ಕನ್ನಡ ಸುದ್ದಿ  /  ಮನರಂಜನೆ  /  ಕನಸಲ್ಲಿ ಬಂದ ಸುಬ್ಬುಗೆ ಅಮ್ಮನ ಸ್ಥಾನ ಕೊಟ್ಟ ಶ್ರಾವಣಿ, ಸುಬ್ಬುಗೆ ಪಿಎ ಆಗುವ ಬಯಕೆಯಲ್ಲಿ ಶ್ರೀವಲ್ಲಿ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಕನಸಲ್ಲಿ ಬಂದ ಸುಬ್ಬುಗೆ ಅಮ್ಮನ ಸ್ಥಾನ ಕೊಟ್ಟ ಶ್ರಾವಣಿ, ಸುಬ್ಬುಗೆ ಪಿಎ ಆಗುವ ಬಯಕೆಯಲ್ಲಿ ಶ್ರೀವಲ್ಲಿ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

Shravani Subramanya Kannada Serial Today Episode July 2nd: ʼಶ್ರಾವಣಿ ಸುಬ್ರಹ್ಮಣ್ಯʼ ಧಾರಾವಾಹಿಯ ಮಂಗಳವಾರದ ಎಪಿಸೋಡ್‌ನಲ್ಲಿ ಅಪ್ಪನ ಖುಷಿಗಾಗಿ ಸಾಲಿಗ್ರಾಮಕ್ಕೆ ಬರ್ತಿನಿ ಎಂದ ಶ್ರಾವಣಿ. ಕುಡಿತ ಮತ್ತಿನಲ್ಲಿ ಅಮ್ಮಂಗೆ ಕ್ಲಾಸ್‌ ತಗೊಂಡ ಶ್ಯಾಮಸುಂದರ. ಸುಬ್ಬುಗೆ ಶ್ರಾವಣಿ ಅಮ್ಮನ ಸ್ಥಾನ ಕೊಟ್ರೆ, ಶ್ರೀವಲ್ಲಿಗೆ ಅವನ ಪಿಎಯಾಗಿ ಮಿನಿಸ್ಟರ್‌ ಮನೆ ಸೇರುವಾಸೆ.

ಕನಸಲ್ಲಿ ಬಂದ ಸುಬ್ಬುಗೆ ಅಮ್ಮನ ಸ್ಥಾನ ಕೊಟ್ಟ ಶ್ರಾವಣಿ, ಸುಬ್ಬು ಪಿಎ ಆಗ್ತೀನಿ ಎನ್ನುವ ಶ್ರೀವಲ್ಲಿ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
ಕನಸಲ್ಲಿ ಬಂದ ಸುಬ್ಬುಗೆ ಅಮ್ಮನ ಸ್ಥಾನ ಕೊಟ್ಟ ಶ್ರಾವಣಿ, ಸುಬ್ಬು ಪಿಎ ಆಗ್ತೀನಿ ಎನ್ನುವ ಶ್ರೀವಲ್ಲಿ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ನಿನ್ನೆಯ (ಜುಲೈ 2) ಸಂಚಿಕೆಯಲ್ಲಿ ಅಪ್ಪನ ಖುಷಿಗಾಗಿ ಏನ್‌ ಬೇಕಾದ್ರೂ ಮಾಡ್ತೀನಿ ಎನ್ನುವ ಶ್ರಾವಣಿ ಮುಂದೆ ಅವಳು ಸಾಲಿಗ್ರಾಮಕ್ಕೆ ಬಂದರೆ ತನಗೆ ಖುಷಿಯಾಗುತ್ತೆ ಎಂದು ಹೇಳ್ತಾರೆ ವೀರೇಂದ್ರ. ಆ ಕೂಡಲೇ ಸಂತೋಷದಿಂದ ಸಾಲಿಗ್ರಾಮಕ್ಕೆ ಬರ್ತೀನಿ ಎಂದು ಒಪ್ಪಿಕೊಳ್ಳುತ್ತಾಳೆ ಮಿನಿಸ್ಟರ್‌ ಮಗಳು. ಇದರಿಂದ ಮನೆಯವರಿಗೆಲ್ಲಾ ಖುಷಿಯಾದ್ರೆ, ವಿಜಯಾಂಬಿಕಾ ಹಾಗೂ ಮದನ್‌ ಏನೂ ಮಾಡಲು ತೋಚದೇ ಕೈಕೈ ಹೊಸೆದುಕೊಳ್ಳುತ್ತಾರೆ. ಸಿಕ್ಕಿದ್ದೇ ಚಾನ್ಸ್‌ ಅಂತ ವೀರೇಂದ್ರ ತಮ್ಮಾ ಸುರೇಂದ್ರ ʼಅಣ್ಣ ನಾವು ಸಾಲಿಗ್ರಾಮದಲ್ಲಿ ತುಂಬಾ ದಿನ ಇರ್ತೀವಿ. ಅವರ ಮುಂದೆಲ್ಲಾ ನೀನು ಇಲ್ಲಿ ನಡೆದುಕೊಂಡ ರೀತಿ ವರ್ತಿಸಿದರೆ ಡೌಟ್‌ ಬರುತ್ತೆ, ಅಲ್ಲಿ ಹೋದಾಗಾದ್ರೂ ಶ್ರಾವಣಿ ಜೊತೆ ಚೆನ್ನಾಗಿರುʼ ಎಂದು ಸಲಹೆ ನೀಡುತ್ತಾರೆ. ತಮ್ಮ ಹೇಳಿದ ಸಲಹೆ ಕೇಳಿ ಮನಸ್ಸಿಲ್ಲದ ಮನಸ್ಸಿಂದ ಒಪ್ಪಿಗೆ ಸೂಚಿಸುತ್ತಾರೆ ವೀರೇಂದ್ರ.

