Bangalore Rain: ಬೆಂಗಳೂರಿನಲ್ಲಿ ಗುಡುಗು ಸಹಿತ ಬಾರಿ ಮಳೆ, ಕುಸಿದ ಮೆಟ್ರೋ ತಡೆಗೋಡೆ, ಮುಂದಿನ 5 ದಿನ ಭಾರಿ ಮಳೆ ಸಾಧ್ಯತೆ
ಕನ್ನಡ ಸುದ್ದಿ  /  ಕರ್ನಾಟಕ  /  Bangalore Rain: ಬೆಂಗಳೂರಿನಲ್ಲಿ ಗುಡುಗು ಸಹಿತ ಬಾರಿ ಮಳೆ, ಕುಸಿದ ಮೆಟ್ರೋ ತಡೆಗೋಡೆ, ಮುಂದಿನ 5 ದಿನ ಭಾರಿ ಮಳೆ ಸಾಧ್ಯತೆ

Bangalore Rain: ಬೆಂಗಳೂರಿನಲ್ಲಿ ಗುಡುಗು ಸಹಿತ ಬಾರಿ ಮಳೆ, ಕುಸಿದ ಮೆಟ್ರೋ ತಡೆಗೋಡೆ, ಮುಂದಿನ 5 ದಿನ ಭಾರಿ ಮಳೆ ಸಾಧ್ಯತೆ

ಮಂತ್ರಿಮಾಲ್‌ ಸನಿಹದಲ್ಲಿರುವ ಜೆಡಿಎಸ್‌ ಕಚೇರಿ ಮುಂಭಾಗದ ಮೆಟ್ರೋ ತಡೆಗೋಡೆ ಕುಸಿದಿದೆ. ಇದರಿಂದ ಹಲವು ಕಾರುಗಳು ಮತ್ತು ಬೈಕ್‌ಗಳಿಗೆ ಹಾನಿಯಾಗಿದೆ. ರಾಜ್ಯದಲ್ಲಿ ಮುಂದಿನ ಐದು ದಿನ ಮಳೆಯಾಗಲಿದೆ.

<p>ಸಾಂದರ್ಭಿಕ ಚಿತ್ರ (ಫೋಟೋ ಸಂಬಿತ್ ದಾಸ್ ಟ್ವಿಟರ್)</p>
ಸಾಂದರ್ಭಿಕ ಚಿತ್ರ (ಫೋಟೋ ಸಂಬಿತ್ ದಾಸ್ ಟ್ವಿಟರ್)

ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನ ವಿವಿಧೆಡೆ ನಿನ್ನೆ ಸಂಜೆಯಿಂದಲೇ ಗುಡುಗು ಭಾರಿ ಮಳೆ ಸುರಿದಿದೆ. ಕಳೆದ ಹಲವು ದಿನಗಳಲ್ಲಿ ಬೆಂಗಳೂರಿನಲ್ಲಿ ಮಳೆಯಗುತ್ತಿದ್ದು, ದೀಪಾವಳಿ ವೇಳೆಗೂ ಮಳೆರಾಯನ ಅಬ್ಬರ ಹೆಚ್ಚಿರುವ ಸಾಧ್ಯತೆಯಿದೆ. ಜೋರು ಸುರಿದ ಮಳೆಗೆ ನಿನ್ನೆ ಬೆಂಗಳೂರಿನ ಮೆಟರೋ ಕಾಂಪೌಂಡ್‌ ಕುಸಿದ ಘಟನೆಯೂ ವರದಿಯಾಗಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಮಂತ್ರಿಮಾಲ್‌ ಸನಿಹದಲ್ಲಿರುವ ಜೆಡಿಎಸ್‌ ಕಚೇರಿ ಮುಂಭಾಗದ ಮೆಟ್ರೋ ತಡೆಗೋಡೆ ಕುಸಿದಿದೆ. ಇದರಿಂದ ಹಲವು ಕಾರುಗಳು ಮತ್ತು ಬೈಕ್‌ಗಳಿಗೆ ಹಾನಿಯಾಗಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. "ನಿನ್ನೆ ಸುರಿದ ಮಳೆಗೆ ಮೆಟ್ರೋ ರೈಲು ನಿಲ್ದಾಣದ ಕಾಂಪೌಂಡ್‌ ಕುಸಿದು ಸುಮಾರು ಐದಾರು ಕಾರುಗಳಿಗೆ ಹಾನಿಯಾಗಿದೆ. ಕೆಲವು ಬೈಕ್‌ಗಳಿಗೆ ಹಾನಿಯಾಗಿದೆʼʼ ಎಂದು ಮಲ್ಲೇಶ್ವರಂ ನಿವಾಸಿ, ಪ್ರತ್ಯಕ್ಷದರ್ಶಿ ಶೇಖರಪ್ಪ ಮಾಹಿತಿ ನೀಡಿದ್ದಾರೆ.

