National film awards 2024: ಕೆಜಿಎಫ್‌ ಚಾಪ್ಟರ್‌ 2ಗೆ ಡಬಲ್‌ ಧಮಕಾ; ಎರಡು ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಬಾಚಿಕೊಂಡ ಯಶ್‌ ಸಿನಿಮಾ-sandalwood news national film awards 2024 rocking star yash kgf chapter 2 movie is the best kannada film pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  National Film Awards 2024: ಕೆಜಿಎಫ್‌ ಚಾಪ್ಟರ್‌ 2ಗೆ ಡಬಲ್‌ ಧಮಕಾ; ಎರಡು ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಬಾಚಿಕೊಂಡ ಯಶ್‌ ಸಿನಿಮಾ

National film awards 2024: ಕೆಜಿಎಫ್‌ ಚಾಪ್ಟರ್‌ 2ಗೆ ಡಬಲ್‌ ಧಮಕಾ; ಎರಡು ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಬಾಚಿಕೊಂಡ ಯಶ್‌ ಸಿನಿಮಾ

National film awards 2024: ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಘೋಷಣೆಯಾಗಿದೆ. ಯಶ್‌ ನಟನೆಯ ಕೆಜಿಎಫ್‌ ಚಾಪ್ಟರ್‌ 2 ಸಿನಿಮಾವು ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿಗೆ ಪಾತ್ರವಾಗಿದೆ. ಅತ್ಯುತ್ತಮ ಸಾಹಸ ನಿರ್ದೇಶನ ವಿಭಾಗದಲ್ಲಿಯೂ ಕೆಜಿಎಫ್‌ಗೆ ಪ್ರಶಸ್ತಿ ದೊರಕಿದೆ. ಕಾಂತಾರ ನಟ ರಿಷಬ್‌ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರಕಿದೆ.

National film awards 2024: ಯಶ್‌ ನಟನೆಯ ಕೆಜಿಎಫ್‌ ಚಾಪ್ಟರ್‌ 2ಗೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ದೊರಕಿದೆ.
National film awards 2024: ಯಶ್‌ ನಟನೆಯ ಕೆಜಿಎಫ್‌ ಚಾಪ್ಟರ್‌ 2ಗೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ದೊರಕಿದೆ.

National film awards 2024: ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಘೋಷಣೆಯಾಗಿದ್ದು, ಕನ್ನಡಕ್ಕೆ ಎರಡು ಪ್ರಶಸ್ತಿ ದೊರಕಿದೆ. ಯಶ್‌ ನಟನೆಯ ಕೆಜಿಎಫ್‌ ಚಾಪ್ಟರ್‌ 2 ಸಿನಿಮಾವು ಅತ್ಯುತ್ತಮ ಕನ್ನಡ ಸಿನಿಮಾ ಎಂಬ ಪ್ರಶಸ್ತಿಗೆ ಪಾತ್ರವಾಗಿದೆ. ಇದೇ ಸಮಯದಲ್ಲಿ ಕಾಂತಾರ ನಟ ರಿಷಬ್‌ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರಕಿದೆ. ಸ್ಯಾಂಡಲ್‌ವುಡ್‌ಗೆ ಈ ಮೂಲಕ ಎರಡು ಖುಷಿಯ ಸುದ್ದಿಗಳು ಬಂದಿವೆ. ಪ್ರಶಸ್ತಿ ಘೋಷಣೆ ಕಾರ್ಯಕ್ರಮ ಮುಂದುವರೆದಿದ್ದು, ಕನ್ನಡಕ್ಕೆ ಇನ್ನಷ್ಟು ಪ್ರಶಸ್ತಿಗಳು ದೊರಕುವ ನಿರೀಕ್ಷೆಯಿದೆ.