ಕಾಂತಮ್ಮಂಗೆ ಚಳಿ ಬಿಡಿಸಿದ ಸುಂದರ

ಕುಡಿದು ಮನೆಗೆ ಬರುವ ಶ್ಯಾಮಸುಂದರನ ಬಳಿ ಮಡದಿ ಧನಲಕ್ಷ್ಮೀ ʼಇದ್ಯಾಕ್ರೀ ಕುಡಿದು ಬಂದಿದ್ದೀರಾ, ಮನೆಯಲ್ಲಿ ಎಲ್ಲರೂ ಇದ್ದಾರೆ. ಸುಮ್ಮನೆ ಒಳಗೆ ಬಂದು ಮಲಗಿʼ ಎಂದು ನಿಧಾನಕ್ಕೆ ಒಳಗೆ ಕರೆದುಕೊಂಡು ಬರುತ್ತಾಳೆ. ಆದ್ರೆ ಹಾಲ್‌ನಲ್ಲಿ ಹಣ್ಣು ತಿನ್ನುತ್ತಾ ಕೂತಿದ್ದ ತಾಯಿ ಕಾಂತಮ್ಮನನ್ನು ನೋಡಿ ಶ್ಯಾಮಸುಂದರನ ಕೋಪ ನೆತ್ತಿಗೆ ಏರುತ್ತದೆ. ಇದ್ದಕ್ಕಿದ್ದಂತೆ ತಾಯಿಗೆ ಬಯ್ಯಲು ಶುರು ಮಾಡುತ್ತಾನೆ. ʼಈ ಮನೆಯಲ್ಲಿ ಎಲ್ಲರೂ ಕಷ್ಟಪಡ್ತಾ ಇದ್ರೆ ನೀನು ಕೂತು ತಿಂತೀಯಾ, ಮನೆ ಇವರದ್ದು ರಾಜ್ಯಭಾರ ನಿಂದಾ? ದುಡಿಯೋದು ಸುಬ್ಬು, ನನಗೆ ಯಜಮಾನಿಕೆ ಬೇಕು ಅಂತೀಯಾ?ʼ ಎಂದೆಲ್ಲಾ ಸುಬ್ಬು ಹಾಗೂ ಹೆಂಡತಿ ಮನೆಯವರ ಪರ ಮಾತನಾಡುವುದು ಮಾತ್ರವಲ್ಲ, ತಾಯಿಗೆ ಹೊಡೆಯಲು ಮಗಳಿಗೆ ಹೇಳಿ ಕೋಲು ತರಿಸಿಕೊಳ್ಳುತ್ತಾನೆ. ಸುಬ್ಬು ಬರುವುದು ಇನ್ನೆರಡೇ ನಿಮಿಷ ತಡವಾದ್ರೂ ಕಾಂತಮ್ಮನಿಗೆ ಸರಿಯಾಗಿ ಬಾರಿಸುತ್ತಿದ್ದ ಸುಂದರ. ಕಾಂತಮ್ಮನಿಗೆ ಹೊಡೆಯುವುದನ್ನು ತಪ್ಪಿಸುವ ಸುಬ್ಬು ಬಾವನನ್ನು ರೂಮಿಗೆ ಕಳುಹಿಸುತ್ತಾನೆ. ಮಗ ಕುಡಿದು ಬಂದು ಹೊಡೆಯುವುದನ್ನು ತಪ್ಪಿಸಿದ್ರೂ ಸುಬ್ಬುಗೆ ಕೊಂಕು ಮಾತು ಹೇಳುವುದನ್ನು ಬಿಡುವುದಿಲ್ಲ ಕಾಂತಮ್ಮ. ಇದರಿದ ಬೇಸರಗೊಳ್ಳುವ ಸುಬ್ಬು ಊಟ ಮಾಡದೇ ಹೋಗಿ ಮಲಗುತ್ತಾನೆ.