ನಿನ್ನೆ ಸಂಜೆಯಿಂದ ಬೆಂಗಳೂರು ದಕ್ಷಿಣ ಭಾಗದಲ್ಲಿ ಅತ್ಯಧಿಕ ಮಳೆಯಾಗಿದೆ. ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿರುವ ಘಟನೆಗಳೂ ನಡೆದಿವೆ. ರಾತ್ರಿ ವೇಳೆ ಮಳೆ ಹೆಚ್ಚಾಗಿರುವುದರಿಂದ ವಾಹನ ಸವಾರರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಅಂಡರ್‌ಪಾಸ್‌ಗಳಲ್ಲಿಯೂ ನೀರು ತುಂಬಿ ಪ್ರಯಾಣಕ್ಕೆ ಕಷ್ಟಪಡುವಂತಾಗಿದೆ.

ಚಿಕ್ಕಪೇಟೆ, ಸುಲ್ತಾನ್‌ಪೇಟೆಯಲ್ಲಿ ಹಲವು ಅಂಗಡಿಗಳು ಜಲಾವೃತವಾಗಿವೆ. ಹಲವು ರಸ್ತೆಗಳು ಜಲಾವೃತಗೊಂಡಿರುವ ಕಾರಣ ನಿನ್ನೆ ರಾತ್ರಿ ಉದ್ಯೋಗಿಗಳು, ಉದ್ಯಮಿಗಳು ಮತ್ತು ಇತರರು ಮನೆ ಸೇರಲು ಸಾಕಷ್ಟು ಪರದಾಡಿದ್ದಾರೆ.

ಬೆಂಗಳೂರಿನ ಬನಶಂಕರಿ, ಕತ್ರಿಗುಪ್ಪೆ, ಶ್ರೀನಗರ, ವಿಲ್ಸನ್‌ ಗಾರ್ಡನ್‌, ಶಾಂತಿನಗರ, ಶಿವಾನಂದ ಸರ್ಕಲ್‌ ಸೇರಿದಂತೆ ಹಲವು ಕಡೆ ಧಾರಾಕಾರ ಮಳೆ ಸುರಿದಿದೆ. ನಿನ್ನೆ ರಾತ್ರಿ ಬೆಚ್ಚಿ ಬೀಳುವಂತೆ ಸಿಡಿಲಿನ ಅಬ್ಬರವೂ ಹೆಚ್ಚಿತ್ತು.

ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಸುರಿದ ಮಳೆಗೆ ಮಹಾದೇವಪುರ, ಶಿವಾಜಿನಗರ ಸೇರಿದಂತೆ ವಿವಿಧೆಡೆ ಸಾಕಷ್ಟು ಜನರು ಪರದಾಡಿದ್ದಾರೆ.

ವರದಿಗಳ ಪ್ರಕಾರ, ರಾಜ್ಯದಲ್ಲಿ ಮುಂದಿನ ಐದು ದಿನ ಮಳೆಯಾಗಲಿದೆ. ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಹೆಚ್ಚಿರುವುದರಿಂದ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮಳೆ ಸುರಿಯಲಿದೆ. ಅರಬ್ಬಿ ಸಮುದ್ರದಲ್ಲಿಯೂ ಸಣ್ಣ ಪ್ರಮಾಣದಲ್ಲಿ ಸುಳಿಗಾಳಿ ಸೃಷ್ಟಿಯಾಗಿದೆ.

ಬೆಂಗಳೂರು ನಗರ ಜಿಲ್ಲೆಗೆ ಇಂದು ಯೆಲ್ಲೋ ಅಲರ್ಟ್‌ ನೀಡಲಾಗಿದೆ. ಬೆಂಗಳೂರು ನಗರ ಮತ್ತು ಆಸುಪಾಸಿನ ಪ್ರದೇಶಗಳಲ್ಲಿ ಗುಡುಗು ಸಹಿತ ಧಾರಾಕಾರ ಮಳೆಯಾಗಲಿದೆ. ಇದೇ ಸಮಯದಲ್ಲಿ ತಂಪುಗಾಳಿ ಬೀಸುವಿಕೆ ಹೆಚ್ಚಿರಲಿದೆ. ಶೀತ ಗಾಳಿ ಹೆಚ್ಚಿರುವುದರಿಂದ ಆರೋಗ್ಯ ತೊಂದರೆಗಳೂ ಹೆಚ್ಚಾಗುವ ಸಾಧ್ಯತೆಯಿದೆ.

Whats_app_banner