‘ಅವರ ಹೀರೋಗಳ ಮರ್ಯಾದೆಯನ್ನು ಅವರೇ ತೆಗೀತಿದ್ದಾರೆ’; ಕೆಟ್ಟ ಕಾಮೆಂಟ್‌ ಮಾಡೋರಿಗೆ ಧ್ರುವ ಸರ್ಜಾ ಕೊಟ್ರು ಮಾತಿನ ಏಟು
ಕನ್ನಡ ಸುದ್ದಿ  /  ಮನರಂಜನೆ  /  ‘ಅವರ ಹೀರೋಗಳ ಮರ್ಯಾದೆಯನ್ನು ಅವರೇ ತೆಗೀತಿದ್ದಾರೆ’; ಕೆಟ್ಟ ಕಾಮೆಂಟ್‌ ಮಾಡೋರಿಗೆ ಧ್ರುವ ಸರ್ಜಾ ಕೊಟ್ರು ಮಾತಿನ ಏಟು

‘ಅವರ ಹೀರೋಗಳ ಮರ್ಯಾದೆಯನ್ನು ಅವರೇ ತೆಗೀತಿದ್ದಾರೆ’; ಕೆಟ್ಟ ಕಾಮೆಂಟ್‌ ಮಾಡೋರಿಗೆ ಧ್ರುವ ಸರ್ಜಾ ಕೊಟ್ರು ಮಾತಿನ ಏಟು

ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಸ್ಟಾರ್ ನಟರ ಅಭಿಮಾನಿಗಳ ನಡುವೆ ಜಗಳ-ವಾಗ್ವಾದ ನಡೆಯುತ್ತಲೇ ಇರುತ್ತದೆ. ಇತ್ತೀಚಿಗಂತೂ ಧ್ರುವ ಸರ್ಜಾ ಹಾಗೂ ದರ್ಶನ್ ಅಭಿಮಾನಿಗಳ ನಡುವೆ ಜಗಳ ಖಾಯಂ ಆಗಿಬಿಟ್ಟಿದೆ. ಈ ಬಗ್ಗೆ ಪರೋಕ್ಷವಾಗಿ ಧ್ರುವ ಸರ್ಜಾ ಹೇಳಿದ್ದೇನು ನೋಡಿ.

ಕೆಟ್ಟ ಕಾಮೆಂಟ್‌ ಮಾಡೋರಿಗೆ ಧ್ರುವ ಸರ್ಜಾ ಕೊಟ್ರು ಮಾತಿನ ಏಟು
ಕೆಟ್ಟ ಕಾಮೆಂಟ್‌ ಮಾಡೋರಿಗೆ ಧ್ರುವ ಸರ್ಜಾ ಕೊಟ್ರು ಮಾತಿನ ಏಟು

