Bigg Boss Kannada: ಯಾರಿದು ವರ್ತೂರು ಸಂತೋಷ್‌, ಹಳ್ಳಿಕಾರ್‌ ತಳಿ ಸಂರಕ್ಷಣೆ ಮೂಲಕ ಜನಪ್ರಿಯತೆ ಪಡೆದಿರುವ ಕೃಷಿಕನ ಪರಿಚಯ
ಕನ್ನಡ ಸುದ್ದಿ  /  ಮನರಂಜನೆ  /  Bigg Boss Kannada: ಯಾರಿದು ವರ್ತೂರು ಸಂತೋಷ್‌, ಹಳ್ಳಿಕಾರ್‌ ತಳಿ ಸಂರಕ್ಷಣೆ ಮೂಲಕ ಜನಪ್ರಿಯತೆ ಪಡೆದಿರುವ ಕೃಷಿಕನ ಪರಿಚಯ

Bigg Boss Kannada: ಯಾರಿದು ವರ್ತೂರು ಸಂತೋಷ್‌, ಹಳ್ಳಿಕಾರ್‌ ತಳಿ ಸಂರಕ್ಷಣೆ ಮೂಲಕ ಜನಪ್ರಿಯತೆ ಪಡೆದಿರುವ ಕೃಷಿಕನ ಪರಿಚಯ

Bigg Boss Kannada season 10 contestant: ಬಿಗ್‌ಬಾಸ್‌ ಸೀಸನ್‌ 10ರ ಸ್ಪರ್ಧಿಗಳಲ್ಲಿ ಈ ಬಾರಿ ವರ್ತೂರು ಸಂತೋಷ್‌ ಅವರು ಬಿಗ್‌ಬಾಸ್‌ ಮನೆಯೊಳಗೆ ಹೋಗಲಿದ್ದಾರೆ. ಅಖಿಲ ಭಾರತ ಹಳ್ಳಿಕಾರ್‌ ತಳಿ ಸಂರಕ್ಷಣಾ ಸಮಿತಿಯ ಅಧ್ಯಕ್ಷರಾಗಿರುವ ಇವರ ಕುರಿತು ಸಂಕ್ಷಿಪ್ತ ವಿವರ ಇಲ್ಲಿದೆ.

Bigg Boss Kannada: ಯಾರಿದು ವರ್ತೂರು ಸಂತೋಷ್‌, ಹಳ್ಳಿಕಾರ್‌ ತಳಿ ಸಂರಕ್ಷಣೆ ಮೂಲಕ ಜನಪ್ರಿಯತೆ ಪಡೆದಿರುವ ಕೃಷಿಕನ ಪರಿಚಯ
Bigg Boss Kannada: ಯಾರಿದು ವರ್ತೂರು ಸಂತೋಷ್‌, ಹಳ್ಳಿಕಾರ್‌ ತಳಿ ಸಂರಕ್ಷಣೆ ಮೂಲಕ ಜನಪ್ರಿಯತೆ ಪಡೆದಿರುವ ಕೃಷಿಕನ ಪರಿಚಯ

ಬೆಂಗಳೂರು: ಇನ್ನು ಕೆಲವೇ ನಿಮಿಷಗಳಲ್ಲಿ ಬಿಗ್‌ಬಾಸ್‌ ಕನ್ನಡ ಸೀಸನ್‌ 10 ಆರಂಭವಾಗಲಿದೆ. ಈ ದಿನ ಮೊದಲ ಮೂರು ಸ್ಪರ್ಧಿಗಳು ಬಿಗ್‌ಬಾಸ್‌ ಮನೆಯೊಳಗೆ ಪ್ರವೇಶಿಸಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಈ ಕುರಿತಾದ ಪ್ರಮೋ ಪ್ರಕಟವಾಗಿದೆ. ಈ ಪ್ರಮೋದಲ್ಲಿ ಹಳ್ಳಿಕಾರ್‌ ಒಡೆಯ ವರ್ತೂರು ಸಂತೋಷ್‌ ಅವರನ್ನೂ ತೋರಿಸಲಾಗಿದೆ. ಲವಲವಿಕೆಯಿಂದ ಮಾತನಾಡುವ ಈ ಕೃಷಿಕನ ಆಗಮನವು ಬಿಗ್‌ಬಾಸ್‌ ಮನೆಯೊಳಗೆ ಹೊಸ ಹುರುಪು ತರುವ ನಿರೀಕ್ಷೆಯಿದೆ. ಇವರ ಕುರಿತು ಒಂದಿಷ್ಟು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಅಪ್‌ಡೇಟ್‌: ಹಳ್ಳಿಕಾರ್‌ ಒಡೆಯ ವರ್ತೂರು ಸಂತೋಷ್‌ ಅವರು ಕನಿಷ್ಠ 2 ಅಂಕ ಕಡಿಮೆಯಾಗಿ ಶೇಕಡ 78 ಅಂಕ ಪಡೆದು ವೇಟಿಂಗ್‌ ಲಿಸ್ಟ್‌ನಲ್ಲಿದ್ದಾರೆ.

