ಕೂಲಿ ಚಿತ್ರದಲ್ಲಿ ರಜನಿಕಾಂತ್‌ ಎದುರು ಖಳನಾದ ಉಪೇಂದ್ರ!;‌ 16 ವರ್ಷಗಳ ಬಳಿಕ ತಮಿಳಿಗೆ ಹೊರಟ ರಿಯಲ್‌ ಸ್ಟಾರ್‌-sandalwood news real star upendra to join super star rajinikanth coolie movie directed by lokesh kanagaraj mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಕೂಲಿ ಚಿತ್ರದಲ್ಲಿ ರಜನಿಕಾಂತ್‌ ಎದುರು ಖಳನಾದ ಉಪೇಂದ್ರ!;‌ 16 ವರ್ಷಗಳ ಬಳಿಕ ತಮಿಳಿಗೆ ಹೊರಟ ರಿಯಲ್‌ ಸ್ಟಾರ್‌

ಕೂಲಿ ಚಿತ್ರದಲ್ಲಿ ರಜನಿಕಾಂತ್‌ ಎದುರು ಖಳನಾದ ಉಪೇಂದ್ರ!;‌ 16 ವರ್ಷಗಳ ಬಳಿಕ ತಮಿಳಿಗೆ ಹೊರಟ ರಿಯಲ್‌ ಸ್ಟಾರ್‌

ಕಾಲಿವುಡ್‌ ಸೂಪರ್‌ಸ್ಟಾರ್‌ ರಜನಿಕಾಂತ್‌ ಸದ್ಯ ಲೋಕೇಶ್ ಕನಗರಾಜ್ ನಿರ್ದೇಶನದ ಕೂಲಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಜೈಲರ್ ಚಿತ್ರದ ಭರ್ಜರಿ ಯಶಸ್ಸಿನ ನಂತರ ಸನ್ ಪಿಕ್ಚರ್ಸ್ ರಜನಿಕಾಂತ್ ಅವರ ಈ ಸಿನಿಮಾಕ್ಕೆ ಬಂಡವಾಳ ಹೂಡುತ್ತಿದೆ. ಇದೀಗ ಈ ಚಿತ್ರದಲ್ಲಿ ಖಡಕ್‌ ಖಳನಾಗಿ ನಟಿಸಲಿದ್ದಾರೆ ನಟ ಉಪೇಂದ್ರ.

 ಜೈಲರ್ ಚಿತ್ರದ ಭರ್ಜರಿ ಯಶಸ್ಸಿನ ನಂತರ ಸನ್ ಪಿಕ್ಚರ್ಸ್ ರಜನಿಕಾಂತ್ ಅವರ ಕೂಲಿ ಸಿನಿಮಾಕ್ಕೆ ಬಂಡವಾಳ ಹೂಡುತ್ತಿದೆ. ಇದೀಗ ಈ ಚಿತ್ರದಲ್ಲಿ ಖಡಕ್‌ ಖಳನಾಗಿ ನಟಿಸಲಿದ್ದಾರೆ ನಟ ಉಪೇಂದ್ರ.
ಜೈಲರ್ ಚಿತ್ರದ ಭರ್ಜರಿ ಯಶಸ್ಸಿನ ನಂತರ ಸನ್ ಪಿಕ್ಚರ್ಸ್ ರಜನಿಕಾಂತ್ ಅವರ ಕೂಲಿ ಸಿನಿಮಾಕ್ಕೆ ಬಂಡವಾಳ ಹೂಡುತ್ತಿದೆ. ಇದೀಗ ಈ ಚಿತ್ರದಲ್ಲಿ ಖಡಕ್‌ ಖಳನಾಗಿ ನಟಿಸಲಿದ್ದಾರೆ ನಟ ಉಪೇಂದ್ರ.

