Power Tariff Hike: ವಿದುತ್ ಬಿಲ್ ಏರಿಕೆ ಖಂಡಿಸಿ ಜೂ. 22ರಂದು ರಾಜ್ಯ ಬಂದ್; ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಕರೆ
Power Tariff Hike: ಕರ್ನಾಟಕದಲ್ಲಿ ವಿದ್ಯುತ್ ದರ ಏರಿಕೆಯಿಂದ ಉದ್ಯಮ, ವ್ಯಾಪಾರ ವಲಯ ಬಹಳ ಸಂಕಷ್ಟಕ್ಕೆ ಸಿಲುಕಿದೆ. ಇದರ ಬಗ್ಗೆ ಮಾತುಕತೆ ನಡೆಸಲು ಅಧಿಕಾರಿಗಳಾಗಲೀ, ಮುಖ್ಯಮಂತ್ರಿ, ಸಚಿವರು ಸ್ಪಂದಿಸದ ಕಾರಣ, ಜೂನ್ 22ರಂದು ರಾಜ್ಯ ಬಂದ್‌ಗೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಕರೆ ನೀಡಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ (Congress Govt) ವಿದ್ಯುತ್ ಶುಲ್ಕ ಏರಿಕೆ (Power Tariff Hike) ಮಾಡಿದ್ದನ್ನು ವಿರೋಧಿಸಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (Karnataka Chamber of Commerce and Industry (KCC&I)) ಜೂನ್ 22ರಂದು ರಾಜ್ಯ ಬಂದ್ (state wide bandh)ಗೆ ಕರೆ ನೀಡಿದೆ.
ಹೊಸ ವಿದ್ಯುತ್ ಶುಲ್ಕ ವಸೂಲಿಯಿಂದ ಆಗುತ್ತಿರುವ ಪರಿಣಾಮದ ಬಗ್ಗೆ ಸರ್ಕಾರಕ್ಕೆ ತಿಳಿಸಲು ಪ್ರಯತ್ನಿಸಿದರೂ ಯಾವುದೇ ಪ್ರತಿಸ್ಪಂದನೆ ಬರದ ಕಾರಣ ಬಂದ್‌ಗೆ ಕರೆ ನೀಡಲು ನಿರ್ಧರಿಸಿದ್ದೇವೆ ಎಂದು ಒಕ್ಕೂಟ ತಿಳಿಸಿದೆ.
ಸರ್ಕಾರಕ್ಕೆ ಸಂದೇಶ ರವಾನಿಸಲು ಸಂಘದ ಎಲ್ಲ ಸದಸ್ಯರು ಮುಷ್ಕರದಲ್ಲಿ ಭಾಗವಹಿಸುವಂತೆ ಕೆಸಿಸಿಐ ಒತ್ತಾಯಿಸಿದೆ. ಎಲ್ಲ ಸದಸ್ಯರಿಗೆ ಒಕ್ಕೂಟವು ಬರೆದ ಪತ್ರದಲ್ಲಿ“ಜೂನ್ 22 ರಂದು ತಮ್ಮ ಸ್ಥಾಪನೆಯನ್ನು ಮುಚ್ಚುವಂತೆ ಎಲ್ಲಾ ವ್ಯಾಪಾರ ಮತ್ತು ಕೈಗಾರಿಕೆಗಳಲ್ಲಿ ನಾವು ವಿನಂತಿಸುತ್ತೇವೆ. ಎಸ್ಕಾಂನ ವಿದ್ಯುತ್ ಶುಲ್ಕದಲ್ಲಿ ಅಸಹಜ ಬೆಲೆ ಏರಿಕೆಯನ್ನು ವಿರೋಧಿಸಿ ಈ ಬಂದ್‌ಗೆ ಕರೆ ನೀಡಲಾಗಿದೆ. ಕಳೆದ 8 ದಿನಗಳಿಂದ ವಿದ್ಯುತ್ ಶುಲ್ಕ ಹೆಚ್ಚಳದ ಪರಿಣಾಮದ ಗಂಭೀರತೆಯನ್ನು ತಿಳಿಸುವ ಪ್ರಯತ್ನ ಮಾಡಿದ್ದೇವೆ. ಆದರೆ, ಅಧಿಕಾರಿಗಳು ಅಥವಾ ಸರ್ಕಾರದ ಪ್ರತಿನಿಧಿಗಳಿಂದ ಯಾವುದೇ ಪರಿಹಾರ ದೊರೆಯುತ್ತಿಲ್ಲ ಎಂಬ ಒಕ್ಕಣೆ ಇದೆ.