ಯಾರು ಹಳ್ಳಿಕಾರ್‌ ಒಡೆಯ ವರ್ತೂರು ಸಂತೋಷ್‌?

ಹಳ್ಳಿಕಾರ್‌ ತಳಿಯ ಜಾನುವಾರು ಸಾಕಾಣಿಕೆ ಮೂಲಕ ಜನಪ್ರಿಯತೆ ಪಡೆದಿರುವ ವರ್ತೂರು ಸಂತೋಷ್‌ ಅವರು ಕರ್ನಾಟಕದ ಜನಪ್ರಿಯ ವ್ಯಕ್ತಿ. ಇವರು ಹಳ್ಳಿಕಾರ್‌ ಕ್ಯಾಟಲ್‌ ಬ್ರೀಡ್‌ ಅಥವಾ ಅಖಿಲ ಭಾರತ ಹಳ್ಳಿಕಾರ್‌ ತಳಿ ಸಂರಕ್ಷಣಾ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಇವರು ಹಳ್ಳಿಕಾರ್‌ ಒಡೆಯ ಎಂದೇ ಜನಪ್ರಿಯತೆ ಪಡೆದಿದ್ದಾರೆ.

ಎಜುಕೇಷನ್‌ ಎನ್ನುವುದು ಮಾಹಿತಿ, ಅದೇ ಜೀವನವಲ್ಲ ಎಂದು ಇವರು ಸಂದರ್ಶನವೊಂದರಲ್ಲಿ ಹೇಳಿದ್ದರು. ಹಸು ಸಾಕಲು ಸಾಧ್ಯವಿರುವವರು ಹಸು ಸಾಕ್ರಿ, ಹೋರಿ ಸಾಕೋರು ಹೋರಿ ಸಾಕ್ರಿ, ಒಟ್ಟಾರೆ ಹಳ್ಳಿಕಾರ್‌ ತಳಿ ಉಳಿಸಿ. ಮನೆಯಲ್ಲಿ ಮೂಕ ಜೀವಗಳು ಇರಬೇಕು ಎಂದು ನನ್ನ ಅಜ್ಜಿ ಹೇಳಿದ್ದರು. ಹಳ್ಳಿಕಾರ್‌ ದನ ಸಾಕಲು ಇವರೇ ನನಗೆ ಸ್ಪೂರ್ತಿ" ಎಂದು ಯೂಟ್ಯೂಬ್‌ ಸಂದರ್ಶನವೊಂದರಲ್ಲಿ ಇವರು ಹೇಳಿದ್ದಾರೆ.

ಈ ಬಾರಿ ಬಿಗ್‌ಬಾಸ್‌ ಸೀಸನ್‌ 10ಕ್ಕೆ ಎಂಟ್ರಿ ನೀಡುತ್ತಿರುವ ವರ್ತೂರು ಸಂತೋಷ್‌ ಅವರು ಬಿಗ್‌ಬಾಸ್‌ ಮನೆಗೆ ಕಾಲಿಡುತ್ತಿರುವ ಮೊದಲ ಮೂರು ಸ್ಪರ್ಧಿಗಳಲ್ಲಿ ಒಬ್ಬರು. ಇವರ ಮಾತಿನ ಶೈಲಿಯೂ ಉತ್ತಮವಾಗಿದೆ. ಇವರ ದೇಸಿ ಹಸು ಸಾಕಾಣಿಕೆ ಕುರಿತಾದ ಸಾಕಷ್ಟು ವಿಡಿಯೋಗಳು, ಸಂದರ್ಶನಗಳು ಯೂಟ್ಯೂಬ್‌ನಲ್ಲಿವೆ.

