ಅಕ್ಟೋಬರ್‌ನಲ್ಲಿ ಒಟಿಟಿಗೆ ಎಂಟ್ರಿ ಕೊಡಲಿದ್ಯಾ ಲಾಫಿಂಗ್‌ ಬುದ್ಧ? ಯಾವ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್‌ ಆಗಲಿದೆ ಪ್ರಮೋದ್‌ ಶೆಟ್ಟಿ ಚಿತ್ರ?-sandalwood news pramod shetty starring laughing buddha will stream in ott on october kannada movies rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಅಕ್ಟೋಬರ್‌ನಲ್ಲಿ ಒಟಿಟಿಗೆ ಎಂಟ್ರಿ ಕೊಡಲಿದ್ಯಾ ಲಾಫಿಂಗ್‌ ಬುದ್ಧ? ಯಾವ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್‌ ಆಗಲಿದೆ ಪ್ರಮೋದ್‌ ಶೆಟ್ಟಿ ಚಿತ್ರ?

ಅಕ್ಟೋಬರ್‌ನಲ್ಲಿ ಒಟಿಟಿಗೆ ಎಂಟ್ರಿ ಕೊಡಲಿದ್ಯಾ ಲಾಫಿಂಗ್‌ ಬುದ್ಧ? ಯಾವ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್‌ ಆಗಲಿದೆ ಪ್ರಮೋದ್‌ ಶೆಟ್ಟಿ ಚಿತ್ರ?

ಆಗಸ್ಟ್‌ 30 ರಂದು ತೆರೆ ಕಂಡ ಪ್ರಮೋದ್‌ ಶೆಟ್ಟಿ ಅಭಿನಯದ ಲಾಫಿಂಗ್‌ ಬುದ್ಧ ಸಿನಿಮಾ ಅಕ್ಟೋಬರ್‌ನಲ್ಲಿ ಒಟಿಟಿಗೆ ಬರಲಿದೆ. ದಿನಾಂಕ ಹಾಗೂ ಪ್ಲಾಟ್‌ಫಾರ್ಮ್‌ ಬಗ್ಗೆ ಚಿತ್ರತಂಡ ಶೀಘ್ರದಲ್ಲೇ ಮಾಹಿತಿ ಹಂಚಿಕೊಳ್ಳಲಿದೆ. ಚಿತ್ರವನ್ನು ರಿಷಬ್‌ ಶೆಟ್ಟಿ ನಿರ್ಮಿಸಿದ್ದು ಭರತ್‌ ರಾಜ್‌ ನಿರ್ದೇಶನ ಮಾಡಿದ್ದಾರೆ.

ಅಕ್ಟೋಬರ್‌ನಲ್ಲಿ ಒಟಿಟಿಗೆ ಎಂಟ್ರಿ ಕೊಡಲಿದ್ಯಾ ಲಾಫಿಂಗ್‌ ಬುದ್ಧ? ಯಾವ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್‌ ಆಗಲಿದೆ ಪ್ರಮೋದ್‌ ಶೆಟ್ಟಿ ಚಿತ್ರ?
ಅಕ್ಟೋಬರ್‌ನಲ್ಲಿ ಒಟಿಟಿಗೆ ಎಂಟ್ರಿ ಕೊಡಲಿದ್ಯಾ ಲಾಫಿಂಗ್‌ ಬುದ್ಧ? ಯಾವ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್‌ ಆಗಲಿದೆ ಪ್ರಮೋದ್‌ ಶೆಟ್ಟಿ ಚಿತ್ರ? (PC: Rishab Shetty)

ಪ್ರಮೋದ್‌ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಲಾಫಿಂಗ್‌ ಬುದ್ದ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಪ್ರೇಕ್ಷಕರು ಸಿನಿಮಾ ಥಿಯೇಟರ್‌ಗೆ ತೆರಳಿ ಹಣ ಕೊಟ್ಟು ಹೊಟ್ಟೆ ಹುಣ್ಣಾಗುವಂತೆ ನಕ್ಕು ಬರುತ್ತಿದ್ದಾರೆ. ಜೊತೆಗೆ ತಮ್ಮ ಸ್ನೇಹಿತರು, ಕುಟುಂಬದವರನ್ನೂ ಕರೆ ತರುತ್ತಿದ್ದಾರೆ.

