ಧ್ರುವ ಸರ್ಜಾ ಮಾರ್ಟಿನ್‌ ಸಿನಿಮಾ ಮೊದಲ ದಿನದ ಬಾಕ್ಸ್‌ ಆಫೀಸ್‌ ಕಲೆಕ್ಷನ್‌; ಯಾವ ಭಾಷೆಯಲ್ಲಿ ಎಷ್ಟು ಕಲೆಕ್ಷನ್‌ ಆಯ್ತು?
ಕನ್ನಡ ಸುದ್ದಿ  /  ಮನರಂಜನೆ  /  ಧ್ರುವ ಸರ್ಜಾ ಮಾರ್ಟಿನ್‌ ಸಿನಿಮಾ ಮೊದಲ ದಿನದ ಬಾಕ್ಸ್‌ ಆಫೀಸ್‌ ಕಲೆಕ್ಷನ್‌; ಯಾವ ಭಾಷೆಯಲ್ಲಿ ಎಷ್ಟು ಕಲೆಕ್ಷನ್‌ ಆಯ್ತು?

ಧ್ರುವ ಸರ್ಜಾ ಮಾರ್ಟಿನ್‌ ಸಿನಿಮಾ ಮೊದಲ ದಿನದ ಬಾಕ್ಸ್‌ ಆಫೀಸ್‌ ಕಲೆಕ್ಷನ್‌; ಯಾವ ಭಾಷೆಯಲ್ಲಿ ಎಷ್ಟು ಕಲೆಕ್ಷನ್‌ ಆಯ್ತು?

ಧ್ರುವ ಸರ್ಜಾ ಮಾರ್ಟಿನ್‌ ಸಿನಿಮಾ ಶುಕ್ರವಾರ ಕನ್ನಡ ಸೇರಿ 5 ಭಾಷೆಗಳಲ್ಲಿ ತೆರೆ ಕಂಡಿದೆ. ಸಿನಿಮಾಗೆ ದೊರೆತ ರೆಸ್ಪಾನ್ಸ್‌ ನೋಡಿ ಎಪಿ ಅರ್ಜುನ್‌ ಹಾಗೂ ಚಿತ್ರತಂಡ ಖುಷಿಯಾಗಿದೆ. ಮೊದಲ ದಿನ ಸಿನಿಮಾ 6.2 ಕೋಟಿ ಕಲೆಕ್ಷನ್‌ ಮಾಡಿದೆ. ಮುಂದಿನ ವಾರ ಸಿನಿಮಾ ಇತರ ಭಾಷೆಗಳಲ್ಲಿ ರಿಲೀಸ್‌ ಆಗಲಿದ್ದು ಕಲೆಕ್ಷನ್‌ ಹೆಚ್ಚಾಗಬಹುದು ಎಂಬ ನಿರೀಕ್ಷೆ ಇದೆ.

ಎಪಿ ಅರ್ಜುನ್‌ ಡೈರೆಕ್ಷನ್‌ನಲ್ಲಿ ಧ್ರುವ ಸರ್ಜಾ ಅಭಿನಯದ ಮಾರ್ಟಿನ್‌ ಸಿನಿಮಾ ಮೊದಲ ದಿನ 6.2 ಕೋಟಿ ರೂ ಲಾಭ ಮಾಡಿರುವುದಾಗಿ sacnilk ವೆಬ್‌ಸೈಟರ್‌ ವರದಿ ನೀಡಿದೆ.
ಎಪಿ ಅರ್ಜುನ್‌ ಡೈರೆಕ್ಷನ್‌ನಲ್ಲಿ ಧ್ರುವ ಸರ್ಜಾ ಅಭಿನಯದ ಮಾರ್ಟಿನ್‌ ಸಿನಿಮಾ ಮೊದಲ ದಿನ 6.2 ಕೋಟಿ ರೂ ಲಾಭ ಮಾಡಿರುವುದಾಗಿ sacnilk ವೆಬ್‌ಸೈಟರ್‌ ವರದಿ ನೀಡಿದೆ. (PC: Canva)

