Akka Anu: ಅಸಹ್ಯ ಎಂದು ಅಣಕಿಸಿದವರಿಗೆ ಟಕ್ಕರ್‌, ಅವಮಾನಗಳನ್ನು ನೆನೆದು ವೇದಿಕೆ ಮೇಲೆಯೇ ಕಣ್ಣೀರಿಟ್ಟ ಕೆಚ್ಚೆದೆಯ ಕನ್ನಡತಿ ಅಕ್ಕ ಅನು!
ಕನ್ನಡ ಸುದ್ದಿ  /  ಮನರಂಜನೆ  /  Akka Anu: ಅಸಹ್ಯ ಎಂದು ಅಣಕಿಸಿದವರಿಗೆ ಟಕ್ಕರ್‌, ಅವಮಾನಗಳನ್ನು ನೆನೆದು ವೇದಿಕೆ ಮೇಲೆಯೇ ಕಣ್ಣೀರಿಟ್ಟ ಕೆಚ್ಚೆದೆಯ ಕನ್ನಡತಿ ಅಕ್ಕ ಅನು!

Akka Anu: ಅಸಹ್ಯ ಎಂದು ಅಣಕಿಸಿದವರಿಗೆ ಟಕ್ಕರ್‌, ಅವಮಾನಗಳನ್ನು ನೆನೆದು ವೇದಿಕೆ ಮೇಲೆಯೇ ಕಣ್ಣೀರಿಟ್ಟ ಕೆಚ್ಚೆದೆಯ ಕನ್ನಡತಿ ಅಕ್ಕ ಅನು!

ನಾನೂ ಸುಮಾರು ಸೇವೆಗಳನ್ನು ಮಾಡಿದ್ದೇನೆ. ಕ್ಯಾಮರಾ ಮುಂದೆ ತೋರಿಸಿಕೊಳ್ಳದಂತಹ ಸಾಕಷ್ಟು ಕೆಲಸ ಮಾಡಿದ್ದೇನೆ. ಹಾಗಂತ ಊಟ ಇಲ್ಲದವರಿಗೆ ಊಟ ಕೊಟ್ಟಿದ್ದನ್ನು ನಾನು ಕ್ಯಾಮರಾ ಮುಂದೆ ತೋರಿಸಿಲ್ಲ- ಜೀ ಕನ್ನಡ ನೀಡಿದ ಸ್ತ್ರೀ 2024 ಪ್ರಶಸ್ತಿ ಸ್ವೀಕರಿಸಿದ ಸಮಾಜ ಸೇವಕಿ ಅಕ್ಕ ಅನು ಮಾತನಾಡಿದ್ದಾರೆ.

Akka Anu: ಅಸಹ್ಯ ಎಂದು ಅಣಕಿಸಿದವರಿಗೆ ಟಕ್ಕರ್‌, ಅವಮಾನಗಳನ್ನು ನೆನೆದು ವೇದಿಕೆ ಮೇಲೆಯೇ ಕಣ್ಣೀರಿಟ್ಟ ಕೆಚ್ಚೆದೆಯ ಕನ್ನಡತಿ ಅಕ್ಕ ಅನು!
Akka Anu: ಅಸಹ್ಯ ಎಂದು ಅಣಕಿಸಿದವರಿಗೆ ಟಕ್ಕರ್‌, ಅವಮಾನಗಳನ್ನು ನೆನೆದು ವೇದಿಕೆ ಮೇಲೆಯೇ ಕಣ್ಣೀರಿಟ್ಟ ಕೆಚ್ಚೆದೆಯ ಕನ್ನಡತಿ ಅಕ್ಕ ಅನು!

