Bigg Boss Kannada 11: ಉಸ್ತುವಾರಿ ಎಡವಟ್ಟು, ಚೈತ್ರಾಗೆ ರುಬ್ಬುವ ಕೆಲಸ ಮತ್ತೆ ಮುಂದುವರಿಸ್ತಾರಾ ಕಿಚ್ಚ ಸುದೀಪ್?
Bigg Boss Kannada 11: ಬಿಗ್ ಬಾಸ್‌ನ ಈ ವಾರದ ಕಿಚ್ಚನ ಪಂಚಾಯ್ತಿಯಲ್ಲಿ ಯಾವ ವಿಷಯ ಚರ್ಚೆ ಆಗಬಹುದು ಎಂದು ಕಾದು ಕುಳಿತ ಪ್ರೇಕ್ಷಕರಿಗೆ ಇದೀಗ ಉತ್ತರ ಸಿಕ್ಕಿದೆ. ಈ ವಾರ ಚೈತ್ರಾ ಕುಂದಾಪುರ ಅವರ ಉಸ್ತುವಾರಿ ಬಗ್ಗೆ ಚರ್ಚೆ ನಡೆಯಲಿದೆ.
ಬಿಗ್ ಬಾಸ್‌ನಲ್ಲಿ ಈ ವಾರ ಕಿಚ್ಚನ ಪಂಚಾಯ್ತಿಯಲ್ಲಿ ಯಾವ ವಿಚಾರ ಚರ್ಚೆ ಆಗುತ್ತದೆ ಎಂದು ಜನರು ಕಾತರದಿಂದ ಕಾಯುತ್ತಿದ್ದರು. ಆ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಯಾಕೆಂದರೆ ಕಲರ್ಸ್ ಕನ್ನಡ ಪ್ರೋಮೋ ರಿಲೀಸ್ ಮಾಡಿದೆ. ಈ ಪ್ರೋಮೋದಲ್ಲಿ ಪ್ರತಿ ಬಾರಿ ಕಿಚ್ಚ ಸುದೀಪ್ ಯಾವ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ? ಅವರು ಉಡುಪು ಹೇಗಿರುತ್ತದೆ ಎಂದೂ ಸಹ ಎಲ್ಲರೂ ಕುತೂಹಲದಿಂದ ಕಾಯುತ್ತಿರುತ್ತಾರೆ. ಈ ಬಾರಿ ಅವರು ಹಸಿರು ಬಣ್ಣದ ಡಬಲ್ ಕಾಲರ್ ಇರುವ ಅಂಗಿ ತೊಟ್ಟಿದ್ದಾರೆ. ಈ ಬಾರಿ ಉಸ್ತುವಾರಿ ವಿಚಾರ ಬಿಗ್ ಬಾಸ್ ಮನೆಯಲ್ಲಿ ಹಾಗೂ ಕಿಚ್ಚನ ಪಂಚಾಯ್ತಿ ಎರಡರಲ್ಲೂ ಚರ್ಚೆಯಾಗಲಿದೆ ಎಂಬುದು ಸ್ಪಷ್ಟವಾಗಿದೆ.
ಉಸ್ತುವಾರಿ ಬಗ್ಗೆ ಮಾತುಕಥೆ
ಬಿಗ್ ಬಾಸ್ ಮನೆಯಲ್ಲಿ ಈ ಬಾರಿ ಚೈತ್ರಾ ಕುಂದಾಪುರ ಹಲವಾರು ಆಟಗಳಲ್ಲಿ ಉಸ್ತುವಾರಿಯಾಗಿದ್ದರು. ನಾನು ಆಟ ಆಡುತ್ತೇನೆ ಎಂದರೂ ನನಗೆ ಉಸ್ತುವಾರಿ ಕೊಡುತ್ತಾರೆ ಎಂದು ಹಿಂದೊಮ್ಮೆ ರಂಪಾಟ ಮಾಡಿದ್ದರೂ. ತನಗೆ ಈ ಮನೆಯಲ್ಲಿ ಆಡುವ ಅವಕಾಶವೇ ಸಿಗಿಲಿಲ್ಲ ಎಂದು ಕೋಪ ಮಾಡಿಕೊಂಡಿದ್ದರು. ಆದರೂ ಅವರು ಈ ವಾರ ಒಂದು ಆಟದಲ್ಲಿ ವಿಫಲರಾಗಿ ಸಿಗುವ ಸೌಲಭ್ಯವನ್ನು ಕಳೆದುಕೊಂಡಿದ್ದಾರೆ.
