Dakshina Kannada News: ಬೆಳ್ತಂಗಡಿ ತಾಲ್ಲೂಕು ಬರ್ಕಜೆ ಜಲಾಶಯದ ಸಮೀಪದಲ್ಲಿ ಸ್ನಾನ ಮಾಡಲು ಹೋದ ಮೂವರು ಯುವಕರು ನೀರುಪಾಲು
ಕನ್ನಡ ಸುದ್ದಿ  /  ಕರ್ನಾಟಕ  /  Dakshina Kannada News: ಬೆಳ್ತಂಗಡಿ ತಾಲ್ಲೂಕು ಬರ್ಕಜೆ ಜಲಾಶಯದ ಸಮೀಪದಲ್ಲಿ ಸ್ನಾನ ಮಾಡಲು ಹೋದ ಮೂವರು ಯುವಕರು ನೀರುಪಾಲು

Dakshina Kannada News: ಬೆಳ್ತಂಗಡಿ ತಾಲ್ಲೂಕು ಬರ್ಕಜೆ ಜಲಾಶಯದ ಸಮೀಪದಲ್ಲಿ ಸ್ನಾನ ಮಾಡಲು ಹೋದ ಮೂವರು ಯುವಕರು ನೀರುಪಾಲು

Dakshina Kannada News: ಬೆಳ್ತಂಗಡಿ ತಾಲ್ಲೂಕಿನ ಬರ್ಕಜೆ ಎಂಬಲ್ಲಿ ತುಂಬಿ ಹರಿಯುತ್ತಿದ್ದ ಜಲಾಶಯದ ನೀರಿನಲ್ಲಿ ಈಜಲು ಹೋದ ಮೂಡಬಿದ್ರೆಯ ಮೂವರು ಯುವಕರು ಮೃತಪಟ್ಟಿದ್ದಾರೆ.ವರದಿ: ಹರೀಶ ಮಾಂಬಾಡಿ. ಮಂಗಳೂರು

ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕಿನ ಬರ್ಕಜೆ ಬಳಿ ನೀರಿನ ಸೆಳೆತಕ್ಕೆ ಸಿಲುಕಿ ಮೂವರು ಯುವಕರು ಮೃತಪಟ್ಟಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕಿನ ಬರ್ಕಜೆ ಬಳಿ ನೀರಿನ ಸೆಳೆತಕ್ಕೆ ಸಿಲುಕಿ ಮೂವರು ಯುವಕರು ಮೃತಪಟ್ಟಿದ್ದಾರೆ.

ಮಂಗಳೂರು: ಕಾರ್ಯಕ್ರಮ ನಿಮ್ಮಿತ ಬಂದ ಯುವಕರು ಊಟದ ಬಳಿಕ ನದಿಗೆ ಸ್ನಾನಕ್ಕೆ ಹೋದ ಮೂವರು ಯುವಕರು ನೀರುಪಾಲದ ಘಟನೆ ಬೆಳ್ತಂಗಡಿ ತಾಲೂಕಿನ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಮೂಡುಕೋಡಿ ಗ್ರಾಮದ ವಾಲ್ಟರ್ ಎಂಬವರ ಮನೆಗೆ ಕಾರ್ಯಕ್ರಮದ ನಿಮ್ಮಿತ ಬಂದು ಮೂಡಬಿದ್ರೆ ತಾಲೂಕಿನ ಎಡಪದವು ನಿವಾಸಿ ಲಾರೆನ್ಸ್(20) , ಬೆಳ್ತಂಗಡಿ ತಾಲೂಕಿನ ಪಾರೆಂಕಿ ಗ್ರಾಮದ ಸೂರಜ್(19) , ಬಂಟ್ವಾಳ ಗ್ರಾಮದ ವಗ್ಗದ ಜೈಸನ್(19) ಎಂಬವರು ನ.27 ರಂದು ಊಟ ಮೂಗಿಸಿ ಮೂಡುಕೋಡಿ ಗ್ರಾಮದ ಬರ್ಕಜೆ ಡ್ಯಾಂ ಬಳಿ ಸ್ನಾನ ಮಾಡಲು ಹೋಗಿದ್ದು ಈ ವೇಳೆ ನೀರಿನ ಸೆಳೆತಕ್ಕೆ ಸಿಳುಕಿ ಮೂವರು ಯುವಕರು ನೀರುಪಾಲಾಗಿದ್ದಾರೆ. ಮೂವರು ಮೃತದೇಹ ನೀರಿನಿಂದ ಹೊರತೆಗೆಯಲಾಗಿದ್ದು. ಈ ಬಗ್ಗೆ ವೇಣೂರು ಪೊಲೀಸರು ಘಟನಾ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸುತ್ತಿದ್ದಾರೆ.

