ಮಹಾನಟಿ ರಿಯಾಲಿಟಿ ಶೋ: ಚಿಕ್ಕಮಗಳೂರಿನ ಧನ್ಯಶ್ರೀ, ದಾವಣಗೆರೆಯ ಬಿಂದು ಹೊನ್ನಾಳಿ, ಮೈಸೂರಿನ ಪ್ರಿಯಾಂಕ, ಬೆಂಗಳೂರಿನ ಆಶಿಕಾ ಶರ್ಮಾ ನಟನೆ ನೋಡಿ-television news zee kannada mahanati reality show mega audition chikkamagaluru davanagere mysore bengaluru talents pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಮಹಾನಟಿ ರಿಯಾಲಿಟಿ ಶೋ: ಚಿಕ್ಕಮಗಳೂರಿನ ಧನ್ಯಶ್ರೀ, ದಾವಣಗೆರೆಯ ಬಿಂದು ಹೊನ್ನಾಳಿ, ಮೈಸೂರಿನ ಪ್ರಿಯಾಂಕ, ಬೆಂಗಳೂರಿನ ಆಶಿಕಾ ಶರ್ಮಾ ನಟನೆ ನೋಡಿ

ಮಹಾನಟಿ ರಿಯಾಲಿಟಿ ಶೋ: ಚಿಕ್ಕಮಗಳೂರಿನ ಧನ್ಯಶ್ರೀ, ದಾವಣಗೆರೆಯ ಬಿಂದು ಹೊನ್ನಾಳಿ, ಮೈಸೂರಿನ ಪ್ರಿಯಾಂಕ, ಬೆಂಗಳೂರಿನ ಆಶಿಕಾ ಶರ್ಮಾ ನಟನೆ ನೋಡಿ

Mahanati Realityshow: ಝೀ ಕನ್ನಡ ವಾಹಿನಿಯಲ್ಲಿ ಇಂದು ಅಂದರೆ ಮಾರ್ಚ್‌ 30ರಿಂದ ಮಹಾನಟಿ ರಿಯಾಲಿಟಿ ಶೋ ಆರಂಭವಾಗಲಿದೆ. ವಾಹಿನಿಯು ಚಿಕ್ಕಮಗಳೂರಿನ ಧನ್ಯಶ್ರೀ, ದಾವಣಗೆರೆಯ ಬಿಂದು ಹೊನ್ನಾಳಿ, ಮೈಸೂರಿನ ಪ್ರಿಯಾಂಕ ನಟನೆಯ ಝಲಕ್‌ನ ವಿಡಿಯೋಗಳನ್ನು ಹಂಚಿಕೊಂಡಿದೆ. ಬನ್ನಿ ಆ ವಿಡಿಯೋಗಳನ್ನು ನೋಡೋಣ.

ಮಹಾನಟಿ ರಿಯಾಲಿಟಿ ಶೋ: ಚಿಕ್ಕಮಗಳೂರಿನ ಧನ್ಯಶ್ರೀ, ದಾವಣಗೆರೆಯ ಬಿಂದು ಹೊನ್ನಾಳಿ, ಮೈಸೂರಿನ ಪ್ರಿಯಾಂಕ, ಬೆಂಗಳೂರಿನ ಆಶಿಕಾ ಶರ್ಮಾ ನಟನೆಯ ಝಲಕ್‌
ಮಹಾನಟಿ ರಿಯಾಲಿಟಿ ಶೋ: ಚಿಕ್ಕಮಗಳೂರಿನ ಧನ್ಯಶ್ರೀ, ದಾವಣಗೆರೆಯ ಬಿಂದು ಹೊನ್ನಾಳಿ, ಮೈಸೂರಿನ ಪ್ರಿಯಾಂಕ, ಬೆಂಗಳೂರಿನ ಆಶಿಕಾ ಶರ್ಮಾ ನಟನೆಯ ಝಲಕ್‌

