ಲಕ್ಷ್ಮಿಕಾಂತ್‌ ಕಣ್ಣಿಗೆ ಬಿದ್ದ ಭಾಗ್ಯಮ್ಮ, ಭಿಕ್ಷುಕಿಯೆಂದು ಅಮ್ಮನಿಗೆ ಭಿಕ್ಷೆ ನೀಡಿದ ಗೌತಮ್‌; ಅಮೃತಧಾರೆ ಧಾರಾವಾಹಿಯಲ್ಲಿ ಲಾಲಿಹಾಡು
ಕನ್ನಡ ಸುದ್ದಿ  /  ಮನರಂಜನೆ  /  ಲಕ್ಷ್ಮಿಕಾಂತ್‌ ಕಣ್ಣಿಗೆ ಬಿದ್ದ ಭಾಗ್ಯಮ್ಮ, ಭಿಕ್ಷುಕಿಯೆಂದು ಅಮ್ಮನಿಗೆ ಭಿಕ್ಷೆ ನೀಡಿದ ಗೌತಮ್‌; ಅಮೃತಧಾರೆ ಧಾರಾವಾಹಿಯಲ್ಲಿ ಲಾಲಿಹಾಡು

ಲಕ್ಷ್ಮಿಕಾಂತ್‌ ಕಣ್ಣಿಗೆ ಬಿದ್ದ ಭಾಗ್ಯಮ್ಮ, ಭಿಕ್ಷುಕಿಯೆಂದು ಅಮ್ಮನಿಗೆ ಭಿಕ್ಷೆ ನೀಡಿದ ಗೌತಮ್‌; ಅಮೃತಧಾರೆ ಧಾರಾವಾಹಿಯಲ್ಲಿ ಲಾಲಿಹಾಡು

ಅಮೃತಧಾರೆ ಧಾರಾವಾಹಿ ನವೆಂಬರ್‌ 27ರ ಸಂಚಿಕೆ: ಅಮೃತಧಾರೆ ಸೀರಿಯಲ್‌ನ ಇಂದಿನ ಸಂಚಿಕೆ ಒಂದಿಷ್ಟು ಟ್ವಿಸ್ಟ್‌ನತ್ತ ಮುಖ ಮಾಡಿದೆ. ಗೌತಮ್‌ ಮತ್ತು ಲಕ್ಷ್ಮಿಕಾಂತ್‌ ಕಾರಿನಲ್ಲಿ ಹೋಗುವಾಗ ಭಾಗ್ಯಮ್ಮ ಕಣ್ಣಿಗೆ ಬಿದ್ದಿದ್ದಾರೆ. ಸದ್ಯದಲ್ಲಿಯೇ ಅಮ್ಮ ಮತ್ತು ಮಗನ ಸಮಾಗಮವಾಗುವ ಸಾಧ್ಯತೆ ಇದೆ.

 ಅಮೃತಧಾರೆ ಧಾರಾವಾಹಿ
ಅಮೃತಧಾರೆ ಧಾರಾವಾಹಿ

ಅಮೃತಧಾರೆ ಧಾರಾವಾಹಿ ನವೆಂಬರ್‌ 27ರ ಸಂಚಿಕೆ: ಸುಧಾ ಗೌತಮ್‌ ಮನೆಯಲ್ಲಿದ್ದಾಳೆ. ಈ ಸಮಯದಲ್ಲಿ ಆಕೆಯ ತಾಯಿಗೆ ಎಚ್ಚರವಾಗಿದೆ. ಅಜ್ಜಿಗೆ ನೀರು ತರಲು ಸುಧಾ ಮಗಳು ಹೊರಗೆ ಹೋಗಿದ್ದಾಳೆ. ಈ ಸಮಯದಲ್ಲಿ ಗೌತಮ್‌ಗೆ ಇಲ್ಲಿ ಅಮ್ಮನ ನೆನಪು ಕಾಡಿದೆ. ಅಲ್ಲಿ ಭಾಗ್ಯಾಳಿಗೂ ಮಗನ ನೆನಪಾಗಿದೆ.ಗುಂಡೂ ಗುಂಡೂ ಎನ್ನುತ್ತಾ ಫೋಟೋ ಹಿಡಿದುಕೊಂಡು ಹೊರಗೆ ಬಂದಿದ್ದಾರೆ. ಹಾಗೇ ಹೊರಕ್ಕೆ ಬಂದಿದ್ದಾರೆ. ಮೊಮ್ಮಗಳು ನೀರು ತಂದಾಗ ಅಲ್ಲಿ ಅಜ್ಜಿ ಇರುವುದಿಲ್ಲ. ಮೊಮ್ಮಗಳು ಮತ್ತು ಪಕ್ಕದ ಮನೆಯ ಆಂಟಿ ಹುಡುಕುತ್ತಾರೆ.

