Kumari Srimathi Review: ಹೇಗಿದೆ ನಿತ್ಯಾ ಮೆನನ್ ಅಭಿನಯದ ಕುಮಾರಿ ಶ್ರೀಮತಿ ವೆಬ್ ಸರಣಿ; ಇಲ್ಲಿದೆ ರಿವ್ಯೂ
ತಾನು ಹುಟ್ಟಿ ಬೆಳೆದ ಮನೆಯನ್ನು ಚಿಕ್ಕಪ್ಪ ಒಡೆಯಲು ನೋಡಿದಾಗ ಶ್ರೀಮತಿ, ನ್ಯಾಯಾಲಯದಲ್ಲಿ ಕೇಸ್ ಹಾಕುತ್ತಾಳೆ. ನ್ಯಾಯಾಲಯ ಕೇಶವರಾವ್ ಕಡೆ ತೀರ್ಪು ನೀಡಿ, ಒಂದು ವೇಳೆ ಮನೆ ಬೇಕಾದಲ್ಲಿ ಆತನಿಗೆ 38 ಲಕ್ಷ ರೂ ಕೊಟ್ಟು ಮನೆ ಪಡೆಯುವಂತೆ ಸೂಚಿಸುತ್ತದೆ.
ನಿತ್ಯಾ ಮೆನನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಮಹಿಳಾ ಪ್ರಧಾನ ವೆಬ್ ಸರಣಿ 'ಕುಮಾರಿ ಶ್ರೀಮತಿ' ಒಟಿಟಿಯಲ್ಲಿ ಬಿಡುಗಡೆ ಆಗಿದೆ. ಸೆಪ್ಟೆಂಬರ್ 28ರಂದು ಅಮೆಜಾನ್ ಪ್ರೈಮ್‌ನಲ್ಲಿ ರಿಲೀಸ್ ಆಗಿದೆ. ಈ ಸಿರೀಸ್ ಮೂಲಕ ನಿತ್ಯಾ ಮೆನನ್ ಒಟಿಟಿಗೆ ಎಂಟ್ರಿ ಕೊಟ್ಟಿದ್ದಾರೆ.
7 ಸಂಚಿಕೆಗಳ ವೆಬ್ ಸರಣಿ
'ಕುಮಾರಿ ಶ್ರೀಮತಿ' ಸರಣಿಗೆ ರಮಣಿ, ಮಲ್ಲಿಕ್ ರಾಮ್ ಕಥೆ ಬರೆದಿದ್ದು ಶ್ರೀನಿವಾಸ ವಾಸರಾಳ ಚಿತ್ರಕಥೆ ಬರೆದು ಸಂಭಾಷಣೆ ಬರೆದಿದ್ದಾರೆ. ಗೊಮ್ತೇಶ್ ಉಪಾಧ್ಯಾಯ ಆಕ್ಷನ್ ಕಟ್ ಹೇಳಿದ್ದು ಸ್ವಪ್ನಾ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸರಣಿಗೆ ಸ್ಟಾಕಾಟೊ ಮತ್ತು ಕಮ್ರಾನ್ ಸಂಗೀತವಿದೆ. ನಿತ್ಯಾ ಮೆನನ್ ಜೊತೆಗೆ ಮಸೂದ್ ಹೀರೋ ತಿರುವೀರ್, ಕಾರ್ತಿಕ ದೀಪಂ ಧಾರಾವಾಹಿ ಡಾಕ್ಟರ್ ಖ್ಯಾತಿಯ ನಿರುಪಮ್ ಪರಿಟಾಲ ಗೌತಮಿ, ತಾಳೂರಿ ರಾಮೇಶ್ವರಿ, ಮುರಳಿ ಮೋಹನ್, ವಿಕೆ ನರೇಶ್, ಪ್ರೇಮ್ ಸಾಗರ್, ಪ್ರಣೀತಾ ಪಟ್ನಾಯಕ್, ವಾಸು ಇಂಟೂರಿ ಹಾಗೂ ಇನ್ನಿತರರು ಈ ವೆಬ್ ಸರಣಿಯಲ್ಲಿ ನಟಿಸಿದ್ದಾರೆ. 40 ನಿಮಿಷ ಅವಧಿಯ 7 ಸಂಚಿಕೆಗಳಿರುವ ಕುಮಾರಿ ಶ್ರೀಮತಿ ವೆಬ್ ಸಿರೀಸ್‌ಗೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮನೆ ಜವಾಬ್ದಾರಿ ಹೊತ್ತ ಹೆಣ್ಣುಮಗಳಾಗಿ ನಿತ್ಯಾ ಮೆನನ್ ನಟನೆ