ಮೂಡುಕೋಡಿ ಗ್ರಾಮದ ಚರ್ಚ್‌ನಲ್ಲಿ ಮೂವರು ಭಾಗವಹಿಸಿ ಕೆಲಹೊತ್ತು ಅಲ್ಲಿಯೇ ಕಳೆದಿದ್ದರು. ಸಮೀಪದಲ್ಲಿಯೇ ಕಿರು ಆಣೆಕಟ್ಟು ಇರುವ ಮಾಹಿತಿ ತಿಳಿದು ಅಲ್ಲಿಗೆ ಹೋಗಿದ್ದರು. ಮಳೆಯಾಗಿರುವುದರಿಂದ ಕಿರು ಜಲಾಶಯ ತುಂಬಿದ್ದು, ನೀರು ಹರಿದು ಹೋಗುತ್ತಿದೆ.

ಇದೇ ಜಾಗದಲ್ಲಿ ಈಜಲು ಒಬ್ಬಾತ ಇಳಿದಿದ್ದ. ಆತನಿಗೆ ಈಜು ಬರುತ್ತಿತ್ತು. ನೀರಿನ ಸೆಳೆತವೇನೂ ಇಲ್ಲ ಎಂದು ಹೇಳಿದ್ದರಿಂದ ಇನ್ನಿಬ್ಬರು ನೀರಿಗೆ ಇಳಿದಿದ್ದರು. ಅಲ್ಲಿಯೇ ಆಟವಾಡುತ್ತಿದ್ದಾಗ ಒಬ್ಬಾತ ಸಿಲುಕಿಕೊಂಡಿದ್ದು. ಆತನನ್ನು ಉಳಿಸಲು ಹೋಗಿ ಇನ್ನಿಬ್ಬರು ಸಿಲುಕಿಕೊಂಡಿದ್ದಾರೆ.

ನೆರವಿಗೆ ಕೂಗಿಕೊಂಡಾಗ ಸ್ಥಳೀಯರು ಬರುವ ಹೊತ್ತಿಗೆ ಮೂವರೂ ನೀರಿನಲ್ಲಿ ಸಿಲುಕಿದ್ದರು. ಕೂಡಲೇ ಬೆಳ್ತಂಗಡಿ ಅಗ್ನಿಶಾಮಕ ಘಟಕಕ್ಕೆ ಮಾಹಿತಿ ನೀಡಿದಾಗ ಪೊಲೀಸರ ಸಹಕಾರದಿಂದ ರಕ್ಷಣಾ ಕಾರ್ಯ ನಡೆಸಿದರೂ ಬದುಕುಳಿಸಲು ಆಗಲಿಲ್ಲ.ಮೂವರ ಮೃತ ದೇಹಗಳನ್ನು ಪಡೆದು ಕುಟುಂಬವರಿಗೆ ಹಸ್ತಾಂತರಿಸಲಾಗಿದೆ.

ಮೂವರು ಮಂಗಳೂರಿನಲ್ಲಿ ನರ್ಸಿಂಗ್‌ ಶಿಕ್ಷಣ ಪಡೆಯುತ್ತಿದ್ದರು. ಒಂದೇ ಕಡೆ ಓದುತ್ತಿದ್ದುದರಿಂದ ಸ್ನೇಹಿತರೊಬ್ಬರ ಮನೆ ಕಾರ್ಯಕ್ರಮಕ್ಕೆ ಬಂದಿದ್ದರು. ಈ ವೇಳೆ ದುರಂತ ಸಂಭವಿಸಿದೆ.

ವರದಿ: ಹರೀಶ ಮಾಂಬಾಡಿ. ಮಂಗಳೂರು

Whats_app_banner