ರಾಮನಗರ ಜಿಲ್ಲೆ ಹೆಸರು ಬದಲಾವಣೆ; ಕೈಗಾರಿಕೆ, ರಿಯಲ್‌ ಎಸ್ಟೇಟ್ ಉದ್ಯಮದ ಬೆಳವಣಿಗೆ ನಿರೀಕ್ಷೆ, ಕೇಳಿ ಬಂತು ಸಾಂಸ್ಕೃತಿಕ ಗುರುತು ನಾಶದ ಟೀಕೆ
ಕನ್ನಡ ಸುದ್ದಿ  /  ಕರ್ನಾಟಕ  /  ರಾಮನಗರ ಜಿಲ್ಲೆ ಹೆಸರು ಬದಲಾವಣೆ; ಕೈಗಾರಿಕೆ, ರಿಯಲ್‌ ಎಸ್ಟೇಟ್ ಉದ್ಯಮದ ಬೆಳವಣಿಗೆ ನಿರೀಕ್ಷೆ, ಕೇಳಿ ಬಂತು ಸಾಂಸ್ಕೃತಿಕ ಗುರುತು ನಾಶದ ಟೀಕೆ

ರಾಮನಗರ ಜಿಲ್ಲೆ ಹೆಸರು ಬದಲಾವಣೆ; ಕೈಗಾರಿಕೆ, ರಿಯಲ್‌ ಎಸ್ಟೇಟ್ ಉದ್ಯಮದ ಬೆಳವಣಿಗೆ ನಿರೀಕ್ಷೆ, ಕೇಳಿ ಬಂತು ಸಾಂಸ್ಕೃತಿಕ ಗುರುತು ನಾಶದ ಟೀಕೆ

ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲಿಸಿದ ನಂತರ ಬಂಡವಾಳ ಹೂಡಿಕೆ ಮಾಡಿದವರಿಗೆ ಬೆಂಗಳೂರಿನಲ್ಲೇ ಹೂಡಿಕೆ ಮಾಡಿದ ಹೆಮ್ಮೆ ಉಂಟಾಗುತ್ತದೆ ಎಂಬ ವಾದ ಚಾಲ್ತಿಯಲ್ಲಿದೆ.

ರಾಮನಗರ ಜಿಲ್ಲೆ ಹೆಸರು ಬದಲಾವಣೆ; ಕೈಗಾರಿಕೆ, ರಿಯಲ್‌ ಎಸ್ಟೇಟ್ ಉದ್ಯಮದ ಬೆಳವಣಿಗೆ ನಿರೀಕ್ಷೆ, ಕೇಳಿ ಬಂತು ಸಾಂಸ್ಕೃತಿಕ ಗುರುತು ನಾಶದ ಟೀಕೆ
ರಾಮನಗರ ಜಿಲ್ಲೆ ಹೆಸರು ಬದಲಾವಣೆ; ಕೈಗಾರಿಕೆ, ರಿಯಲ್‌ ಎಸ್ಟೇಟ್ ಉದ್ಯಮದ ಬೆಳವಣಿಗೆ ನಿರೀಕ್ಷೆ, ಕೇಳಿ ಬಂತು ಸಾಂಸ್ಕೃತಿಕ ಗುರುತು ನಾಶದ ಟೀಕೆ

ಬೆಂಗಳೂರು: ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ಮಾಡಿರುವ ರಾಜ್ಯ ಸರ್ಕಾರದ ತೀರ್ಮಾನಕ್ಕೆ ಜಿಲ್ಲೆಯ ಮೂಲ ನಿವಾಸಿಗಳು ಮತ್ತು ನಾಗರಿಕರು, ಕೈಗಾರಿಕೋದ್ಯಮಿಗಳು ಮತ್ತು ರಿಯಲ್‌ ಎಸ್ಟೇಟ್‌ ಉದ್ಯಮಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೈಗಾರಿಕೆಗಳ ಸ್ಥಾಪನೆಗೆ ಒತ್ತು ಸಿಗುತ್ತದೆ ಎಂದು ಕೆಲವರು ಭರವಸೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಸಂಶಯ ವ್ಯಕ್ತಪಡಿಸಿದ್ದಾರೆ.