ಅಪೇಕ್ಷಾ ಎಂದಿನಂತೆ ಕೋಪದಲ್ಲಿದ್ದಾಳೆ. ಅಕ್ಕ ಹೇಳಿದ ಮಾತುಗಳು ಆಕೆಯ ಮನಸ್ಸಿಗೆ ಚುಚ್ಚುತ್ತಿವೆ. "ಅಪ್ಪಿ, ಯೋಗಕ್ಕೂ ಯೋಗ್ಯತೆಗೂ ತುಂಬಾ ವ್ಯತ್ಯಾಸ ಇದೆ. ನೀನು ಈ ಮನೆಗೆ ಬಂದಿರೋದು ಯೋಗದಿಂದ, ಯೋಗ್ಯತೆಯಿಂದಲ್ಲ. ನೀನು ಆಗ ಹೇಳಿದ್ಯಲ್ಲ ಸ್ಟೇಟಸ್‌, ಅದು ನಮಗೆ ಸಿಕ್ಕಿರೋದು, ನಾವು ಗಳಿಸಿರೋದಲ್ಲ. ಇದರಲ್ಲಿ ನಿನ್ನ ಸಾಧನೆಯೂ ಇಲ್ಲ, ನನ್ನ ಸಾಧನೆಯೂ ಇಲ್ಲ. ಅಹಂಕಾರದಿಂದ ಮೆರೆಯೋ ಹಕ್ಕು ನಿನಗೂ ಇಲ್ಲ, ನನಗೂ ಇಲ್ಲ" ಎಂದು ಭೂಮಿಕಾ ಹೇಳಿದ ಮಾತುಗಳಿಂದ ಆಕೆ ಕೋಪದಿಂದ ಇದ್ದಾಳೆ. ಎದುರಿಗೆ ಪಾರ್ಥ ಇದ್ದಾನೆ. ಆತ ಏನೆಂದು ಕೇಳಿದಾಗ ಅಪೇಕ್ಷಾ ಅಕ್ಕನ ಕುರಿತು ದೂರು ಹೇಳುತ್ತಾಳೆ. ಆತ ಎಂದಿನಂತೆ ಅತ್ತಿಗೆ ಪರವಾಗಿಯೇ ಮಾತನಾಡುತ್ತಾನೆ. ಇದರಿಂದ ಆಕೆಯ ಕೋಪ ಇನ್ನಷ್ಟು ಜಾಸ್ತಿಯಾಗುತ್ತದೆ.