Akka Anu: ತಮ್ಮ ವಿಶಿಷ್ಟ ಸಮಾಜ ಸೇವೆಯ ಮೂಲಕವೇ ಸೋಷಿಯಲ್‌ ಮೀಡಿಯಾದಲ್ಲಿ ಗುರುತಿಸಿಕೊಂಡಿದ್ದಾರೆ ಅಕ್ಕ ಅನು. ತಮ್ಮದೇ ಆದ ತಂಡ ಕಟ್ಟಿಕೊಂಡು, ರಾಜ್ಯದಲ್ಲಿನ ನೂರಾರು ಸರ್ಕಾರಿ ಶಾಲೆಗಳನ್ನು ತಮ್ಮ ಸ್ವಂತ ಖರ್ಚಿನಲ್ಲಿಯೇ ಅಂದಗಾಣಿಸುವ ಕೆಲಸ ಮಾಡುತ್ತಿದ್ದಾರೆ ಅಕ್ಕ ಅನು. ಕಳೆದ ನಾಲ್ಕು ವರ್ಷಗಳಿಂದ ಈ ಕೆಲಸ ಮಾಡುತ್ತಲೇ ಬಂದ ಅಕ್ಕ ಅನುಗೆ ಈಗಾಗಲೇ ಸಂಘ ಸಂಸ್ಥೆಗಳಿಂದ ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳೂ ಸಂದಿವೆ. ಈಗ ಈ ನಿಸ್ವಾರ್ಥ ಸೇವೆಗೆ ಜೀ ಕನ್ನಡದಿಂದಲೂ ಸ್ತ್ರೀ ಅವಾರ್ಡ್‌ ಸಿಕ್ಕಿದೆ. ಇದೇ ವೇಳೆ ತಮ್ಮ ಈ ಪಯಣದ ಬಗ್ಗೆಯೂ ಮಾತನಾಡಿದ್ದಾರೆ ಅಕ್ಕ ಅನು.

ಆಸೆಯೇ ದುಃಖಕ್ಕೆ ಮೂಲ ಎಂಬ ಮಾತಿನ ವ್ಯಾಖ್ಯಾನ ನೀಡಿದ ಅಕ್ಕ ಅನು, ನಾವು ಜಾಸ್ತಿ ಆಸೆಗಳನ್ನು ಇಟ್ಟುಕೊಂಡಾಗ, ಅದು ಕಷ್ಟದ ರೀತಿ ಫೀಲ್‌ ಆಗುತ್ತೆ. ನಾವಿಷ್ಟೇ, ನಾರ್ಮಲ್‌ ಜನ ಹೇಗಿದ್ದಾರೋ ನಾವೂ ಹಾಗೇ ಎಂದು ಅಂದುಕೊಳ್ಳಬೇಕು. ಅದನ್ನು ಬಿಟ್ಟು ನಮಗಿಂತ ದೊಡ್ಡವರಿಗೆ ಹೋಲಿಕೆ ಮಾಡಿಕೊಂಡರೆ, ಅನಾರೋಗ್ಯಕ್ಕೂ ತುತ್ತಾಗ್ತೀವಿ. ಇದ್ದಿದ್ದರಲ್ಲಿಯೇ ಬದುಕಬೇಕು. ಸ್ವಾರ್ಥ ನಿಸ್ವಾರ್ಥ ಎಂಬುದು ಸುಳಿಯಲ್ಲ, ಆಗ ಖುಷಿಯಾಗಿ ಇರ್ತೀವಿ ಎಂದಿದ್ದಾರೆ.

ನಾನಿಲ್ಲಿ ಯಾರಿಗೂ ದುಡು ಕೊಡ್ತಿಲ್ಲ..

