ಧ್ರುವ ಸರ್ಜಾ ಮಾರ್ಟಿನ್‌ ಸಿನಿಮಾ ಬಗ್ಗೆ ನೆಗೆಟಿವ್‌ ರಿವ್ಯೂ ಹೇಳಿದ್ದ ಯೂಟ್ಯೂಬರ್‌ ಸುಧಾಕರ್‌ ವಿರುದ್ಧ ಮತ್ತೊಂದು ಕೇಸ್‌
ಕನ್ನಡ ಸುದ್ದಿ  /  ಮನರಂಜನೆ  /  ಧ್ರುವ ಸರ್ಜಾ ಮಾರ್ಟಿನ್‌ ಸಿನಿಮಾ ಬಗ್ಗೆ ನೆಗೆಟಿವ್‌ ರಿವ್ಯೂ ಹೇಳಿದ್ದ ಯೂಟ್ಯೂಬರ್‌ ಸುಧಾಕರ್‌ ವಿರುದ್ಧ ಮತ್ತೊಂದು ಕೇಸ್‌

ಧ್ರುವ ಸರ್ಜಾ ಮಾರ್ಟಿನ್‌ ಸಿನಿಮಾ ಬಗ್ಗೆ ನೆಗೆಟಿವ್‌ ರಿವ್ಯೂ ಹೇಳಿದ್ದ ಯೂಟ್ಯೂಬರ್‌ ಸುಧಾಕರ್‌ ವಿರುದ್ಧ ಮತ್ತೊಂದು ಕೇಸ್‌

ಧ್ರುವ ಸರ್ಜಾ ಅಭಿನಯದ ಮಾರ್ಟಿನ್‌ ಚಿತ್ರದ ಬಗ್ಗೆ ನೆಗೆಟಿವ್‌ ವಿಮರ್ಶೆ ನೀಡಿ ಅಭಿಮಾನಿಗಳ ಕೋಪಕ್ಕೆ ಗುರಿಯಾಗಿದ್ದ ಯೂಟ್ಯೂಬರ್‌ ಸುಧಾಕರ್‌ ಗೌಡ ವಿರುದ್ಧ ಮತ್ತೊಂದು ಕೇಸ್‌ ದಾಖಲಾಗಿದೆ. 7 ವರ್ಷಗಳ ಹಿಂದೆ ನಡೆದಿದ್ದ ಹಲ್ಲೆ ಪ್ರಕರಣವೊಂದರಲ್ಲಿ ಸುಧಾಕರ್‌ ಹೆಸರು ಕೇಳಿಬಂದಿದ್ದು ಕೋರ್ಟ್‌ಗೆ ಹಾಜರಾಗುವಂತೆ ಪೊಲೀಸರು ಸೂಚಿಸಿದ್ದಾರೆ.

ಧ್ರುವ ಸರ್ಜಾ ಅಭಿನಯದ ಮಾರ್ಟಿನ್‌ ಚಿತ್ರದ ಬಗ್ಗೆ ನೆಗೆಟಿವ್‌ ವಿಮರ್ಶೆ ನೀಡಿದ್ದ ಯೂಟ್ಯೂಬರ್‌ ಸುಧಾಕರ್‌ ವಿರುದ್ಧ ಹಲ್ಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕೇಸ್‌ ದಾಖಲಾಗಿದೆ.
ಧ್ರುವ ಸರ್ಜಾ ಅಭಿನಯದ ಮಾರ್ಟಿನ್‌ ಚಿತ್ರದ ಬಗ್ಗೆ ನೆಗೆಟಿವ್‌ ವಿಮರ್ಶೆ ನೀಡಿದ್ದ ಯೂಟ್ಯೂಬರ್‌ ಸುಧಾಕರ್‌ ವಿರುದ್ಧ ಹಲ್ಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕೇಸ್‌ ದಾಖಲಾಗಿದೆ. (PC: Vasavi Enter Prises, Sudhakar Gowda R )

ಕಳೆದ ಶುಕ್ರವಾರ ತೆರೆ ಕಂಡ ಮಾರ್ಟಿನ್‌ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆಂಧ್ರ, ತೆಲಂಗಾಣಗಳಲ್ಲಂತೂ ಸಿನಿಮಾ ಕತೆಗಿಂತ ಧ್ರುವ ಸರ್ಜಾ ಪರ್ಸನಾಲಿಟಿಗೆ , ಲುಕ್‌ಗೆ ಶಿಳ್ಳೆ ಹೊಡೆದಿದ್ದರು. ಸಿನಿಮಾ ಬಹಳ ಚೆನ್ನಾಗಿದೆ, ಖಂಡಿತ ಇದು ಮತ್ತೊಂದು ಕೆಜಿಎಫ್‌ ಆಗುತ್ತದೆ ಎಂದು ಬಹುತೇಕರು ಭರವಸೆ ವ್ಯಕ್ತಪಡಿಸಿದ್ದರು.