ಶಕುಂತಲಾದೇವಿ ಬಳಿಗೆ ಸಹೋದರ ಲಕ್ಷ್ಮಿಕಾಂತ್‌ ಬರುತ್ತಾನೆ. ಶಕುಂತಲಾದೇವಿ ಕೋಪದಲ್ಲಿದ್ದಾಳೆ. "ರಾತ್ರಿ ನೆಮ್ಮದಿಯಾಗಿ ನಿದ್ದೆ ಮಾಡಲು ಬಿಡೋದಿಲ್ಲ. ಏನೇನೂ ಹೇಳಿ ತಲೆ ಕೆಡಿಸ್ತಿಯಾ" ಎಂದು ಹೇಳುತ್ತಾಳೆ. "ಸಿಸ್ಟರ್‌ ನನಗ್ಯಾಕೆ ಎಲ್ಲವೂ ಅಯೋಮಯ ಅನಿಸ್ತಾ ಇದೆ. ನಾವು ಮರೆತರೂ ನಮ್ಮ ಕರ್ಮ ನಮ್ಮನ್ನು ಹುಡುಕಿಕೊಂಡು ಬಂದು ಹೊಡೆಯುತ್ತೆ ಅನಿಸ್ತಾ ಇದೆ" ಎಂದು ಲಕ್ಷ್ಮಿಕಾಂತ್‌ ಹೇಳುತ್ತಾನೆ. ಹೀಗೆ ಇಬ್ಬರ ಮಾತುಕತೆ ಎಂದಿನಂತೆ ಮುಂದುವರೆಯುತ್ತದೆ.

ಸುಧಾ ಗೌತಮ್‌ನ ಮನೆಯಲ್ಲಿದ್ದಾಳೆ. ಚೆನ್ನಾಗಿ ನಿದ್ದೆ ಮಾಡಿದ್ದಾಳೆ. ಭೂಮಿಕಾ ಮತ್ತು ಗೌತಮ್‌ ಎಂದಿನಂತೆ ಮಾತನಾಡುತ್ತಾರೆ. ಇನ್ನೊಂದೆಡೆ ತಪ್ಪಿಸಿಕೊಂಡ ಭಾಗ್ಯಮ್ಮನನ್ನು ಹುಡುಕುತ್ತಿದ್ದಾರೆ ಪಕ್ಕದ ಮನೆ ಆಂಟಿ ಮತ್ತು ಮೊಮ್ಮಗಳು. "ನಮ್ಮ ಭಾಗ್ಯಮ್ಮನ ನೋಡಿದ್ಯ" "ನಮ್ಮ ಅಜ್ಜಿನ ನೋಡಿದ್ರ" ಎಂದು ಇಬ್ಬರೂ ಹುಡುಕುತ್ತಾ ಇದ್ದಾರೆ. ಸಿಗೋದಿಲ್ಲ. ಸುಧಾ ಕಾಲ್‌ ಮಾಡಿದಾಗ ಪಕ್ಕದ ಮನೆಯವರು "ಅಮ್ಮ ಮೊಮ್ಮಗಳು ಆರಾಮವಾಗಿದ್ದಾರೆ" ಎಂದು ಸುಳ್ಳು ಹೇಳುತ್ತಾರೆ. ಬಳಿಕ ಆತಂಕದಿಂದ ಹುಡುಕುತ್ತಾರೆ.

ಗೌತಮ್‌ ದೇವರಿಗೆ ಪ್ರಾರ್ಥನೆ ಮಾಡುತ್ತಿದ್ದಾರೆ. "ಆದಷ್ಟು ಬೇಗ ನನ್ನ ತಾಯಿ ಮತ್ತು ತಂಗಿ ಸಿಗುವಂತೆ ಮಾಡು" ಎಂದು ಪಾರ್ಥಿಸುತ್ತಾರೆ. ರಮಾಕಾಂತ್‌ ಏನೋ ಯೋಚನೆ ಮಾಡುತ್ತ ವರಾಂಡದಲ್ಲಿ ಸುತ್ತಾಡುತ್ತಿರುವಾಗ ಗೌತಮ್‌ ಬರುತ್ತಾರೆ. ಗೌತಮ್‌ ಮುಂದೆಯೂ "ವೈರಾಗ್ಯ"ದ ಮಾತುಗಳನ್ನು ಆಡುತ್ತಾರೆ. ಇದಾದ ಬಳಿಕ ಗೌತಮ್‌ ತನ್ನ ಜತೆ ರಮಾಕಾಂತ್‌ನನ್ನು ಕರೆದುಕೊಂಡು ಹೊರಗೆ ಹೋಗುತ್ತಾನೆ.