ಈ ರೀತಿಯ ಪ್ರಶಸ್ತಿ ಪಡೆಯುವುದರಿಂದ ನನ್ನ ತಂಡವೂ ಮುನ್ನೆಲೆಗೆ ಬರಲಿದೆ ಎನ್ನುವ ಅವರು, ನಾನು ಈ ರೀತಿ ಮುಂದೆ ಬಂದು ಪ್ರಶಸ್ತಿ ಸ್ವೀಕರಿಸುತ್ತಿದ್ದೇನೆ ಎಂದರೆ, ನನ್ನ ತಂಡದವರೂ ಈ ಮೂಲಕ ನಾಡಿಗೆ ಪರಿಚಯವಾಗ್ತಾರೆ. ಇನ್ನೊಂದು ವಿಷಯ ಏನೆಂದರೆ, ನಾನು ಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತಿರುವುದರಿಂದ, ನಾನು ಜನಗಳಿಗೆ ಗೊತ್ತಾಗಲೇ ಬೇಕು. ಕೆಲವರು ಹೇಳ್ತಾರೆ, ಒಂದು ಕೈಯಿಂದ ಮಾಡಿದ್ದು, ಇನ್ನೊಂದಕ್ಕೆ ಗೊತ್ತಾಗಬಾರದು ಅಂತ. ಆದರೆ, ನಾನಿಲ್ಲಿ ಯಾರಿಗೂ ದುಡ್ಡು ಕೊಡ್ತಿಲ್ಲವಲ್ಲ ಎಂದು ಟೀಕೆ ಮಾಡಿವರಿಗೆ ತಿವಿದಿದ್ದಾರೆ.

ಇನ್ನೊಬ್ಬರಿಗೂ ಇದು ಸ್ಫೂರ್ತಿಯಾಗಬೇಕು..

ನಾನು ಮಾಡಿದ್ದನ್ನು ಹೇಳಿಕೊಳ್ಳುವ ಅವಶ್ಯಕತೆ ಇಲ್ಲ ಎನ್ನುವ ಅಕ್ಕ ಅನು, ನಾನೂ ಸುಮಾರು ಸೇವೆಗಳನ್ನು ಮಾಡಿದ್ದೇನೆ. ಕ್ಯಾಮರಾ ಮುಂದೆ ತೋರಿಸಿಕೊಳ್ಳದಂತ ಸಾಕಷ್ಟು ಕೆಲಸ ಮಾಡಿದ್ದೇನೆ. ಹಾಗಂತ ಊಟ ಇಲ್ಲದವರಿಗೆ ಊಟ ಕೊಟ್ಟಿದ್ದನ್ನು ನಾನು ಕ್ಯಾಮರಾ ಮುಂದೆ ತೋರಿಸಿಲ್ಲ. ರಾತ್ರಿಯೆಲ್ಲ ಶಾಲೆಗೆ ಬಣ್ಣ ಹಚ್ಚಿದರೂ ಬೆಳಗ್ಗೆದ್ದು ಅನು ಅಕ್ಕ ಹಚ್ಚಿದಾಳೆ ಅನ್ನೋದು ಎಲ್ಲರಿಗೂ ಗೊತ್ತಾಗುತ್ತೆ. ನಾನು ಹೀಗೆ ವಿಡಿಯೋ ಮಾಡುವುದರ ಉದ್ದೇಶ, ಇದು ಇನ್ನೊಬ್ಬರಿಗೂ ಸ್ಫೂರ್ತಿಯಾಗಲೆಂದು" ಎಂದಿದ್ದಾರೆ.

ನಮ್ಮನ್ನು ನೋಡಿ ಅಸಹ್ಯ ಪಟ್ಟುಕೊಂಡವರೇ ಹೆಚ್ಚು..

