Kannada Classic Movies: ಸ್ಯಾಂಡಲ್‌ವುಡ್‌ನ 10 ಅಗ್ರ ಕ್ಲಾಸಿಕ್‌ ಸಿನಿಮಾಗಳಿವು, ಬಂಗಾರದ ಮನುಷ್ಯನಿಂದ ಚೋಮನ ದುಡಿಯವರೆಗೆ
ಕನ್ನಡ ಸುದ್ದಿ  /  ಮನರಂಜನೆ  /  Kannada Classic Movies: ಸ್ಯಾಂಡಲ್‌ವುಡ್‌ನ 10 ಅಗ್ರ ಕ್ಲಾಸಿಕ್‌ ಸಿನಿಮಾಗಳಿವು, ಬಂಗಾರದ ಮನುಷ್ಯನಿಂದ ಚೋಮನ ದುಡಿಯವರೆಗೆ

Kannada Classic Movies: ಸ್ಯಾಂಡಲ್‌ವುಡ್‌ನ 10 ಅಗ್ರ ಕ್ಲಾಸಿಕ್‌ ಸಿನಿಮಾಗಳಿವು, ಬಂಗಾರದ ಮನುಷ್ಯನಿಂದ ಚೋಮನ ದುಡಿಯವರೆಗೆ

Top 10 kannada classic movies: ಕನ್ನಡ ಚಿತ್ರರಂಗವು ನೂರಾರು ಅದ್ಭುತ ಸಿನಿಮಾಗಳನ್ನು ನೀಡಿದೆ. ಕನ್ನಡ ಹಳೆಯ ಸಿನಿಮಾಗಳಲ್ಲಿ ಪ್ರಮುಖವಾದ ಹತ್ತು ಸಿನಿಮಾಗಳ ವಿವರ ಇಲ್ಲಿ ನೀಡಲಾಗಿದೆ. ಡಾ. ರಾಜ್‌ಕುಮಾರ್‌ ನಟನೆಯ ಬಂಗಾರದ ಮನುಷ್ಯ ಸೇರಿದಂತೆ ಹಲವು ಸಿನಿಮಾಗಳನ್ನು ಈ ಕ್ಲಾಸಿಕ್‌ ಪಟ್ಟಿಯಲ್ಲಿ ನೀಡಲಾಗಿದೆ.

Kannada Classic Movies: ಸ್ಯಾಂಡಲ್‌ವುಡ್‌ನ 10 ಅಗ್ರ ಕ್ಲಾಸಿಕ್‌ ಸಿನಿಮಾಗಳಿವು
Kannada Classic Movies: ಸ್ಯಾಂಡಲ್‌ವುಡ್‌ನ 10 ಅಗ್ರ ಕ್ಲಾಸಿಕ್‌ ಸಿನಿಮಾಗಳಿವು

