GIG Employees Insurance: ಡೆಲಿವರಿ ನೌಕರರಿಗೂ ಕಾರ್ಮಿಕ ವಿಮಾ ಸೌಲಭ್ಯ, ಕರ್ನಾಟಕದಲ್ಲೇ ಮೊದಲು ಜಾರಿ: ಪಡೆಯುವುದು ಹೇಗೆ
insurance to Gig employees ಈ ಹಿಂದೆಯೇ ಬಜೆಟ್ ನಲ್ಲಿ ಘೋಷಿಸಿದಂತೆ ಕರ್ನಾಟಕ ಸರ್ಕಾರವು ಗಿಗ್ ಕಾರ್ಮಿಕ ವಿಮಾ ಸೌಲಭ್ಯ ಜಾರಿಗೊಳಿಸಿದೆ. ಇಲ್ಲಿದೆ ವಿವರ.
ಬೆಂಗಳೂರು: ಕಾರ್ಮಿಕ ಇಲಾಖೆ ವತಿಯಿಂದ ರಾಜ್ಯದ ಗಿಗ್ ಕಾರ್ಮಿಕರಿಗೆ 2 ಲಕ್ಷ ಜೀವ ವಿಮೆ ಹಾಗೂ ಅಪಘಾತ ವಿಮೆಗೆ ಅರ್ಹ ಗಿಗ್ ಕಾರ್ಮಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ದೇಶದಲ್ಲಿಯೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಈ ಯೋಜನೆ ಜಾರಿಯಾಗಿದ್ದು, ಎಲ್ಲಾ ಅರ್ಹ ಗಿಗ್ ಕಾರ್ಮಿಕರು ಸೇವಾ ಸಿಂಧೂ ಪೊರ್ಟ್ಲಲ್‌ನಲ್ಲಿ ನೊಂದಾಯಿಸಿಕೊಳ್ಳಬಹುದಾಗಿದೆ.
ಗಿಗ್ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಕಲ್ಪಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಬಜೆಟ್ ನಲ್ಲಿ ಘೋಷಿಸಿದ್ದರು. ಅದರಂತೆ ಇದೀಗ ರಾಜ್ಯ ಕಾರ್ಮಿಕ ಇಲಾಖೆ ಸಾಮಾಜಿಕ ಭದ್ರತಾ ಮಂಡಳಿ ಮೂಲಕ ರಾಜ್ಯದ ಗಿಗ್ ಕಾರ್ಮಿಕರಿಗೆ ರೂ 2 ಲಕ್ಷ ಜೀವ ವಿಮೆ ಹಾಗೂ ಅಪಘಾತ ಪರಿಹಾರವಾಗಿ ರೂ 2 ಲಕ್ಷ ಗಳ ವಿಮಾ ಸೌಲಭ್ಯ ಅರ್ಹ ಗಿಗ್ ಕಾರ್ಮಿಕರಿಗೆ ಸಿಗಲಿದೆ.
ಇದನ್ನೂ ಓದಿರಿ:Mangalore: ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ
ಯಾರು ಅರ್ಹರು
18 ರಿಂದ 60 ವಯೋಮಾನದವರು, ಆದಾಯ ತೆರಿಗೆ ಪಾವತಿದಾರರಲ್ಲದವರು, ಭವಿಷ್ಯ ನಿಧಿ ಹಾಗೂ ಇ.ಎಸ್.ಐ ಫಲಾನುಭವಿಯಾಗಿರದವರು, ಕರ್ನಾಟಕದಲ್ಲಿ ಗಿಗ್ ವೃತ್ತಿ (ಡೆಲಿವರ್ ಕಾರ್ಯ) ನಿರ್ವಹಿಸುತ್ತಿರುವವರಿಗೆ ಮಾತ್ರ ಈ ಯೋಜನೆ ಅನ್ವಯಿಸಲಿದೆ
ಸ್ವಿಗ್ಗಿ, ಜೊಮ್ಯಾಟೋಗಳಲ್ಲಿ ಫುಡ್ ಡೆಲಿವರಿ ಹಾಗೂ ಇ-ಕಾಮರ್ಸ್ ಸಂಸ್ಥೆಗಳಾದ ಅಮೇಜಾನ್, ಬಿಗ್ ಬಾಸ್ಕೆಟ್, ಪ್ಲಿಪ್ ಕಾರ್ಟ್, ಡಾಮಿನೋಜ್ ಸಂಸ್ಥೆಗಳಲ್ಲಿ ಪೂರ್ಣಕಾಲಿಕ/ಅರೆಕಾಲಿಕ ಡೆಲಿವರಿ ನೌಕರರು ನಿಯಮಾನುಸಾರ ನೋಂದಣಿ ಮಾಡಿಕೊಂಡು ವಿಮಾ ಯೋಜನೆ ಪಡೆಯಬಹುದಾಗಿದೆ.
ಎಷ್ಟು ಮೊತ್ತ ಸಿಗಲಿದೆ
ಅಪಘಾತದಿಂದ ಮರಣ ಹಾಗೂ ಜೀವ ವಿಮಾ ಸೇರಿದಂತೆ ಒಟ್ಟು 4 ಲಕ್ಷ, ಸಂಪೂರ್ಣ ಶಾಶ್ವತ/ ಭಾಗಶಃ ದುರ್ಬಲತೆಗೆ ಹಾಗೂ ತಾತ್ಕಾಲಿಕ ದುರ್ಭಲತೆಗೆ ರೂ. 2 ಲಕ್ಷ, ಆಸ್ಪತ್ರೆ ವೆಚ್ಚ ಮರುಪಾವತಿ ರೂ 1 ಲಕ್ಷ, (ಅಪಘಾತ ಪ್ರಕರಣಗಳಿಗೆ ಮಾತ್ರ) ಫಲಾನುಭವಿಗಳಿಗೆ ದೊರಕುವ ಸೌಲಭ್ಯಗಳಾಗಿವೆ.
ನೊಂದಣಿಗೆ ಏನು ಬೇಕು
- ಆಧಾರ್ ಸಂಖ್ಯೆ
- ವೃತ್ತಿ ನಿರ್ವಹಿಸುತ್ತಿರುವ ಸಂಸ್ಥೆಗಳು ವಿತರಿಸಿದ ಗುರುತಿನ ಚೀಟಿ
- ಇ-ಶ್ರಮ್ ನೋಂದಣಿ ಸಂಖ್ಯೆ
eshram.gov.in ಅಲ್ಲಿ ನೋಂದಾಯಿಸಿ ಪಡೆದುಕೊಳ್ಳುವುದು
ಕಾರ್ಮಿಕ ಸಹಾಯವಾಣಿ 155214 ಗೂ ಕರೆ ಮಾಡಿದರೆ ವಿವರ ಸಿಗಲಿದೆ.