ರಾಮನಗರವು ಕರ್ನಾಟಕ ರಾಜಧಾನಿ ಬೆಂಗಳೂರಿನಿಂದ ಕೇವಲ 50 ಕಿಮೀ ದೂರದಲ್ಲಿದೆ. ಮಾಗಡಿ, ರಾಮನಗರ, ಚನ್ನಪಟ್ಟಣ ಮತ್ತು ಕನಕಪುರ ತಾಲ್ಲೂಕುಗಳು ಜಿಲ್ಲೆಯ ವ್ಯಾಪ್ತಿಯಲ್ಲಿವೆ. ಜಿಲ್ಲೆಯಲ್ಲಿ 11 ಲಕ್ಷ ಜನಸಂಖ್ಯೆ ಇದೆ. ರಾಮನಗರ ಏಷ್ಯಾದಲ್ಲೇ ಅತಿ ದೊಡ್ಡ ರೇಷ್ಮೆಗೂಡು ಮಾರುಕಟ್ಟೆಯನ್ನು ಹೊಂದಿದೆ. ಕಲ್ಲು ಗಣಿಗಾರಿಕೆಗೆ ಖ್ಯಾತಿ ಹೊಂದಿರುವ ರಾಮನಗರದಲ್ಲಿ ಖ್ಯಾತ ಬಾಲಿವುಡ್‌ ಸಿನೆಮಾ ಶೋಲೆ ಚಿತ್ರೀಕರಣವಾಗಿತ್ತು. ಚನ್ನಪಟ್ಟಣದ ಗೊಂಬೆಗಳು ಜಗತ್ರ್ಪಸಿದ್ದಿ ಪಡೆದಿವೆ. ಬಿಡದಿಯು ಕೈಗಾರಿಕೆಗಳ ಹಬ್‌ ಆಗಿದೆ.

ರಾಮನಗರವು ಭೌಗೋಳಿಕವಾಗಿ ಬೆಂಗಳೂರಿಗೆ ಹತ್ತಿರ ಇರುವುದರರಿಂದ ಇದೊಂದು ನಿರ್ಣಾಯಕ ನಿರ್ಧಾರವಾಗಿದೆ. ಜಿಲೆಯ ಸರ್ವತೋಮುಖ ಅಭಿವೃದ್ದಿಗೆ ಟಾನಿಕ್‌ ಆಗಲಿದೆ. ಕೈಗಾರಿಕಾ ಮತ್ತು ವಾಸದ ಮನೆಗಳಿಗೆ ಹಾಟ್‌ಸ್ಪಾಟ್‌ ಆಗಲಿದೆ ಎಂದು ಭಾವಿಸಲಾಗಿದೆ. ಈಗಾಗಲೇ ಇರುವ ಟೊಯೊಟಾ, ಕೋಕಾಕೋಲಾ ಮತ್ತು ಬಾಷ್‌ನಂತಹ ಬೃಹತ್‌ ಕೈಗಾರಿಕೆಗಳ ಸಾಲಿಗೆ ಮತ್ತಷ್ಟು ಕೈಗಾರಿಕೆಗಳು ಸೇರ್ಪಡೆಯಾಗಲಿವೆ ಎಂಬ ನಿರೀಕ್ಷೆಗಳು ವ್ಯಕ್ತವಾಗಿವೆ.

ಬೆಂಗಳೂರಿನ ಗುರುತು ಉಳಿದುಕೊಳ್ಳುವುದರಿಂದ ಹೊಸ ಜಿಲ್ಲೆಯು ಹೂಡಿಕೆದಾರರಿಗೆ ಆಕರ್ಷಣೆಯ ತಾಣವಾಗಲಿದೆ. ಕೈಗಾರಿಕಾ ಮೂಲಭೂತ ಸೌಕರ್ಯಗಳ ಕಾರಣಕ್ಕಾಗಿ ಹೂಡಿಕೆಗೆ ಧೈರ್ಯ ಮಾಡುವವರ ಸಂಖ್ಯೆಯೂ ಹೆಚ್ಚಲಿದೆ. ಆರ್ಥಿಕವಾಗಿಯೂ ರಾಮನಗರವು ಬೆಂಗಳೂರಿಗೆ ಇನ್ನಷ್ಟು ಹತ್ತಿರವಾಗಲಿದೆ. ಬೆಂಗಳೂರು ಸೌತ್‌ ಅಥವಾ ದಕ್ಷಿಣ ಎಂದು ನಾಮಕರಣ ಮಾಡಿ ಈ ಜಿಲ್ಲೆಯನ್ನು ಮರು ಬ್ರಾಂಡ್‌ ಮಾಡಲಾಗುತ್ತಿದೆ. ಒಟ್ಟಾರೆ ಬೆಂಗಳೂರು ವಿಸ್ತರಣೆಯಾಗುತ್ತಿದೆ. ಸರ್ವತೋಮುಖ ಅಭಿವೃದ್ಧಿ ಕಾಣಲಿದೆ.

ಮೈಸೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರು ಮೊದಲಾದ ಎರಡನೇ ಹಂತದ ನಗರಗಳಲ್ಲಿ ಹೂಡಿಕೆ ಮಾಡುವಂತೆ ಓಲೈಕೆ ಮಾಡುತ್ತಲೇ ಬರಲಾಗಿದ್ದರೂ ಹೂಡಿಕೆದಾರರು ಬೆಂಗಳೂರಿನ ಮೇಲೆಯೇ ಗಮನವನ್ನು ಕೇಂದ್ರೀಕರಿಸಿದ್ದರು. ಬೆಂಗಳೂರು ದಕ್ಷಿಣ ಎಂದು ನಾಮಕರಣವಾಗಿರುವುದರಿಂದ ಜಿಲ್ಲೆಯಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಲಿದ್ದು, ಉದ್ಯೋಗಾವಕಾಶಗಳ ಸಂಖ್ಯೆ ಹೆಚ್ಚಾಗಲಿದೆ ಎಂದು ಭಾವಿಸಲಾಗಿದೆ.

ಇನ್ನು ಮುಂದೆ ಕೇವಲ ಹೆಸರು ಬದಲಾವಣೆಯಿಂದಲೇ ಕೈಗಾರಿಕೆಗಳು ಸ್ಥಾಪನೆಯಾಗುವುದರಲ್ಲಿ ಸಂಶಯವಿಲ್ಲ. ಇಲ್ಲಿ ಹೂಡಿಕೆ ಮಾಡಿದರೂ ಬೆಂಗಳೂರಿನಲ್ಲೇ ಬಂಡವಾಳ ಹೂಡಿಕೆ ಮಾಡಿದ ಹೆಮ್ಮೆ ಉಂಟಾಗುತ್ತದೆ ಮತ್ತು ಸುರಕ್ಷಿತ ತಾಣದಲ್ಲಿ ಹೂಡಿಕೆ ಮಾಡಿದ ನೆಮ್ಮದಿ ಮೂಡಲಿದೆ ಎಂದು ಮತ್ತೊಬ್ಬ ಉದ್ಯಮಿ ಅಭಿಪ್ರಾಯಪಡುತ್ತಾರೆ. ಉತ್ಪಾದನಾ ವಲಯದ ಕೈಗಾರಿಕೆಗಳು ಮತ್ತು ಸರಕು ಸಾಗಣೆ ವಲಯದಲ್ಲಿ ಈ ಜಿಲ್ಲೆ ದಾಪುಗಾಲು ಹಾಕಲಿದೆ. ಜೊತೆಗೆ ಮೂಲಭೂತ ಸೌಕರ್ಯಗಳಾದ ರಸ್ತೆ, ಸಾರಿಗೆಯಂತಹ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸಹಕಾರಿಯಾಲಿದೆ ಎಂದು ಉದ್ಯಮಿಯೊಬ್ಬರು ಹೇಳುತ್ತಾರೆ.