ಮಾರ್ಟಿನ್‌ ಚಿತ್ರ ಅಕ್ಟೋಬರ್‌ 11ಕ್ಕೆ ರಿಲೀಸ್‌ ಆಗಲಿದೆ. ಧ್ರುವ ಸರ್ಜಾ ಅವರ ಅಭಿಮಾನಿಗಳು ತುಂಬಾ ಆಸೆಯಿಂದ ಕಾಯುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಅವರ ಒಂದು ಸಂದರ್ಶನ ವೈರಲ್ ಆಗುತ್ತಿದೆ. ಅಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡುವವರ ಬಗ್ಗೆ ನೀವೇನು ಹೇಳ್ತೀರಾ ಎಂದು ಕೇಳಿದಾಗ ಧ್ರುವ ಸರ್ಜಾ ಅವರು ಉತ್ತರ ನೀಡಿದ್ದಾರೆ. ಹೊಸದೇನಿಲ್ಲ ನಾನು ಹೇಳೋದು ಇಷ್ಟೇ ಎಂದು ಹೇಳುತ್ತಾ ತುಂಬಾ ಸಿಂಪಲ್ ಆಗಿ ಖಡಕ್ ಆನ್ಸರ್ ನೀಡಿದ್ದಾರೆ. ಕೆಟ್ಟದಾಗಿ ಕಾಮೆಂಟ್ ಮಾಡುವವರ ಬಗ್ಗೆ ಪರೋಕ್ಷವಾಗಿ ಒಂದಷ್ಟು ವಿಚಾರ ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಸ್ಟಾರ್ ನಟರ ಅಭಿಮಾನಿಗಳ ನಡುವೆ ಜಗಳ-ವಾಗ್ವಾದ ನಡೆಯುತ್ತಲೇ ಇರುತ್ತದೆ. ಇತ್ತೀಚಿಗಂತೂ ಧ್ರುವ ಸರ್ಜಾ ಹಾಗೂ ದರ್ಶನ್ ಅಭಿಮಾನಿಗಳ ನಡುವೆ ಜಗಳ ಖಾಯಂ ಆಗಿಬಿಟ್ಟಿದೆ. ಪರಸ್ಪರ ಕಾಲೆಳುಯುವುದು, ಕೆಟ್ಟ ಭಾಷೆಯಲ್ಲಿ ಕಾಮೆಂಟ್ ಹಾಕುವುದು ಸರ್ವೇಸಾಮಾನ್ಯ ಎಂಬಂತಾಗಿದೆ. ಇದು ಸ್ಟಾರ್ ನಟರ ಗೌರವಕ್ಕೂ ಕುಂದು ತರುವ ಪರಿಸ್ಥಿತಿಯನ್ನು ಉಂಟುಮಾಡುತ್ತಿದೆ. ಕಾಮೆಂಟ್‌ಗಳಷ್ಟೇ ಅಲ್ಲದೇ, ತಪ್ಪುಮಾಹಿತಿ, ತಿರುಚಿದ ಸತ್ಯಗಳನ್ನು ಹಂಚಿಕೊಳ್ಳುವ ಮೂಲಕವೂ ಸ್ಟಾರ್ ನಟರ ಫ್ಯಾನ್ಸ್ ವಾರ್ ಸಾಮಾಜಿಕ ಜಾಲತಾಣಗಳಲ್ಲಿ ಮುಂದುವರೆಯುತ್ತಿದೆ.

ಹೀಗಿತ್ತು ಧ್ರುವ ಸರ್ಜಾ ಉತ್ತರ

ಹಲವರು ಕೆಟ್ಟದಾಗಿ ಕಾಮೆಂಟ್ ಮಾಡುತ್ತಾರೆ. ಈ ರೀತಿ ಮಾಡೋದ್ರಿಂದ ಯಾರಿಗೂ ಯಾವ ಲಾಭವೂ ಇಲ್ಲ. ಕೆಲವರು ತಮ್ಮ ಮನಸಿನ ತೃಪ್ತಿಗಾಗಿ ಕಾಮೆಂಟ್ ಮಾಡುವ ಮೂಲಕ ಬೈದುಕೊಳ್ಳುತ್ತಾರೆ. “ಅವರ ಹೀರೋಗಳ ಮರ್ಯಾದೆಯನ್ನು ಅವರೇ ತೆಗಿತಿದ್ದಾರೆ" ಯಾರು ಏನೇ ಮಾಡಿದ್ರು ಎಜುಕೇಟೆಡ್ ಜನರೂ ಇರ್ತಾರೆ. ಅದನ್ನು ಜಡ್ಜ್ ಮಾಡುವವರಿಗೆ ಯಾವುದು ಸತ್ಯ ಯಾವುದು ಸುಳ್ಳು ಅನ್ನೋದು ಗೊತ್ತಾಗುತ್ತದೆ. ಯಾವುದನ್ನು ನಂಬಬೇಕೋ ಅದನ್ನು ಮಾತ್ರ ನಂಬುತ್ತಾರೆ ಎನ್ನುವ ರೀತಿಯಲ್ಲಿ ಯೂಟ್ಯೂಬ್ ಚಾನಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಮಾರ್ಟಿನ್ ಚಿತ್ರತಂಡಕ್ಕೆ ಕಾದಿತ್ತು ಆಘಾತ

