ನಿಖಿಲ್ ಕುಮಾರಸ್ವಾಮಿ ನಿಮಗೆ ರಾಜಕೀಯ ಆಗಿಬರೋಲ್ಲ, ಸಿನಿಮಾಕ್ಕೆ ವಾಪಸ್ ಬನ್ನಿ, ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ತಮಾಷೆ
by election results 2024 Karnataka: ಕರ್ನಾಟಕದ ಚನ್ನಪಟ್ಟಣದ ಉಪಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ಸಿಪಿ ಯೋಗೇಶ್ವರ್ ಎದುರು ಸೋಲಾಗಿದೆ. ಸತತವಾಗಿ ಸೋಲು ಅನುಭವಿಸುತ್ತಿರುವುದರಿಂದ ನಿಮಗೆ ರಾಜಕೀಯ ಬೇಡ, ಸಿನಿಕ್ಷೇತ್ರಕ್ಕೆ ವಾಪಸ್ ಬನ್ನಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಜನರು ಪೋಸ್ಟ್ ಮಾಡುತ್ತಿದ್ದಾರೆ.
ಕರ್ನಾಟಕದ ಚನ್ನಪಟ್ಟಣ, ಶಿಗ್ಗಾವಿ, ಸಂಡೂರು ಉಪಚುನಾವಣೆಯ ಮತ ಎಣಿಕೆಯಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಚನ್ನಪಟ್ಟಣದಲ್ಲಿ ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಅವರಿಗೆ ಸೋಲಿನ ಕಹಿ ದೊರಕಿದೆ. ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಿಪಿ ಯೋಗೇಶ್ವರ ವಿರುದ್ಧ ಸೋಲು ಕಂಡಿದ್ದಾರೆ. ಕಳೆದ ಎರಡು ಚುನಾವಣೆಗಳಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲು ಅನುಭವಿಸಿದ್ದರು. ಈ ಬಾರಿಯೂ ಉಪ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದಾರೆ. ಇದೇ ಸಮಯದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳ ಸದಸ್ಯರು "ಸಿಕ್ಕಿದ್ದೇ ಚಾನ್ಸ್" ಎಂದು ನಿಖಿಲ್ ಕುಮಾರಸ್ವಾಮಿಯವರ ಕುರಿತು ಮೀಮ್ಸ್, ತಮಾಷೆಯ ಮಾತುಗಳನ್ನು ಹರಿಯಬಿಡುತ್ತಿದ್ದಾರೆ. ಇದೇ ಕಾರಣಕ್ಕೆ ಎಕ್ಸ್‌ನಲ್ಲಿ (ಟ್ವಿಟ್ಟರ್) ನಿಖಿಲ್ ಕುಮಾರಸ್ವಾಮಿ ಒಂದಿಷ್ಟು ಸಮಯ ಟ್ರೆಂಡಿಂಗ್‌ನಲ್ಲಿದ್ದರು.
ಸಿನಿಮಾಕ್ಕೆ ವಾಪಸ್ ಬನ್ನಿ ನಿಖಿಲ್
ಸಾಕಷ್ಟು ಟ್ವೀಟ್‌ಗಳಲ್ಲಿ "ಹ್ಯಾಟ್ರಿಕ್ ಸಾಧನೆಗೆ ಅಭಿನಂದನೆಗಳು. ನಿಮ್ಮ ವಯಸ್ಸು, ಹಣ, ಪ್ರತಿಭೆ, ಶಕ್ತಿಯನ್ನು ಮತ್ತೆಮತ್ತೆ ಕಳೆದುಕೊಳ್ಳಬೇಡಿ. ಸಿನಿಮಾಕ್ಕೆ ಬನ್ನಿ. ಸಿನಿಮಾದಲ್ಲಿ ಶೈನ್ ಆಗಲು ನಿಮಗೆ ಎಲ್ಲಾ ಅರ್ಹತೆಗಳು ಇವೆ" ಎಂದು ಒಬ್ಬರು ಪೋಸ್ಟ್ ಮಾಡಿದ್ದಾರೆ. ಇದೇ ರೀತಿ ಹತ್ತು ಹಲವು ಪೋಸ್ಟ್‌ಗಳ ಮೂಲಕ ಜನರು "ಡಿಯರ್ ನಿಖಿಲ್, ಕಮ್ ಬ್ಯಾಕ್ ಟು ಸಿನಿಮಾ" ಎಂದು ಪೋಸ್ಟ್ ಮಾಡಿದ್ದಾರೆ.
