ಕನ್ನಡ ಸುದ್ದಿ  /  ಮನರಂಜನೆ  /  Chilli Chicken Movie Review: ಚೈನೀಸ್‌ ಹೋಟೆಲಿಗರ ಚಿಲ್ಲಿ ಚಿಕನ್‌ ಸಿನಿಮಾ ಹೇಗಿದೆ? ಬೆಂಗಳೂರಿನಲ್ಲಿ ನೆಲೆಸಿದ ಈಶಾನ್ಯ ವಲಸಿಗರ ಕಥೆ ವ್ಯಥೆ

Chilli Chicken movie review: ಚೈನೀಸ್‌ ಹೋಟೆಲಿಗರ ಚಿಲ್ಲಿ ಚಿಕನ್‌ ಸಿನಿಮಾ ಹೇಗಿದೆ? ಬೆಂಗಳೂರಿನಲ್ಲಿ ನೆಲೆಸಿದ ಈಶಾನ್ಯ ವಲಸಿಗರ ಕಥೆ ವ್ಯಥೆ

Chilli Chicken movie review: ಪ್ರತೀಕ್‌ ಪ್ರಜೋಶ್‌ ಚೊಚ್ಚಲ ನಿರ್ದೇಶನದ ಕನ್ನಡ ಸಿನಿಮಾ ಬಿಡುಗಡೆಯಾಗಿದೆ. ಕೇರಳದ ನಿರ್ದೇಶಕರು ಮತ್ತು ಮಣಿಪುರ, ಮೇಘಾಲಯ, ಚೆನ್ನೈನ ಕಲಾವಿದರು ನಟಿಸಿರುವ ಸಿನಿಮಾವಿದು. ಹೇಗಿದೆ ಚಿಲ್ಲಿ ಚಿಕನ್‌? ಖಾರನಾ? ಉಪ್ಪು ಕಡಿಮೆ ಇದೆಯೇ? ಇಲ್ಲಿದೆ ಚಿಲ್ಲಿ ಚಿಕನ್‌ ವಿಮರ್ಶೆ (ಚಿತ್ರ ವಿಮರ್ಶೆ: ಪ್ರತಿಭಾ ಜಾಯ್‌, ಒಟಿಟಿ ಪ್ಲೇ).

Chilli Chicken movie review: ಚೈನೀಸ್‌ ಹೋಟೆಲಿಗರ ಚಿಲ್ಲಿ ಚಿಕನ್‌ ಸಿನಿಮಾ ಹೇಗಿದೆ?
Chilli Chicken movie review: ಚೈನೀಸ್‌ ಹೋಟೆಲಿಗರ ಚಿಲ್ಲಿ ಚಿಕನ್‌ ಸಿನಿಮಾ ಹೇಗಿದೆ?

Chilli Chicken movie story: ಈ ವಾರ ಕನ್ನಡದಲ್ಲಿ ಪ್ರಮುಖ ಚಿತ್ರಗಳು ಬಿಡುಗಡೆಯಾಗಿಲ್ಲ. ಆದರೆ, ಬಿಡುಗಡೆಯಾದ ಮೂರು ಚಿತ್ರಗಳಲ್ಲಿ ಚಿಲ್ಲಿ ಚಿಕನ್‌ ಎಂಬ ಹೊಸಬರ ಪ್ರಯತ್ನ ಗಮನ ಸೆಳೆಯುವಂತೆ ಇದೆ. ವಿಶೇಷವೆಂದರೆ, ಈ ಚಿತ್ರದಲ್ಲಿ ಕನ್ನಡದ ಪ್ರಮುಖ ನಟರು ನಟಿಸಿಲ್ಲ. ಮಣಿಪುರ, ಮೇಘಾಲಯ, ಚೆನ್ನೈ ಮೂಲದ ಮತ್ತು ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ನೆಲೆಸಿರುವ ವಲಸಿಗರು ನಟಿಸಿದ್ದಾರೆ. ಚಿತ್ರದಲ್ಲಿ ವಲಸಿಗರ ಕಥೆಯೂ ಇದೆ, ವ್ಯಥೆಯೂ ಇದೆ.