ಇತ್ತೀಚೆಗೆ ಚಿತ್ರಮಂದಿರದಲ್ಲಿ ಬಿಡುಗಡೆ ಆಗುತ್ತಿರುವ ಸಿನಿಮಾಗಳು ಒಂದು ತಿಂಗಳು ಕಳೆಯುತ್ತಿದ್ದಂತೆ ಒಟಿಟಿಗೆ ಲಗ್ಗೆ ಇಡುತ್ತಿವೆ. ಈಗಂತೂ ಅಮೆಜಾನ್‌ ಪ್ರೈಂ, ಜೀ ಕನ್ನಡ, ನೆಟ್‌ಫ್ಲಿಕ್ಸ್‌, ಡಿಸ್ನಿ ಹಾಟ್‌ ಸ್ಟಾರ್‌, ಜಿಯೋ ಸೇರಿದಂತೆ ಅನೇಕ ಒಟಿಟಿ ವೇದಿಕೆಗಳು ಹೊಸ ಹೊಸ ಕಂಟೆಂಟ್‌ಗಳನ್ನು ನೀಡುತ್ತಿವೆ. ಒಟಿಟಿಗೆಂದೇ ಪ್ರತ್ಯೇಕ ವ್ಯೂವರ್ಸ್‌ ಬಳಗ ಸೃಷ್ಟಿಯಾಗಿದೆ. ಚಿತ್ರಮಂದಿರದಲ್ಲಿ ದೊಡ್ಡ ಪರದೆಯಲ್ಲಿ ನೋಡಿದರೂ, ಮನೆಯಲ್ಲಿ ಕುಳಿತು ತಮಗಿಷ್ಟವಾದ ಅಡುಗೆ ಮಾಡಿಕೊಂಡು ತಿಂಡಿ ಸವಿಯುವುದರ ಜೊತೆಗೆ ತಮಗಿಷ್ಟವಾದ ಸಿನಿಮಾ ಕಥೆಯನ್ನೂ ಆಸ್ವಾದಿಸುತ್ತಾ ಎಂಜಾಯ್‌ ಮಾಡಲು ಕೆಲವರು ಇಷ್ಟಪಡುತ್ತಾರೆ. ಹಾಗೇ ಒಟಿಟಿಯಲ್ಲಿ ಕ್ರೈಂ, ಥ್ರಿಲ್ಲರ್‌, ಲವ್‌, ಹಾರರ್‌, ಕಾಮಿಡಿ, ಸೈನ್ಸ್‌ ಫಿಕ್ಷನ್‌ ಸಿನಿಮಾಗಳು ಒಟ್ಟಿಗೆ ಸಿಗುವುದರಿಂದ ಹೆಚ್ಚು ಮಂದಿ ಒಟಿಟಿ ಹಿಂದೆ ಬಿದ್ದಿದ್ದಾರೆ.