ಗಗನಕ್ಕೇರಲಿರುವ ರಿಯಲ್‌ ಎಸ್ಟೇಟ್‌ ಉದ್ಯಮ

ರಾಮನಗರ ಜಿಲ್ಲೆಯ ಹೆಸರು ಬದಲಾವಣೆಯ ಹಿಂದೆ ರಿಯಲ್‌ ಎಸ್ಟೇಟ್‌ ಉದ್ಯಮ ಇದೆ ಎನ್ನುವುದರಲ್ಲಿ ಸಂಶಯಗಳಿಲ್ಲ. ಬೆಂಗಳೂರು ವಿಸ್ತರಣೆಯಾಗುತ್ತಿದ್ದು, ಮೈಸೂರು ರಸ್ತೆಯಲ್ಲಿ ಬೆಳೆಯುತ್ತಲೇ ಇದೆ. ವಿಶೇಷವಾಗಿ ವಾಸದ ಮನೆಗಳು ಮತ್ತು ಉಪನಗರಗಳ ಸಂಖ್ಯೆ ವೃದ್ಧಿಸಲಿದೆ. ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಹಲವಾರು ಯೋಜನೆಗಳ ನೀಲನಕ್ಷೆ ಇಟ್ಟುಕೊಂಡಿದ್ದಾರೆ. ಬಿಡದಿವರೆಗೆ ಮೆಟ್ರೋ ರೈಲು ಸೌಲಭ್ಯವಿದ್ದು ರಿಯಲ್‌ ಎಸ್ಟೇಟ್‌ ಉದ್ಯಮ ಬೆಳೆಯುತ್ತಾ ಹೋಗುತ್ತದೆ ಎಂದು ಅಭಿಪ್ರಾಯಪಡುತ್ತಾರೆ. ಹೆಸರು ಬದಲಾವಣೆಯಿಂದ ಭೂಮಿ ಬೆಲೆ ಈ ಭಾಗದಲ್ಲಿ ಶೇ.10-15ರಷ್ಟು ವೃದ್ಧಿಯಾಗುವ ನಿರೀಕ್ಷೆ ಇದೆ ಎನ್ನುವ ಅಭಿಪ್ರಾಯ ಕೇಳಿ ಬರುತ್ತಿದೆ.

ಸಾಂಸ್ಕೃತಿಕ ಹೆಗ್ಗುರುತು ಬದಲಾವಣೆಯಾಗಬೇಕೇ?

ಯಾವುದೇ ಊರು ಅಥವಾ ಜಿಲ್ಲೆಯ ಹೆಸರು ಬದಲಾವಣೆಯಿಂದ ಬೆಳವಣಿಗೆಯಾಗುವುದಿಲ್ಲ. ಆ ಪ್ರದೇಶದ ಮೂಲ ಸಮಸ್ಯೆಗಳಾದ ಸಾರಿಗೆ, ಕುಡಿಯುವ ನೀರು ಮತ್ತು ಒಳ ಚರಂಡಿ ವ್ಯವಸ್ಥೆಯಂತಹ ಸಮಸ್ಯೆಗಳನ್ನು ನಿವಾರಿಸದ ಹೊರತು ಜಿಲ್ಲೆಯು ಹೇಗೆ ಬೆಳೆಯುತ್ತದೆ ಎಂದು ತಲೆತಲಾಂತರಗಳಿಂದ ನೆಲೆಸಿರುವ ನಾಗರಿಕರು ಪ್ರಶ್ನಿಸುತ್ತಾರೆ. ರಾಮನಗರ ತನ್ನದೇ ಆದ ಸಾಂಸ್ಕೃತಿಕ ಗುರುತು ಹೊಂದಿದ್ದು, ಹೆಸರು ಬದಲಾವಣೆಯಿಂದ ಇದು ಕಲಸುಮೇಲೋಗರವಾಗಲಿದೆ. ತನ್ನದೇ ಆದ ಇತಿಹಾಸ ಹೊಂದಿರುವ ರಾಮನಗರ ಸ್ವತಂತ್ರವಾಗಿಯೇ ಗುರುತಿಸಿಕೊಳ್ಳಬೇಕು. ಸಾಂಸ್ಕೃತಿಕ ಗುರುತ್ನು ಬಲಿಕೊಟ್ಟು ಬೆಳವಣಿಗೆ ಮಾಡಬಾರದು ಎಂದು ಸ್ಥಳೀಯ ಸಂಘಟಕರು ಅಭಿಪ್ರಾಯಪಡುತ್ತಾರೆ.

Whats_app_banner