ನಮ್ಮ ಕೆಲಸವನ್ನು ಅಣಕಿಸಿದವರೇ ಹೆಚ್ಚು ಎಂದೂ ಹೇಳಿದ್ದಾರೆ. "ಕೆಲವರು ಹೇಳ್ತಾರೆ, ನಿಸ್ವಾರ್ಥ ಸೇವೆ ಮಾಡಿ, ವಿಡಿಯೋ ಹಾಕದೇ ಕೆಲಸ ಮಾಡಿ ಎಂದವರೂ ಸಾಕಷ್ಟು ಜನರಿದ್ದಾರೆ. ಹಾಗೆ ಮಾಡಿದ್ರೆ, ಯಾರಿಗೆ ಗೊತ್ತಾಗ್ತಿತ್ತು. ಶಾಲೆಗಳಿಗೆ ಬಣ್ಣ ಹಚ್ತಿನಿ, ಚರಂಡಿ ಕ್ಲೀನ್‌ ಮಾಡ್ತಿನಿ ಎಂದಾಗ ನಮ್ಮನ್ನು ನೋಡುವ ದೃಷ್ಟಿಯೇ ಬೇರೆ ಆಗಿತ್ತು. ಅಸಹ್ಯ ಪಟ್ಟುಕೊಳ್ಳುತ್ತಿದ್ದರು. ಅಯ್ಯೋ ಥೂ.. ಕೊಚ್ಚಿಯಲ್ಲಿ ಇರ್ತಾರೆ, ಸುಣ್ಣ ಬಣ್ಣ ಬಳೀತಾರೆ, ಇವ್ರು ಕ್ಲೀನೇ ಇರಲ್ಲ.. ಎಂದೂ ಅಣಕಿಸಿದ್ದಾರೆ. ಆಕ್ಚುಲಿ ನಾವು ಕ್ಲೀನ್‌ ಮಾಡೋವ್ರು. ಹಾಗಾಗಿ ನಾವೂ ಕ್ಲೀನ್‌ ಆಗಿಯೇ ಇರ್ತಿವಿ" ಎಂದು ಅಣಕ ಮಾಡಿದವರಿಗೂ ಉತ್ತರ ಕೊಟ್ಟಿದ್ದಾರೆ.

ನನ್ನ ಯೋಗ್ಯತೆಗೆ ತಕ್ಕಷ್ಟು ಕೆಲಸ ಮಾಡಿದ್ದೇನೆ..

"ಸಾಕಪ್ಪ ನನ್ನ ಯೋಗ್ಯತೆಯೇ ಇಷ್ಟು, ನನ್ನ ಕೈಲಾದಷ್ಟು ಮಾಡಿದ್ದೇನೆ. ಆ ಮಕ್ಕಳಿಗೆ ಮುಂದಿನ ನಾಲ್ಕೈದು ವರ್ಷ ಒಂದು ಒಳ್ಳೆಯ ಪರಿಸರ ಕ್ರಿಯೇಟ್‌ ಆಗುತ್ತೆ ಅಲ್ವ ಅಷ್ಟೇ ಸಾಕು. ನನಗೆ ಕೆಲವರು ಟೀಕೆ ಮಾಡಿದ್ದಾರೆ. ಅವರು ನನಗಿಂತ ದೊಡ್ಡವರು ಅಲ್ವಾ? ಹಾಗಾಗಿ ಶಾಲೆಗೆ ಬೇಕಾದ ಆಟೋಪಕರಣ, ಪೀಠೋಪಕರಣವನ್ನ ನೀವು ತಂದುಕೊಡಬಹುದು. ಶಾಲೆಗೆ ಲ್ಯಾಪ್‌ಟಾಪ್‌, ಕಂಪ್ಯೂಟರ್‌ ಸಹ ನೀಡಬಹುದು. ನಾನು ಸರ್ಕಾರಿ ಶಾಲೆಗಳಿಗೆ ಬಣ್ಣ ಬಳಿಯೋ ಕೆಲಸವನ್ನಷ್ಟೇ ಮಾಡಿದ್ದೇನೆ. ನೀವು ಮಕ್ಕಳಿಗೆ ಬೇಕಿರುವುದನ್ನು ಕೊಡಿಸಿ ಎಂದು ಟೀಕಿಸಿದವರಿಗೆ ವೇದಿಕೆ ಮೇಲೆಯೇ ಟಾಂಗ್‌ ಕೊಟ್ಟಿದ್ದಾರೆ ಅಕ್ಕ ಅನು.

Whats_app_banner