ಸರ್ಕಾರದ ಗಮನ ಸೆಳೆಯಲು ನಾವು ಈ ಬಂದ್‌ಗೆ ಕರೆ ನೀಡಿದ್ದೇವೆ. ನಾವು ಪರಿಹಾರವನ್ನು ಕಂಡುಕೊಳ್ಳಲು ಮತ್ತು ವಿದ್ಯುತ್ ಶುಲ್ಕದಲ್ಲಿ ಕಡಿತವನ್ನು ಪಡೆಯಲು ಬಯಸುತ್ತೇವೆ. ಸರ್ಕಾರ ನಮ್ಮ ಮನವಿಗೆ ಸ್ಪಂದಿಸುತ್ತದೆ ಎಂದು ನಾವು ಭಾವಿಸುತ್ತೇವೆ ಎಂಬ ಸಾಲು ಪತ್ರದಲ್ಲಿದೆ. ಇನ್ನಾದರೂ ಸರಕಾರ ಇತ್ತ ಗಮನಹರಿಸಿ ವಿದ್ಯುತ್ ಶುಲ್ಕವನ್ನು ಕಡಿಮೆ ಮಾಡಲಿ ಎಂದು ಒಕ್ಕೂಟ ಆಶಿಸಿದೆ.
ವಿದ್ಯುತ್ ಬಿಲ್ ಏರಿಕೆ ಹೀಗೆ…
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (ಕೆಇಆರ್‌ಸಿ) ಮೇ 12 ರಂದು ರಾಜ್ಯದಲ್ಲಿ ಪ್ರತಿ ಯೂನಿಟ್ ವಿದ್ಯುತ್ ದರವನ್ನು 70 ಪೈಸೆ ಹೆಚ್ಚಿಸಿತ್ತು. ರಾಜ್ಯದಲ್ಲಿ ಹೊಸ ಸರ್ಕಾರ ಆಯ್ಕೆಯಾದ ನಂತರ 'ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚ ಹೊಂದಾಣಿಕೆ ಶುಲ್ಕ' (ಎಫ್‌ಪಿಪಿಸಿಎ) ನೆಪದಲ್ಲಿ ಪ್ರತಿ ಯೂನಿಟ್‌ಗೆ 51 ಪೈಸೆಯ ಮತ್ತೊಂದು ಹೆಚ್ಚಳವನ್ನು ಘೋಷಿಸಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ
ವಿದ್ಯುತ್ ಶುಲ್ಕ ಹೆಚ್ಚಳದ ವಿಚಾರವಾಗಿ ಸಿದ್ದರಾಮಯ್ಯ ಅವರು ಈ ನಿರ್ಧಾರವನ್ನು ತನ್ನ ಸರ್ಕಾರ ತೆಗೆದುಕೊಂಡಿಲ್ಲ. ಆದರೆ, ಹಿಂದಿನ ಸರ್ಕಾರದ ಶಿಫಾರಸಿನಂತೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ) ತೆಗೆದುಕೊಂಡಿದೆ ಎಂದು ಹೇಳಿದ್ದರು.
“ನಾವು ವಿದ್ಯುತ್ ದರವನ್ನು ಹೆಚ್ಚಿಸಲು ನಿರ್ಧರಿಸಿಲ್ಲ. ಕರ್ನಾಟಕ ವಿದ್ಯುತ್ ನಿಯಂತ್ರಣ ಪ್ರಾಧಿಕಾರವಿದೆ, ಅದು ನಿರ್ಧರಿಸಿದೆ. ಹಿಂದೆಯೇ ನಿರ್ಧರಿಸಲಾಗಿತ್ತು. ನಾವು ಅದನ್ನು ಜಾರಿಗೆ ತಂದಿದ್ದೇವೆ, ”ಎಂದು ಅವರು ಮೊದಲು ವಿವರಿಸಿದ್ದರು.
ಗಮನಿಸಬಹುದಾದ ಇತರೆ ಸುದ್ದಿಗಳು
Hilda Baci: ದಢೂತಿ ಶರೀರ ಬಿಟ್ಟು ಬಳಕುವ ಮೈಮಾಟ ಹೊಂದಿದ ಹಿಲ್ಡಾ ಬಾಸಿ; ಯಾರು ಈ ಬ್ಲ್ಯಾಕ್ ಬ್ಯೂಟಿ ಇಲ್ಲಿವೆ ಕೆಲವು ಫೋಟೋಸ್...
500 Rupees notes Missing: ಭಾರತದ ಅರ್ಥವ್ಯವಸ್ಥೆಯಿಂದ 88,000 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ 500 ರೂಪಾಯಿ ನೋಟುಗಳು ಮಿಸ್ಸಿಂಗ್!
ವಿಭಾಗ