ರಾಜಮಹೇಂದ್ರವರಂನ ರಾಮರಾಜು ಲಂಕಾ ಎಂಬ ಗ್ರಾಮದಲ್ಲಿ ಇಟುಕಲಪೂಡಿ ಶ್ರೀಮತಿ ಎಂಬ ಯುವತಿ ( ನಿತ್ಯಾ ಮೆನನ್) ಹೋಟೆಲ್ ಫ್ಲೋರ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುತ್ತಾಳೆ. ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಮನೆಯನ್ನು ಮಾರುವುದಿಲ್ಲ ಎಂದು ತಾತನಿಗೆ ಚಿಕ್ಕಂದಿನಲ್ಲೇ ಶ್ರೀಮತಿ ಮಾತು ಕೊಟ್ಟಿರುತ್ತಾಳೆ. ಆದರೆ ಚಿಕ್ಕಪ್ಪ ಕೇಶವರಾವ್ ಜೊತೆ ಶ್ರೀಮತಿ ತಂದೆಗೆ ಆಸ್ತಿ ಜಗಳ ಉಂಟಾಗುತ್ತದೆ. ಶ್ರೀಮತಿ ಕುಟುಂಬದಿಂದ ಮನೆ ಹಾಗೂ ರೈಸ್‌ಮಿಲ್ ಕಸಿದುಕೊಳ್ಳುತ್ತಾನೆ. ಇದರಿಂದ ಶ್ರೀಮತಿ ತನ್ನ ತಾಯಿ, ತಂಗಿ, ಅಜ್ಜಿಯೊದಿಗೆ ಬೇರೆ ಮನೆ ಬಾಡಿಗೆ ಪಡೆದು ವಾಸ ಶುರು ಮಾಡುತ್ತಾಳೆ.
ಬಾರ್ ಆರಂಭಿಸಿ ಹಣ ಮಾಡಲು ನಾಯಕಿ ಪ್ಲ್ಯಾನ್
ತಾನು ಹುಟ್ಟಿ ಬೆಳೆದ ಮನೆಯನ್ನು ಚಿಕ್ಕಪ್ಪ ಒಡೆಯಲು ನೋಡಿದಾಗ ಶ್ರೀಮತಿ, ನ್ಯಾಯಾಲಯದಲ್ಲಿ ಕೇಸ್ ಹಾಕುತ್ತಾಳೆ. ನ್ಯಾಯಾಲಯ ಕೇಶವರಾವ್ ಕಡೆ ತೀರ್ಪು ನೀಡಿ, ಒಂದು ವೇಳೆ ಮನೆ ಬೇಕಾದಲ್ಲಿ ಆತನಿಗೆ 38 ಲಕ್ಷ ರೂ ಕೊಟ್ಟು ಮನೆ ಪಡೆಯುವಂತೆ ಸೂಚಿಸುತ್ತದೆ. ಅದಕ್ಕಾಗಿ 6 ತಿಂಗಳ ಕಾಲಾವಕಾಶ ಕೂಡಾ ನೀಡಲಾಗುತ್ತದೆ. ಆದರೆ ಶ್ರೀಮತಿ ಬಳಿ ಅಷ್ಟು ಹಣ ಇರುವುದಿಲ್ಲ. ಆದ್ದರಿಂದ ಒಂದು ಬಾರ್ ಶುರು ಮಾಡಿ ಅದರಿಂದ ಹಣ ಗಳಿಸಲು ಶ್ರೀಮತಿ ಪ್ಲ್ಯಾನ್ ಮಾಡುತ್ತಾಳೆ. ತಾನು ಅಂದುಕೊಂಡಂತೆ ಶ್ರೀಮತಿ ಬಾರ್ ಆರಂಭಿಸುತ್ತಾಳಾ? ಮುಂದೆ ಏನೆಲ್ಲಾ ಸಮಸ್ಯೆ ಅನುಭವಿಸುತ್ತಾಳೆ. ಆಕೆಗೆ ಯಾರೆಲ್ಲಾ ಬೆಂಬಲವಾಗಿ ನಿಲ್ಲುತ್ತಾರೆ. ಶ್ರೀಮತಿ ತಂದೆ ಎಲ್ಲಿ ಹೋಗುತ್ತಾನೆ? ಎಂಬುದನ್ನು ತಿಳಿಯಲು ನೀವು ಶ್ರೀಮತಿ ವೆಬ್ ಸರಣಿ ನೋಡಬೇಕು.