ಎಪಿ ಅರ್ಜುನ್‌ ಹಾಗೂ ಧ್ರುವ ಸರ್ಜಾ ಕಾಂಬಿನೇಷನ್‌ನಲ್ಲಿ ತಯಾರಾಗಿರುವ ಬಹುನಿರೀಕ್ಷಿತ ಮಾರ್ಟಿನ್‌ ಸಿನಿಮಾ ಶುಕ್ರವಾರ ದೇಶಾದ್ಯಂತ ತೆರೆ ಕಂಡಿದೆ. 3 ವರ್ಷಗಳ ಹಿಂದೆ ಮುಹೂರ್ತ ಆಚರಿಸಿಕೊಂಡಿದ್ದ ಸಿನಿಮಾ ಸಾಕಷ್ಟು ಅಡೆತಡೆಗಳ ನಡುವೆ ಕೊನೆಗೂ ಅಭಿಮಾನಿಗಳ ಮುಂದೆ ಬಂದಿದೆ. ಫ್ಯಾನ್ಸ್‌, ಸಿನಿಮಾ ನೋಡಿ ಸಂಭ್ರಮಿಸಿದ್ದಾರೆ.

ಹೊರಬಿತ್ತು ಫಸ್ಟ್‌ ಡೇ ಕಲೆಕ್ಷನ್‌ ಮಾಹಿತಿ

ಗುರುವಾರವೇ ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಪೇಯ್ಡ್‌ ಪ್ರೀಮಿಯರ್‌ ಆಯೋಜಿಸಲಾಗಿತ್ತು. ಸಿನಿಮಾ ನೋಡಿದವರು ಧ್ರುವ ಸರ್ಜಾ ಪರ್ಸನಾಲಿಟಿ, ಫೈಟ್‌ ನೋಡಿ ಆಶ್ಚರ್ಯ ವ್ಯಕ್ತಪಡಿಸಿದ್ದರು. ಫೈಟ್‌ಗಳಂತೂ ಸೂಪರ್‌, ಸಿನಿಮಾ ಖಂಡಿತ ಒಳ್ಳೆ ಲಾಭ ಮಾಡಲಿದೆ ಎಂದಿದ್ದರು. ಮಾರ್ಟಿನ್‌ ಸಿನಿಮಾ ಶುಕ್ರವಾರ ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಲಂ ಭಾಷೆಗಳಲ್ಲಿ ತೆರೆ ಕಂಡಿತ್ತು. ಉಳಿದ ಭಾಷೆಗಳಲ್ಲಿ ಮುಂದಿನ ವಾರ ರಿಲೀಸ್‌ ಆಗುತ್ತಿದೆ. ಸಿನಿಮಾಗೆ ಇಷ್ಟು ದೊಡ್ಡ ಓಪನಿಂಗ್‌ ದೊರೆತಿದ್ದು ಮಾರ್ಟಿನ್‌, ಮೊದಲ ದಿನ ಎಷ್ಟು ಲಾಭ ಮಾಡಬಹುದು ಎಂಬ ಕುತೂಹಲ ಎಲ್ಲರಿಗೂ ಇತ್ತು. ಇದೀಗ sacnilk.com ಚಿತ್ರದ ಕಲೆಕ್ಷನ್‌ ಬಗ್ಗೆ ಮಾಹಿತಿ ನೀಡಿದೆ.