ಬೆಂಗಳೂರು: ಕನ್ನಡ ಕಿರುತೆರೆ ಪ್ರಿಯರಿಗೆ ಇಂದಿನಿಂದ ಹೊಸದೊಂದು ರಿಯಾಲಿಟಿ ಶೋ ನೋಡುವ ಅವಕಾಶ. ಝೀ ಕನ್ನಡ ವಾಹಿನಿಯಲ್ಲಿ ಮಾರ್ಚ್‌ 30ರಿಂದ ಕರ್ನಾಟಕದ ನಟಿಯರಾಗಲು ಬಯಸುವ ಪ್ರತಿಭೆಗಳ ಟ್ಯಾಲೆಂಟ್‌ ಹಂಟ್‌ ಶೋ "ಮಹಾನಟಿ" ಆರಂಭವಾಗುತ್ತಿದೆ. ಇಂದು ರಾತ್ರಿ 7.30 ಗಂಟೆಗೆ ಮಹಾನಟಿ ಪ್ರಸಾರವಾಗಲಿದೆ. ಕನ್ನಡ ನಟಿಯರಾಗಲು ಬಯಸುವ ಯುವ ನಟಿಯರಿಗೆ ವೇದಿಕೆ ಕಲ್ಪಿಸಿಕೊಡುವ ಈ ಕಾರ್ಯಕ್ರಮಕ್ಕಾಗಿ ವಾಹಿನಿಯು ರಾಜ್ಯದ 31 ಜಿಲ್ಲೆಗಳಲ್ಲಿ ಸಂಚರಿಸಿ ಪ್ರತಿಭೆಗಳನ್ನು ಆಯ್ಕೆ ಮಾಡಿತ್ತು.

ಮಹಾನಟಿ ರಿಯಾಲಿಟಿ ಶೋನಲ್ಲಿ ಕನ್ನಡದ ಖ್ಯಾತ ನಟ ರಮೇಶ್‌ ಅರವಿಂದ್‌ , ನಟಿ ಪ್ರೇಮ, ನಿರ್ದೇಶಕ ತರುಣ್‌ ಸುಧೀರ್‌, ನಟಿ ನಿಶ್ಚಿಕಾ ನಾಯ್ಡು ಜಡ್ಜ್‌ ಸೀಟ್‌ನಲ್ಲಿ ಕುಳಿತುಕೊಳ್ಳಲಿದ್ದಾರೆ. ಝೀ ಕನ್ನಡ ವಾಹಿನಿಯು ಮಹಾನಟಿ ಅಡಿಷನ್‌ನ ಹಲವು ವಿಡಿಯೋಗಳನ್ನು ತನ್ನ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದೆ.

ದಾವಣಗೆರೆಯ ಬಿಂದು ಹೊನ್ನಾಳಿ ಎಂಬ ಯುವ ಪ್ರತಿಭೆಯ ಅಭಿನಯಕ್ಕೆ ಜಡ್ಜ್‌ಗಳು ಮನಸೋತಿರುವುದು ಪ್ರಮೋದಲ್ಲಿ ತಿಳಿದುಬಂದಿದೆ. "ಎಷ್ಟು ನಾಚಿಕೆಯಾಗ್ತ ಇದೆ, ಮಾಮಾ ಐ ಲವ್‌ ಯು" ಎಂದು ಹಳ್ಳಿ ಶೈಲಿಯಲ್ಲಿ ಈಕೆ ಮಾತನಾಡಿರುವುದಕ್ಕೆ ಎಲ್ಲರೂ ಖುಷಿ ವ್ಯಕ್ತಪಡಿಸಿದ್ದಾರೆ. ನಾಚಿಕೆ, ವಯ್ಯಾರ, ಮುಗ್ಧತೆಯ ಅಭಿನಯದಿಂದ ಇವರು ಜಡ್ಜ್‌ಗಳ ಮನಗೆದ್ದಿದ್ದಾರೆ.

ಮಹಾನಟಿ ಮೆಗಾ ಅಡಿಷನ್‌ನಲ್ಲಿ ಮೈಸೂರಿನ ಪ್ರಿಯಾಂಕರ ಪ್ರತಿಭೆಯನ್ನೂ ಇಂದು ನೋಡಬಹುದು. ಕೃಷ್ಣೇಗೌಡರ ಆನೆ' ಪ್ರಸಂಗದ ಹಳ್ಳಿ ಡೈಲಾಗ್ ಹೊಡೆದು 'ಮಹಾನಟಿ' ವೇದಿಕೆಗೆ ಮೈಸೂರಿನ ಪ್ರಿಯಾಂಕ ಎಂಟ್ರಿ ನೀಡಿದ್ದಾರೆ.