ಅತಿಥಿ ಪಾತ್ರದಲ್ಲಿ ನಾನಿ
ತಾತನಿಗೆ ನೀಡಿದ ಮಾತನ್ನು ಉಳಿಸಿಕೊಳ್ಳುವುದೇ ನನ್ನ ಗುರಿ ಎಂದುಕೊಳ್ಳುವ ಶ್ರೀಮತಿ , ಮತ್ತೆ ಮನೆಯನ್ನು ಸ್ವಂತ ಮಾಡಿಕೊಳ್ಳುತ್ತಾಳಾ ಎನ್ನುವುದೇ ಈ ಸಿರೀಸ್ ಕಥೆ. 13 ಸಾವಿರ ರೂ. ಸಂಬಳ ಪಡೆಯುವ ಶ್ರೀಮತಿ ಪಡುವ ಕಷ್ಟವನ್ನು ಸಿರೀಸ್‌ನಲ್ಲಿ ಚೆನ್ನಾಗಿ ಚಿತ್ರಿಸಲಾಗಿದೆ. ಜೊತೆಗೆ ಸರಣಿಯಲ್ಲಿ ಬರುವ ತ್ರಿಕೋನ ಪ್ರೇಮಕಥೆ, ಮದುವೆ ಪ್ರಸ್ತಾಪ, ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸ್ ದೃಶ್ಯಗಳು ಕೂಡಾ ಬಹಳ ಆಕರ್ಷಕವಾಗಿವೆ. ನಾಲ್ಕನೇ ಎಪಿಸೋಡ್‌ನಲ್ಲಿ ಬಹಳ ಟ್ವಿಸ್ಟ್ ಇದೆ. ಅದರಲ್ಲೂ ಕ್ಲೈಮಾಕ್ಸ್‌ನಲ್ಲಿ ಯಾರೂ ಊಹಿಸದಂತೆ ಒಂದು ಟ್ವಿಸ್ಟ್ ಇದೆ. ಈ ಸಿರಿಸ್‌ನಲ್ಲಿ ಟಾಲಿವುಡ್ ಹೀರೋ ನಾನಿ ಅತಿಥಿ ಪಾತ್ರದಲ್ಲಿ ನಟಿಸಿರುವುದು ಹೈಲೈಟ್.
ಪ್ರೇಕ್ಷಕರ ಮೆಚ್ಚುಗೆ
ಉಳಿದಂತೆ ನಿತ್ಯಾ ಮೆನನ್ ಹಾಗೂ ಇತರ ಪಾತ್ರಗಳ ಆಕ್ಟಿಂಗ್, ಸಂಗೀತಕ್ಕೆ ಕೂಡಾ ನೋಡುಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಮರಾಜು ಲಂಕೆ ಗ್ರಾಮವನ್ನು ಈ ಸರಣಿಯಲ್ಲಿ ಚೆನ್ನಾಗಿ 'ಕುಮಾರಿ ಶ್ರೀಮತಿ' ಸಿರಿಸ್‌ಗೆ 3/5 ರೇಟಿಂಗ್ ಕೊಡಬಹುದು.