Father's Day Pizza: ಪರ್ಫೆಕ್ಟ್ ಆಗಿ ಫಾದರ್ಸ್ ಡೇಗೆ ಪಿಜ್ಜಾ ಮಾಡುವುದು ಹೇಗೆ; ರೆಸ್ಟೋರೆಂಟ್ ಅಡುಗೆಗೆ ಚಾಟ್‌ಜಿಪಿಟಿ ನಿರ್ದೇಶನ
Father's Day Pizza: ಜಗತ್ತಿನಾದ್ಯಂತ ಪ್ರಮುಖ ನಗರಗಳಲ್ಲಿ ಈಗ ಫಾದರ್ಸ್ ಡೇ ಕ್ರೇಜ್. ವಿಭಿನ್ನವಾದುದು, ಹೊಸತು ಏನಾದರೂ ಮಾಡಬೇಕು ಎಂದು ಎಲ್ಲರೂ ಬಯಸುತ್ತಾರೆ. ಅದರಂತೆ, ರೆಸ್ಟೋರೆಂಟ್ ಮಾಲೀಕರೊಬ್ಬರು ಚಾಟ್‌ಜಿಪಿಟಿ ನಿರ್ದೇಶನದಲ್ಲಿ ಪಿಜ್ಜಾ ತಯಾರಿಸಿ ಗಮನಸೆಳೆದಿದ್ದಾರೆ. ಅದರ ವಿವರ ಹೀಗಿದೆ..
ಕ್ಯಾಲಿಫೋರ್ನಿಯಾದ ರೆಸ್ಟೋರೆಂಟ್ ಮಾಲೀಕರ ಓಪನ್ ಎಐ (OpenAI)ನ ಚಾಟ್‌ಜಿಪಿಟಿ (ChatGPT) ಅನ್ನು ಪರ್ಫೆಕ್ಟ್ ಫಾದರ್ಸ್ ಡೇ ಪಿಜ್ಜಾವನ್ನು ವಿನ್ಯಾಸಗೊಳಿಸಲು ಬಳಸಿದ್ದಾರೆ, ಇದು ಎಲ್ಲ ವಯಸ್ಸಿನ ಗ್ರಾಹಕರ ಮೆಚ್ಚುಗೆ ಗಳಿಸಿ ಹಿಟ್ ಆಗಿದೆ.
ಓಪನ್ ಎಐ (OpenAI)ನ ಚಾಟ್‌ಜಿಪಿಟಿ (ChatGPT) ಕಳೆದ ವರ್ಷ ನವೆಂಬರ್‌ನಲ್ಲಿ ಪ್ರಾರಂಭವಾದಾಗಿನಿಂದ ವಿವಿಧ ಉದ್ದೇಶಗಳಿಗಾಗಿ ಬಳಸಲ್ಪಟ್ಟಿದೆ, ಆದರೆ ಇದಕ್ಕಿಂತ ವಿಶಿಷ್ಟವಾದ ಯಾವುದೂ ಇಲ್ಲ. ರೆಸ್ಟಾರೆಂಟ್ ಮಾಲೀಕರು ಜನಪ್ರಿಯ ಎಐ ಚಾಟ್‌ಬಾಟ್ ಅನ್ನು ಪರ್ಫೆಕ್ಟ್ ಫಾದರ್ಸ್ ಡೇ ಪಿಜ್ಜಾವನ್ನು ವಿನ್ಯಾಸಗೊಳಿಸಲು ಬಳಸಿದ್ದಾರೆ. ಅಚ್ಚರಿ ಎಂಬಂತೆ ಈ ಪಿಜ್ಜಾ ಎಲ್ಲ ವಯಸ್ಸಿನ ಗ್ರಾಹಕರ ಮೆಚ್ಚುಗೆ ಗಳಿಸಿ ಹಿಟ್ ಆಗಿದೆ.