ಆದರ್ಶ್‌ (ಶೃಂಗಾ ಬಿವಿ) ಸಣ್ಣ ಚೈನೀಸ್‌ ಫುಡ್‌ ಸ್ಟಾಲ್‌ ಇಟ್ಟುಕೊಂಡಿದ್ದಾನೆ. ಇದೇ ಫುಡ್‌ ಸ್ಟಾಲ್‌ ಅನ್ನು ದೊಡ್ಡಮಟ್ಟದಲ್ಲಿ ವಿಸ್ತರಿಸುವ ಕನಸಲ್ಲಿದ್ದಾನೆ. ಅಂದರೆ, ದೊಡ್ಡ ಹೋಟೆಲ್‌ ನಿರ್ಮಿಸುವ ಕನಸು ಈತನದ್ದು. ಈತನ ಜತೆ ಖಬಾ (ಬಿಜೋಮ್‌ ತಂಗಜಮ್‌), ಜಿಂಪಾ (ಜಿಂಪಾ ಸಂಗ್ಪೊ ಭಾಟಿಯಾ), ಅಜೊಯ್‌ (ವಿಕ್ಟರ್‌ ಥೊಡಮ್‌) ಮತ್ತು ಜಾಸೊನ್‌ (ತೊಮತಿನ್‌ ತಾಖೊಮ್‌) ಎಂಬ ನಾಲ್ವರು ಕೆಲಸಗಾರರು ಇದ್ದಾರೆ. ಇವರ ಬಿಸ್ನೆಸ್‌ ಉತ್ತಮವಾಗಿ ನಡೆಯುತ್ತಿರುವುದಿಲ್ಲ. ಆದರೆ, ರಾತ್ರಿಯ ಮದ್ಯಪಾನದ ಮೋಜಿನ ಪಾರ್ಟಿಯು ಎಲ್ಲವನ್ನೂ ಬದಲಾಯಿಸುತ್ತದೆ. ಈ ಟ್ವಿಸ್ಟ್‌ ಸಿನಿಮಾವನ್ನು ಬೇರೆ ಲೆವೆಲ್‌ಗೆ ಕೊಂಡೊಯ್ಯುತ್ತದೆ.

ಪ್ರಜೋಶ್‌ ಅವರ ಚೊಚ್ಚಲ ನಿರ್ದೇಶಣದ ಚಿಲ್ಲಿ ಸಿನಿಮಾದ ಟ್ವಿಸ್ಟ್‌ ನನ್ನ ನಿರೀಕ್ಷೆ ಮೀರಿಸಿತ್ತು. ಟ್ರೇಲರ್‌ನಲ್ಲಿ ಪನ್ನೀರ್‌ ಖಾದ್ಯದ ಬದಲು ಚಿಲ್ಲಿ ಚಿಕನ್‌ ನೀಡಿದ ವಿಷಯ ಗೊತ್ತಾಗಿತ್ತು. ಆದರೆ, ಇದು ಪ್ರತೀಕ್‌ ಅವರ ಫುಡ್‌ ಸ್ಟಾಲ್‌ ಅನ್ನು ಮುಚ್ಚಿದ ನೈಜ ಘಟನೆಯನ್ನು ಆಧರಿಸಿದ ಸಿನಿಮಾ ಎಂಬ ವಿಷಯ ಬಳಿಕ ಗೊತ್ತಾಯಿತು.

ಟ್ರೆಂಡಿಂಗ್​ ಸುದ್ದಿ

ನೀವು ಏನಾದರೂ ಸಿನಿಮಾ ವೀಕ್ಷಿಸುತ್ತಿದ್ದಾಗ ಅದರಲ್ಲಿ ಅನಿರೀಕ್ಷಿತ ಟ್ವಿಸ್ಟ್‌ ಬಂದಾಗ ರೋಮಾಂಚನವಾಗುತ್ತದೆ. ಈ ಕಥೆಯಲ್ಲಿ ರಾತ್ರಿ ಕುಡಿದು ಪಾರ್ಟಿ ಮಾಡಿದ ಬಳಿಕ ಏನೋ ಆಗುತ್ತದೆ ಎಂಬ ಸುಳಿವು ನನಗಿತ್ತು. ಆದರೆ, ಬಳಿಕ ಏನೆಲ್ಲ ಸಂಭವಿಸಿತ್ತು ಎಂಬ ಮಾಹಿತಿ ಇರಲಿಲ್ಲ. ಇದು ಕೇವಲ ವಲಸಿಗ ಕಾರ್ಮಿಕರ ಕಥೆಯಲ್ಲ. ಇನ್ನೂ ಅನೇಕ ವಿಚಾರಗಳು, ಕಥೆಗಳು, ವಿಷಯಗಳು ಈ ಚಿತ್ರದಲ್ಲಿವೆ.