ದೇಶಾದ್ಯಂತ 6.2 ಕೋಟಿ ರೂ. ಕಲೆಕ್ಷನ್‌

ಮಾರ್ಟಿನ್‌ ಸಿನಿಮಾ ಮೊದಲ ದಿನ 10-15 ಕೋಟಿ ರೂ. ಕಲೆಕ್ಷನ್‌ ಮಾಡಬಹುದು ಎಂದು ಮೊದಲು ಅಂದಾಜು ಮಾಡಲಾಗಿತ್ತು. ಅದರೆ ಸಿನಿಮಾ ಮೊದಲ ದಿನ 6.2 ಕೋಟಿ ರೂ. ಕಲೆಕ್ಷನ್‌ ಮಾಡಿದೆ. ಅದರಲ್ಲಿ ಕನ್ನಡ ಭಾಷೆಯಿಂದ 5.5 ಕೋಟಿ ರೂ. ಹಿಂದಿಯಿಂದ 25 ಲಕ್ಷ ರೂ. ತಮಿಳಿನಿಂದ 5 ಲಕ್ಷ ರೂ. ತೆಲುಗು ಭಾಷೆಯಿಂದ 4 ಲಕ್ಷ ರೂ. ಬಂದಿದೆ. ಇತರ ಭಾಷೆಗಳಲ್ಲಿ ಮುಂದಿನ ವಾರ ರಿಲೀಸ್‌ ಆಗುತ್ತಿದ್ದು ನಂತರದ ದಿನಗಳಲ್ಲಿ ಕಲೆಕ್ಷನ್‌ ಹೆಚ್ಚಾಗುವ ಸಾಧ್ಯತೆ ಇದೆ. ಸಿನಿಮಾ ಶೀಘ್ರದಲ್ಲೇ ಬೆಂಗಾಳಿ, ಕೊರಿಯನ್‌ , ಅರೆಬಿಕ್‌, ಚೈನೀಸ್‌, ಸ್ಪಾನಿಷ್‌, ರಷ್ಯನ್‌, ಜಪಾನೀಸ್‌ ಭಾಷೆಗಳಲ್ಲಿ ತೆರೆ ಕಾಣಲಿದೆ.

ಮೈಸೂರು, ರಾಯಚೂರು, ಶಿವಮೊಗ್ಗದಲ್ಲಿ ಹೌಸ್‌ಫುಲ್

ಭಾನುವಾರ ಕರ್ನಾಟಕದಲ್ಲಿ ಮಾರ್ನಿಂಗ್‌ ಶೋ ಶೇಕಡಾ 42.46%, ಮಧ್ಯಾಹದನ ಶೋ ಶೇಕಡಾ 63.95%, ಸಂಜೆ ಶೇಕಡಾ 71.36% ಹಾಗೂ ನೈಟ್‌ ಶೋ ಶೇಕಡಾ 76.62% ಆಕ್ಯುಪೆನ್ಸಿ ಇತ್ತು. ಮೈಸೂರು, ರಾಯಚೂರು, ಶಿವಮೊಗ್ಗ, ಬೆಂಗಳೂರಿನಲ್ಲಿ ಥಿಯೇಟರ್‌ಗಳು ಹೌಸ್‌ಫುಲ್‌ ಆಗಿದ್ದವು. ಇತರ ಭಾಷೆಗಳ ಬಗ್ಗೆ ಹೇಳುವುದಾದರೆ ಹಿಂದಿಯಲ್ಲಿ ಶುಕ್ರವಾರ ಶೇಕಡಾ 12.33, ತಮಿಳಿನಲ್ಲಿ 12.18%, ತೆಲುಗಿನಲ್ಲಿ ಶೇ 21.18%, ಮಲಯಾಳಂ ಭಾಷೆಯಲ್ಲಿ ಶೇಕಡಾ 7.35% ಆಕ್ಯುಪೆನ್ಸಿ ಇತ್ತು.

ಮುಂದಿನ ದಿನಗಳಲ್ಲಿ ಸಿನಿಮಾ ಎಷ್ಟು ಕಲೆಕ್ಷನ್‌ ಮಾಡಲಿದೆ ಕಾದು ನೋಡಬೇಕು.

Whats_app_banner