ಇನ್ನು ಅವರಿಗೆ ಉಸ್ತುವಾರಿ ನೀಡಿದಾಗ ಅವರು ಕೆಲ ಆಟಗಳಲ್ಲಿ ಮೋಸ ಮಾಡಿದ್ದಾರೆ. ಸುಮ್ಮ ಸುಮ್ಮನೆ ಪೌಲ್ ಎಂದು ಘೋಷಣೆ ಮಾಡಿ ಆಟದಲ್ಲಿ ಸಮಸ್ಯೆ ತಂದಿದ್ದಾರೆ ಎಂದು ಸಾಕಷ್ಟು ಜನ ಅಭಿಪ್ರಾಯಪಟ್ಟಿದ್ದಾರೆ.. ಇನ್ನು ರಜತ್ ಹಾಗೂ ಚೈತ್ರಾ ಅವರಿಗೆ ಈ ವಿಷಯವಾಗಿ ಜಗಳ ಕೂಡ ಆಗಿತ್ತು.
ಕಿಚ್ಚ ಸುದೀಪ್ ಈ ಬಾರಿ ಕಾರ್ಯಕ್ರಮಕ್ಕೆ ಎಂಟ್ರಿ ಕೊಡುತ್ತಿದ್ದಂತೆಯೇ ಉಸ್ತುವಾರಿಗಳು ತಮ್ಮ ಜವಾಬ್ಧಾರಿಯನ್ನು ಮರೆತು ವರ್ತಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಆಟದ ದಾರಿಯನ್ನು ತಪ್ಪಿಸುತ್ತಾ ಇದ್ದಾರೆ ಎಂಬುದಾಗಿ ಹೇಳಿದ್ದಾರೆ. ಆಗ ಚೈತ್ರಾ ಅವರು ಆಟ ನಿಲ್ಲಿಸಿದ ಕ್ಲಿಪ್‌ಗಳನ್ನು ಹಾಕಲಾಗಿದೆ.
ಚೈತ್ರಾ ಪರ ಕಾಮೆಂಟ್ಸ್
ಇವತ್ತು ನೋಡಿ ಬೇಕಿದ್ರೆ ಮಂಜು ಗೌತಮಿ ರಜತ್ ತಪ್ಪು ಮಾಡಿದಾಗ ಬಾರದ ಸುದೀಪ್ ಧ್ವನಿ ಇವತ್ತು ಚೈತ್ರಗೆ ರೈಸ್ ಆಗುತ್ತೆ ಎಂದು ನಮಿತಾ ಕಾಮೆಂಟ್ ಮಾಡಿದ್ದಾರೆ.
ಎಲ್ಲರನ್ನು ಎದರುಹಾಕೊಂಡು ಆಟ ಆಡ್ತ ಇರೊದು ಚೈತ್ರ ಒಬ್ಬಳೆ! ಉಳಿದವರೆಲ್ಲ ಒಬ್ಬರಿಗೊಬ್ಬರು ನೈಸ್ ಮಾಡಿಕೊಂಡು ಗುಂಪಲ್ಲಿ ಆಟ ಆಡ್ತ ಇದ್ದಾರೆ! ಆಡಿದ ಆಟವನ್ನೆಲ್ಲ ಗೆಲ್ಲಲೇ ಬೇಕು ಎನ್ನುವ ನಿಯಮ ಇಲ್ಲ! ಮನೆಯಲ್ಲಿ ಹೇಗಿದ್ದಿರಾ ಅನ್ನೊದು ಮುಖ್ಯ ಎಂದು ಸುನೀಲ್ ಕಾಮೆಂಟ್ ಮಾಡಿದ್ದಾರೆ.
ಕಳೆದ ವಾರ ಗೌತಮಿ ಕಳಪೆ ಕ್ಯಾಪ್ಟೇನ್ಸಿ ಇಂದ ಒಂದೇ ಒಂದು ಗೇಮ್ ಗೆಲ್ಲೋಕೆ ಆಗಿಲ್ಲ. ಸೋ ಲಾಸ್ಟ್ ವೀಕ್ ಅದರ ಬಗ್ಗೆ ಮಾತೇ ಆಡಲಿಲ್ಲ. ಒಳಗಡೆ ಕೂಡ ಗುಂಪು ಮಾಡ್ಕೊಂಡು ಕಳಪೆ ಬರದೆ ಇರೋ ಥರ ನೋಡ್ಕೋತಾರೆ.. ಅಟ್ಲೀಸ್ಟ್ ಪಂಚಾಯ್ತಿ ಲೀ ಆದ್ರೂ ಅದನ್ನ ಮಾತಾಡ್ಬೇಕು ಅಲ್ವಾ ಎಂದು ಮಹೇಶ್ ಕಾಮೆಂಟ್ ಮಾಡಿದ್ದಾರೆ.