ಸಿನಿಮಾ ಬಗ್ಗೆ ವ್ಯಂಗ್ಯ ಮಾಡಿದ್ದ ಸುಧಾಕರ್‌ ಗೌಡ

ಮಾರ್ಟಿನ್‌ ಸಕ್ಸಸ್‌ ಬೆನ್ನಲ್ಲೇ ಚಿತ್ರತಂಡ ಕೇಕ್‌ ಕಟ್‌ ಮಾಡಿ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಆದರೆ ಕೆಲವರು ಚಿತ್ರಕ್ಕೆ ಉದ್ದೇಶಪೂರ್ವಕವಾಗಿ ನೆಗೆಟಿವ್‌ ರಿವ್ಯೂ ನೀಡುವುನ್ನು ಕಂಡು ಧ್ರುವ ಸರ್ಜಾ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ನಮ್ಮ ಕನ್ನಡ ಸಿನಿಮಾಗೆ ಬೆಂಬಲ ನೀಡಿ, ನಿಮಗೆ ಒಳ್ಳೆ ರಿವ್ಯೂ ಕೊಡದಿದ್ದರೂ ಪರವಾಗಿಲ್ಲ, ಆದರೆ ಬೇಕಂತಲೇ ನೆಗೆಟಿವ್‌ ನೀಡಬೇಡಿ ಎಂದು ಮನವಿ ಮಾಡಿದ್ದರು. ಇಷ್ಟಾದರೂ ಸುಧಾರಕರ್‌ ಗೌಡ ಎಂಬ ಯೂಟ್ಯೂಬರ್‌, ಮಾರ್ಟಿನ್‌ ಚಿತ್ರದ ಬಗ್ಗೆ ತಮ್ಮ ಯೂಟ್ಯೂಬ್‌ನಲ್ಲಿ ನೆಗೆಟಿವ್‌ ವಿಮರ್ಶೆ ನೀಡಿದ್ದರು. ಈಗ ಸೋಷಿಯಲ್‌ ಮೀಡಿಯಾದಲ್ಲಿ ಸ್ಟ್ರಾಂಗ್‌ ಸುಧಾರಕರ್‌ ಎಂದೇ ಫೇಮಸ್‌. ಚಿತ್ರದ ಡೈಲಾಗ್‌ ಹಾಗೂ ಧ್ರುವ ಸರ್ಜಾ ಅವರನ್ನು ವ್ಯಂಗ್ಯ ಮಾಡಿದ್ದರು. ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಧ್ರುವ ಸರ್ಜಾ ಅಭಿಮಾನಿಗಳು ಪೊಲೀಸರಿಗೆ ದೂರು ನೀಡಿದ್ದರು.