ಚಿಲ್ಲಿ ಚಿಕನ್‌ಗೆ ಮುನ್ನ ನಾನು ಬಿಫೆಸ್‌ನಲ್ಲಿ ಇನ್ನೂ ಬಿಡುಗಡೆಯಾಗಬೇಕಿರುವ ಅಬ್ರಕಡಬ್ರಾ ಚಿತ್ರದಲ್ಲಿ ಶೃಂಗಾನ ನಟನೆಯನ್ನು ನೋಡಿದ್ದೇನೆ. ಇಲ್ಲೂ ಅದೇ ರೀತಿ ಉತ್ತಮ ನಟನೆಯನ್ನು ಕಾಣಬಹುದು. ಚಿಲ್ಲಿ ಚಿಕನ್‌ ಎಂಬ ಕನ್ನಡ ಚಲನಚಿತ್ರವು ಈಶಾನ್ಯದಿಂದ ವಲಸೆ ಬಂದ ಕಾರ್ಮಿಕರನ್ನು ಹೊರಗಿನವರೆಂದು ಏಕೆ ಪರಿಗಣಿಸುತ್ತಾರೆ ಎಂಬ ಅಂಶವನ್ನು ಪರಿಶೋಧನೆ ಮಾಡುತ್ತದೆ.

ಬಿಜೌ, ಜಿಂಪಾ ವಿಕ್ಟರ್, ಟಾಮ್‌ಥಿನ್ ಮತ್ತು ಹರಿಣಿ ಸುಂದರರಾಜನ್ ಚಿಲ್ಲಿ ಚಿಕನ್‌ ಸಿನಿಮಾದ ಆಧಾರ ಸ್ತಂಭ. ನಿತ್ಯಶ್ರೀ, ರೇಖಾ ಕೂಡ್ಲಿಗಿ ಪಾತ್ರವು ಸೀಮಿತವಾಗಿದೆ. ಪದ್ಮಜಾ ರಾವ್‌ ಅವರ ನಟನೆ ಖುಷಿ ನೀಡಿತು. ಈಶಾನ್ಯ ಭಾಗದ ನಟರ ಕನ್ನಡ ಮಾತನಾಡುವ ಪ್ರಯತ್ನ ಪ್ರಶಂಸೆಗೆ ಅರ್ಹವಾಗಿದೆ.

ರೇಸಿಸಂ ಅಥವಾ ವರ್ಣಭೇದ ನೀತಿ ಮತ್ತು ತಾರತಮ್ಯದ ವಿಚಾರವು ಚಿತ್ರದಲ್ಲಿದೆ. ಆದರೆ, ನಿರ್ದೇಶಕರು ಅದನ್ನು ಹೆಚ್ಚು ಆಳವಾಗಿ ಶೋಧಿಸಲು ಹೋಗಿಲ್ಲ. ಈ ಚಿತ್ರದಲ್ಲಿ ಉಪದೇಶವಿಲ್ಲದೆ ವಿಷಯವನ್ನು ಪ್ರಸ್ತುತಪಡಿಸಿರುವ ರೀತಿ ಇಷ್ಟವಾಗುತ್ತದೆ. ಈಶಾನ್ಯ ಸಮುದಾಯದ ಬಗ್ಗೆ ಪ್ರಭಾವಿಗಳ ವಿಡಿಯೋ ವೈರಲ್‌ ಆಗದೆ ಇದ್ದಾಗ "ಯಾರೂ ನಮ್ಮ ಬಗ್ಗೆ ಕಾಳಜಿ ವಹಿಸುವುದಿಲ್ಲ" ಎಂದುಕೊಳ್ಳುತ್ತಾರೆ. ಚಿಲ್ಲಿ ಚಿಕನ್‌ ಭವಿಷ್ಯವೂ ಇದೇ ರೀತಿ ಆಗುವುದೇ?

ಚಿತ್ರ ವಿಮರ್ಶೆ: ಪ್ರತಿಭಾ ಜಾಯ್‌ (ವಿಮರ್ಶೆಯ ಮೂಲ ಲಿಂಕ್‌)