ಇನ್ನೊಂದೆಡೆ ಜೈದೇವ್‌ ಮತ್ತು ದಿಯಾ ಮಾತನಾಡುತ್ತ ಇದ್ದಾರೆ. ನಿನ್ನನ್ನು ಭೇಟಿಯಾಗಲು ಎಷ್ಟು ಕಷ್ಟ, ಪ್ರತಿಸಲ ಹೊಸ ಸುಳ್ಳು ಹೇಳಬೇಕು ಎಂದೆಲ್ಲ ಜೈದೇವ್‌ ಹೇಳುತ್ತಾನೆ. ನಾವು ಗಂಡ ಹೆಂಡತಿ ರೀತಿ ಇರೋದು ಯಾವಾಗ ಎಂದು ದಿಯಾ ಕೇಳುತ್ತಾಳೆ.

ಲಕ್ಷ್ಮಿಕಾಂತ್‌ ಕಣ್ಣಿಗೆ ಬಿದ್ದ ಭಾಗ್ಯಮ್ಮ

ಸುಧಾ ದಾರಿ ತಪ್ಪಿಯಲ್ಲಿ ಬೀದಿಯಲ್ಲಿ ಸುತ್ತುತ್ತಾ ಇದ್ದಾರೆ. ಇನ್ನೊಂದೆಡೆ ಕಾರಿನಲ್ಲಿ ಗೌತಮ್‌ ಮತ್ತು ಲಕ್ಷ್ಮಿಕಾಂತ್‌ ಹೋಗುತ್ತಿದ್ದಾರೆ. ಆಗ ಲಕ್ಷ್ಮಿಕಾಂತ್‌ ಕಣ್ಣಿಗೆ ಭಾಗ್ಯಾ ಕಾಣಿಸುತ್ತಾರೆ. "ಅಯ್ಯೋ, ಗೌತಮ್‌ ಕಣ್ಣಿಗೆ ಭಾಗ್ಯಾ ಕಂಡ್ರೆ ಏನು ಗತಿ" ಎಂದು ರಮಾಕಾಂತ್‌ ಯೋಚನೆ ಮಾಡುತ್ತಾನೆ. ಇದೇ ಸಮಯದಲ್ಲಿ ಭಿಕ್ಷುಕಿಯೆಂದು ಗೌತಮ್‌ 500 ರೂಪಾಯಿಯನ್ನು ಆಕೆಯ ಕೈಗೆ ಇಡುತ್ತಾನೆ. ಆಕೆಯ ಮುಖ ನೋಡುವುದಿಲ್ಲ. ಎಲ್ಲಾದರೂ ಆಕೆಯ ಮುಖ ನೋಡಿದರೆ ಅಮ್ಮ ಮತ್ತು ಮಗನ ಭೇಟಿಯಾಗಲಿದೆ. ನೋಡದೆ ಇದ್ದರೆ ಲಕ್ಷ್ಮಿಕಾಂತ್‌ ಈ ವಿಷಯವನ್ನು ತನ್ನ ಸಹೋದರಿಗೆ ತಿಳಿಸಲಿದ್ದಾನೆ.

ಧಾರಾವಾಹಿ ಹೆಸರು: ಅಮೃತಧಾರೆ.

ಎಪಿಸೋಡ್‌: ನವೆಂಬರ್‌ 27, 2024

ಯಾವ ಚಾನೆಲ್‌: ಜೀ ಕನ್ನಡ

ಪ್ರಸಾರ ಸಮಯ: ಪ್ರತಿದಿನ ರಾತ್ರಿ 7 ಗಂಟೆಗೆ

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ: ಛಾಯಾ ಸಿಂಗ್‌: ಭೂಮಿಕಾ (ನಾಯಕಿ), ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ), ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ), ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ), ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ), ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ), ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ), ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ), ರಾಣವ್‌: ಜೈದೇವ್‌, ಚಂದನ್‌: ಅಶ್ವಿನಿ, ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ), ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ).

Whats_app_banner