ಟ್ರೆಂಡಿಂಗ್​ ಸುದ್ದಿ

ಶ್ರಾವಣಿ ಕನಸಿನಲ್ಲಿ ಬರುವ ಸುಬ್ಬು

ಅಮ್ಮನ ಬಗ್ಗೆ ಯೋಚಿಸುತ್ತಾ ಮಲಗುವ ಶ್ರಾವಣಿಗೆ ಕನಸಿನಲ್ಲಿ ಸುಬ್ಬು ಬರುತ್ತಾನೆ. ಸಡನ್‌ ಆಗಿ ಎದ್ದು ಕೂರುವ ಶ್ರಾವಣಿಗೆ ಸುಬ್ಬು ತನ್ನ ಕನಸಿನಲ್ಲಿ ಬಂದಿದ್ದು ಯಾಕೆ ಎಂಬುದು ಅರಿವಾಗುವುದಿಲ್ಲ. ಇದನ್ನ ಸುಬ್ಬುಗೆ ಹೇಳಬೇಕು ಎಂದುಕೊಂಡು ಮೆಸೇಜ್‌ ಮಾಡುತ್ತಾಳೆ. ಇತ್ತ ಶ್ರೀವಲ್ಲಿ ನಿದ್ದೆಯಿಲ್ಲದೇ ಸುಬ್ಬು ಬಗ್ಗೆ ಯೋಚಿಸುತ್ತಾ ಮಲಗಿರುತ್ತಾಳೆ. ಸುಬ್ಬು ಜೊತೆಗೆ ತಾನು ಇರುವುದು ಹೇಗೆ ಎಂದು ಯೋಚಿಸುವ ಶ್ರೀವಲ್ಲಿಗೆ ಮಿನಿಸ್ಟರ್‌ ಮನೆಗೆ ಕೆಲಸಕ್ಕೆ ಸೇರುವ ಯೋಚನೆ ಬರುತ್ತದೆ. ಆದರೆ ಯಾವ ಕೆಲಸಕ್ಕೆ ಸೇರಲಿ, ಅವರ ಮನೆಯಲ್ಲಿ ಕೆಲಸದವಳಾಗಿ ಸೇರಿದ್ರೆ ಹೇಗೆ ಅದು ಇದು ಎಂದು ಇಲ್ಲಸಲ್ಲದ ಯೋಚನೆಗಳನ್ನೆಲ್ಲಾ ತಲೆಯಲ್ಲಿ ತುಂಬಿಕೊಳ್ಳುತ್ತಾಳೆ. ಕೊನೆಗೆ ಅವಳಿಗೆ ತಾನು ಸುಬ್ಬು ಪಿಎ ಆಗಿ ಸೇರೋದು ಬೆಸ್ಟ್‌ ಎಂಬ ಯೋಚನೆ ಬರುತ್ತದೆ. ಅದನ್ನೇ ಕೇಳೋಣ ಎಂದು ಸುಬ್ಬುಗೆ ಮಸೇಜ್‌ ಮಾಡುತ್ತಾಳೆ. ಮಿನಿಸ್ಟರ್‌ ಮನೆಯಲ್ಲಿ ಕೆಲಸಕ್ಕೆ ಸೇರಲು ಏನೆಲ್ಲಾ ಗೊತ್ತಿರಬೇಕು, ಎಷ್ಟು ಓದಿರಬೇಕು ಎಂದೆಲ್ಲಾ ಮೆಸೇಜ್‌ ಮಾಡುತ್ತಾಳೆ. ಆದರೆ ಸುಬ್ಬು ಶ್ರಾವಣಿ ಮೆಸೇಜ್‌ ನೋಡಿ ರಿಪ್ಲೇ ಮಾಡುತ್ತಾನೆ. ಸುಬ್ಬು ತನ್ನ ಮಸೇಜ್‌ಗೆ ರಿಪ್ಲೇ ಮಾಡಿದ್ದು ನೋಡಿ ಅವನು ಮಲಗಿಲ್ಲ ಎಂದುಕೊಂಡು ಅವನಿಗೆ ಕಾಲ್‌ ಮಾಡುತ್ತಾಳೆ. ಅವನು ಕನಸಿನಲ್ಲಿ ಬಂದ ವಿಚಾರ ಹೇಳುವ ಶ್ರಾವಣಿ ಅವನು ತನಗೆ ಅಮ್ಮನ ಥರ ಎಂದು ತುಂಬು ಮನಸ್ಸಿನಿಂದ ಹೇಳುತ್ತಾಳೆ. ಆದರೆ ಅಮ್ಮನ ಪ್ರೀತಿಗೆ ತನ್ನ ಪ್ರೀತಿಯನ್ನು ಹೋಲಿಸಬೇಡಿ ಎಂದು ಶ್ರಾವಣಿಗ ಮೇಡಂಗೆ ನಯವಾಗಿಯೇ ಹೇಳುತ್ತಾನೆ ಸುಬ್ಬು. ತನ್ನ ಸುಬ್ಬು ಆನ್‌ಲೈನ್‌ನಲ್ಲಿ ಇದ್ರೂ ನಂಗೆ ರಿಪ್ಲೇ ಮಾಡಿಲ್ಲವಲ್ಲಾ ಎಂದುಕೊಂಡು ಕಾಲ್‌ ಮಾಡುವ ನಿರ್ಧಾರ ಶ್ರೀವಲ್ಲಿಗೆ ಬ್ಯುಸಿ ಟೋನ್‌ ಕೇಳಿಸುತ್ತದೆ. ತನ್ನ ಪ್ರಿಯಕರ ಇಷ್ಟು ಹೊತ್ತಿಗೆ ಯಾರ ಬಳಿ ಮಾತನಾಡುತ್ತಿರೋದು ಎಂದು ತಲೆ ಕೆಡಿಸಿಕೊಳ್ಳುತ್ತಾಳೆ ಶ್ರೀವಲ್ಲಿ. ಕೊನೆಗೆ ಅವಳಿಗೆ ಅವಳೇ ಸಾಮಾಧಾನ ಮಾಡಿಕೊಂಡು ಮಲಗುತ್ತಾಳೆ. ಅತ್ತ ಸುಬ್ಬು ಶ್ರಾವಣಿಗೆ ಸಮಾಧಾನ ಹೇಳಿ ನೆಮ್ಮದಿಯಾಗಿ ಮಲಗಲು ಹೇಳುತ್ತಾನೆ.

ಶ್ರಾವಣಿಗೆ ನಿಜಕ್ಕೂ ಅಮ್ಮನ ಪ್ರೀತಿ ಸಿಗುತ್ತಾ, ಸಾಲಿಗ್ರಾಮಕ್ಕೆ ಹೋದ ಮೇಲೆ ಮಗಳ ವಿಚಾರದಲ್ಲಿ ಬದಲಾಗ್ತಾರಾ ವೀರೇಂದ್ರ, ಶ್ರೀವಲ್ಲಿಯ ಬದುಕಿಗೆ ಬರ್ತಾನಾ ಸುಬ್ಬು ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.