಾವುದೇ ರೀತಿಯ ಚಿಕಿತ್ಸೆಯನ್ನು ಅಪ್ಪ ಯಾವತ್ತೂ ಪಡೆದುಕೊಂಡಿಲ್ಲ. ಕಾಲಿಗೆ ನೋವಾಗಿದ್ದು ನಿಜ. ಆದರೆ, ಅದಕ್ಕೆ ಬೇಕಿದ್ದ ಚಿಕಿತ್ಸೆಯನ್ನೇ ಅವರು ಪಡೆದುಕೊಂಡಿದ್ದಾರೆ ವಿನಃ, ದನದ ಮಾಂಸ ಸುತ್ತುಕೊಳ್ಳುತ್ತಿದ್ದರು ಎಂಬುದು ಶುದ್ಧ ಸುಳ್ಳು. ಅದು ಸಂಬಂಧವಿಲ್ಲದ ವದಂತಿ. ಇದರ ಬಗ್ಗೆ ನನಗೂ ಬೇಸರವಿದೆ ಎಂದಿದ್ದಾರೆ.
ವದಂತಿ: ಕೊನೇ ದಿನಗಳಲ್ಲಿ ಪ್ರಭಾಕರ್ ಕುಡಿತದ ಚಟಕ್ಕೆ ದಾಸರಾಗಿದ್ದರು.
ನಿಜಾಂಶ: ಟೈಗರ್ ಪ್ರಭಾಕರ್ ತಮ್ಮ ಕೊನೇ ದಿನಗಳಲ್ಲಿ ಸಿನಿಮಾರಂಗದಲ್ಲಿ ಸಾಕಷ್ಟು ನೋವನ್ನೇ ಅನುಭವಿಸಿದ್ದರು. ವೈಯಕ್ತಿಕ ಬದುಕಿನಲ್ಲಿಯೂ ತುಂಬ ನೋವು ಅನುಭವಿಸಿದ್ದರು. ಜೀವನದಲ್ಲಿ ಒಂದಷ್ಟು ದುರಂತಗಳು ಸಂಭವಿಸಿದ್ದವು. ಇದೆಲ್ಲದರಿಂದ ಬೇಸತ್ತು ಕುಡಿತದ ಚಟಕ್ಕೆ ದಾಸರಾಗಿದ್ದರು. ಲಿಮಿಟ್ಗಿಂತ ಜಾಸ್ತಿನೇ ಕುಡಿಯುತ್ತಿದ್ದರು. ಹಾಗಾಗಿ ಕುಡಿತದ ವಿಚಾರ ನಿಜ ಎಂದು ವಿನೋದ್ ಹೇಳಿದ್ದಾರೆ.
ವದಂತಿ: ಟೈಗರ್ ಪ್ರಭಾಕರ್ ಮಹಾನ್ ರಸಿಕ, ಹೆಣ್ಣುಬಾಕ ಆಗಿದ್ರಾ?
ನಿಜಾಂಶ: ಟೈಗರ್ ಪ್ರಭಾಕರ್ ಹೆಣ್ಣು ಮಕ್ಕಳಿಗೆ ತುಂಬ ಗೌರವ ಕೊಡ್ತಿದ್ರು. ಒಂದು ಕಾಲದಲ್ಲಿ ಡಾಲಿ ಅನ್ನೋ ನಟಿ ಟೈಗರ್ ಪ್ರಭಾಕರ್ ಮನೆಯಲ್ಲಿಯೇ ಸೆಟಲ್ ಆಗಿದ್ದರಂತೆ. ನಿತ್ಯ ಅಲ್ಲಿಯೇ ಬಂದು ಕೂರುತ್ತಿದ್ದಂತೆ. ಅವಳನ್ನು ಹೊರಗೆ ಕಳಿಸು ಎಂದು ಎಷ್ಟೋ ಸಲ ವಿನೋದ್ಗೂ ಹೇಳಿದ್ದರಂತೆ ಪ್ರಭಾಕರ್. ಇದೇ ವಿಚಾರವನ್ನೇ ಅಂದಿನ ಕೆಲ ಮಾಧ್ಯಮಗಳು ಬೇರೆ ರೀತಿಯಲ್ಲಿ ಬಿಂಬಿಸಿದ್ದವಂತೆ.
ವದಂತಿ: ಹಣಕಾಸಿನ ಸಮಸ್ಯೆ ಜತೆಗೆ ವೈಯಕ್ತಿಕವಾಗಿ ಬಳಲಿದ್ದರು
ನಿಜಾಂಶ: ಟೈಗರ್ ಪ್ರಭಾಕರ್ ಕುಡಿತದ ಚಟಕ್ಕೆ ದಾಸರಾಗಿದ್ದರು ನಿಜ. ಜತೆಗೆ ಅವರು ನಟಿಸಿ, ನಿರ್ಮಿಸಿದ ಸಿನಿಮಾಗಳು ಸೋತಿರಬಹುದು. ಆದರೆ, ಯಾವತ್ತೂ ಅವರಿಗೆ ಹಣಕಾಸಿನ ಸಮಸ್ಯೆ ಎದುರಾಗಿಲ್ಲ. ಸಿನಿಮಾದಿಂದ ಬಂದ ಹಣದಿಂದ ಚೈನ್ನೈನಲ್ಲಿ ಬೆಂಗಳೂರಿನಲ್ಲಿ ಸೈಟ್ಗಳನ್ನು ಖರೀದಿಸಿದ್ದರು ಪ್ರಭಾಕರ್.