ಕೆಜಿಎಫ್‌ ಚಾಪ್ಟರ್‌ 2 ಅತ್ಯುತ್ತಮ ಕನ್ನಡ ಸಿನಿಮಾ

ನ್ಯಾಷನಲ್‌ ಫಿಲ್ಮ್‌ ಅವಾರ್ಡ್ಸ್‌ 2024 ಪ್ರಕಟವಾಗಿದ್ದು, ಯಶ್‌ ನಟನೆಯ ಕೆಜಿಎಫ್‌ ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಮತ್ತು ಅತ್ಯುತ್ತಮ ಸಾಹಸ ನಿರ್ದೇಶನ (ಸ್ಟಂಟ್‌ ಕೋರಿಯೊಗ್ರಫಿ) ವಿಭಾಗಗಳಲ್ಲಿ ಪ್ರಶಸ್ತಿ ದೊರಕಿದೆ. ಈ ಮೂಲಕ ಪ್ಯಾನ್‌ ಇಂಡಿಯಾದಲ್ಲಿ ಜನಮೆಚ್ಚುಗೆ ಪಡೆದ ಕೆಜಿಎಫ್‌ ಸಿನಿಮಾಕ್ಕೆ ಈಗ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಯ ಗರಿ ಮೂಡಿದೆ. ಕೆಜಿಎಫ್‌ ಬಳಿಕ ಯಶ್‌ ಟಾಕ್ಸಿಕ್‌ ಸಿನಿಮಾದ ಶೂಟಿಂಗ್‌ನಲ್ಲಿ ಬಿಝಿ ಇದ್ದಾರೆ.

ಕೆಜಿಎಫ್‌ ಚಾಪ್ಟರ್‌ 2 ಸಿನಿಮಾದ ಕುರಿತು

ಕೆಜಿಎಫ್‌ ಚಾಪ್ಟರ್‌ 2 ಸಿನಿಮಾವು 2022ರಲ್ಲಿ ಬಿಡುಗಡೆಯಾದ ಕನ್ನಡ ಪ್ಯಾನ್‌ ಇಂಡಿಯಾ ಸಿನಿಮಾ. ಈ ಸಿನಿಮಾಕ್ಕೆ ಪ್ರಶಾಂತ್‌ ನೀಲ್‌ ಆಕ್ಷನ್‌ ಕಟ್‌ ಹೇಳಿದ್ದಾರೆ. ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್‌ನಡಿಯಲ್ಲಿ ಈ ಸಿನಿಮಾವನ್ನು ವಿಜಯ್‌ ಕಿರಗಂದೂರು ನಿರ್ಮಿಸಿದ್ದರು. ಕೆಜಿಎಫ್‌ ಚಾಪ್ಟರ್‌ ಒಂದರ ಯಶಸ್ಸಿನ ಬಳಿಕ ಕೆಜಿಎಫ್‌ 2 ಬಾಕ್ಸ್‌ ಆಫೀಸ್‌ನಲ್ಲಿ ದೊಡ್ಡಮಟ್ಟದ ಯಶಸ್ಸು ಗಳಿಸಿತ್ತು. ಈ ಸಿನಿಮಾದಲ್ಲಿ ಯಶ್, ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಪ್ರಕಾಶ್ ರಾಜ್, ಅಚ್ಯುತ್ ಕುಮಾರ್, ರಾವ್ ರಮೇಶ್, ವಸಿಷ್ಠ ಸಿಂಹ, ಅಯ್ಯಪ್ಪ ಪಿ.ಶರ್ಮಾ, ಅರ್ಚನಾ ಜೋಯಿಸ್, ಸರಣ್ ಶಕ್ತಿ, ಈಶ್ವರಿ ರಾವ್, ಜಾನ್ ಕೊಕ್ಕೆನ್, ಟಿ.ಎಸ್.ನಾಗಾಭರಣ ಮತ್ತು ಮಾಳವಿಕಾ ಅವಿನಾಶ್ ಮುಂತಾದವರು ನಟಿಸಿದ್ದಾರೆ. ಸುಮಾರು 100 ಕೋಟಿ ಬಜೆಟ್‌ನಲ್ಲಿ ಸಿನಿಮಾ ನಿರ್ಮಿಸಲಾಗಿತ್ತು. ಇದು ಕನ್ನಡದ ದುಬಾರಿ ಬಜೆಟ್‌ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗಿದೆ. ಇದೀಗ ಈ ಸಿನಿಮಾಕ್ಕೆ ರಾಷ್ಟ್ರೀಯ ಪ್ರಶಸ್ತಿ ದೊರಕಿದೆ. ಕೆಜಿಎಫ್ ಚಾಪ್ಟರ್‌ 2 ಸಿನಿಮಾ ‘ಅಮೆಜಾನ್‌ ಪ್ರೈಮ್‌’ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ವೀಕ್ಷಣೆಗೆ ಲಭ್ಯವಿದೆ.

ಕೆಜಿಎಫ್ ಚಾಪ್ಟ್‌ 2 ಸಿನಿಮಾದ ಟ್ರೇಲರ್ ಇಲ್ಲಿದೆ