ಕನ್ನಡ ಸುದ್ದಿ  /  Karnataka  /  Karnataka Assembly Election: R Ashoka Appointed As Mandya District In-charge Minister Ahead Of Assembly Polls

Karnataka Assembly Election: ಮಂಡ್ಯ ಜಿಲ್ಲಾ ಉಸ್ತುವಾರಿ ಆರ್.‌ ಅಶೋಕ್‌; ಚುನಾವಣೆಗೆ ಮುನ್ನ ಲೆಕ್ಕಾಚಾರದ ನಡೆ

Karnataka Assembly Election: 'ಹಳೆ ಮೈಸೂರು' ಪ್ರಾಂತ್ಯದಲ್ಲಿ ಆಡಳಿತಾರೂಢ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲುವತ್ತ ಗಮನಹರಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ಕಂದಾಯ ಸಚಿವ ಆರ್ ಅಶೋಕ ಅವರನ್ನು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿದ್ದಾರೆ.

ಕಂದಾಯ ಸಚಿವ ಆರ್‌.ಅಶೋಕ್‌
ಕಂದಾಯ ಸಚಿವ ಆರ್‌.ಅಶೋಕ್‌ (PTI/ HT_PRINT)

ರಾಜ್ಯ ವಿಧಾನಸಭೆ ಚುನಾವಣೆ ಬಹು ಸಮೀಪದಲ್ಲೇ ಇದೆ. ಈ ಸನ್ನಿವೇಶದಲ್ಲಿ ಆಡಳಿತಾರೂಢ ಬಿಜೆಪಿ ತನ್ನ ಚುನಾವಣಾ ಕಾರ್ಯತಂತ್ರಕ್ಕೆ ಅನುಗುಣವಾಗಿ ಹಳೆ ಮೈಸೂರು ಪ್ರಾಂತ್ಯದ ಕಡೆಗೆ ತನ್ನ ಫೋಕಸ್‌ ಅನ್ನು ಹೆಚ್ಚಿಸತೊಡಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ಕಂದಾಯ ಸಚಿವ ಆರ್.‌ ಅಶೋಕ್‌ ಅವರನ್ನು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿದ್ದಾರೆ.

ಹಳೆ ಮೈಸೂರು ಪ್ರಾಂತ್ಯದ ಮಂಡ್ಯ ಜಿಲ್ಲೆ ಒಕ್ಕಲಿಗ ಪ್ರಾಬಲ್ಯದ ಪ್ರಮುಖ ಕ್ಷೇತ್ರವಾಗಿರುವುದು ಇದಕ್ಕೆ ಕಾರಣ. ಆರ್.‌ ಅಶೋಕ ಅವರು ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕರು. ಬಿಜೆಪಿಯಲ್ಲೂ ಪ್ರಭಾವಿ ನಾಯಕರೆನಿಸಿಕೊಂಡಿರುವ ಆರ್‌. ಅಶೋಕ್‌ ಅವರ ಈ ನೇಮಕಾತಿ ಚುನಾವಣಾ ತಂತ್ರಗಾರಿಕೆಯ ಭಾಗ ಎಂಬುದು ಎಲ್ಲರಿಗೂ ತಿಳಿದ ವಿಚಾರ.

ಅಬಕಾರಿ ಸಚಿವ ಕೆ.ಗೋಪಾಲಯ್ಯ ಹಾಸನ ಮತ್ತು ಮಂಡ್ಯ ಜಿಲ್ಲೆಗಳ ಉಸ್ತುವಾರಿ ಸಚಿವರಾಗಿದ್ದರು. ಗೋಪಾಲಯ್ಯ ಅವರಿಗೆ ಮಂಡ್ಯ ಜಿಲ್ಲೆಯ ಉಸ್ತುವಾರಿಯನ್ನು 2022ರ ಜನವರಿ 24ರಂದು ವಹಿಸಲಾಗಿತ್ತು ಎಂದು ಸರ್ಕಾರದ ಅಧಿಕೃತ ಸೂಚನೆ ತಿಳಿಸಿದೆ. ಈ ಬದಲಾವಣೆ ತತ್‌ಕ್ಷಣದಿಂದಲೇ ಜಾರಿಗೆ ಬಂದಿದ್ದು, ಈಗ ಸಚಿವ ಆರ್‌. ಅಶೋಕ್‌ ಅವರು ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವರು. ಮುಖ್ಯಮಂತ್ರಿಯವರ ನಿರ್ದೇಶನಾನುಸಾರ ಈ ಅಧಿಸೂಚನೆ ಪ್ರಕಟವಾಗಿದೆ ಎಂಬ ಒಕ್ಕಣೆಯೂ ಅದರಲ್ಲಿದೆ.