ದಿ ಮರ್ಕ್ಯುರಿ ನ್ಯೂಸ್‌ನ ವರದಿಯ ಪ್ರಕಾರ, ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್‌ನಲ್ಲಿರುವ ಟೋನಿ & ಆಲ್ಬಾಸ್ ಪಿಜ್ಜಾ & ಪಾಸ್ಟಾ ಎಂಬ ರೆಸ್ಟೋರೆಂಟ್ ಫಾದರ್ಸ್ ಡೇಯ ಪಿಜ್ಜಾವನ್ನು ವಿನ್ಯಾಸಗೊಳಿಸಲು ಚಾಟ್‌ಜಿಪಿಟಿಯನ್ನು ಜಾಣ್ಮೆಯಿಂದ ಬಳಸಿದೆ. ರೆಸ್ಟಾರೆಂಟ್ ಸಹ-ಮಾಲೀಕ ಅಲ್ ವಲ್ಲೋರ್ಜ್ (AL Vallorz ) ಯಾವಾಗಲೂ ಗ್ರಾಹಕರ ಆಸಕ್ತಿ ಸೆಳೆಯುವ ಮತ್ತು ಅವರನ್ನು ಮತ್ತೆಮತ್ತೆ ರೆಸ್ಟೋರೆಂಟ್ ಕಡೆಗೆ ಹೆಜ್ಜೆ ಹಾಕುವಂತೆ ಮಾಡುವ ಪ್ರಯತ್ನ ಮಾಡುತ್ತಿರುತ್ತಾರೆ. ಅದರ ಭಾಗವೇ ಇದು.
ಪರ್ಫೆಕ್ಟ್ ಫಾದರ್ಸ್ ಡೇ ಪಿಜ್ಜಾ
ತಂದೆಯ ದಿನಾಚರಣೆಯು ಕೇವಲ ಮೂಲೆಯಲ್ಲಿದೆ, ಅಲ್ ವಲ್ಲೋರ್ಜ್ ಇನ್ನೂ ತನ್ನ ಜೂನ್ ಪಿಜ್ಜಾ ಮೆನುವನ್ನು ನಿರ್ಧರಿಸಿರಲಿಲ್ಲ. ಆದ್ದರಿಂದ ರೆಸ್ಟೋರೆಂಟ್ ಮಾಲೀಕರು ಸಹಾಯಕ್ಕಾಗಿ ಚಾಟ್‌ಜಿಪಿಟಿ ಮೊರೆ ಹೋದರು. ಜನಪ್ರಿಯ ಚಾಟ್‌ಬಾಟ್‌ಗೆ "ಫಾದರ್ಸ್ ಡೇ ಪಿಜ್ಜಾ"ವನ್ನು ವಿನ್ಯಾಸಗೊಳಿಸುವಂತೆ ಕೇಳಿದರು.
ಇದಕ್ಕೆ ತ್ವರಿತವಾಗಿ ಸ್ಪಂದಿಸಿದ ಚಾಟ್‌ಜಿಪಿಟಿ, ಪಿಜ್ಜಾ ಸಾಸ್, ಮೊಝ್ಝಾರೆಲ್ಲಾ ಚೀಸ್, ಪೆಪ್ಪೆರೋನಿ, ಸ್ಲೈಸ್ಡ್ ಸಾಸೇಜ್ ಲಿಂಕ್‌ಗಳು, ಬೇಕನ್, ಮೆಂಫಿಸ್ ಬಾರ್ಬೆಕ್ಯೂ ಸಾಸ್, ಕೆಂಪು ಈರುಳ್ಳಿಗಳು, ಕೊತ್ತಂಬರಿ ಸೊಪ್ಪುಗಳನ್ನು ಒಳಗೊಂಡಿರುವ ಪರ್ಫೆಕ್ಟ್ ಫಾದರ್ಸ್ ಡೇ ಪಿಜ್ಜಾದ ಪಾಕವಿಧಾನವನ್ನು ರೂಪಿಸಿಕೊಟ್ಟಿತು.