ಫೆಬ್ರವರಿ 20, 2024 ರಂದು, ಮಾರ್ಟಿನ್ ಚಿತ್ರತಂಡ ಮತ್ತು ಕನ್ನಡ ನಟ ಧ್ರುವ ಸರ್ಜಾ ಅವರು ನವದೆಹಲಿಯಿಂದ ಶ್ರೀನಗರಕ್ಕೆ ಇಂಡಿಗೋ ವಿಮಾನದಲ್ಲಿ ಬರುವ ಸಂದರ್ಭದಲ್ಲಿ ಲ್ಯಾಂಡಿಂಗ್ ಮಾಡುವಾಗ ಆದ ತೊಂದರೆಯ ಕುರಿತು ಇಂಟರ್ವೂ ಒಂದರಲ್ಲಿ ಹೇಳಿದ್ದಾರೆ. ಹವಾಮಾನ ವೈಪರೀತ್ಯದಿಂದಾಗಿ ಲ್ಯಾಂಡಿಂಗ್‌ನಲ್ಲಿ ತೊಂದರೆ ಉಂಟಾಗಿತ್ತು ಎಂದು ಅವರು ಹೇಳಿದ್ದಾರೆ. ಆ ರೀತಿ ಭಯ ಹುಟ್ಟಿದ ಕಾರಣ ನಂತರ ಅವರು ತಮ್ಮ ಶೂಟಿಂಗ್‌ಗೆ ಹೋಗುವಾಗ ಮತ್ತೆ ಎಂದಿಗೂ ವಿಮಾನ ಹತ್ತಿಲ್ಲವಂತೆ. ಯಾವಾಗಲೂ ನಾನು ಕಾರಿನಲ್ಲೇ ಓಡಾಡಿದ್ದೇನೆ ಎಂದು ಹೇಳಿದ್ದಾರೆ. ಒಟ್ಟು 18 ತಾಸುಗಳ ಪ್ರಯಾಣವಾದರೂ ತಾನು ಕಾರಿನಲ್ಲೇ ಹೆಚ್ಚಾಗಿ ಓಡಾಡಿರುವುದಾಗಿ ಹೇಳಿಕೊಂಡಿದ್ದಾರೆ.

ಸಾವಿನಿಂದ ಪಾರಾದೆ ಎಂದ ಧ್ರುವ ಸರ್ಜಾ

ವಿಮಾನವು ರನ್‌ವೇಯಿಂದ ಪಕ್ಕಕ್ಕೆ ಸರಿಯುತ್ತಿದ್ದಂತೆ ಇಡೀ ಚಿತ್ರತಂಡವು ಭಯಗೊಂಡಿತ್ತು. ಆದರೆ ಯಾವುದೇ ಅಪಾಯ ಆಗಿರಲಿಲ್ಲ. ಪ್ರಯಾಣಿಕರು ಮಾತ್ರ ತತ್ತರಿಸಿ ಹೋಗಿದ್ದರು. ಧ್ರುವ ಸರ್ಜಾ ಅವರು ಸಾವಿನಿಂದ ತಾನು ಹೇಗೆ ಪಾರಾದೆ ಎಂಬ ಕುರಿತು ಈ ಹಿಂದೆ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಅವರ ಕುಟುಂಬ ಮತ್ತು ಸ್ನೇಹಿತರ ಆಶೀರ್ವಾದದ ಪರಿಣಾಮವಾಗಿ ಏನೂ ಆಗದೆ ಪಾರಾದೆ ಎಂದು ಅವರು ಆಗ ಹೇಳಿಕೊಂಡಿದ್ದರು.

Whats_app_banner