ವಿಡಿಯೋ ಡಿಲೀಟ್‌ ಮಾಡಿ ಕ್ಷಮೆ ಕೇಳಿದ್ದ ಯೂಟ್ಯೂಬರ್‌

ದೂರು ದಾಖಲಾಗುತ್ತಿದ್ದಂತೆ ಸುಧಾಕರ್‌, ವಿಡಿಯೋ ಡಿಲೀಟ್‌ ಮಾಡಿದ್ದರು. ಮಾದನಾಯಕನ ಹಳ್ಳಿ ಪೊಲೀಸರು ಸುಧಾಕರ್‌ ಗೌಡನನ್ನು ವಶಕ್ಕೆ ಪಡೆದಿದ್ದರು. ಮಾರ್ಟಿನ್‌ ಚಿತ್ರದ ಬಗ್ಗೆ ನೆಗೆಟಿವ್‌ ವಿಮರ್ಶೆ ನೀಡಿದ್ದಕ್ಕೆ ಅಭಿಮಾನಿಗಳ ದೂರಿನ ಆಧಾರದ ಮೇರೆಗೆ ವಾರ್ನ್‌ ಮಾಡಿದ್ದಾರೆ. ನಂತರ ಸುಧಾಕರ್‌ ಕ್ಷಮಾಪಣಾ ಪತ್ರ ಕೂಡಾ ಬರೆದುಕೊಟ್ಟಿದ್ದರು. ಅಷ್ಟೇ ಅಲ್ಲ, ಆತನ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸುಧಾಕರ್‌ 2017ರಲ್ಲಿ ನಡೆದಿದ್ದ ಹಲ್ಲೆ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದ ಆರೋಪ ಎದುರಾಗಿದೆ. ಈ ಸಂಬಂಧ 7 ವರ್ಷಗಳ ಹಿಂದೆ ಕೆಲವರ ವಿರುದ್ದ ಕೇಸ್‌ ದಾಖಲಾಗಿತ್ತು. ಸುಧಾಕರ್‌ ಗೌಡ ವಿರುದ್ಧ ವಾರೆಂಟ್‌ ಕೂಡಾ ಜಾರಿಯಾಗಿತ್ತು. ಕೋರ್ಟ್‌ಗೆ ಹಾಜರಾಗುವಂತೆ ಪೊಲೀಸರು ಎಚ್ಚರಿಕೆ ನೀಡಿರುವುದಾಗಿ ಮಾಹಿತಿ ತಿಳಿದುಬಂದಿದೆ.

ದ್ವಿಪಾತ್ರದಲ್ಲಿ ನಟಿಸಿರುವ ಧ್ರುವ ಸರ್ಜಾ

ಮಾರ್ಟಿನ್‌ ಸಿನಿಮಾ ವಿಚಾರಕ್ಕೆ ಬರುವುದಾದರೆ ಚಿತ್ರದಲ್ಲಿ ಧ್ರುವ ಸರ್ಜಾ ದ್ವಿಪಾತ್ರದಲ್ಲಿ ಅಭಿನಯಿಸಿದ್ದಾರೆ. ಸಿನಿಮಾದಲ್ಲಿ ಆಕ್ಷನ್‌ ದೃಶ್ಯಗಳಿಗೆ ಎಲ್ಲರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಇದು ಧ್ರುವ ಸರ್ಜಾ ವೃತ್ತಿ ಜೀವನದಲ್ಲಿ ಒಂದೊಳ್ಳೆ ಸಿನಿಮಾವಾಗಲಿದೆ ಎಂದು ಸಿನಿಮಾ ನೋಡಿದವರು ಹೇಳುತ್ತಿದ್ದಾರೆ. ಮಾರ್ಟಿನ್‌ ಸಿನಿಮಾಗೆ ವಾಸವಿ ಎಂಟರ್‌ಪ್ರೈಸಸ್‌ ಪ್ರೊಡಕ್ಷನ್ಸ್‌ ಬ್ಯಾನರ್‌ ಅಡಿ ಉದಯ್‌ ಕೆ ಮೆಹ್ತಾ ಬಂಡವಾಳ ಹೂಡಿದ್ದಾರೆ. ಚಿತ್ರದ ಹಾಡುಗಳಿಗೆ ಮಣಿ ಶರ್ಮಾ ಸಂಗೀತ ನೀಡಿದ್ದು, ರವಿ ಬಸ್ರೂರ್‌ ಹಿನ್ನೆಲೆ ಸಂಗೀತ ನೀಡಿದ್ದಾರೆ. ಧ್ರುವ ಸರ್ಜಾ ಜೊತೆಗೆ ವೈಭವಿ ಶಾಂಡಿಲ್ಯ ನಾಯಕಿಯಾಗಿ ನಟಿಸಿದ್ದಾರೆ. ಅನ್ಷೇಷಿ ಜೈನ್‌ ಹಾಡೊಂದರಲ್ಲಿ ಕುಣಿದಿದ್ದಾರೆ. ಸುಕ್ರುತಾ ವಾಘ್ಲೆ , ಚಿಕ್ಕಣ್ಣ, ಸಾಧು ಕೋಕಿಲ , ಮಾಳವಿಕಾ ಅವಿನಾಶ್‌, ಅಚ್ಯುತ್‌ ಕುಮಾರ್ ಹಾಗೂ ಇನ್ನಿತರರು ಚಿತ್ರದಲ್ಲಿದ್ದಾರೆ.

Whats_app_banner