"ನಮ್ಮ ಕನ್ನಡ ಜನತೆ ನಿಖಿಲ್ ಕುಮಾರಸ್ವಾಮಿಯನ್ನು ಸಿನಿಮಾ ನಟ ಎಂದು ಒಪ್ಪಿಕೊಂಡಿದ್ದಾರೆ. ಹೀಗಾಗಿ, ನೀವು ಸಿನಿಮಾ ಕಡೆಗೆ ಗಮನ ನೀಡಿ. ಎಲ್ಲರಿಗೂ ರಾಜಕೀಯ ಸೂಟ್ ಆಗೋದಿಲ್ಲ. ನೀವು ನಮ್ಮ ಕನ್ನಡ ಸಿನಿಮಾದ ಯುವರಾಜ" ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಕರ್ನಾಟಕ ರಾಜಕೀಯದ ಆರ್‌ಸಿಬಿ
ನಿಖಿಲ್ ಕುಮಾರಸ್ವಾಮಿ ಕರ್ನಾಟಕ ರಾಜಕೀಯದ ಆರ್‌ಸಿಬಿ ಎಂದು ಒಬ್ಬರು ಪೋಸ್ಟ್ ಮಾಡಿದ್ದಾರೆ. ಆರ್‌ಸಿಬಿ ಆಟಗಾರನ ತಲೆಯ ಬದಲು ನಿಖಿಲ್ ತಲೆ ಜೋಡಿಸಿ ಫೋಟೋವನ್ನೂ ಅಪ್ಲೋಡ್ ಮಾಡಿದ್ದಾರೆ.
https://twitter.com/ChekrishnaCk/status/1860199250157797539
ಇನ್ನೊಬ್ಬರು ಭೈರವ ನಿಖಿಲ್ ಅಣ್ಣಾ ಎಂದು ಪೋಸ್ಟ್ ಮಾಡಿದ್ದಾರೆ.
ನಿಖಿಲ್ ಕುಮಾರಸ್ವಾಮಿಗೆ ಯಾವ ಕ್ಷೇತ್ರ ಉತ್ತಮ?
ಈ ರೀತಿ ಒಬ್ಬರು ಪೋಸ್ಟ್ ಮಾಡಿದ್ದು ಅದಕ್ಕೆ ಹಲವು ಕಾಮೆಂಟ್‌ಗಳು ಬಂದಿವೆ. ಕೆಲವರು ರಾಮನಗರ ಸೂಕ್ತ ಎಂದಿದ್ದಾರೆ. ಇನ್ನು ಕೆಲವರು ಹಾಸನ ಆಯ್ಕೆ ಮಾಡಿಕೊಳ್ಳಬಹುದು ಎಂದಿದ್ದಾರೆ. "ಮಂಡ್ಯ, ರಾಮನಗರ, ಚನ್ನಪಟ್ಟಣ" ಸೂಕ್ತ ಎಂದು ಇನ್ನು ಕೆಲವರು ಹೇಳಿದ್ದಾರೆ. "ಹೊಳೆನರಸಿಂಹಪುರ" "ಕೋಲಾರ" ಎಂದು ಕೆಲವರು ಹೇಳಿದ್ದಾರೆ. "ನಿಮಗೆ ಉಡುಪಿ ಸೂಕ್ತ. ಅಲ್ಲಿ ಬಿಜೆಪಿಯಲ್ಲಿ ಯಾರೇ ನಿಂತರು ಬಿಜೆಪಿಯವರೇ ಗೆಲ್ಲುತ್ತಾರೆ" ಎಂದು ಇನ್ನು ಕೆಲವರು ಹೇಳಿದ್ದಾರೆ. ಈ ಪೋಸ್ಟ್‌ಗೂ ಎಲ್ಲೆಲ್ಲಿ ನಿಲ್ಲೋದು ಬೇಡ ಸಿನಿಮಾಕ್ಕೆ ವಾಪಸ್ ಬನ್ನಿ ಎಂದು ಸಾಕಷ್ಟು ಜನರು ಕಾಮೆಂಟ್ ಮಾಡಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಸಿನಿಮಾಗಳು
ನಿಖಿಲ್ ಕುಮಾರಸ್ವಾಮಿ ಅವರು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಜಾಗ್ವಾರ್ ಸಿನಿಮಾದ ಮೂಲಕ ಸಿನಿ ಜಗತ್ತಿಗೆ ಕಾಲಿಟ್ಟರು. ಎಚ್‌ಡಿ ಕುಮಾರಸ್ವಾಮಿ ಮಗ ಮತ್ತು ಎಚ್‌ಡಿ ದೇವೇಗೌಡ ಕುಮಾರಸ್ವಾಮಿ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಅವರು ಜಾಗ್ವಾರ್ ನಂತರ ಸೀತಾರಾಮ ಕಲ್ಯಾಣ, ಕುರುಕ್ಷೇತ್ರ( ಅಭಿಮನ್ಯು ಪಾತ್ರದಲ್ಲಿ), ರೈಡರ್ ಸಿನಿಮಾದಲ್ಲಿ ನಟಿಸಿದ್ದಾರೆ. ಅತ್ಯುತ್ತಮ ಚೊಚ್ಚಲ ನಟ-ಕನ್ನಡ/ತೆಲುಗು 6ನೇ ಸೌತ್ ಇಂಡಿಯನ್ ಇಂಟರ್‌ನ್ಯಾಷನಲ್ ಮೂವಿ ಅವಾರ್ಡ್ ಪಡೆದಿದ್ದಾರೆ.