ಕನ್ನಡದ ಹಳೆಯ ಹತ್ತು ಸಿನಿಮಾಗಳ ಹೆಸರು ಹೇಳಿ ಎಂದಾಗ ಸಾಕಷ್ಟು ಸಿನಿಮಾಗಳು ನೆನಪಿಗೆ ಬರಬಹುದು. ಬಹುತೇಕರು ಬಂಗಾರದ ಮನುಷ್ಯ ಎಂದು ಹೇಳಬಹುದು. ಕೆಲವರಿಗೆ ಚೋಮನ ದುಡಿ ನೆನಪಿಗೆ ಬರಬಹುದು. ಮಾನಸ ಸರೋವರ, ನಾಗರಹೂವು, ಬಬ್ರುವಾಹನ, ಭೂತಯ್ಯನ ಮಗ ಅಯ್ಯ, ಮಯೂರ, ಬಂಗಾರದ ಪಂಜರ, ಗೀತು, ಶರಪಂಜರ, ಎರಡು ಕನಸು, ಎಡಕಲ್ಲು ಗುಡ್ಡದ ಮೇಲೆ, ಬಂಕರ್‌ ಮಾರ್ಗಯ್ಯ, ಮಹಾಕ್ಷತ್ರೀಯ, ಅಮೃತವರ್ಷಿನಿ, ಮೇಯರ್‌ ಮುತ್ತಣ್ಣ, ನೋಡಿ ಸ್ವಾಮಿ ನಾವಿರೊದೇ ಹೀಗೆ, ನಮ್ಮೂರ ಮಂದಾರ ಹೂವೆ, ಆಕ್ಸಿಡೆಂಟ್‌, ಕಸ್ತೂರಿ ನಿವಾಸ, ಬೆಳದಿಂಗಳ ಬಾಲೆ, ಬೆಟ್ಟದ ಹೂವು, ರಂಗನಾಯಕಿ, ಸಂಸ್ಕಾರ, ಘಟಶ್ರಾದ್ಧ ಗೆಜ್ಜೆ ಪೂಜೆ, ಬೆಳ್ಳಿ ಮೋಡ ಹೀಗೆ ಹತ್ತು ಹಲವು ಸಿನಿಮಾಗಳು ನೆನಪಿಗೆ ಬರಬಹುದು. ಇಲ್ಲಿ ಹತ್ತು ಕ್ಲಾಸಿಕ್‌ ಸಿನಿಮಾಗಳ ವಿವರ ನೀಡಲಾಗಿದೆ.

ಬಂಗಾರದ ಮನುಷ್ಯ

ಡಾ. ರಾಜ್‌ಕುಮಾಆರ್‌ ನಟನೆಯ ಬಂಗಾರದ ಮನುಷ್ಯ ಕನ್ನಡದ ಬಂಗಾರದಂತಹ ಸಿನಿಮಾ. ಇದು ಚಿತ್ರಮಂದಿರಗಳಲ್ಲಿ ಎರಡು ವರ್ಷಗಳ ಕಾಲ ಓಡಿತ್ತು. ಅಣ್ಣಾವ್ರು ಈ ಸಿನಿಮಾದಲ್ಲಿ ರಾಜೀವಪ್ಪನ ಪಾತ್ರದಲ್ಲಿ ಜನರ ಮನಸ್ಸು ತಟ್ಟಿದ್ದರು. ರಾಜ್‌ ಕುಮಾರ್‌ ಮತ್ತು ಭಾರತಿ ವಿಷ್ಣುವರ್ಧನ್‌ ಅಭಿನಯದ ಈ ಸಿನಿಮಾ 1972ರ ಮಾರ್ಚ್‌ನಲ್ಲಿ ಬಿಡುಗಡೆಯಾಗಿತ್ತು.

ಮಯೂರ

1975ರಲ್ಲಿ ತೆರೆಕಂಡ ಮಯೂರ ಕೂಡ ಡಾ. ರಾಜ್‌ಕುಮಾರ್‌ ನಟನೆಯ ಚಿತ್ರ. ಕದಂಬರ ಮೊದಲ ದೊರೆ, ಕನ್ನಡದ ಮೊದಲ ದೊರೆ ಮಯೂರವರ್ಮನ ಕಥೆಯನ್ನು ಹೊಂದಿದೆ. ಈ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ನಟಿ ಮಂಜುಳಾ ಬದಲು ಬೇರೊಬ್ಬ ನಟಿಯನ್ನು ರಾಜಕುಮಾರಿಯಾಗಿ ನಿಲ್ಲಿಸಲಾಗಿತ್ತು. ಈ ಸಿನಿಮಾದಲ್ಲಿ ಶಕ್ತಿಪ್ರಸಾದ್‌ ಜತೆ ಅಶ್ವಥ್‌ ಸಾಹಸವಿತ್ತು. ಮಯೂರ ಸಿನಿಮಾದ ಕಥೆಯ ಛಾಯೆ ತೆಲುಗಿನ ಬಾಹುಬಲಿ ಸಿನಿಮಾದಲ್ಲಿದೆ.