ಹಳೇ ಮೈಸೂರು ಭಾಗದಲ್ಲಿ ಅದರಲ್ಲೂ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ದುರ್ಬಲವಾಗಿದೆ. ಮೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸಂಪೂರ್ಣ ಬಹುಮತ ಗಳಿಸಲು ಈ ಪ್ರಾಂತ್ಯದತ್ತ ಬಿಜೆಪಿ ಗಮನ ಹರಿಸುತ್ತಿದೆ. ಇತ್ತೀಚೆಗೆ ಮಂಡ್ಯಕ್ಕೆ ಭೇಟಿ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಕಾಂಗ್ರೆಸ್ ಕೂಡ ಸಾಕಷ್ಟು ಪ್ರಬಲವಾಗಿರುವ ಮತ್ತು ಜೆಡಿಎಸ್‌ನ ಭದ್ರಕೋಟೆಯಾಗಿರುವ ಕ್ಷೇತ್ರ ಮತ್ತು ಜಿಲ್ಲೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಕೆಲಸ ಮಾಡಬೇಕು ಎಂದು ಆಗ್ರಹಿಸಿದ್ದರು.

ಮಂಡ್ಯ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಪ್ರಸ್ತುತ ಜೆಡಿಎಸ್‌ ಆರು ಮತ್ತು ಬಿಜೆಪಿ ಒಂದನ್ನು ಪ್ರತಿನಿಧಿಸುತ್ತಿವೆ. 2018 ರ ವಿಧಾನಸಭಾ ಚುನಾವಣೆಯಲ್ಲಿ ಕೃಷ್ಣರಾಜಪೇಟೆಯಿಂದ (ಕೆಆರ್ ಪೇಟೆ) ಕಾಂಗ್ರೆಸ್ ಟಿಕೆಟ್‌ನಲ್ಲಿ ಗೆದ್ದಿದ್ದ ನಾರಾಯಣಗೌಡ, ನಂತರ ಬಿಜೆಪಿಗೆ ಪಕ್ಷಾಂತರಗೊಂಡು 2019 ರ ಉಪಚುನಾವಣೆಯಲ್ಲಿ ಅದೇ ಕ್ಷೇತ್ರದಿಂದ ಅದರ ಟಿಕೆಟ್‌ನಲ್ಲಿ ಗೆದ್ದು ಕೇಸರಿ ಪಕ್ಷಕ್ಕೆ ಜಿಲ್ಲೆಯಲ್ಲಿ ಮೊದಲ ಗೆಲುವು ಒದಗಿಸಿಕೊಟ್ಟರು. ಈಗ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಅವರು ಸಚಿವರಾಗಿದ್ದಾರೆ.

ಗಮನಿಸಬಹುದಾದ ಸುದ್ದಿ

BJP minority outreach: ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಎಂದ ಕೂಡಲೇ ಅಲ್ಪಸಂ‍ಖ್ಯಾತ ವಿಶೇಷವಾಗಿ ಮುಸಲ್ಮಾನ ವಿರೋಧಿ ಪಕ್ಷ ಎಂಬ ಇಮೇಜ್‌ ಸಾಮಾನ್ಯ ಆಲೋಚನೆಯ ಮನಸ್ಸಿನವರಲ್ಲಿ ಮೂಡುವಂಥದ್ದು. ಈ ಇಮೇಜ್‌ನಿಂದ ಹೊರಬರಬೇಕು ಎಂಬ ಪ್ರಯತ್ನವನ್ನು ಬಿಜೆಪಿ ಮಾಡುತ್ತಲೇ ಇದೆ. ಇದಕ್ಕೆ ಪೂರಕ ವಿವರ ಒಂದು ಬಹಿರಂಗವಾಗಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

IPL_Entry_Point