ವರ್ತೂರು ಸಂತೋಷ್‌ ಪ್ರೊಫೈಲ್‌ ಅಪ್‌ಡೇಟ್‌ ಆಗುತ್ತಿದೆ.

ಬುಲೆಟ್‌ ಪ್ರಕಾಶ್‌ ಪುತ್ರ ರಕ್ಷಕ್‌ ಬಿಗ್‌ಬಾಸ್‌ ಎಂಟ್ರಿ

ದಿವಂಗತ ಬುಲೆಟ್‌ ಪ್ರಕಾಶ್‌ ಪುತ್ರ ರಕ್ಷಕ್‌ ಕೂಡ ಬಿಗ್‌ಬಾಸ್‌ ಕನ್ನಡ ಸೀಸನ್‌ 10ರ ಮನೆಯೊಳಗೆ ಪ್ರವೇಶಿಸುತ್ತಿದ್ದಾರೆ. ಇವರು ಬಿಗ್‌ಬಾಸ್‌ ಮನೆಗೆ ಪ್ರವೇಶಿಸುವ ಮೊದಲ ಮೂರು ಸ್ಪರ್ಧಿಗಳಲ್ಲಿ ಒಬ್ಬರು ಎನ್ನಲಾಗಿದೆ. ಇವರು ಗುರು ಶಿಷ್ಯರು ಎನ್ನುವ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

ಬಿಗ್‌ಬಾಸ್‌ ಮನೆಯೊಳಗೆ ಈ ಬಾರಿ ತ್ರಿಪುರ ಸುಂದರಿ ಧಾರಾವಾಹಿ ಖ್ಯಾತಿಯ ಅಭಿನವ್‌ ವಿಶ್ವನಾಥನ್, ಸೋಷಿಯಲ್‌ ಮೀಡಿಯಾ ಇನ್‌ಫ್ಲೂಯೆನ್ಸರ್‌ ಭೂಮಿಕಾ ಬಸವರಾಜ್‌, ನಾಗಿಣಿ ಸೀರಿಯಲ್‌ ಖ್ಯಾತಿಯ ನಮ್ರತಾ ಗೌಡ, ಹರಹರ ಮಹಾದೇವ್‌, ನಮ್ಮ ಲಚ್ಚಿ ಸೀರಿಯಲ್‌ ಖ್ಯಾತಿಯ ವಿನಯ್‌ ಗೌಡ, ಪತ್ರಕರ್ತ ಗೌರೀಶ್‌ ಅಕ್ಕಿ, ಡ್ರೋಣ್‌ ಪ್ರತಾಪ್‌ ಮುಂತಾದವರು ಪ್ರವೇಶಿಸಲಿದ್ದಾರೆ ಎನ್ನಲಾಗಿದೆ.

16 ಸ್ಪರ್ಧಿಗಳ ಮೇಲೆ 73 ಕ್ಯಾಮೆರಾ ಕಣ್ಣು

ಹತ್ತನೇ ಸೀಸನ್ ಕನ್ನಡ ಬಿಗ್ ಬಾಸ್ ನ ವಿಶೇಷಗಳು ಹಲವು. ಇದೇ ಮೊದಲಬಾರಿಗೆ 'ಹ್ಯಾಪಿ ಬಿಗ್ ಬಾಸ್' ಎಂಬ ಥೀಮ್ ಹೊಂದಿರುವುದು ಮೊದಲನೇ ವಿಶೇಷ. ಪ್ರತಿ ವರ್ಷವೂ ನೋಡುಗರು, ಸ್ಪರ್ಧಿಗಳು, ಜಾಹೀರಾತುದಾರರೆಲ್ಲರಿಗೂ ಹಬ್ಬದಂಥ ಸಂಭ್ರಮ ತರುವ ಕಾರ್ಯಕ್ರಮವಾದ ಬಿಗ್ ಬಾಸ್ ನ ಥೀಮ್ ಹ್ಯಾಪಿ ಆಗಿರುವುದು ಸರಿಯಾಗಿಯೇ ಇದೆ. ಹದಿನಾರು ಸ್ಪರ್ಧಿಗಳು ಭಾಗವಹಿಸಲಿರುವ ಈ ಸೀಸನ್ನಿನ ಮನೆಯನ್ನು ಕಾಯಲು 73 ಕ್ಯಾಮರಾಗಳು ಸಜ್ಜಾಗಿವೆ. ಈ ಕುರಿತ ವರದಿ ಇಲ್ಲಿದೆ ಓದಿ

Whats_app_banner