Real Star Upendra: ರಿಯಲ್‌ ಸ್ಟಾರ್‌ ಉಪೇಂದ್ರ ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೇ ನಿರ್ದೇಶನದ UI ಸಿನಿಮಾದ ಪ್ರಮೋಷನ್‌ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಹಾಡುಗಳ ಮೂಲಕ ಎಲ್ಲರ ತಲೆಗೆ ಹುಳ ಬಿಟ್ಟಿರುವ ಉಪೇಂದ್ರ, ಇನ್ನೇನು ಅಕ್ಟೋಬರ್‌ನಲ್ಲಿ ಈ ಸಿನಿಮಾವನ್ನು ನೋಡುಗರ ಮುಂದೆ ತಂದಿಡಲಿದ್ದಾರೆ. ಇತ್ತ ಆ ಚಿತ್ರದ ಗ್ರಾಫಿಕ್ಸ್‌ ಸೇರಿ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿವೆ. ಈ ನಡುವೆಯೇ ಉಪೇಂದ್ರ ಅವರ ಹೊಸ ಸಿನಿಮಾವೊಂದರ ಅಪ್‌ಡೇಟ್‌ ಹೊರಬಿದ್ದಿದ್ದು, ಫ್ಯಾನ್ಸ್‌ ಅಚ್ಚರಿಗೊಳಗಾಗಿದ್ದಾರೆ. ಅದೂ ರಜನಿಕಾಂತ್‌ ಜತೆಗೆ ಎಂಬುದು ವಿಶೇಷ!

ಕಾಲಿವುಡ್‌ ಸೂಪರ್‌ಸ್ಟಾರ್‌ ರಜನಿಕಾಂತ್‌ ಸದ್ಯ ಲೋಕೇಶ್ ಕನಗರಾಜ್ ನಿರ್ದೇಶನದ ಕೂಲಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಜೈಲರ್ ಚಿತ್ರದ ಭರ್ಜರಿ ಯಶಸ್ಸಿನ ನಂತರ ಸನ್ ಪಿಕ್ಚರ್ಸ್ ರಜನಿಕಾಂತ್ ಅವರ ಈ ಸಿನಿಮಾಕ್ಕೆ ಬಂಡವಾಳ ಹೂಡುತ್ತಿದೆ. ಅನಿರುದ್ಧ್ ರವಿಚಂದರ್‌ ಈ ಚಿತ್ರಕ್ಕೂ ಸಂಗೀತ ಸಂಯೋಜಿಸಿದ್ದಾರೆ. ಜೂನ್ ಅಂತ್ಯದಲ್ಲಿ ಈ ಚಿತ್ರದ ಶೂಟಿಂಗ್ ಶುರುವಾಗಿತ್ತು. ಶೂಟಿಂಗ್‌ ಶುರುವಾದ ಬಳಿಕ ಒಂದಷ್ಟು ನಟ ನಟಿಯರ ಆಗಮನವೂ ಆಗಿತ್ತು. ಇದೀಗ ಇದೇ ಕೂಲಿ ಸಿನಿಮಾ ಬಳಗ ಸೇರಿಕೊಂಡಿದ್ದಾರೆ ಸ್ಯಾಂಡಲ್‌ವುಡ್‌ ರಿಯಲ್‌ ಸ್ಟಾರ್‌ ಉಪೇಂದ್ರ.

ಸೂಪರ್‌ಸ್ಟಾರ್‌ ಎದುರು ಖಳನಾದ ರಿಯಲ್‌ಸ್ಟಾರ್‌

ಕೆಲ ದಿನಗಳ ಹಿಂದಷ್ಟೇ ಕೂಲಿ ಚಿತ್ರದಲ್ಲಿ ನಟ ಸತ್ಯರಾಜ್ ಮತ್ತು ನಟಿ ಶ್ರುತಿ ಹಾಸನ್ ನಟಿಸಲಿದ್ದಾರೆ ಎಂಬ ವರದಿಗಳು ಬಂದಿದ್ದವು. ಇದರ ಬೆನ್ನಲ್ಲೇ ಮಲಯಾಳಂ ನಟ ಸೆಲಬಿನ್ ಶಾಹಿರ್ ಮತ್ತು ತೆಲುಗು ನಟ ನಾಗಾರ್ಜುನ ಸಹ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿತ್ತು. ಇದೀಗ ನಟ ಉಪೇಂದ್ರ ರಜನಿಯ ಕೂಲಿ ಚಿತ್ರದಲ್ಲಿ ನಟಿಸಲಿದ್ದಾರೆ. ಈ ಸಂಬಂಧ ಅಧಿಕೃತ ಘೋಷಣೆ, ಪೋಸ್ಟರ್‌ ಸಮೇತ ಹೊರಬಿದ್ದಿದೆ. ಹಾಗಾದರೆ, ಉಪೇಂದ್ರ ಪಾತ್ರವೇನು? ಸದ್ಯದ ಮಟ್ಟಿಗೆ ರಜನಿ ಎದುರು ಖಳನಾಗಿ ಉಪೇಂದ್ರ ಅಬ್ಬರಿಸಲಿದ್ದಾರೆ ಎನ್ನಲಾಗುತ್ತಿದೆ.