ಜೀವನಚೈತ್ರ

1988ರ ಜೀವನಚೈತ್ರವು ಕನ್ನಡದ ಅತ್ಯುತ್ತಮ ಕ್ಲಾಸಿಕ್‌ ಚಿತ್ರ. ರಾಜ್‌ಕುಮಾರ್‌, ಮಾಧವಿ ನಟನೆಯ ಈ ಸಿನಿಮಾಕ್ಕೆ ದೊರೈ ಭಗವಾನ್‌ ನಿರ್ದೇಶನವಿದೆ. ಮದ್ಯಪಾನದ ದುಷ್ಪರಣಾಮಗಳ ಬಗ್ಗೆ ಈ ಚಿತ್ರ ಮಾತನಾಡುತ್ತದೆ. ಈ ಸಿನಿಮಾ ಬಿಡುಗಡೆಯಾದ ಬಳಿಕ ಅಣ್ಣಾವ್ರ ಹಲವು ಅಭಿಮಾನಿಗಳು ಮದ್ಯಪಾನ ತ್ಯಜಿಸಿದ್ದರು. ಹಲವು ಮದ್ಯದಂಗಡಿಗಳಿಗೆ ಬಾಗಿಲು ಹಾಕಲಾಯಿತು.

ಮನೆ (1991)

ಗಿರೀಶ್‌ ಕಾಸರವಳ್ಳಿ ನಿರ್ದೇಶನದ ಮನೆ ಸಿನಿಮಾ ಕೂಡ ಕನ್ನಡದ ಪ್ರಮುಖ ಕ್ಲಾಸಿಕ್‌ ಸಿನಿಮಾಗಳಲ್ಲಿ ಒಂದಾಗಿದೆ. ಹಿಂದಿ ಚಿತ್ರರಂಗದ ಖ್ಯಾತ ನಟ ನಾಸಿರುದ್ದೀನ್‌ ಶಾಹ್ ನಟಿಸಿದ್ದಾರೆ.

ಸಂಸ್ಕಾರ

ಗಿರೀಶ್‌ ಕಾರ್ನಾಡ್‌ ಮತ್ತು ಸ್ನೇಹಲತಾ ರೆಡ್ಡಿ ಅಭಿನಯದ ಸಂಸ್ಕಾರ ಸಿನಿಮಾ 1970ರಲ್ಲಿ ಬಿಡುಗಡೆಯಾಗಿತ್ತು.

ನಾಗರಹಾವು

1972ರಲ್ಲಿ ಬಿಡುಗಡೆಯಾದ ನಾಗರಹಾವು ಸಿನಿಮಾವು ಕನ್ನಡದ ಪ್ರಮುಖ ಕ್ಲಾಸಿಕ್‌ ಸಿನಿಮಾಗಳಲ್ಲಿ ಒಂದಾಗಿದೆ. ಡಾ. ವಿಷ್ಣುವರ್ಧನ್‌, ಆರತಿ ಅಭಿನಯದ ಈ ಸಿನಿಮಾದ ಹಾವಿನ ದ್ವೇಷ, ಕರ್ಪೂರದ ಗೊಂಬೆ, ಕನ್ನಡ ನಾಡಿನ ವೀರ ವನಿತೆ, ಸಂಗಮ, ಕಥೆ ಹೇಳುವೆ ಮುಂತಾದ ಹಾಡುಗಳು ಈಗಲೂ ಫೇಮಸ್‌.

ಈ ಆರು ಸಿನಿಮಾಗಳು ಮಾತ್ರವಲ್ಲದೆ ಕನ್ನಡದ ಅಗ್ರ ಹತ್ತು ಕ್ಲಾಸಿಕ್‌ ಸಿನಿಮಾಗಳ ಪಟ್ಟಿಯಲ್ಲಿ ಕಸ್ತೂರಿ ನಿವಾಸ, ಶಂಕರ್‌ ಗುರು, ಉಪಾಸನೆ, ಚೋಮನ ದುಡಿ ಮುಂತಾದ ಸಿನಿಮಾಗಳನ್ನು ಸೇರಿಸಿಕೊಳ್ಳಬಹುದು.

Whats_app_banner