ಚಿಕ್ಕಮಗಳೂರಿನ ಧನ್ಯಶ್ರೀ ಮೂರು ಪಾತ್ರಗಳನ್ನು ಒಬ್ಬರೇ ಮಾಡಿ ಜಡ್ಜ್‌ಗಳ ಗಮನ ಸೆಳೆದಿದ್ದಾರೆ. ತ್ರಿವಳಿ ಪಾತ್ರಗಳನ್ನು ಅಭಿನಯಿಸಿ ಒಂದು ಕುಟುಂಬದ ವ್ಯಥೆ ತೆರೆದಿಟ್ಟು 'ಮಹಾನಟಿ' ಜರ್ನಿಗೆ ಜೊತೆಯಾದ ಚಿಕ್ಕಮಗಳೂರಿನ ಧನ್ಯಶ್ರೀ ಎಂದು ಅವರ ಪ್ರಮೋವನ್ನು ಝೀ ಕನ್ನಡ ಹಂಚಿಕೊಂಡಿದೆ.

ಕಂಠದಾನ ಕಲಾವಿದೆ ಆಶಿಕಾ ಶರ್ಮಾ ಕೂಡ ತಮ್ಮ ಅಭಿನಯದಿಂದ ಜಡ್ಜ್‌ಗಳ ಗಮನ ಸೆಳೆದಿದ್ದಾರೆ. ಧ್ವನಿಯಲ್ಲೇ ಮೋಡಿ ಮಾಡಿ 'ಮಹಾನಟಿ' ವೇದಿಕೆಗೆ ಕಾಲಿಟ್ಟ ಕಂಠದಾನ ಕಲಾವಿದೆ, ಬೆಂಗಳೂರಿನ ಆಶಿಕಾ ಶರ್ಮಾ ಎಂದು ಝೀ ಕನ್ನಡ ವಾಹಿನಿಯು ವಿಡಿಯೋ ತುಣಕೊಂದನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದೆ.

ಮಹಾನಟಿ ಪ್ರಸಾರದ ಸಮಯ

ಮಹಾನಟಿ ರಿಯಾಲಿಟಿ ಶೋದಲ್ಲಿರುವ ನಾಲ್ವರು ಜಡ್ಜ್‌ಗಳು ಹೊಸದಾಗಿ ಬರುವ ನಟಿಯರಿಗೆ ಮೆಂಟರ್‌ ಆಗಿರಲಿದ್ದಾರೆ. ಇಂದು ಮೊದಲ ಸಂಚಿಕೆ ಪ್ರಸಾರವಾಗಲಿದೆ. ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 7.30 ಗಂಟೆಗೆ ಮಹಾನಟಿ ರಿಯಾಲಿಟಿ ಶೋ ಪ್ರಸಾರವಾಗಲಿದೆ. ಕರ್ನಾಟಕದ ವಿವಿಧ ಜಿಲ್ಲೆಯ ಪ್ರತಿಭಾನ್ವಿತರ ನಟನೆಯನ್ನು ಕಿರುತೆರೆ ಪ್ರೇಕ್ಷಕರು ವಾರಾಂತ್ಯದಲ್ಲಿ ಕಣ್ತುಂಬಿಕೊಳ್ಳಬಹುದಾಗಿದೆ.

ಝೀ ಕನ್ನಡದ ಮಹಾನಟಿ ರಿಯಾಲಿಟಿ ಶೋನಲ್ಲಿ ಪಾಲ್ಗೊಳ್ಳಲು ವಯಸ್ಸಿನ ಮಿತಿ ಕನಿಷ್ಠ 18 ವರ್ಷ ಮತ್ತು ಗರಿಷ್ಠ 28 ವರ್ಷ ನಿಗದಿಪಡಿಸಲಾಗಿತ್ತು. ಈ ಅಡಿಷನ್‌ನಲ್ಲಿ ಕರ್ನಾಟಕದ ವಿವಿಧ ಜಿಲ್ಲೆಯ ಪ್ರತಿಭೆಗಳು ಪಾಲ್ಗೊಂಡಿದ್ದರು. ಚಂದನವನಕ್ಕೆ ಹೊಸ ನಟಿಯರನ್ನು ಪರಿಚಯಿಸುವ ಪ್ರಯತ್ನವಾಗಿ ಝಿಕನ್ನಡವು ಮಹಾನಟಿ ಎಂಬ ಹೊಸ ರಿಯಾಲಿಟಿ ಶೋ ಆರಂಭಿಸಿದೆ.

mysore-dasara_Entry_Point