ಚಾಟ್‌ಬಾಟ್ ತನ್ನ ಉತ್ತರದಲ್ಲಿ ಯಾವುದೇ ವಿವಾದಿತ ಅಂಶಗಳನ್ನು ಸೇರಿಸಿಲ್ಲ. ಅದುವೇ ಗಮನಸೆಳೆಯುವಂಥದ್ದು. ಉದಾಹರಣೆಗೆ, ಇದು ಅನಾನಸ್ ಅನ್ನು ಪಿಜ್ಜಾ ಟಾಪಿಂಗ್‌ನಂತೆ ಇರಿಸಬೇಕು ಎಂದು ಬರೆದಿಲ್ಲ. ಇದುವರೆಗೆ ಇರುವ ಥಿನ್-ಕ್ರಸ್ಟ್ ವರ್ಸಸ್ ಥಿಕ್ ಕ್ರಸ್ಟ್ ವಿವಾದವನ್ನೂ ಅವಾಯ್ಡ್ ಮಾಡುವಂತೆ ʻಪಿಜ್ಜಾ ಕ್ರಸ್ಟ್ʼ ಎಂದು ಉಲ್ಲೇಖಿಸಿರುವುದು ಗಮನಾರ್ಹ.
ಟೋನಿ & ಆಲ್ಬಾಸ್ ಪಿಜ್ಜಾ & ಪಾಸ್ಟಾ ರೆಸ್ಟೋರೆಂಟ್ ಮೇ 25 ರಂದು ಚಾಟ್‌ಜಿಪಿಟಿ ವಿನ್ಯಾಸಗೊಳಿಸಿದ ಹೊಸ ಪಿಜ್ಜಾವನ್ನು ಬಿಡುಗಡೆ ಮಾಡಿತು. ಇದು ಜೂನ್ ಪೂರ್ತಿ ಗ್ರಾಹಕರಿಗೆ ಲಭ್ಯವಿರುತ್ತದೆ. ಖಾದ್ಯವನ್ನು 'ಫ್ಯೂಚರಿಸ್ಟಿಕ್ ಪಿಜ್ಜಾ' ಎಂದು ಕರೆಯಲಾಗಿದೆ. ಆದರೆ ಹೆಚ್ಚಿನ ಗ್ರಾಹಕರು ಇದನ್ನು 'ಎಐ ಪಿಜ್ಜಾ' ಎಂದೇ ಕರೆಯಲು ಬಯಸುತ್ತಾರೆ.
ಔಟ್‌ಲೆಟ್‌ನ ಯುವ ಗ್ರಾಹಕರು ಎಐ ಪಿಜ್ಜಾ ಎಂಬ ಕಾರಣಕ್ಕೆ ಅದನ್ನು ಟ್ರೈ ಮಾಡುತ್ತಿದ್ದಾರೆ. ಅದರೆ ಅವರು ರುಚಿಯ ವಿಚಾರಕ್ಕೆ ಬಂದರೆ ಹಳೆಯ ಸಾಂಪ್ರದಾಯಿಕ ಪಿಜ್ಜಾವನ್ನೇ ಇಷ್ಟಪಡುತ್ತಿದ್ದಾರೆ ಎಂದು ರೆಸ್ಟೋರೆಂಟ್‌ನ 84 ವರ್ಷದ ಸಂಸ್ಥಾಪಕಿ ಆಲ್ಬಾ ಸಾಲ್ಸಿಸಿಯಾ ಹೇಳಿರುವುದನ್ನು ವರದಿ ಉಲ್ಲೇಖಿಸಿದೆ.
ಗಮನಿಸಬಹುದಾದ ಸುದ್ದಿಗಳು
500 Rupees notes Missing: ಭಾರತದ ಅರ್ಥವ್ಯವಸ್ಥೆಯಿಂದ 88,000 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ 500 ರೂಪಾಯಿ ನೋಟುಗಳು ಮಿಸ್ಸಿಂಗ್!
ವಿಭಾಗ