16 ವರ್ಷಗಳ ಬಳಿಕ ಕಾಲಿವುಡ್‌ಗೆ..

ನಟ ಉಪೇಂದ್ರ 2008ರಲ್ಲಿ ತಮಿಳಿನಲ್ಲಿ ತೆರೆಗೆ ಬಂದಿದ್ದ ವಿಶಾಲ್ ಅಭಿನಯದ ಸತ್ಯಂ ಚಿತ್ರದಲ್ಲಿ ನಟಿಸಿದ್ದರು. ಆಗಿನ ಸಮಯದಲ್ಲಿಯೇ 28 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾಕ್ಕೆ ದೊಡ್ಡ ಓಪನಿಂಗ್‌ ಸಿಕ್ಕರೂ, ಬಾಕ್ಸ್‌ ಆಫೀಸ್‌ನಲ್ಲಿ ಪ್ಲಾಪ್‌ ಆಯಿತು. ಅದಾದ ಬಳಿಕ ತಮಿಳಿನ ಯಾವುದೇ ಸಿನಿಮಾದಲ್ಲಿಯೂ ಉಪೇಂದ್ರ ನಟಿಸಲಿಲ್ಲ. ಇದೀಗ ಸುಮಾರು 16 ವರ್ಷಗಳ ನಂತರ ಮತ್ತೆ ಕಾಲಿವುಡ್‌ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಉಪೇಂದ್ರ. ಅದೂ ಹಿಟ್‌ ನಿರ್ದೇಶಕ ಲೋಕೇಶ್‌ ಕನಗರಾಜ್‌ ಅವರ ಚಿತ್ರದಲ್ಲಿ ಎಂಬುದು ವಿಶೇಷ.

ಅಕ್ಟೋಬರ್‌ನಲ್ಲಿ ರಜಿನಿ Vs ಉಪೇಂದ್ರ

ರಜನಿಕಾಂತ್ ಅಭಿನಯದ ವೆಟೈಯನ್‌ ಚಿತ್ರವನ್ನು ಟಿ ಎಸ್ ಜ್ಞಾನವೇಲ್ ನಿರ್ದೇಶಿಸಿದ್ದಾರೆ.‌ ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಫಕತ್ ಫಾಜಿಲ್, ತುಷಾರ್ ವಿಜಯನ್, ಮಂಜು ವಾರಿಯರ್, ರಿತಿಕಾ ಸಿಂಗ್ ಮುಂತಾದವರು ನಟಿಸಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ನಿರ್ಮಾಣದ ಈ ಚಿತ್ರಕ್ಕೆ ಅನಿರುದ್ಧ್ ರವಿಚಂದರ್‌ ಸಂಗೀತ ನೀಡಿದ್ದಾರೆ. ಅಕ್ಟೋಬರ್ 10 ರಂದು ಈ ಚಿತ್ರ ಥಿಯೇಟರ್‌ಗೆ ಬರಲಿದೆ. ಇತ್ತ ಇನ್ನೊಂದು ಕಡೆಗೆ UI ಸಿನಿಮಾದ ಕೆಲಸದಲ್ಲಿ ಉಪೇಂದ್ರ ಬಿಜಿಯಾಗಿದ್ದಾರೆ. ಈ ಸಿನಿಮಾ ಸಹ ಅಕ್ಟೋಬರ್‌ನಲ್ಲಿಯೇ ರಿಲೀಸ್ ಆಗಲಿರುವುದು ವಿಶೇಷ.