ಕಾನ್‌ಸ್ಟೇಬಲ್‌ ಸುತ್ತ ಸುತ್ತುವ ಕಥೆ

ಲಾಫಿಂಗ್‌ ಬುದ್ಧ ಕೂಡಾ ಕಾಮಿಡಿ ಕಂಟೆಂಟ್‌ ಇರುವ ಸಿನಿಮಾ. ಶಿವಮೊಗ್ಗದ ನೀರೂರು ಪೊಲೀಸ್‌ ಠಾಣೆಯಲ್ಲಿ ಕೆಲಸ ಮಾಡುವ ಗೋವರ್ಧನ್‌ ಎಂಬ ಕಾನ್‌ಸ್ಟೇಬಲ್‌ ಭೋಜನಪ್ರಿಯ, ಜೊತೆಗೆ ತನ್ನ ಕೈಗೆ ಬಂದ ಕೇಸ್‌ಗಳನ್ನೂ ಸುಲಭವಾಗಿ ಪರಿಹರಿಸುವ ಪ್ರತಿಭೆ ಹೊಂದಿರುತ್ತಾನೆ. ಆದರೆ ಗೋವರ್ಧನ್‌ ಆಗ್ಗಾಗ್ಗೆ ಆಪ್ತರಿಂದ ಬಾಡಿ ಶೇಮಿಂಗ್‌ಗೆ ಒಳಗಾಗುತ್ತಾನೆ. ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಗೋವರ್ಧನ್‌ಗೆ ತನ್ನ ಡೊಳ್ಳು ಹೊಟ್ಟೆಯಿಂದಲೇ ಕೆಲಸದಿಂದ ವಜಾಗೊಳ್ಳುವ ಪರಿಸ್ಥಿತಿ ಎದುರಾಗುತ್ತದೆ. ಇಲ್ಲಿಂದ ಅಸಲಿ ಕಥೆ ಶುರುವಾಗುತ್ತದೆ. ಗೋವರ್ಧನ್‌ ಕೆಲಸ ಉಳಿಸಿಕೊಳ್ಳಲು ಹೊಟ್ಟೆ ಕರಗಿಸಿಕೊಳ್ಳುವನಾ? ತಾನು ಬಹಳ ಪ್ರೀತಿಸುವ ಊಟ ಬಿಡುತ್ತಾನಾ ಅನ್ನೋದನ್ನು ತಿಳಿಯಲು ಸಿನಿಮಾ ನೋಡಬೇಕು.

ಈ ಚಿತ್ರಕ್ಕಾಗಿ ಪ್ರಮೋದ್‌ ಶೆಟ್ಟಿ 30 ಕಿಲೋ ತೂಕ ಹೆಚ್ಚಿಸಿಕೊಂಡಿದ್ದರು. ಚಿತ್ರವನ್ನು ರಿಷಬ್‌ ಶೆಟ್ಟಿ ಫಿಲ್ಮ್ಸ್‌ ಬ್ಯಾನರ್‌ ಅಡಿಯಲ್ಲಿ ರಿಷಬ್‌ ಶೆಟ್ಟಿ ನಿರ್ಮಿಸಿದ್ದು ಭರತ್‌ ರಾಜ್‌ ನಿರ್ದೇಶನ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ವಿಷ್ಣು ವಿಜಯ್‌ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಪ್ರಮೋದ್‌ ಶೆಟ್ಟಿ ಜೊತೆಗೆ ತೇಜು ಬೆಳವಾಡಿ, ಸುಂದರ್‌ ರಾಜ್‌, ದಿಗಂತ್‌ ಹಾಗೂ ಇನ್ನಿತರರು ನಟಿಸಿದ್ದಾರೆ. ಆಗಸ್ಟ್‌ 30 ರಂದು ಥಿಯೇಟರ್‌ಗಳಲ್ಲಿ ತೆರೆ ಕಂಡ ಲಾಫಿಂಗ್‌ ಬುದ್ಧ ಅಕ್ಟೋಬರ್‌ ಮೊದಲ ವಾರದಲ್ಲಿ ಒಟಿಟಿಯಲ್ಲಿ ಸ್ಟ್ರೀಮ್‌ ಆಗಲಿದೆ, ದಿನಾಂಕ ಹಾಗೂ ಪ್ಲಾಟ್‌ಫಾರ್ಮ್‌ ಬಗ್ಗೆ ಚಿತ್ರತಂಡ ಶೀಘ್ರದಲ್ಲೇ ಮಾಹಿತಿ ಹಂಚಿಕೊಳ್ಳಲಿದೆ.

mysore-dasara_Entry_Point